ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವರಾತ್ರಿ:ಯಾವ ದೇವರಿಗೆ ಯಾವ ಹೂವು ಶ್ರೇಷ್ಠ?

|
Google Oneindia Kannada News

Flowers for Different Dieties
ಬುಧವಾರದಿಂದ ನವರಾತ್ರಿ ಆರಂಭಗೊಳ್ಳುತ್ತಿದೆ. (ಸೆ. 28 2011 ರಿಂದ ಅ. 06 2011 ) ಈ ಒಂಭತ್ತು ದಿನ ವಿವಿಧ ದೇವತೆಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಪೂಜೆಗೆ ಪ್ರಮುಖವಾಗಿರುವ ಹೂವುಗಳಲ್ಲಿಯೂ ಶ್ರೇಷ್ಠತೆ ಇದೆ.

ಹಿಂದೂ ಧರ್ಮದ ಪ್ರಕಾರ ಒಂದೊಂದು ದೇವರಿಗೂ ಒಂದೊಂದು ಶ್ರೇಷ್ಟ ಹೂವುಗಳನ್ನು ಅರ್ಪಿಸಲಾಗುತ್ತದೆ. ಯಾವ ದೇವರಿಗೆ ಯಾವ ಹೂವು ಶ್ರೇಷ್ಠ ಎಂದು ತಿಳಿದುಕೊಂಡರೆ ನವರಾತ್ರಿಯನ್ನು ವಿಶೇಷವಾಗಿ ಆಚರಿಸಬಹುದು.

ಯಾವ ದೇವರಿಗೆ ಯಾವ ಹೂವು ಅರ್ಪಿಸಬೇಕು?

ಗಣೇಶ: ಗಣಪನಿಗೆ ಗರಿಕೆ ಶ್ರೇಷ್ಠ. ವಿಘ್ನವಿನಾಶಕನಿಗೆ ಬಿಳಿ ಎಕ್ಕದ ಹೂವನ್ನು ಅರ್ಪಿಸಿದರೆ ವಿಘ್ನಗಳನ್ನು ನಿವಾರಿಸಿ ಬಾಳು ಹಸನಾಗುವಂತೆ ಮಾಡುವನು ಎಂದು ನಂಬಲಾಗಿದೆ.

ಶಿವ: ಶಿವನಿಗೆ ಬಿಲ್ವಪತ್ರೆ ಶ್ರೇಷ್ಠ. ಇದರ ಹೊರತಾಗಿ ತುಂಬೆ ಹೂವು, ಮಂದಾರ ಮತ್ತು ಕಣಗಿಲೆ ಹೂವು ಶಿವನಿಗೆ ತುಂಬಾ ಪ್ರಿಯ. ಬಿಳಿ ಎಕ್ಕದ ಹೂವು, ಸಂಪಿಗೆ ಮತ್ತು ಲಿಂಗದ ಹೂವನ್ನು ಅರ್ಪಿಸಿದರೆ ಶಿವ ಪ್ರಸನ್ನನಾಗುವನು ಎಂದು ಹಿರಿಯರ ವಾಡಿಕೆ.

ವಿಷ್ಣು: ವಿಷ್ಣುವನ್ನು ಒಲಿಸಿಕೊಳ್ಳಲು ತುಳಸಿ ಅರ್ಪಿಸಬಹುದು. ಒಂದು ತುಳಸಿ ಎಲೆ ಆತನನ್ನು ಸಂತೋಷಗೊಳಿಸುತ್ತದೆ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ತುಳಸಿ ಹೊರತಾಗಿ ಪಾರಿಜಾತ, ಶಂಕಪುಷ್ಪ ಅಥವಾ ಅಪರಾಜಿತ, ಅಶೋಕ ಪುಷ್ಟ ಕಮಲ ಮುಂತಾದ ಹೂವುಗಳನ್ನು ವಿಷ್ಣುವಿಗೆ ಅರ್ಪಿಸಬಹುದು.

ಪಾರ್ವತಿ: ಪಾರ್ವತಿಗೆ ಸಲ್ಲಿಸುವ ಹೂವುಗಳನ್ನು ಲಲಿತ ಸಹಸ್ರನಾಮದಲ್ಲಿ ವಿವರಿಸಲಾಗಿದೆ. ಪಾರ್ವತಿ ದೇವಿಗೆ ಇಷ್ಟವಾಗುವ ದಾಸವಾಳ, ಚಂಪಕ, ಮಲ್ಲಿಗೆ, ಪುನ್ನಾಗ ಹೂವು ಮತ್ತು ದವನ, ಮರುಗವನ್ನು ಪೂಜೆಗೆ ಅರ್ಪಿಸಲಾಗುತ್ತದೆ.

ದುರ್ಗಾ ದೇವಿ: ದುರ್ಗೆಗೆ ಕೆಂಪು ಬಣ್ಣದ ಎಲ್ಲ ಹೂವುಗಳೂ ಇಷ್ಟ. ದಾಸವಾಳ, ಅಶೋಕ ಪುಷ್ಪ, ಕಣಗಿಲೆ ಹೂವನ್ನು ದುರ್ಗೆಗೆ ನೀಡಲಾಗುತ್ತದೆ.

ಲಕ್ಷ್ಮಿ: ಲಕ್ಷ್ಮಿಗೆ ಕಮಲದ ಹೂವೆಂದರೆ ಶ್ರೇಷ್ಠ. ಸೇವಂತಿಗೆ, ಕೇದಗೆ, ಸಂಪಿಗೆ ಮುಂತಾದುವನ್ನು ವರವ ಕೊಡುವ ದೇವಿಗೆ ಅರ್ಪಿಸಿ ವರವನ್ನು ಪಡೆಯಬಹುದು.

ಸರಸ್ವತಿ: ಶ್ವೇತವರ್ಣೆ ಸರಸ್ವತಿಗೆ ಬಿಳಿ ಕಮಲ, ಸುವಾಸನೆ ಬೀರುವ ಪಾರಿಜಾತವನ್ನು ಅರ್ಪಿಸಿದರೆ ಒಳ್ಳೆಯ ವಿದ್ಯೆ ಕರುಣಿಸುವಳು ಎನ್ನಲಾಗಿದೆ.

ಹನುಮ: ಹನುಮನಿಗೆ ತುಳಸಿಹಾರ ಮತ್ತು ವಿಳ್ಳೆಯದೆಲೆಯ ಹಾರವನ್ನು ಹಾಕಿದರೆ ಒಳಿತನ್ನು ಕರುಣಿಸುವನು ಎಂದು ನಂಬಲಾಗಿದೆ.

English summary
The fragrance of flowers induces devotion and sets the mood for worship. In hinduism, different flowers are associated for the worship of different deities. For this Navrathri festival, it may help you to know which flowers can be offered to different deities. Below mentioned are the flowers for worship of different deities according to the Hindu faith.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X