547950dasara festivalಸೆ. 15ರೊಳಗೆ ಮೈಸೂರು ವಿಮಾನ ನಿಲ್ದಾಣ/news/2009/08/06/mysore-airport-to-be-operational-by-sept-15-bsy.htmlಮೈಸೂರು, ಆ. 6 : ಮೈಸೂರು ವಿಮಾನ ನಿಲ್ದಾಣದ ಎಲ್ಲ ಕಾಮಗಾರಿಗಳನ್ನು ಸೆಪ್ಟೆಂಬರ್ 15 ರೊಳಗೆ ಪೂರ್ಣಗೊಳಿಸಿ, ಉದ್ಘಾಟನೆಗೆ ಸಜ್ಜುಗೊಳಿಸಬೇಕೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದಿಲ್ಲಿ ಸೂಚಿಸಿದರು. ಭಾರತೀಯ ವಿಮಾನ ನಿಲ್ದಾಣದ ಪ್ರಾಧಿಕಾರದ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಈ ವರ್ಷದ ದಸರಾ ಆರಂಭಕ್ಕೆ ಮುನ್ನ ವಿಮಾನ ನಿಲ್ದಾಣ ಸಜ್ಜುಗೊಂಡು ಪ್ರವಾಸಿಗರಿಗೆ ವಿಮಾನಯಾನ ಸೇವೆ 38455http://kannada.oneindia.com/img/2009/08/06-bsy-mysore-airport-meet1.jpg547950dasara festivalದಸರಾ: ಸಂಭ್ರಮದ ಗಜಪಯಣಕ್ಕೆ ಸಿದ್ಧತೆ/festivals/dasara/2009/0811-mysore-readies-itself-for-gajapayana-aug13.htmlಮೈಸೂರು, ಆ. 11 : ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮ ಗಜಪಯಣಕ್ಕೆ ಅದ್ದೂರಿಯ ಚಾಲನೆ ನೀಡಲು ಸರ್ವಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ ಮಣಿವಣ್ಣನ್ ಅಧಿಕಾರಿಗಳಿಗೆ ಸೂಚಿಸಿದರು.ದಿನಾಂಕ 13.8.09 ರಂದು ಗುರುವಾರ ಬೆಳಿಗ್ಗೆ 11.30 ಕ್ಕೆ ಹುಣಸೂರು ತಾಲ್ಲೂಕು ವೀರನಹೊಸಳ್ಳಿಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಗಜಪಯಣಕ್ಕೆ 38567http://kannada.oneindia.com/img/2009/08/11-elephant-balarama1.jpg547950dasara festivalರವಿಶಂಕರ್ ಗುರೂಜಿಯಿಂದ ದಸರಾ ಉದ್ಘಾಟನೆ/festivals/dasara/2009/0902-ravishankar-guruji-to-inaugurate-dasara-2009.htmlಮೈಸೂರು, ಸೆ. 2 : ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನೆಗೆ ಆರ್ಟ್ ಆಫ್ ಲೀವಿಂಗ್ ನ ರವಿಶಂಕರ್ ಗುರೂಜಿ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶೋಬಾ ಕರಂದ್ಲಾಜೆ ತಿಳಿಸಿದರು. ನಗರದ ಅರಮನೆ ಮಂಡಳಿ ಕಚೇರಿಯಲ್ಲಿ ದಸರಾ ಗೋಲ್ಡ್ ಕಾರ್ಡ್ ಬಿಡುಗಡೆ ಮತ್ತು ದಸರಾ ವೆಬ್ ಸೈಟ್ ಗೆ ಚಾಲನೆ ನೀಡಿದ ನಂತರ ಮಾಧ್ಯಮ 38959http://kannada.oneindia.com/img/2009/09/02-ravishankar2.jpg547950dasara festivalದಸರಾ ಹಬ್ಬ : ಖಾಸಗಿ ಪ್ರಾಯೋಜಕತ್ವಕ್ಕೆ ಅಸ್ತು/festivals/dasara/2009/0906-private-sponsorship-for-dasara-manivannan.htmlಮೈಸೂರು, ಸೆ. 6 : ಅದ್ಧೂರಿ ದಸರಾ ಆಚರಣೆಗೆ ಸಿದ್ಧತೆ ನಡೆಸಿರುವ ಜಿಲ್ಲಾಡಳಿತ ಸರಕಾರದ ಅನುದಾನದ ಜೊತೆಗೆ ಖಾಸಗಿ ಪ್ರಾಯೋಜಕರನ್ನು ಆಹ್ವಾನಿಯಲಾಯಿತು. ನಗರದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆದ ವಿವಿಧ ಕಂಪನಿಗಳ ಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಮಣಿವಣ್ಣನ್ ಈ ಅಹ್ವಾನ ನೀಡಿದರು. ದಸರಾ ಅಂಗವಾಗಿ ನಡೆಯಲಿರುವ ಅರಮನೆ ಕಾರ್ಯಕ್ರಮ, ಯುವ ದಸರಾ, ಕ್ರೀಡಾಕೂಟ, ಗ್ರಾಮೀಣ ದಸರಾ ಸೇರಿದಂತೆ 39030http://kannada.oneindia.com/img/2009/09/06-manivannan-mysore-dc.jpg547950dasara festivalಈ ದಸರೆಯಲ್ಲಿ 35 ಸ್ತಬ್ದ ಚಿತ್ರ ಮೆರವಣಿಗೆ/festivals/dasara/2009/0909-mysore-dasara-procession-35-tableau-limit.htmlಮೈಸೂರು, ಸೆ. 9 : ದಸರಾ ಸ್ಥಬ್ದಚಿತ್ರ ಉಪಸಮಿತಿ ಸಭೆಯನ್ನು ದಸರಾ ಸ್ತಬ್ದಚಿತ್ರ ಉಪಸಮಿತಿ ಅದ್ಯಕ್ಷರಾದ ಎಂ ಸತೀಶ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ದಸರಾ ವಿಶೇಷಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಮಣಿವಣ್ಣನ್ ಹಾಗೂ ದಸರಾ ಉಪವಿಶೇಷಾಧಿಕಾರಿಗಳು ಹಾಗೂ ಪೋಲೀಸ್ ಆಯುಕ್ತರಾದ ಸುನಿಲ್ ಅಗರವಾಲ್ ನೇತೃತ್ವದಲ್ಲಿ ಸಭೆ ನಡೆಯಿತು.ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್‌ ಅಧಿಕಾರಿಗಳು, ಇತರೆ ಇಲಾಖಾ ಅಧಿಕಾರಿಗಳ ಸಭೆಯನ್ನು 39094http://kannada.oneindia.com/img/2009/09/09-shobha-karandlaje1e.jpg466642mysore dasaraನೆನಪಿನಂಗಳದಿಂದ... ವೈಭವದ ಮೈಸೂರು ದಸರಾ/festivals/dasara/2008/0930-world-famous-mysore-dasara-a-nostalgia.html1972ರಲ್ಲಿ ರಾಜಪರಂಪರೆ ಕೊನೆಗೊಳ್ಳುವುದರೊಂದಿಗೆ, ಅಂಬಾರಿಯ ಮೇಲೆ ಮಹಾರಾಜರು ಸವಾರಿ ಮಾಡುವ 362 ವರ್ಷಗಳ ಸಂಪ್ರದಾಯ ಕೊನೆಗೊಂಡಿತು. ಆಗ ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ರಾಜನ ಕಂಡೆ ಎಂದಿತ್ತು. ಇದೀಗ ಅಂಬಾರಿ ಒಳಗೆ ಚಾಮುಂಡಿ ಕಂಡೆ ಎಂದಾಗಿದೆ. ವಿಜಯನಗರದ ಸಂಸ್ಥಾನದ ಆಡಳಿತಾವಧಿಯಲ್ಲಿ ಪ್ರಾರಂಭಗೊಂಡ ಮೈಸೂರಿನ ದಸರಾ ಆಚರಣೆ ಇದೀಗ ಕರ್ನಾಟಕದ ನಾಡ ಹಬ್ಬವಾಗಿದೆ. ಲೇಖನ : 557http://kannada.oneindia.com/img/2009/09/17-ambari1e.jpg466642mysore dasaraನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ... (ಭಾಗ 3)/literature/articles/2009/0408-doll-history-culture-and-lifestyle-part3.htmlನಾವ್ ಮನುಜರಾಡುವಾ ಬೊಂಬೆಯಾಟವಯ್ಯಾ...ಇದು ಭಾರತದಲ್ಲೇ ಅಲ್ಲ ದಕ್ಷಿಣ ಆಫ್ರಿಕೆಯಲಿ ಮೊದಲ ಮಗುವಾದ ತಕ್ಷಣ ತಾಯಿ ಒಂದು ಗೊಂಬೆ ಅದರ ಪಕ್ಕ ಇಡುತ್ತಾಳೆ. ನಂತರ ಇನ್ನೊಂದು ಮಗುವಾದಾಗ ಮೊದಲ ಮಗುವಿನ ಗೊಂಬೆ ಎರಡನೆಯ ಮಗುವಿಗೆ ಬಳುವಳಿ. ಮತ್ತೊಂದು ಹೊಸ ಗೊಂಬೆ ಮೊದಲ ಮಗುವಿಗೆ. ಸಿರಿಯಾದಲ್ಲಿ ಮದುವೆಯ ವಯಸ್ಸಿನ ಹುಡುಗಿಯಿದ್ದರೆ ಮನೆಯ ಕಿಟಕಿಯ ಬಾಗಿಲುಗಳಲ್ಲಿ ಗೊಂಬೆ ನೇತು ಹಾಕುವ 35829http://kannada.oneindia.com/img/2009/04/08-barbie1.jpg466642mysore dasaraನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ... (ಭಾಗ 2)/literature/articles/2009/0408-doll-history-culture-and-lifestyle-part2.htmlಮೈಸೂರು ದಸರಾ...ಎಷ್ಟೊಂದು ಸುಂದರಾ...ಮೈಸೂರು ದಸರಾ ಹಬ್ಬಕ್ಕೂ ಗೊಂಬೆಗೂ ಅವಿನಾಭಾವ ಸಂಬಂಧ. ಅಂಬಾವಿಲಾಸದ ಗೊಂಬೆ ತೊಟ್ಟಿಯಲಿ ಇಡುತ್ತಿದ್ದ ಗೊಂಬೆಗಳು ಮೈಸೂರು ದಸರೆಗೆ ಚಿನ್ನದ ಮೆರಗನ್ನು ನೀಡುತ್ತಿತ್ತು. ಆ ಬೊಂಬೆಗಳ ಲೋಕದಲಿ ದೇವ, ದಾನವರ ಜೊತೆಗೆ ಹಿರಿಯ ಚೇತನಗಳು, ಪ್ರಾಣಿ, ಪಕ್ಷಿಗಳು ತುಂಬಿದ ಲೋಕವದು. ಬೊಂಬೆ ಇಡೋದು ಎಂಬುದು ದೈವತ್ವ ತುಂಬಿದ ಸನಾತನ ಸಂಪ್ರದಾಯ. ಅದು ಬೊಂಬೆಗಳ ಹಬ್ಬ, ಚಿಣ್ಣರ 35830http://kannada.oneindia.com/img/2009/04/08-mysore-doll1.jpg466642mysore dasaraನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ.../literature/articles/2009/0408-doll-history-culture-and-lifestyle.htmlಬಾಲ್ಯಾವಸ್ಥೆಯಲಿ ನಾನೂ ನಿಮ್ಹಾಗೆ ಗೊಂಬೆನೆ ಕಣ್ರೊ ಎಂದು ನಲಿದು, ಯೌವನದಲಿ ಅವಳು ಕರ್ಪೂರದ ಗೊಂಬೆ, ಚಂದನದ ಗೊಂಬೆ, ಬೊಂಬೆ ನೀನೇ ನನ್ನ ರಂಭೆ ಎಂದೊಲಿದು, ಮಧ್ಯಾವಸ್ಥೆಯಲಿ ಕಾಲದ ಕೈಪಿಡಿಯಲಿ ಸಮಯದ ಗೊಂಬೆಗಳಾಗಿ, ಪರಿಸ್ಥಿತಿಯ ಗೊಂಬೆಗಳಾಗಿ ಮಾರ್ಪಡುವ ನಮ್ಮ ಜೀವನವೂ ಬೊಂಬೆಯಾಟವಯ್ಯಾ...ಆ ದೇವನಾಡುವಾ ಬೊಂಬೆ ಆಟವಯ್ಯಾ...* ವಾಣಿ ರಾಮದಾಸ್, ಸಿಂಗಪುರ 'ಮಮ್ಮೀ, ಮೈ ಬೇಬಿ ಇಸ್ ನಾಟ್ ಸ್ಲೀಪಿಂಗ್, 35831http://kannada.oneindia.com/img/2009/04/08-baby-doll1.jpg466642mysore dasaraದಸರಾ: ಒಡೆಯರ್ ಗೆ ಸರಕಾರದ ಅಧಿಕೃತ ಆಹ್ವಾನ/festivals/dasara/2009/0831-dasara-govt-extends-invitation-to-wodeyar.htmlಬೆಂಗಳೂರು, ಆ. 31 : ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಸರಕಾರದ ವತಿಯಿಂದ ಆಯೋಜಿಸಲಾಗುವ ದಸರಾ ಮಹೋತ್ಸವಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯಿತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಅವರು ಮೈಸೂರು ಮಹಾರಾಜರ ವಂಶಸ್ಥ ಶ್ರೀಕಂಠದತ್ತ ರಾಜ ಒಡೆಯರ ಮತ್ತು ಅವರ ಪ್ರಮೋದಿನಿ ಅವರಿಗೆ ಅಧಿಕೃತ ಆಹ್ವಾನ ನೀಡಿದರು. ಅಲ್ಲದೇ 38937http://kannada.oneindia.com/img/2009/08/31-wodeyar-shobha1.jpg195231janardhan reddyಬಳ್ಳಾರಿ ಗಣಿ ಮಾಫಿಯಾ ವಿರುದ್ಧ ಗೌಡರ ದೂರು/news/2009/03/07/deve-gowda-complaints-against-bellary-mining-mafia.htmlಬೆಂಗಳೂರು, ಮಾ.7: ರಾಜ್ಯದ ಗಡಿಯನ್ನು ಬಳ್ಳಾರಿ ಗಣಿ ಮಾಫಿಯಾ ಒತ್ತುವರಿ ಮಾಡಿಕೊಂಡಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ರಾಜ್ಯಪಾಲರ ಮುಖೇನ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದ್ದಾರೆ. ಸಚಿವರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು ಅವರಿಂದ ಗಡಿ ಕಬಳಿಕೆ ನಡೆದಿದ್ದು, ರಾಜ್ಯದ ಏಕತೆ, ಸಮಗ್ರತೆಗೆ ಧಕ್ಕೆ ಉಂಟಾಗಿದೆ. ಇದನ್ನು ಸರಿಪಡಿಸಿ ಕೂಡಲೇ ಸೂಕ್ತ ಕ್ರಮ 35068http://kannada.oneindia.com/img/2009/03/07-devegowda3.jpg195231janardhan reddyರೆಡ್ಡಿ, ಯಡ್ಡಿ, ಚಡ್ಡಿ ಎಂದು ಬಂಗಾರಪ್ಪ ಲೇವಡಿ/news/2009/04/27/bangarappa-ridicules-on-yeddyurappa-and-rss.htmlಬೆಂಗಳೂರು, ಏ. 27 : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೋದ ಮಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಭಾರಿ ಹರಸಾಹಸ ಮಾಡುತ್ತಿದ್ದಾರೆ. ಆರ್ಎಸ್ ಎಸ್, ಯಡಿಯೂರಪ್ಪ ಹಾಗೂ ರಾಮಚಂದ್ರಾಪುರಮಠದ ಸ್ವಾಮಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಬಂಗಾರಪ್ಪ, ರಾಮಚಂದ್ರಪುರ ಮಠಕ್ಕೆ ಮುಖ್ಯಮಂತ್ರಿ ಕೋಟ್ಯಂತರ ಹಣ ಕೊಟ್ಟರಲ್ಲ, ಅದೇನೂ ಅವರಪ್ಪನ ಮನೆಯ ಗಂಟೇನು ಎಂದು ಪ್ರಶ್ನಿಸಿದ್ದಾರೆ. 36249http://kannada.oneindia.com/img/2009/04/27-bangarappa2.jpg195231janardhan reddyಗಣಿಗಾರಿಕೆ ನಿಲ್ಲಿಸಲು ಸುಪ್ರಿಂಕೋರ್ಟ್ ಹೇಳಿಲ್ಲ, ರೆಡ್ಡಿ/news/2009/05/11/sc-did-not-ask-us-to-stop-mining-says-reddy.htmlಬಳ್ಳಾರಿ, ಮೇ. 11 : ವಿವಾದಿತ ಗಣಿ ಪ್ರದೇಶದ ಸಮೀಕ್ಷೆಯ ವರದಿ ಸಲ್ಲಿಸುವಂತೆ ಸುಪ್ರಿಂಕೋರ್ಟ್ ಆದೇಶ ನೀಡಿದೆಯೇ ಹೊರತು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಎಲ್ಲೂ ಹೇಳಿಲ್ಲ ಎಂದು ಒಬಳಾಪುರಂ ಮೈನಿಂಗ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಜನಾರ್ದನರೆಡ್ಡಿ ಎಂದು ಹೇಳಿದ್ದಾರೆ. ಈ ಮೂಲಕ ತಾವು ಮೈನಿಂಗ್ ಸ್ಥಗಿತಗೊಳಿಸುವುದಿಲ್ಲ ಎಂಬುದನ್ನು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಈ ವಿವಾದ ಅಂತರಾಜ್ಯ ವಿಷಯವಲ್ಲ. 36516http://kannada.oneindia.com/img/2009/05/11-janardhana-reddy2.jpg195231janardhan reddyಬಿಜೆಪಿ ಭಿನ್ನಮತ : ರೆಡ್ಡಿ ನೇತೃತ್ವದಲ್ಲಿ ಸಭೆ /news/2009/06/05/bjp-jolt-continue-reddy-meeting-with-his-followers.htmlಬೆಂಗಳೂರು, ಜೂ. 5 : ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಬಳ್ಳಾರಿಯ ರೆಡ್ಡಿ ಸಹೋದರರು ಇಂದು ಸಚಿವ ಜನಾರ್ದನರೆಡ್ಡಿ ನೇತೃತ್ವದಲ್ಲಿ ಅವರ ಬೆಂಬಲಿಗರ ಸಭೆ ಬೆಂಗಳೂರಿನ ಚಾಲುಕ್ಯ ಹೋಟೆಲ್ ಹಿಂಭಾಗದ ಅಪಾರ್ಟ್ ಮೆಂಟ್ ವೊಂದರಲ್ಲಿ ಶುರುವಾಗಿದ್ದು, ಸಚಿವರು, ಶಾಸಕರು ಮತ್ತು ಬಿಜೆಪಿ ಮುಖಂಡರು ಭಾಗವಹಿಸಿದ್ದಾರೆ. ಆದರೆ, ಅತ್ತ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯು ಆರಂಭವಾಗಿದೆ. 37135http://kannada.oneindia.com/img/2009/06/05-janardhana-reddy2.jpg195231janardhan reddyರೆಡ್ಡಿಗಳ ಬೆದರಿಕೆಗೆ ಡೋಂಟ್ ಕೇರ್ ಅಂದ ಸಿಎಂ/news/2009/06/07/yeddyurappa-downplays-criticism-from-colleague.htmlಬೆಂಗಳೂರು, ಜೂ. 7 : ಬಳ್ಳಾರಿಯ ರೆಡ್ಡಿ ಸಹೋದರರು ಸೇರಿದಂತೆ ಭಿನ್ನರ ಬೆದರಿಕೆ ತಂತ್ರಕ್ಕೆ ಸೊಪ್ಪು ಹಾಕದಿರಲು ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಭಿನ್ನಮತೀಯರ ಚಟುವಟಿಕೆಗೆ ಹಾಗೂ ಬ್ಯಾಕ್ ಮೇಲ್ ತಂತ್ರಕ್ಕೆ ಕಿಮ್ಮತ್ತು ನೀಡದಂತೆ ಆರ್ಎಸ್ಎಸ್ ಮುಖಂಡರು ಶನಿವಾರ ನೀಡಿರುವ ಸೂಚನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಈ ತೀರ್ಮಾನಕ್ಕೆ ಬಂದಿದ್ದಾರೆ. ಸಚಿವತ್ರಯರಾದ ಜನಾರ್ದನರೆಡ್ಡಿ, ಶ್ರೀರಾಮುಲು, ಕರುಣಾಕರರೆಡ್ಡಿ ತಮ್ಮ ಬೆಂಬಲಿಗ ಸಚಿವರು 37175http://kannada.oneindia.com/img/2009/06/07-yeddyurappa-new1.jpgnews"> ದಸರಾ : ಇಲ್ಲಿವೆ ಸರಕಾರಿ ಸವಲತ್ತುಗಳು | Dasara Festival | Mysore Dasara | Janardhan Reddy | KSTDC| ದಸರಾ : ಇಲ್ಲಿವೆ ಸರಕಾರಿ ಸವಲತ್ತುಗಳು - Kannada Oneindia

ದಸರಾ : ಇಲ್ಲಿವೆ ಸರಕಾರಿ ಸವಲತ್ತುಗಳು

Mysore Palace
ಬೆಂಗಳೂರು, ಸೆ. 16 : ದಸರಾ ಹಬ್ಬವನ್ನು ಕರ್ನಾಟಕ ಸರ್ಕಾರವು 'ನಾಡಹಬ್ಬ' ವೆಂದು ಘೋಷಿಸಿರುತ್ತದೆ. ದಸರಾ ಹಬ್ಬದ ಅಂಗವಾಗಿ ಹಾಗೂ ಇತರ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಮ್ಯಸೂರು ಪ್ರಾಂತ್ಯದ ಎಡೆಗೆ ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆಯು ಅನೇಕ ಚಟುವಟಿಕೆಗಳನ್ನು
ಹಮ್ಮಿಕೊಂಡಿದೆ ಎಂದು ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಹೇಳಿದರು.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ಐದು ದಿನಗಳವರೆಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ರಾಜ್ಯ ಪ್ರವಾಸೋದ್ಯಮ ನಿಗಮ ವತಿಯಿಂದ ಈ ಚಾರ್ಟರ್ ವಿಮಾನ ಸಂಚಾರವನ್ನು ಪ್ರವಾಸಿಗರಿಗಾಗಿ ಹಾಗೂ ಇತರ ಸಾರ್ವಜನಿಕರಿಗಾಗಿ ವಿಶೇಷವಾದ (ರಿಯಾಯಿತಿ) ದರದಲ್ಲಿ ಬೆಂಗಳೂರಿನಿಂದ-ಮೈಸೂರಿಗೆ ವಿಮಾನ ಪ್ರವಾಸ ಏರ್ಪಡಿಸಲಾಗುವುದು ಎಂದರು.

ಈ ವಿಮಾನ ಪ್ರವಾಸವು ಮೈಸೂರಿನ ಪ್ರೇಕ್ಷಣೀಯ ಸ್ಥಳಗಳ ದರ್ಶನ ಅಂದರೆ, ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಸೋಮನಾಥಪುರ, ಶ್ರೀರಂಗಪಟ್ಟಣ, ಬೃಂದಾವನ ಗಾರ್ಡನ್ ಮತ್ತು ಶ್ರೀರಂಗಪಟ್ಟಣದ ಕಾವೇರಿ ನದಿ ದಡದಲ್ಲಿರುವ ಹೋಟೆಲ್ ಮಯೂರ ರಿವರ್ ವ್ಯೂ ನಲ್ಲಿ ಒಂದು ದಿನದ ವಾಸ್ತವ್ಯವನ್ನು ಒಳಗೊಂಡಿರುತ್ತದೆ.

ಈ ಎಲ್ಲಾ ಸೌಲಭ್ಯವು ಪ್ರಕಟಿಸಿದ ದರದಲ್ಲಿ ಸೇರಿದ್ದು, ಪ್ರವಾಸಿಗರನ್ನು ಬಾದಾಮಿ ಹೌಸ್ ಬಳಿಯಿಂದ ಕರೆದೊಯ್ದು ಪ್ರವಾಸದ ನಂತರ ಮತ್ತೆ ಬಾದಾಮಿ ಹೌಸ್ ಬಳಿಗೆ ತಂದು ಬಿಡಲಾಗುವುದು. ಇದಕ್ಕೆ ತಗಲಲಿರುವ ಅಂದಾಜು ವೆಚ್ಚಗಳು ಹೀಗಿವೆ. ಸ್ಮಾರಕಗಳಿಗೆ ಪ್ರವೇಶ ಶುಲ್ಕ, ಮಧ್ಯಾಹ್ನದ ಹಾಗೂ ರಾತ್ರಿಯ ಊಟ ಮತ್ತು ವಾಸ್ತವ್ಯದ ವೆಚ್ಚ ಸೇರಿ ಒಬ್ಬರಿಗೆ ರೂ. 5500, ಇಬ್ಬರಿಗೆ ರೂ.9,900 ಹಾಗೂ ಮೂವರಿಗೆ ರೂ.13,900 ಗಳಾಗಿರುತ್ತವೆ. ಒಂದೇ ಕುಟುಂಬದ ನಾಲ್ಕು ಜನರಿಗೆ ರೂ.17,900 ಗಳಾಗಲಿದೆ ಎಂದರು.

ನಂತರದ ದಿನಗಳಲ್ಲಿ, ರಾಜ್ಯ ಪ್ರವಾಸೋದ್ಯಮ ನಿಗಮವು ಈ ರೀತಿಯ ಚಾರ್ಟರ್ ವಿಮಾನದ ಪ್ಯಾಕೇಜ್ ಟೂರುಗಳನ್ನು ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಇದನ್ನು ಮೈಸೂರಿನಿಂದ ಆರಂಭಿಸಿ, ವಾರಾಂತ್ಯಗಳಲ್ಲಿ ಇತರ ನಗರಗಳಾದ ಚೆನ್ನೈ, ಹೈದರಾಬಾದ್, ದೆಹಲಿ, ಮುಂಬೈ ಮತ್ತು ಗೋವಾಗಳಿಂದಲೂ ನಡೆಸಲು ಉದ್ದೇಶಿಸಿದೆ. ಈ ಪ್ಯಾಕೇಜ್ ಟೂರುಗಳಿಗೆ ಪ್ರವಾಸಿಗರಿಂದ ದೊರೆಯಬಹುದಾದ ಉತ್ತೇಜನ ಹಾಗೂ ಪ್ರತಿಕ್ರಿಯೆಯನ್ನು ಅವಲಂಬಿಸಿ ಈ ವಿಶೇಷ ಪ್ರವಾಸಗಳನ್ನು ಪ್ರತಿ ವಾರದಲ್ಲೂ ಕೈಗೊಳ್ಳಲು ತೀರ್ಮಾನಿಸಲಾಗುವುದು ಎಂದು ಜನಾರ್ದನರೆಡ್ಡಿ ಹೇಳಿದರು.

ಅದೇ ಮಾದರಿಯಲ್ಲಿ, ಪ್ರವಾಸೋದ್ಯಮ ಇಲಾಖೆಯು ಪ್ರವಾಸೋದ್ಯಮ ನಿಗಮದ ಮೂಲಕ ಈ ಚಾರ್ಟರ್ ವಿಮಾನ ಸಂಚಾರವನ್ನು ಜನವರಿ 2010 ರಲ್ಲಿ ಹಂಪಿಯಲ್ಲಿ ನಡೆಯಲಿರುವ 500 ನೇ ವರ್ಷದ ಶ್ರೀ ಕೃಷ್ಣದೇವರಾಯರ ಸಿಂಹಾಸನಾರೋಹಣ ಉತ್ಸವ ಸಂದರ್ಭದಲ್ಲಿ ಬೆಂಗಳೂರಿನಿಂದ ಹಂಪಿಗೆ ನಡೆಸಲು ಉದ್ದೇಶಿಸಿದೆ. ಇದಲ್ಲದೆ, ಒಂದು ವಿಶೇಷ ಪ್ಯಾಕೇಜ್‌ನ ಅಡಿಯಲ್ಲಿ ಜನವರಿ 2010 ರ ಮಾಹೆಯಲ್ಲಿ ಹಂಪಿಗೆ ವಿಮಾನ ಸಂಚಾರ ಆರಂಭಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ತೋರಣಗಲ್ ನಲ್ಲಿರುವ ವಿಮಾನ ನಿಲ್ದಾಣವನ್ನು ಬಳಸಲಾಗುವುದು. ತದನಂತರ, ಪ್ರವಾಸೋದ್ಯಮ ಇಲಾಖೆಯು ನಿಗಮದ ವತಿಯಿಂದ ಇಂತಹ ಚಾರ್ಟರ್ ವಿಮಾನಗಳ ಪ್ರವಾಸವನ್ನು ಇತರ ಪ್ರವಾಸಿ ಕೇಂದ್ರಗಳಿಂದ ಅಂದರೆ, ಚೆನ್ನೈ, ದೆಹಲಿ, ಮುಂಬೈ ಮತ್ತು ಗೋವಾ ಗಳಿಂದ ವಾರಾಂತ್ಯಗಳಲ್ಲಿ ಆರಂಭಿಸಲು ಹಾಗೂ ಪ್ರವಾಸಿಗರಿಂದ ದೊರಕುವ ಪ್ರತಿಕ್ರಿಯೆಯನ್ನು ಆಧರಿಸಿ ನಿರಂತರವಾಗಿ ನಡೆಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

(ದಟ್ಸ್ ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+