ರಾಶಿಚಕ್ರಕ್ಕೆ ತಕ್ಕಂತೆ ನವರಾತ್ರಿಯಲ್ಲಿ ಬಟ್ಟೆ ಧರಿಸಿ
ನವರಾತ್ರಿ ಸಡಗರದಿಂದ ಆರಂಭಗೊಂಡಿದೆ. ಒಂಭತ್ತು ದಿನ ವಿಜೃಂಭಣೆಯಿಂದ ಸಾಗುವ ನವರಾತ್ರಿ ಹಬ್ಬಕ್ಕೆ ಪೂಜೆ ಪುನಸ್ಕಾರಗಳೂ ಅಷ್ಟೇ ವೈಭವದಿಂದ ನಡೆಯುತ್ತವೆ. ದೇವಿಯನ್ನು ಒಲಿಸಿಕೊಳ್ಳಲು ಒಂದೊಂದು ದಿನವೂ ಒಂದೊಂದು ಅಲಂಕಾರ ಮಾಡಿ ಆಕೆಯನ್ನು ಪ್ರಸನ್ನಗೊಳಿಸಲಾಗುತ್ತದೆ.
ಆದರೆ ದೇವಿಯ ಅನುಗ್ರಹ ಪಡೆಯಲು ಪೂಜೆ ಪುನಸ್ಕಾರವಷ್ಟೇ ಸಾಕಾಗುವುದಿಲ್ಲ, ನಿಮ್ಮ ರಾಶಿಗೆ ತಕ್ಕಂತಹ ಬಣ್ಣದ ಬಟ್ಟೆ ಧರಿಸಿ ದೇವಿಗೆ ಪ್ರಾರ್ಥನೆ ಸಲ್ಲಿಸಿದರೆ ಅದರ ಪೂರ್ಣ ಫಲ ನಿಮ್ಮದಾಗುತ್ತದೆ ಎಂದಿದೆ ಜ್ಯೋತಿಷ್ಯ ಶಾಸ್ತ್ರ.

ಈಗ ಯಾವ ರಾಶಿಯವರಿಗೆ ಯಾವ ಬಣ್ಣದ ಬಟ್ಟೆ ಉತ್ತಮ ಎಂದು ತಿಳಿದುಕೊಳ್ಳೋಣ:
ಮೇಷ: ಮೇಷ ರಾಶಿಯವರು ದೇವಿಯ ಅನುಗ್ರಹ ಪಡೆಯಲು ಕೆಂಪು ಅಥವಾ ಹಳದಿ ಬಣ್ಣದ ಬಟ್ಟೆಯನ್ನು ಧರಿಸಬಹುದು. ಒಂಭತ್ತು ದಿನಗಳಲ್ಲಿ ಈ ಬಣ್ಣಕ್ಕೆ ಸಂಬಂಧಪಟ್ಟ ಬಟ್ಟೆಗಳನ್ನು ತೊಟ್ಟು ದೇವಿ ಪೂಜೆ ಮಾಡಬಹುದು.
ವೃಷಭ: ಈ ರಾಶಿಯವರು ನವರಾತ್ರಿಯ ಪೂಜಾಫಲವನ್ನು ತಮ್ಮದಾಗಿಸಿಕೊಳ್ಳಲು ಗುಲಾಬಿ ಬಣ್ಣಕ್ಕೆ ಸಂಬಂಧಿಸಿದ, ಗಾಢ ಅಥವಾ ತಿಳಿ ಗುಲಾಬಿ ಬಣ್ಣ ಅಥವಾ ಬಿಳಿ ಬಣ್ಣದ ಬಟ್ಟೆ ತೊಟ್ಟು ದೇವಿಯ ಪ್ರಾರ್ಥನೆ ಮಾಡಿದರೆ ತಾವು ಅಂದುಕೊಂಡಿದ್ದು ನಡೆಯಲು ಸಹಾಯವಾಗುತ್ತದೆ.
ಮಿಥುನ: ಮಿಥುನ ರಾಶಿಯಲ್ಲಿ ಹುಟ್ಟಿದವರು, ಚಾಮುಂಡಿಯ ಸಹಾಯ ಹಸ್ತ ಪಡೆಯಲು ಹಸಿರು ಬಣ್ಣದ ಬಟ್ಟೆ ತೊಟ್ಟು ಆಕೆಯನ್ನು ಪೂಜಿಸಿ, ಆಕೆಗೂ ಹಸಿರು ಬಳೆಯನ್ನು ಅರ್ಪಿಸಿದರೆ ದೇವಿ ಒಲಿಯುವಳು ಎಂದು ಶಾಸ್ತ್ರ ಹೇಳುತ್ತದೆ.
ಕರ್ಕ: ಕರ್ಕಾಟಕ ರಾಶಿಯವರು ಕಾಳಿಯ ಕೃಪಾಕಟಾಕ್ಷ ಹೊಂದಲು ಬಿಳಿ ಅಥವಾ ತಿಳಿ ಬಣ್ಣದ ಬಟ್ಟೆ ಧರಿಸಿ ಪ್ರಾರ್ಥನೆ ಮಾಡಿಕೊಂಡರೆ ಕಷ್ಟ ಕಾರ್ಪಣ್ಯಗಳು ದೂರ ಸರಿಯುವುದು.
ಸಿಂಹ: ಚಾಮುಂಡಿಯ ವಾಹನ ಸಿಂಹದ ಲಾಛನವನ್ನು ಹೊಂದಿರುವ ಸಿಂಹ ರಾಶಿಯವರಿಗೆ ಈ ಒಂಭತ್ತು ದಿನಗಳಲ್ಲಿ ಹಳದಿ ಬಣ್ಣ ಮತ್ತು ಹಳದಿ ಬಣ್ಣಕ್ಕೆ ಹೊಂದಿಕೊಂಡಿರುವ ಬಣ್ಣದ ಬಟ್ಟೆಯನ್ನು ತೊಟ್ಟು ದೇವಿಯನ್ನು ಪೂಜಿಸಿದರೆ ಅವರ ಅನೇಕ ಸಮಸ್ಯೆಗಳು ಮುಕ್ತಿ ಹೊಂದುತ್ತವೆ ಎನ್ನಲಾಗಿದೆ.
ಮುಂದಿನ ರಾಶಿಗಳಿಗೆ ದೇವಿ ಯಾವ ಬಣ್ಣದಿಂದ ಒಲಿಯುವಳು ಎಂದು ಮುಂದೆ ತಿಳಿದುಕೊಳ್ಳಿ.












Click it and Unblock the Notifications