Year End Special 2024: ಅತಿ ಹೆಚ್ಚು ಆರ್ಡರ್ ಮಾಡಿದ ಆಹಾರಗಳಲ್ಲಿ ಮಸಾಲೆ ದೋಸೆಗೆ ಮೊದಲ ಸ್ಥಾನ
2024ನೇ ವರ್ಷವನ್ನು ಮುಗಿಸಿ 2025 ಸ್ವಾಗತಿಸಲು ತಯಾರಿ ನಡೆಯುತ್ತಿದೆ. ಹೊಸ ವರ್ಷಕ್ಕೆ ಹೊಸ ಹೊಸ ಚಿಂತನೆ, ಯೋಜನೆಗಳೊಂದಿಗೆ ಕಾಲಿಡಲು ಎಲ್ಲರೂ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಆಹಾರಗಳಲ್ಲಿ ಮಸಾಲೆ ದೋಸೆಗೆ ಮೊದಲ ಸ್ಥಾನ ಸಿಕ್ಕಿದೆ. ಭಾರತದಲ್ಲಿ ಈ ವರ್ಷ ಸಸ್ಯಹಾರಿಗಳು ಇಷ್ಟಪಟ್ಟ ಟಾಪ್ 10 ಆಹಾರ ಪದಾರ್ಥಗಳ ಪಟ್ಟಿ ಇಲ್ಲಿದೆ. ವಿವಿಧ ಖಾದ್ಯಗಳನ್ನು ಜನರು ಇಷ್ಟಪಟ್ಟು ಆರ್ಡರ್ ಮಾಡಿದ್ದಾರೆ.
ಈ ವರ್ಷ ಸಸ್ಯಹಾರಿಗಳು ಮಸಾಲೆ ದೋಸೆಯಿಂದ ಹಿಡಿದು ಪೊಂಗಲ್ ತನಕ ವಿಧ ವಿಧದ ಖಾದ್ಯಗಳನ್ನು ಇಷ್ಟಪಟ್ಟಿದ್ದಾರೆ. ಆನ್‌ಲೈನ್ ಮೂಲಕ ಅವುಗಳನ್ನು ಆರ್ಡರ್ ಮಾಡಿ ಮನೆಯಲ್ಲಿಯೇ ಕುಳಿತು ಸವಿದಿದ್ದಾರೆ. ಈ ವರ್ಷದ ಸುದ್ದಿಗಳ ನಡುವೆ ಜನರು ಬಾಯಿ ಚಪ್ಪರಿಸಿ ತಿಂದ ಖಾದ್ಯಗಳ ಪಟ್ಟಿಯನ್ನು ಒಮ್ಮೆ ನೋಡಿ.....

ಟಾಪ್-1 ಖಾದ್ಯ ಮಸಾಲೆ ದೋಸೆ. ಭಾರತದಲ್ಲಿ ಮಸಾಲೆ ದೋಸೆಗೆ ಬಹುಸಂಖ್ಯಾತ ಅಭಿಮಾನಿಗಳಿದ್ದಾರೆ. ದಕ್ಷಿಣ ಭಾರತದ ಗಡಿಯನ್ನು ದಾಟಿ ಈಗ ಮಸಾಲೆ ದೋಸೆ ಸದ್ದು, ಸುದ್ದಿ ಮಾಡುತ್ತಿದೆ. ಈ ವರ್ಷ ಆರ್ಡರ್ ಮಾಡಲಾದ ಸಸ್ಯಹಾರಿ ಖಾದ್ಯಗಳಲ್ಲಿ ಮಸಾಲೆ ದೋಸೆಗೆ ಮೊದಲ ಸ್ಥಾನವಿದೆ. ಈಗ ಮಸಾಲೆ ದೋಸೆಯನ್ನು ಬೆಳಗಿನ ಉಪಹಾರಕ್ಕೆ ಮಾತ್ರ ಸವಿಯುತ್ತಿಲ್ಲ. ಮಧ್ಯಾಹ್ನ, ರಾತ್ರಿ ಊಟದ ಹೊತ್ತಿಗೆ ಸಹ ಸವಿಯುವವರು ಹೆಚ್ಚಾಗಿದ್ದಾರೆ.
ಈ ವರ್ಷ ಆರ್ಡರ್ ಮಾಡಲಾದ ಸಸ್ಯಾಹಾರಿ ಖಾದ್ಯಗಳಲ್ಲಿ ಪನ್ನೀರ್ ಬಟರ್ ಮಸಾಲಾ 2ನೇ ಸ್ಥಾನದಲ್ಲಿದೆ. ಈ ಸಸ್ಯಹಾರಿ ಖಾದ್ಯ ಜೀರಿಗೆ, ಕೊತ್ತಂಬರಿ, ಕೆಂಪು ಮೆಣಸಿನ ಪುಡಿ ಮತ್ತು ಗರಂ ಮಸಾಲಾದೊಂದಿಗೆ ಉತ್ತಮ ಮಸಾಲೆಯುಕ್ತವಾಗಿರುತ್ತದೆ. ಇದು ಸಸ್ಯಹಾರಿಗಳಿಗೆ ಜನಪ್ರಿಯವಾದ ಖಾದ್ಯವಾಗಿದೆ.
ಈ ವರ್ಷದಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯದಲ್ಲಿ ಪಿಜ್ಜಾ ಮಾರ್ಗರಿಟಾ ಅಥವಾ ಮಾರ್ಗರಿಟಾ ಪಿಜ್ಜಾ 3ನೇ ಸ್ಥಾನದಲ್ಲಿದೆ. ಪಿಜ್ಜಾಗಳಲ್ಲಿ ಇದನ್ನು ಜನರು ಹೆಚ್ಚಾಗಿ ಆರ್ಡರ್ ಮಾಡಿದ್ದಾರೆ. ಬಿಸಿ ಬಿಸಿಯಾದ ಪಿಜ್ಜಾವನ್ನು ತಿಂದು ಜನರು ಸಂತಸಪಟ್ಟಿದ್ದಾರೆ.
ಅತಿ ಹೆಚ್ಚು ಆರ್ಡರ್ ಮಾಡಿದ ಮತ್ತೊಂದು ಖಾದ್ಯ ಪಾವ್ ಬಜಿ. ಮಹಾರಾಷ್ಟ್ರ ಮೂಲದ ಈ ಖಾದ್ಯ ಈಗ ರಾಜ್ಯದ ಗಡಿದಾಟಿ ಹೋಗಿದೆ. ದಕ್ಷಿಣ ಭಾರತೀಯರು ಸಹ ಈಗ ಈ ಖಾದ್ಯವನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ದೊಡ್ಡ ದೊಡ್ಡ ಹೋಟೆಲ್‌ಗಳು, ರಸ್ತೆ ಬದಿಯ ಚಾಟ್ಸ್ ಸೆಂಟರ್‌ನಲ್ಲಿಯೂ ಈಗ ಪಾವ್ ಬಜಿ ಸಿಗುತ್ತದೆ.
ಮಾಂಸಾಹಾರ ತಿನ್ನುವವರು ಬಿರಿಯಾನಿ ಇಷ್ಟಪಡುತ್ತಾರೆ. ಸಸ್ಯಹಾರಿಗಳಿಗಾಗಿಯೇ ಈಗ ವಿವಿಧ ಬಿರಿಯಾನಿಗಳಿವೆ. ಅದರಲ್ಲಿ 2024ರಲ್ಲಿ ಜನರು ಹೆಚ್ಚಾಗಿ ಇಷ್ಟಪಟ್ಟ, ಆರ್ಡರ್ ಮಾಡಿದ ಖಾದ್ಯದಲ್ಲಿ ಪನ್ನೀರ್ ಬಿರಿಯಾನಿ ಸೇರಿದೆ. ಪನ್ನೀರ್‌ನಿಂದ ವಿವಿಧ ಬಗೆಯ ಖಾದ್ಯ ತಯಾರು ಮಾಡುತ್ತಾರೆ. ಆದರೆ ಪನ್ನೀರ್ ಬಿರಿಯಾನಿ ಈ ವರ್ಷ ಗಮನ ಸೆಳೆದಿದೆ.
ದಾಲ್ ಕಿಚಿಡಿ ಸಹ ಸಸ್ಯಹಾರಿಗಳು ಈ ವರ್ಷ ಇಷ್ಟಪಟ್ಟ ಮತ್ತೊಂದು ಆಹಾರವಾಗಿದೆ. ವಿವಿಧ ಆನ್‌ಲೈನ್ ಪ್ಲಾಟ್ ಫಾರಂಗಳಲ್ಲಿ ಈ ಖಾದ್ಯಕ್ಕೆ 2024ರಲ್ಲಿ ಬೇಡಿಕೆ ಹೆಚ್ಚಾಗಿತ್ತು. ಆದ್ದರಿಂದ ಅತಿ ಹೆಚ್ಚು ಆರ್ಡರ್ ಮಾಡಿದ ಆಹಾರಗಳಲ್ಲಿ ಇದಕ್ಕೆ ಸಹ ಸ್ಥಾನ ಸಿಕ್ಕಿದೆ.
ಇಡ್ಲಿ ಭಾರತೀಯ ನೆಚ್ಚಿನ ಖ್ಯಾದ್ಯವಾಗಿದೆ. ಮಾರ್ಚ್ 30 ಅನ್ನು ವಿಶ್ವ ಇಡ್ಲಿ ದಿನವಾಗಿ ಆಚರಣೆ ಮಾಡುವಷ್ಟರ ಮಟ್ಟಿಗೆ ಇಡ್ಲಿ ದೇಶದ ಜನರ ಜೊತೆ ಬೆರೆತು ಹೋಗಿದೆ. ಇಡ್ಲಿ ಬಗ್ಗೆ ಹಲವು ಜನರು ಮೂಗು ಮುರಿದರೂ ಸಹ 2024ರಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯಗಳಲ್ಲಿ ಇಡ್ಲಿಗೆ ಸ್ಥಾನವಿದೆ.
ಈ ವರ್ಷ ಸಸ್ಯಹಾರಿಗಳು ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯದಲ್ಲಿ ವಡೆ ಮತ್ತು ಪೊಂಗಲ್ 9 ಮತ್ತು 10ನೇ ಸ್ಥಾನದಲ್ಲಿದೆ. ಇಡ್ಲಿ, ವಡೆ ಭಾರತೀಯರ ಅದರಲ್ಲೂ ದಕ್ಷಿಣ ಭಾರತೀಯರ ನೆಚ್ಚಿನ ಆಹಾರವಾಗಿದೆ. ಆದ್ದರಿಂದ ಇದನ್ನು ಹೆಚ್ಚು ಜನರು ಆರ್ಡರ್ ಮಾಡಿದ್ದಾರೆ. ಪೊಂಗಲ್‌ನಲ್ಲಿಯೂ ಖಾರ, ಸಿಹಿ ಮಾದರಿ ಇದೆ. ಜನರು ಈ ವರ್ಷ ಪೊಂಗಲ್ ಅನ್ನು ಹೆಚ್ಚಾಗಿ ಇಷ್ಟ ಪಟ್ಟಿದ್ದಾರೆ.












Click it and Unblock the Notifications