ದೆಹಲಿಯಲ್ಲಿ ಸೋನಿಯಾ, ಪ್ರಧಾನಿ ಹಬ್ಬದ ಸಂಭ್ರಮ

ದೆಹಲಿಯ ಪ್ರಸಿದ್ಧ ರಾಮ್ ಲೀಲಾ ಮೈದಾನ್ ನಲ್ಲಿ ನಡೆಯಲಿರುವ ಹಬ್ಬದ ಆಚರಣೆಯಲ್ಲಿ ಇಂದು ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಅವರು ಪಾಲ್ಗೊಳ್ಳುವುದನ್ನು ಕಾಂಗ್ರೆಸ್ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ: ಮೈಸೂರು ದಸರಾದಲ್ಲಿ ಜಂಬೂ ಸವಾರಿ ಪ್ರಮುಖ ಆಕರ್ಷಣೆ ಎನ್ನಬಹುದಾದರೆ, ದೆಹಲಿ ರಾಮ್ ಲೀಲಾ ಮೈದಾನ ಸೇರಿದಂತೆ ಉತ್ತರ ಭಾರತದಲ್ಲಿ ದುಷ್ಟ ಶಕ್ತಿಯ ಸಂಕೇತವಾದ ರಾವಣ, ಮೇಘನಾದ, ಕುಂಭಕರ್ಣ ಸೇರಿದಂತೆ ಅಸುರರ ಬೃಹತ್ ಆಕೃತಿಯನ್ನು ಸುಡುವುದು ಪ್ರತೀತಿ. ಈ ಮೂಲಕ ದುಷ್ಟ ಸಂಹಾರವಾಗಿ ಅಸುರರ ಮೇಲೆ ವಿಜಯ ಸಾಧಿಸಿದ ದಿನ ಎಂದು ಆಚರಿಸಲಾಗುತ್ತದೆ.
ನವರಾತ್ರಿ ಕಳೆದು ವಿಜಯದಶಮಿ ಆಚರಣೆ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರತಿಭಾಪಾಟೀಲ್ ಅವರು ದೇಶದ ಸಮಸ್ತ ಜನತೆಗೆ ದಸರಾ ಹಬ್ಬದ ಶುಭ ಹಾರೈಕೆಯನ್ನು ತಿಳಿಸಿದ್ದಾರೆ.












Click it and Unblock the Notifications