ವಿಜಯ ದಶಮಿಯಂದು 'ಹುಲಿ' ಮರಿ ಕಣಕ್ಕೆ

Aditya Thackeray
ಮುಂಬೈ, ಅ.17: ಠಾಕ್ರೆ ಮನೆತನದ ಮೂರು ಪೀಳಿಗೆಯ ನಾಯಕರು ಇಂದು ನಡೆಯಲಿರುವ ವಿಜಯ ದಶಮಿ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡು ಅಭಿಮಾನಿಗಳಲ್ಲಿ ಕಿಚ್ಚು ಹಬ್ಬಿಸಲಿದ್ದಾರೆ. ದಾದರ್ ನ ಪ್ರಸಿದ್ಧ ಶಿವಾಜಿ ಪಾರ್ಕ್ ಮೈದಾನದಲ್ಲಿ ಬೃಹತ್ ಸಮಾರಂಭದಲ್ಲಿ ಠಾಕ್ರೆ ಮನೆತನದ ಯುವ ನೇತಾರ ಉದ್ಧವ ಠಾಕ್ರೆ ಅವರ ಮಗ, ಬಾಳಾ ಠಾಕ್ರೆ ಅವರ ಮೊಮ್ಮಗ ಆದಿತ್ಯ ಠಾಕ್ರೆ ಅಧಿಕೃತವಾಗಿ ರಾಜಕೀಯಕ್ಕೆ ಅಡಿಯಿಡುವ ಶುಭ ಸಂದರ್ಭ ಎಂದೇ ಮಾಧ್ಯಮಗಳು ಬಣ್ಣಿಸಿವೆ.

ಶಿವ ಸೇನಾ ಮುಖ್ಯಸ್ಥ 84 ವರ್ಷದ ಬಾಳಾ ಠಾಕ್ರೆ, ಅವರ ಮಗ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಉದ್ಧವ್ ಠಾಕ್ರೆ ಜೊತೆಗೆ ಮೊಮ್ಮಗ 20 ವರ್ಷದ ಇತಿಹಾಸ ಪದವಿ ವಿದ್ಯಾರ್ಥಿ ಆದಿತ್ಯ ಸಾರ್ವಜನಿಕವಾಗಿ ಒಂದೇ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.

ಶಿವಾಜಿ ಪಾರ್ಕ್ ನಲ್ಲಿ ಸಮಾರಂಭ ನಡೆಸಲು ಬಾಂಬ್ ಹೈ ಕೋರ್ಟ್ ಕೊನೆಗೂ ಶಿವಸೇನೆಗೆ ಅನುಮತಿ ನೀಡಿದ್ದು, ಅದಿತ್ಯ ಅವರ ನೇತೃತ್ವದ ಯುವ ಸೇನಾ ವಿಭಾಗಕ್ಕೆ ಇಂದು ಚಾಲನೆ ನೀಡಲಿದ್ದಾರೆ. ಸುಮಾರು 3 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದ್ದು, ವಿಜಯ ದಶಮಿ ಸಂಭ್ರಮ ಮುಗಿಲು ಮುಟ್ಟಲಿದೆ. ಆದರೆ, ಮೆರವಣಿಗೆ ಸಂದರ್ಭದಲ್ಲಿ ನಡೆಸುವ ಗದ್ದಲ, ಶಬ್ದದ ಪ್ರಮಾಣ 50 ಡೆಸಿಬೆಲ್ಸ್ ಮೀರಬಾರದು ಎಂಬ ಬಾಂಬೆ ಹೈ ಕೋರ್ಟ್ ನೀಡಿರುವ ಆದೇಶ ಎಷ್ಟರಮಟ್ಟಿಗೆ ಪಾಲಿಸಲಾಗುವುದು ಎಂಬುದಕ್ಕೆ ಉತ್ತರವಿಲ್ಲ.

ನಾಡಹಬ್ದ ದಸರಾ ಸಮಗ್ರ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+