ಆತ್ಮಗಳೊಂದಿಗೆ ಮಾತನಾಡುವ ಯುವತಿ: ಸಂದರ್ಶನದಲ್ಲಿ ರೆಬೆಕಾ ಆಘಾತಕಾರಿ ಹೇಳಿಕೆ
ನಾವೆಲ್ಲರೂ ಬಾಲ್ಯದಿಂದಲೂ ದೆವ್ವಗಳ ಕಥೆಗಳನ್ನು ಕೇಳಿದ್ದೇವೆ. ದೆವ್ವದ ಹಲವು ದೃಶ್ಯಗಳು ಸಿನಿಮಾಗಳಲ್ಲೂ ಕಾಣಿಸಿಕೊಂಡಿವೆ. ಹಿರಿಯರು ಕೂಡ ದೆವ್ವದ ಜೊತೆಗಿನ ಮುಖಾಮುಖಿಯ ಕಥೆಗಳನ್ನು ಯಾವಾಗಲೂ ಹೇಳುತ್ತಿರುತ್ತಾರೆ. ಆದರೆ ಇಂದು ನಾವು ನಿಮಗೆ ಅಂತಹ ಒಂದು ಭೂತದ ವಿಚಾರ ಹೇಳಲಿದ್ದೇವೆ. ಅದು ಯಾವುದೇ ಚಲನಚಿತ್ರವಲ್ಲ ಅಥವಾ ಹಿರಿಯರು ಹೇಳುವ ಕಥೆಯಲ್ಲ. ಬದಲಿಗೆ ದೆವ್ವಗಳನ್ನು ನೇರವಾಗಿ ನೋಡುವುದು ಅವುಗಳೊಂದಿಗೆ ಮಾತನಾಡುವುದು. ದೆವ್ವ ಅಥವಾ ಆತ್ಮಗಳ ನೋಡುವುದಷ್ಟೇ ಅಲ್ಲ, ದೆವ್ವಗಳ ಜೊತೆ ಮಾತನಾಡಬಲ್ಲ ಹೆಣ್ಣಿನ ಕಥೆ ಇದು. ಯುವತಿ ತಾನು ಪ್ರೇತ ಮಾರ್ಗದರ್ಶಿ ಎಂದು ಹೇಳಿಕೊಂಡಿದ್ದಾಳೆ. ಅವರು ಪ್ರತಿದಿನ ಆತ್ಮಗಳೊಂದಿಗೆ ಸಂವಹನ ನಡೆಸುವುದಾಗಿ ಹೇಳಿಕೊಂಡಿದ್ದಾಳೆ.
ಯಾರಿಂದಲಾದರೂ ದೆವ್ವದ ಕಥೆಗಳು ಕೇಳಿ ಬಂದರೂ ನಮಗೆ ಭಯವಾಗುತ್ತದೆ. ಎದೆ ಬಡಿತ ಜೋರಾಗುತ್ತದೆ. ಹೀಗಿರುವಾಗ ಸ್ವತಃ ರೆಬೆಕಾ ಎಂಬ ಮಹಿಳೆ ತಾನು ದೆವ್ವಗಳನ್ನು ನೋಡುವುದು ಮಾತ್ರವಲ್ಲದೆ ಅವುಗಳೊಂದಿಗೆ ಮಾತನಾಡುವುದಾಗಿ ಹೇಳಿಕೊಂಡಿದ್ದಾರೆ. ಅವರ ಅನುಭವ ನಿಜಕ್ಕೂ ಭಯಾನಕವಾಗಿದೆ.

ಘೋಸ್ಟ್ ಗೈಡ್ ರೆಬೆಕಾ
ರೆಬೆಕಾ ಪ್ರೇತ ಮಾರ್ಗದರ್ಶಿಯಾಗಿದ್ದು, ಅವರು ಪ್ರತಿದಿನ ಆತ್ಮಗಳೊಂದಿಗೆ ಸಂವಹನ ನಡೆಸುತ್ತಾರಂತೆ. ಒಬ್ಬ ವ್ಯಕ್ತಿಯು ತನ್ನ ನೆರೆಹೊರೆಯವರನ್ನು ಪ್ರತಿದಿನ ನೋಡುವಂತೆಯೇ, ರೆಬೆಕಾ ಅವರನ್ನು ಪ್ರತಿದಿನ ನೋಡುತ್ತಾಳೆ. ಅಮೆರಿಕದ ವಿಲ್ಮಿಂಗ್ಟನ್‌ನಲ್ಲಿ ವಾಸಿಸುತ್ತಿರುವ 31 ವರ್ಷದ ರೆಬೆಕಾ ಸ್ವತಃ ಡೈಲಿ ಸ್ಟಾರ್‌ಗೆ ನೀಡಿದ ಸಂದರ್ಶನದಲ್ಲಿ ಈ ಆಘಾತಕಾರಿ ಹೇಳಿಕೆಯನ್ನು ಬಹಿರಂಗಪಡಿಸಿದ್ದಾಳೆ. ರೆಬೆಕಾ ಅವರು ಆತ್ಮಗಳನ್ನು ತನ್ನ ನೆರೆಹೊರೆಯವರಂತೆ ನೋಡುತ್ತಾರೆ ಎಂದು ವರದಿಯಾಗಿದೆ.

ಬಾಲ್ಯದಿಂದಲೂ ರೆಬೆಕಾಗೆ ದೆವ್ವದೊಂದಿದೆ ಸ್ನೇಹ
ರೆಬೆಕಾಳ ಕಥೆಯನ್ನು ಹೇಳುವ ಮೊದಲು, ವಿಲ್ಮಿಂಗ್ಟನ್ ಅನ್ನು ದಕ್ಷಿಣ ಅಮೆರಿಕಾದ ಹೆಚ್ಚು ದೆವ್ವಗಳಿರುವ ನಗರ ಎಂದು ಕರೆಯಲಾಗುತ್ತದೆ. ಹೀಗಿರುವಾಗ ಇಲ್ಲಿ ವಾಸವಾಗಿರುವ ರೆಬೆಕಾ ಈಗ ನಿತ್ಯ ಜೀವನದಲ್ಲಿ ಇಂತಹ ಅನುಭವ ತನಗೆ ಹೊಸದೇನಲ್ಲ ಎನ್ನುತ್ತಾರೆ.
ಬಾಲ್ಯದಿಂದಲೂ ರೆಬೆಕಾ ಅವರು ಆತ್ಮಗಳೊಂದಿಗೆ ಸ್ವಲ್ಪ ಸಂಬಂಧವನ್ನು ಹೊಂದಿದ್ದರಂತೆ. ಅವರ ಜೀವನದಲ್ಲಿ ಅಂತಹ ಅನೇಕ ತಿರುವುಗಳಿದ್ದವಂತೆ. ಒಂದು ದಿನ ಅವರು ತಮಗೆ ದೆವ್ವ ಕಾಣಿಸಿಕೊಳ್ಳುವ ಬಗ್ಗೆ ಅರಿತುಕೊಂಡರು. ಆದರೆ ಈಗ ಅವರು ಈ ಅದ್ಭುತ ಶಕ್ತಿಗೆ ಬೆನ್ನು ತಿರುಗಿಸುವುದಿಲ್ಲ. ಡೈಲಿ ಸ್ಟಾರ್‌ಗೆ ನೀಡಿದ ಸಂದರ್ಶನದಲ್ಲಿ ರೆಬೆಕಾ ತನ್ನ ಜೀವನವು ದೆವ್ವಗಳೊಂದಿಗೆ ಸ್ನೇಹದಿಂದ ಇದ್ದಂತೆ ಎಂದು ಬಹಿರಂಗಪಡಿಸಿದರು. ನಮ್ಮಿಬ್ಬರ ನಡುವೆ ವಿಶ್ವಾಸ ಹೊಂದುವುದು ಬಹಳ ಮುಖ್ಯ ಎನ್ನುತ್ತಾರೆ.

ಜನರು ದೆವ್ವಗಳ ಬಗ್ಗೆ ವಿಭಿನ್ನ ಪ್ರತಿಕ್ರಿಯೆ ಹೊಂದಿದ್ದಾರೆ
ಕೆಲವೊಮ್ಮೆ ನೀವು ನಿಂಬೆಹಣ್ಣುಗಳನ್ನು ಇಡುತ್ತೀರಿ. ದೆವ್ವವು ಅಲ್ಲಿ ನಡೆದುಕೊಂಡು ಹೋಗುತ್ತದೆ. ಆಗ ಅದು ಅವರೊಂದಿಗೆ ಮಾತನಾಡಲು ಪ್ರಾರಂಭಿಸುತ್ತದೆ ಎಂದು ಅವರು ಹೇಳುತ್ತಾರೆ. ವಾಸ್ತವವಾಗಿ ಇದು ನಿಮ್ಮ ನೆರೆಹೊರೆಯವರೊಂದಿಗೆ ಮಾತನಾಡುವಂತಿರುತ್ತದೆ ಎನ್ನುತ್ತಾರೆ ರೆಬೆಕಾ. ಈ ವ್ಯಕ್ತಿ (ಪ್ರೇತ) ಬದುಕಿದ್ದಾಗ ಏನು ಮಾಡುತ್ತಿದ್ದನೆಂಬುದು ತನಗೆ ತಿಳಿದಿದೆ ಎಂದು ರೆಬೆಕಾ ಹೇಳುತ್ತಾರೆ.
ರೆಬೆಕಾ ದೆವ್ವಗಳೊಂದಿಗೆ ಮಾತನಾಡುವಾಗ ಹಲವಾರು ಪ್ರಶ್ನೆಗಳನ್ನು ಕೇಳುತ್ತಾರಂತೆ. ನೆರೆಹೊರೆಯವರಂತೆ ದೆವ್ವಗಳೊಂದಿಗೆ ಅವರು ಮಾತನಾಡುತ್ತಾರಂತೆ. ಅವರಿಗೆ(ಪ್ರೇತ) ಚೆನ್ನಾಗಿದ್ದೀರಾ? ಎಂದು ಪ್ರಶ್ನೆ ಮಾಡುತ್ತಾರಂತೆ. ರೆಬೆಕಾ ಅವರ ಪ್ರಶ್ನೆಗೆ ದೆವ್ವಗಳು ಪ್ರತಿಯುತ್ತರ ಕೂಡ ನೀಡುತ್ತವೆ ಎಂದು ರೆಬೆಕಾ ಹೇಳುತ್ತಾರೆ. ನಾನು ಅವರಿಗೆ ಶುಭ ಹಾರೈಸುತ್ತೇನೆ ಎಂದು ರೆಬೆಕಾ ಹೇಳಿಕೊಂಡಿದ್ದಾರೆ. ಎಲ್ಲರೂ ದೆವ್ವವನ್ನು ಒಂದೇ ರೀತಿಯಲ್ಲಿ ನೋಡುವುದಿಲ್ಲ. ಜನರು ತಮಗೇ ಗೊತ್ತಿಲ್ಲದ ಹಾಗೆ ಪ್ರೇತಗಳಿಗೆ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಾರೆ ಎಂದು ರೆಬೆಕಾ ಅವರು ಹೇಳುತ್ತಾರೆ.

ದೆವ್ವಗಳೊಂದಿಗೆ ಸ್ನೇಹ ತಿಂಗಳುಗಳು ಬೇಕು
ಕೆಲವು ಜನರು ಆತ್ಮಗಳನ್ನು ಅನುಭವಿಸಬಹುದು. ಕೆಲವರು ಅವುಗಳ ಮಾತುಗಳನ್ನು ಕೇಳಬಹುದು. ಕೆಲವರು ವಾಸನೆ ತೆಗೆದುಕೊಳ್ಳಬಹುದು. ಅದು ಯಾರು ಮತ್ತು ಏನು ಎಂದು ಅವರಿಗೆ ತಿಳಿದಿಲ್ಲದಿದ್ದರೂ ಸಹ. ನಾನು ಅವರನ್ನು ನೋಡುವ ಮತ್ತು ಅರ್ಥಮಾಡಿಕೊಳ್ಳುವ ವಿಧಾನ ತುಂಬಾ ವಿಭಿನ್ನವಾಗಿದೆ. ಕೆಲವೊಮ್ಮೆ ಅವರೊಂದಿಗೆ ಸ್ನೇಹ ಬೆಳೆಸಲು ನನಗೆ ತಿಂಗಳುಗಳು ಬೇಕಾಗುತ್ತದೆ ಎಂದು ರೆಬೆಕಾ ಹೇಳುತ್ತಾರೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications