ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Navratri 2022 Day 2: ನವರಾತ್ರಿ ಎರಡನೇ ದಿನ ಸೆ. 27ರಂದು ಮಾಡುವ ವಿಶೇಷ ಖಾದ್ಯಗಳು

|
Google Oneindia Kannada News

ಇದು ಹಿಂದೂ ಹಬ್ಬವಾದ ನವರಾತ್ರಿಯ ಸಮಯ. ಒಂಬತ್ತು ದಿನಗಳ ಕಾಲ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ. ಈ ಸಮಯದಲ್ಲಿ ಪೂಜೆ, ಆಚರಣೆ, ಉಪವಾಸ ಮಾಡಲಾಗುತ್ತದೆ. ಪ್ರಪಂಚದಾದ್ಯಂತ ಒಂಬತ್ತು ದಿನಗಳ ಕಾಲ ಭಕ್ತರು ದುರ್ಗಾ ಮಾತೆಯನ್ನು ಪೂಜಿಸುತ್ತಾರೆ. ನವರಾತ್ರಿ ಹಬ್ಬದ ಪ್ರಮುಖ ಅಂಶವೆಂದರೆ ಉಪವಾಸ. ಹೀಗಾಗಿ ಇದನ್ನು ಸಾಮಾನ್ಯವಾಗಿ ವ್ರತಗಳ ಹಬ್ಬ ಎಂದು ಕರೆಯಲಾಗುತ್ತದೆ. ಹೆಚ್ಚಿನ ಜನರು ವಿಶೇಷವಾಗಿ ಮಹಿಳೆಯರು ಕಠಿಣ ಒಂಬತ್ತು ದಿನಗಳ ಉಪವಾಸವನ್ನು ಅನುಸರಿಸುತ್ತಾರೆ. ನವರಾತ್ರಿ ಹಬ್ಬಕ್ಕೆ ಸಾಕಷ್ಟು ಸಾಂಪ್ರದಾಯಿಕ ಆಹಾರವನ್ನು ತಯಾರಿಸಲಾಗುತ್ತದೆ. ಒಂಬತ್ತು ದಿನಗಳ ಕಾಲ ಒಂಬತ್ತು ತರಹದ ವಿವಿಧ ಖಾದ್ಯಗಳನ್ನು ತಯಾರಿಸಲಾಗುತ್ತದೆ.

ನವರಾತ್ರಿಯ ಒಂಬತ್ತು ದಿನಗಳಲ್ಲಿ, ಭಕ್ತರು ಪ್ರತಿದಿನ ದೇವಿ ದುರ್ಗೆಯ ಒಂಬತ್ತು ಅವತಾರಗಳನ್ನು ಪೂಜಿಸುತ್ತಾರೆ. ಒಂಬತ್ತು ಅವತಾರಗಳು ಅಂದರೆ ದೇವಿ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ. ಎರಡನೇ ದಿನ ಬ್ರಹ್ಮಚಾರಿಣಿ ಮಾತೆಯನ್ನು ಭಕ್ತರು ಪೂಜಿಸುತ್ತಾರೆ. ಅವಳಿಗೆ ಸಕ್ಕರೆಯ ಭೋಗವನ್ನು ಅರ್ಪಿಸುತ್ತಾರೆ. ದೇವಿಯ ಪ್ರಾರ್ಥನೆ ಮಾಡುವಾಗ ಪ್ರಸಾದವನ್ನು ನೀಡುತ್ತಾರೆ. ಈ ದಿನ ನೀವು ಸಿಂಗಾರ್ ಹಿಟ್ಟಿನ ಹಲ್ವಾ ಅಥವಾ ಬಾಳೆಹಣ್ಣು ಬರ್ಫಿಯ ಭೋಗ್ ಮಾಡಲು ಪ್ರಯತ್ನಿಸಬಹುದು.

ನೀವು ನವರಾತ್ರಿಯ ಎರಡನೇ ದಿನ ತಯಾರಿಸುವ ಸಿಹಿ ಖಾದ್ಯ ಸಿಂಗಾರ್ ಹಿಟ್ಟಿನ ಹಲ್ವಾ ಮತ್ತು ಬಾಳೆಹಣ್ಣು ಬರ್ಫಿ ಮಾಡುವ ವಿಧಾನ ಇಲ್ಲಿದೆ.

ಸಿಂಗಾರ್ ಹಿಟ್ಟಿನ ಹಲ್ವಾ ಮಾಡಲು ಬೇಕಾಗುವ ಪದಾರ್ಥಗಳು:

ಸಿಂಗಾರ್ ಹಿಟ್ಟಿನ ಹಲ್ವಾ ಮಾಡಲು ಬೇಕಾಗುವ ಪದಾರ್ಥಗಳು:

1 ಕಪ್ ನೀರು ಸಿಂಗಾರ ಹಿಟ್ಟು

4 ಚಮಚ ತುಪ್ಪ

¾ ಕಪ್ ಸಕ್ಕರೆ

½ ಟೀಸ್ಪೂನ್ ಏಲಕ್ಕಿ (ಎಲೈಚಿ) ಪುಡಿ


ಅಲಂಕಾರಕ್ಕಾಗಿ

1 ಟೀಸ್ಪೂನ್ ಬಾದಾಮಿ

1 ಟೀಸ್ಪೂನ್ ಪಿಸ್ತಾ

ಸಿಂಗಾರ್ ಹಿಟ್ಟಿನ ಹಲ್ವಾ ಮಾಡುವ ವಿಧಾನ:

ಸಿಂಗಾರ್ ಹಿಟ್ಟಿನ ಹಲ್ವಾ ಮಾಡುವ ವಿಧಾನ:

- ಒಂದು ನಾನ್-ಸ್ಟಿಕ್ ಪ್ಯಾನ್‌ನಲ್ಲಿ ತುಪ್ಪವನ್ನು ಬಿಸಿ ಮಾಡಿ, ಎರಡು ಕಪ್ ನೀರು ಹಾಕಿ ಕೊಂಚ ಬಿಸಿಯಾದ ಬಳಿ 1 ಕಪ್ ಸಿಂಗಾರ ಹಿಟ್ಟು ಸೇರಿಸಿ. 4 ನಿಮಿಷಗಳ ಕಾಲ ಮಂದ ಉರಿಯಲ್ಲಿ ನಿರಂತರವಾಗಿ ಬೆರೆಸಿ ಅದು ತಿಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಬೇಯಿಸಿ.

- ಅದಕ್ಕೆ 2 ಕಪ್ ಬೆಚ್ಚಗಿನ ನೀರನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಮಂದಗತಿಯಲ್ಲಿ ಇನ್ನೊಂದು 4 ನಿಮಿಷಗಳ ಕಾಲ ಅಥವಾ ಎಲ್ಲಾ ನೀರು ಹೀರಿಕೊಳ್ಳುವವರೆಗೆ ನಿರಂತರವಾಗಿ ಬೇಯಿಸಿ.

- ಒಂದು ಕಪ್ ಸಕ್ಕರೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತು 4 ನಿಮಿಷಗಳ ಕಾಲ ಮಂದ ಉರಿಯಲ್ಲಿ ನಿರಂತರವಾಗಿ ಬೆರೆಸಿ.

- ಉರಿಯನ್ನು ಆಫ್ ಮಾಡಿ, ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.

- ಬಾದಾಮಿ ಮತ್ತು ಪಿಸ್ತಾಗಳಿಂದ ಅಲಂಕ ಮಾಡಿ. ಹಲ್ವಾವನ್ನು ಬಿಸಿಯಾಗಿ ತಿನ್ನಲು ಬಡಿಸಿ.

ಬಾಳೆಹಣ್ಣು ಬರ್ಫಿ ಮಾಡಲು ಬೇಕಾಗುವ ಪದಾರ್ಥಗಳು:

ಬಾಳೆಹಣ್ಣು ಬರ್ಫಿ ಮಾಡಲು ಬೇಕಾಗುವ ಪದಾರ್ಥಗಳು:

ಬಾಳೆಹಣ್ಣು - 1 ಅಥವಾ 2

ಬೆಲ್ಲ - 1 ಕಪ್

ನೀರು - 4 ಟೀಸ್ಪೂನ್

ಗೋಧಿ ಹಿಟ್ಟು - 1 ಕಪ್

ಬೆಣ್ಣೆ/ತುಪ್ಪ -1/3ಕಪ್

ಗೋಡಂಬಿ - 1 ಟೀಸ್ಪೂನ್

ಪಿಸ್ತಾ - 1 ಟೀಸ್ಪೂನ್

ಬಾದಾಮಿ - 1 ಟೀಸ್ಪೂನ್

ಬಾಳೆಹಣ್ಣು ಬರ್ಫಿ ಮಾಡುವ ವಿಧಾನ:

ಬಾಳೆಹಣ್ಣು ಬರ್ಫಿ ಮಾಡುವ ವಿಧಾನ:

- ಮೊದಲು ಬೆಲ್ಲವನ್ನು ನೀರಿನೊಂದಿಗೆ ಸರಿಯಾಗಿ ಕರಗಿಸಿ. ನಂತರ ಬಾಳೆಹಣ್ಣಿನ ಸಿಪ್ಪೆ ತೆಗೆದು ರುಬ್ಬಿ ನಯವಾದ ಪೇಸ್ಟ್ ಮಾಡಿಕೊಳ್ಳಿ.

- ನಂತರ ಒಂದು ಪ್ಯಾನ್ ತೆಗೆದುಕೊಳ್ಳಿ ಅಥವಾ ಕಡಾಯಿಯಲ್ಲಿ ಸ್ವಲ್ಪ ಬೆಣ್ಣೆ / ತುಪ್ಪ ಸೇರಿಸಿ. ನಂತರ ಕೆಲವು ಡ್ರೈಫ್ರೂಟ್ಗಳನ್ನು ಸೇರಿಸಿ ಮತ್ತು ಗರಿಗರಿಯಾಗುವವರೆಗೆ ಫ್ರೈ ಮಾಡಿ ನಂತರ ತೆಗೆದು ಇಡಿ. ಬಳಿಕ ಅವುಗಳನ್ನು ತುಂಡುಗಳಾಗಿ ಮಾಡಿ.

- ಬಳಿಕ ಅದೇ ಪ್ಯಾನ್‌ನಲ್ಲಿ ಗೋಧಿ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಗುಲಾಬಿ ಬಣ್ಣವಾಗಿ ಬದಲಾಗುವವರೆಗೆ ಹುರಿಯಿರಿ. ನಂತರ ಬಾಳೆಹಣ್ಣಿನ ಪೇಸ್ಟ್, ಕರಗಿದ ಬೆಲ್ಲ, ಏಲಕ್ಕಿ ಪುಡಿಯನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಬೆಣ್ಣೆ ಬೇರ್ಪಡುವವರೆಗೆ ಬೇಯಿಸಿ.

- ನಂತರ ಸ್ವಲ್ಪ ತುಂಡು ಸಣ್ಣಗೆ ಹೆಚ್ಚಿದ ಒಣ ಹಣ್ಣುಗಳನ್ನು ಸೇರಿಸಿ. ಬಳಿಕ ಮಂದ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ.

- ಉರಿಯನ್ನು ಆಫ್ ಮಾಡಿ ಮತ್ತು ಈ ಮಿಶ್ರಣವನ್ನು ತೆಗೆದುಹಾಕಿ ಮತ್ತು ಟ್ರೇ / ಪ್ಲೇಟ್ನಲ್ಲಿ ಹರಡಿ. ನಂತರ 1 ಗಂಟೆ ಫ್ರಿಜ್ನಲ್ಲಿ ಇರಿಸಿ. ನಂತರ ತುಂಡುಗಳಾಗಿ ಕತ್ತರಿಸಿ ರುಚಿಕರವಾದ ಬಾಳೆಹಣ್ಣು ಬರ್ಫಿಯನ್ನು ಬಡಿಸಿ.

English summary
Dasara Festival- Navaratri 2st day on September 27th. Goddess Brahmacharini is worshipped on this day. Here is Singhare Atte ka halwa and kele ki barfi recipes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X