Ganesh Chaturthi 2024 Colour: ಯಾವ ರಾಶಿಯವರು ಯಾವ ಬಣ್ಣದ ಗಣೇಶ ಇಟ್ಟರೆ ಮಂಗಳಕರ..
ಗಣೇಶ ಚತುರ್ಥಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ವರ್ಷ ಸೆಪ್ಟೆಂಬರ್ 07 ಶನಿವಾರದಂದು ಹಬ್ಬ ಆಚರಿಸಲಾಗುತ್ತದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಆಚರಿಸಲಾಗುವ ಈ ಹಬ್ಬವು ಗಣೇಶನ ಆಗಮನವನ್ನು ಸೂಚಿಸುತ್ತದೆ.
ಗಣೇಶ ಚತುರ್ಥಿಯ ಸಂದರ್ಭದಲ್ಲಿ ಅನೇಕ ಭಕ್ತರು ತಮ್ಮ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ. ಗಣೇಶ ಚತುರ್ಥಿಯಂದು ಆರಂಭವಾಗುವ ಹಬ್ಬ ಅನಂತ ಚತುರ್ದಶಿಯಂದು ಕೊನೆಗೊಳ್ಳುತ್ತದೆ. ಗಣೇಶನಿಗೆ ಹತ್ತು ದಿನಗಳ ಕಾಲ ಕುಟುಂಬದ ಸದಸ್ಯರಂತೆ ಸೇವೆ ಸಲ್ಲಿಸಲಾಗುತ್ತದೆ.

ಇದಕ್ಕಾಗಿ ಕೆಲವರು ಗಣೇಶನ ವಿಗ್ರಹವನ್ನು ಹೊರಗಡೆ ಖರೀದಿಸಿ ತಂದರೆ ಇನ್ನೂ ಕೆಲವರು ಮನೆಯಲ್ಲೇ ತಯಾರಿಸುತ್ತಾರೆ. ನೀವೇನಾದರೂ ಗಣೇಶನ ಮೂರ್ತಿಯನ್ನು ಹೊರಗಡೆ ಖರೀದಿಸಿ ತರುತ್ತಿದ್ದರೆ, ಗಣಪತಿಯ ವಿಗ್ರಹವನ್ನು ಆಯ್ಕೆ ಮಾಡುವ ಮೊದಲು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಸೂಕ್ತ.
ಅಲ್ಲದೆ ಗಣೇಶ ಚತುರ್ಥಿಯಂದು ನಿಮ್ಮ ರಾಶಿಯ ಪ್ರಕಾರ ನಿರ್ದಿಷ್ಟ ಬಣ್ಣದ ಗಣಪತಿ ವಿಗ್ರಹವನ್ನು ಆಯ್ಕೆಮಾಡುವು ಮಂಗಳಕರವಾಗಿದೆ. ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವ ರಾಶಿಯವರು ಯಾವ ಬಣ್ನದ ಗಣೇಶನ ವಿಗ್ರಹ ಖರೀದಿಸಿರೆ ಶುಭವಾಗಲಿದೆ ಎಂದು ತಿಳಿಯೋಣ.

ಮೇಷ ರಾಶಿ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯವರಿಗೆ ಗುಲಾಬಿ ಅಥವಾ ಕೆಂಪು ಬಣ್ಣದ ಗಣಪತಿ ವಿಗ್ರಹವನ್ನು ಶಿಫಾರಸು ಮಾಡಲಾಗುತ್ತದೆ. ಈ ಬಣ್ಣದ ವಿಗ್ರಹ ಮೇಷ ರಾಶಿಯವರಿಗೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ತರುತ್ತದೆ. ಅಲ್ಲದೆ ಬುದ್ಧಿವಂತಿಕೆ ಹೆಚ್ಚಾಗಲಿದೆ. ಆರ್ಥಿಕ ಜೀವನ ಸಮೃದ್ಧವಾಗಿರುತ್ತದೆ.

ವೃಷಭ ರಾಶಿ:
ವೃಷಭ ರಾಶಿಯವರು ತಿಳಿ ಹಳದಿ ಬಣ್ಣದ ವಿಗ್ರಹವನ್ನು ಆರಿಸಬೇಕು. ಅನುಕೂಲಕರ ಫಲಿತಾಂಶಗಳಿಗಾಗಿ "ಓಂ ವಕ್ರತುಂಡಾಯ ನಮ:" ಎಂದು ಜಪಿಸಬೇಕು. ಇದರಿಂದ ವೃಷಭ ರಾಶಿಯವರ ಜೀವನದಲ್ಲಿ ತಿಳುವಳಿಕೆ ಶಕ್ತಿ ಕ್ಷಿಸುವುದಿಲ್ಲ. ವಿದ್ಯಾಭ್ಯಾಸದಲ್ಲಿ ಚುರುಕುತವಿರುತ್ತದೆ.

ಮಿಥುನ ರಾಶಿ:
ಮಿಥುನ ರಾಶಿಯವರು ತಿಳಿ ಹಸಿರು ಬಣ್ಣದ ಗಣಪತಿಯನ್ನು ಪ್ರತಿಷ್ಠಾಪಿಸಿದರೆ ಮಂಗಳಕರ ಫಲಿತಾಂಶವನ್ನು ಪಡೆಯಬಹುದು. ಈ ದಿನ "ಓಂ ಗಣ ಗಣಪತಯೇ ನಮಃ" ಎಂದು ಪಠಿಸಲು ಸಲಹೆ ನೀಡಲಾಗುತ್ತದೆ. ಇದನ್ನು ಮಾಡುವುದರಿಂದ ಅವರ ಮನೆಯಿಂದ ನಕಾರಾತ್ಮಕತೆ ದೂರವಾಗುತ್ತದೆ.

ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರು ಬಿಳಿ ಬಣ್ಣದ ವಿಗ್ರಹವನ್ನು ಇಡಬೇಕು. ಮನೆಯಲ್ಲಿ ಶಾಂತಿ ಮತ್ತು ಸಂತೋಷವನ್ನು ಕಾಪಾಡಿಕೊಳ್ಳಲು "ಓಂ ವರದಾಯ ನಮಃ" ಅಥವಾ "ಓಂ ವಕ್ರತುಂಡಾಯ ನಮ:" ಎಂದು ಜಪಿಸಬೇಕು. ಇದರಿಂದ ಎಂಥಹ ಸಂದರ್ಭಗಳೇ ಬರಲಿ ಎದುರಿಸುವಂತಹ ಶಕ್ತಿ ಸಿಗಲಿದೆ.

ಸಿಂಹ ರಾಶಿ:
ಸಿಂಹ ರಾಶಿಯ ಜನರು ತಮ್ಮ ಮನೆಯಲ್ಲಿ ಸಿಂಧೂರ ಬಣ್ಣದ ಮೂರ್ತಿಯನ್ನು ಇಟ್ಟರೆ ತುಂಬಾ ಒಳ್ಳೆಯದು. ಜೊತೆಗೆ ಈ ದಿನ "ಓಂ ಸುಮಂಗಲ್ಯೇ ನಮಃ" ಎಂದು ಜಪಿಸಬೇಕು. ಇದರಿಂದ ಮನೆಯಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ. ಮನೆಯಲ್ಲಿ ಬಡತನ ತಡೆಯಲು ಗಣೇಶನ ಪೂಜೆ ತುಂಬಾ ಅವಶ್ಯಕ ಎಂದು ಹೇಳಲಾಗುತ್ತದೆ.

ಕನ್ಯಾ ರಾಶಿ:
ಕನ್ಯಾ ರಾಶಿಯವರು ಕಡು ಹಸಿರು ಬಣ್ಣದ ಗಣೇಶನ ವಿಗ್ರಹವನ್ನು ಆರಿಸಬೇಕು. ಅಡೆತಡೆಗಳನ್ನು ತೆಗೆದುಹಾಕಲು ಈ ದಿನ "ಓಂ ಚಿಂತಾಮನ್ಯೇ ನಮಃ" ಎಂದು ಜಪಿಸಬೇಕು. ಇದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಮನೆಯಲ್ಲಿ ಗಣೇಶನನ್ನು ಪೂಜಿಸುವುದರಿಂದ ಶುಭ ಕಾರ್ಯಗಳು ನಡೆಯುತ್ತವೆ.

ತುಲಾ ರಾಶಿ:
ತುಲಾ ರಾಶಿಯವರು ತಿಳಿ ನೀಲಿ ಬಣ್ಣದ ವಿಗ್ರಹವನ್ನು ಇಡುವುದರಿಂದ ಮಂಗಳಕರ ಫಲ ಸಿಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ದಿನ "ಓಂ ವಕ್ರತುಂಡಾಯ ನಮಃ" ಎಂದು ಪಠಿಸುವುದರಿಂದ ಅನುಕೂಲಕರ ಪ್ರಯೋಜನ ಪಡೆಯಬಹುದು, ಇದು ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ.

ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯ ಜನರು ಕಡು ಕೆಂಪು ಬಣ್ಣದ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಉತ್ತಮ ಜೀವನ ಫಲಿತಾಂಶಗಳಿಗಾಗಿ "ಓಂ ನಮೋ ಭಗವತೇ ನಮ:" ಎಂದು ಪಠಿಸಲು ಸಲಹೆ ನೀಡಲಾಗುತ್ತದೆ. ವಿದ್ಯಾಭ್ಯಾಸದಲ್ಲಿ ಕೊರತೆ, ಹಣಕಾಸಿನ ಕೊರತೆ ಇದ್ದರೆ, ಭಕ್ತಿಯಿಂದ ಗಣೇಶನನನ್ನು ಪೂಜಿಸಿದರೆ ಜೀವನದಲ್ಲಿ ಬರುವ ಎಲ್ಲಾ ಸಂಕಷ್ಟಗಳು ದೂರವಾಗುತ್ತವೆ.

ಧನು ರಾಶಿ:
ಧನು ರಾಶಿಯವರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಹಳದಿ ಬಣ್ಣದ ಗಣಪತಿಯನ್ನು ಪ್ರತಿಷ್ಠಾಪಿಸಬೇಕು. ಈ ದಿನ "ಓಂ ಗಣ ಗಣಪತಯೇ ನಮ:" ಎಂದು ಜಪಿಸಬೇಕು. ಇದರಿಂದ ಗಣೇಶನ ಆಶೀರ್ವಾದ ಸಿಗಲಿದೆ. ಜ್ಞಾನ ಹೆಚ್ಚಾಗಲಿದೆ.

ಮಕರ ರಾಶಿ:
ಮಕರ ರಾಶಿಯ ಜನರು ತಿಳಿ ನೀಲಿ ಬಣ್ಣದ ವಿಗ್ರಹವನ್ನು ಸ್ಥಾಪಿಸಬಹುದು. ಈ ದಿನ "ಓಂ ಗಂ ಗಂ ಗಣಪತೆಯೇ ನಮಃ" ಎಂದು ಪಠಿಸಬೇಕು. ಇದು ದೇವರನ್ನು ಸಂಪೂರ್ಣವಾಗಿ ಮೆಚ್ಚಿಸುತ್ತದೆ. ಇದರಿಂದ ಗಣೇಶನ ಆಶೀರ್ವಾದ ಸಿಗಲಿದೆ.

ಕುಂಭ ರಾಶಿ:
ಕುಂಭ ರಾಶಿಯ ಜನರು ಗಾಢ ನೀಲಿ ಬಣ್ಣದ ವಿಗ್ರಹವನ್ನು ಆಯ್ಕೆ ಮಾಡಲು ಸಲಹೆ ನೀಡಲಾಗುತ್ತದೆ. ಈ ದಿನ "ಓಂ ಗಣೇಶಾಯ ನಮ:" ಎಂದು ಜಪಿಸುತ್ತಿರುವುದು ತುಂಬಾ ಒಳ್ಳೆಯದು. ಇದು ವಿವಿಧ ಸಮಸ್ಯೆಗಳಿಂದ ನಿಮ್ಮನ್ನು ದೂರ ಮಾಡಲು ಸಹಾಯ ಮಾಡುತ್ತದೆ.

ಮೀನ ರಾಶಿ:
ಮೀನ ರಾಶಿಯವರು ಹಳದಿ ಬಣ್ಣದ ವಿಗ್ರಹವನ್ನು ಆರಿಸಿಕೊಳ್ಳಬೇಕು. ಮನೆಯಲ್ಲಿ ತೊಂದರೆಗಳನ್ನು ನಿವಾರಿಸಲು, ಗಣೇಶ ಚತುರ್ಥಿಯಂದು "ಓಂ ಗಣಪತೆಯೇ ನಮ:" ಎಂದು ಜಪಿಸಬೇಕು. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹರಡುತ್ತದೆ. ಮನೆಯಲ್ಲಿ ಶಾಂತಿ ನೆಲೆಸಲಿದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications