
Most innovative educational institute: ಐಐಟಿ ಮದ್ರಾಸ್ ರ್‍ಯಾಂಕ್ 1
ಶಿಕ್ಷಣ ಸಚಿವಾಲಯದ ಇನೋವೇಶನ್ ಸೆಲ್ ಇಂದು ಅಟಲ್ ರ್‍ಯಾಂಕಿಂಗ್ ಆಫ್ ಇನ್ಸ್ಟಿಟ್ಯೂಷನ್‌ನ ಇನೋವೇಷನ್ ಅಚೀವ್‌ಮೆಂಟ್ಸ್ 2021 ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಸಂಸ್ಥೆಗಳನ್ನು ಎರಡು ವಿಭಾಗವನ್ನಾಗಿ ವಿಂಗಡನೆ ಮಾಡಲಾಗಿದೆ. ಒಂದು ತಾಂತ್ರಿಕ ವಿಭಾಗ ಹಾಗೂ ಇನ್ನೊಂದು ತಾಂತ್ರಿಕವಲ್ಲದ ವಿಭಾಗ ಎಂದು ವಿಂಗಡನೆ ಮಾಡಲಾಗಿದೆ.
ಈ ತಾಂತ್ರಿಕ ವಿಭಾಗದಲ್ಲಿ ಭಾರತೀಯ ತಾಂತ್ರಿಕ ಸಂಸ್ಥೆ ಮದ್ರಾಸ್ (ಐಐಟಿ ಮದ್ರಾಸ್) ಅತೀ ನವೀನ ಸಂಸ್ಥೆಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಐಐಟಿ ಮದ್ರಾಸ್ ಇದು ಮೂರನೇ ಬಾರಿಗೆ ಪ್ರಥಮ ಸ್ಥಾನದಲ್ಲಿದೆ. ಇನ್ನು ಐಐಟಿ ಬಾಂಬೆ ಹಾಗೂ ಐಐಟಿ ದೆಹಲಿ ಎರಡನೇ ಹಾಗೂ ಮೂರನೇ ಸ್ಥಾನದಲ್ಲಿ ಇದೆ.
'ರಾಜ್ಯದ ಭವಿಷ್ಯದ ಆಸ್ತಿ' ಎಂದು ರೇಪ್ ಆರೋಪಿ ವಿದ್ಯಾರ್ಥಿಗೆ ಜಾಮೀನು ನೀಡಿದ ಹೈಕೋರ್ಟ್
ಈ ರ್‍ಯಾಂಕಿಂಗ್ ಅನ್ನು ಇಂದು ಕೇಂದ್ರ ಶಿಕ್ಷಣ ರಾಜ್ಯ ಸಚಿವ ಸುಭಾಸ್ ಸರ್ಕಾರ್ ವರ್ಚುವಲ್ ಮೂಲಕ ಘೋಷಣೆ ಮಾಡಿದ್ದಾರೆ. ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗಿಯಾದ ಕೇಂದ್ರ ಶಿಕ್ಷಣ ರಾಜ್ಯ ಸಚಿವ ಸುಭಾಸ್ ಸರ್ಕಾರ್ ಎಲ್ಲಾ ಸಂಸ್ಥೆಗಳು ನವೀನತೆಯನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಹಾಗಾದರೆ ಯಾವ ಸ್ಥಾನದಲ್ಲಿ ಯಾವ ಸಂಸ್ಥೆಗಳು ಇದೆ ಎಂಬುವುದನ್ನು ತಿಳಿಯಲು ಮುಂದೆ ಓದಿ...

ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ, ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಸಿಎಫ್‌ಟಿಐಗಳು
ರ್‍ಯಾಂಕ್ 1: ಐಐಟಿ ಮದ್ರಾಸ್
ರ್‍ಯಾಂಕ್ 2: ಐಐಟಿ ಬಾಂಬೆ
ರ್‍ಯಾಂಕ್ 3: ಐಐಟಿ ದೆಹಲಿ
ರ್‍ಯಾಂಕ್ 4: ಐಐಟಿ ಕಾನ್ಪುರ
ರ್‍ಯಾಂಕ್ 5: ಐಐಟಿ ರೂರ್‍ಕಿ
ರ್‍ಯಾಂಕ್ 6: ಐಐಎಸ್‌ಸಿ
ರ್‍ಯಾಂಕ್ 7: ಐಐಟಿ ಹೈದರಾಬಾದ್
ರ್‍ಯಾಂಕ್ 8: ಐಐಟಿ ಖರಗಪುರ
ರ್‍ಯಾಂಕ್ 9: ಐಐಟಿ ಕ್ಯಾಲಿಕಟ್
ರ್‍ಯಾಂಕ್ 10: ಮೋತಿಲಾಲ್ ನೆಹರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ವಿಶ್ವವಿದ್ಯಾನಿಲಯಗಳು
ರ್‍ಯಾಂಕ್ 1: ಪಂಜಾಬ್ ವಿಶ್ವವಿದ್ಯಾನಿಲಯ
ರ್‍ಯಾಂಕ್ 2: ದೆಹಲಿ ಟೆಕ್ನಾಲಜಿ ವಿಶ್ವವಿದ್ಯಾನಿಲಯ
ರ್‍ಯಾಂಕ್ 3: ನೇತಾಜಿ ಸುಭಾಸ್ ತಾಂತ್ರಿಕ ವಿಶ್ವವಿದ್ಯಾನಿಲಯ
ರ್‍ಯಾಂಕ್ 4: ಚೌಧರಿ ಚರಣ್ ಸಿಂಗ್ ಹರಿಯಾಣ ಕೃಷಿ ವಿಶ್ವವಿದ್ಯಾನಿಲಯ
ರ್‍ಯಾಂಕ್ 5: ಅವಿನಾಶಿಲಿಂಗಂ ಇನ್ಸ್ಟಿಟ್ಯೂಟ್ ಫಾರ್ ಹೋಮ್ ಸೈನ್ಸ್ ಆಂಡ್ ಹೈಯಲ್ ಎಜುಕೇಷನ್ ಫಾರ್ ವುಮೆನ್ಸ್
ರ್‍ಯಾಂಕ್ 6: ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ
ರ್‍ಯಾಂಕ್ 7: ಗುಜರಾತ್ ತಾಂತ್ರಿಕ ವಿಶ್ವವಿದ್ಯಾನಿಲಯ

ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಕಾಲೇಜುಗಳು/ಸಂಸ್ಥೆಗಳು
ರ್‍ಯಾಂಕ್ 1: ಕಾಲೇಜ್ ಆಫ್ ಇಂಜಿನಿಯರಿಂಗ್ ಪುಣೆ
ರ್‍ಯಾಂಕ್ 2: ಪಿಎಸ್‌ಜಿ ಕಾಲೇಜ್ ಆಫ್ ಟೆಕ್ನಾಲಜಿ
ರ್‍ಯಾಂಕ್ 3: ಎಲ್ ಡಿ ಕಾಲೇಪ್ ಆಫ್ ಇಂಜಿನಿಯರಿಂಗ್
ರ್‍ಯಾಂಕ್ 4: ತ್ಯಾಗರಾಜರ್ ಕಾಲೇಜ್ ಆಫ್ ಇಂಜಿನಿಯರಿಂಗ್
ರ್‍ಯಾಂಕ್ 5: ವೀರಮಾತಾ ಜೀಜಾಬಾಯಿ ತಾಂತ್ರಿಕ ಸಂಸ್ಥೆ

ಖಾಸಗಿ ವಿಶ್ವವಿದ್ಯಾನಿಲಯ
ರ್‍ಯಾಂಕ್ 1: ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ ಖೋರ್ಧಾ
ರ್‍ಯಾಂಕ್ 2: ಚಿತ್ಕಾರ ವಿಶ್ವವಿದ್ಯಾಲಯ
ರ್‍ಯಾಂಕ್ 3: ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ
ರ್‍ಯಾಂಕ್ 4: ಎಸ್.ಆರ್.ಎಂ. ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ
ರ್‍ಯಾಂಕ್ 5: ಪಂಡಿತ್ ದೀನದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯ

ಖಾಸಗಿ ಕಾಲೇಜು/ಸಂಸ್ಥೆಗಳು
ರ್‍ಯಾಂಕ್ 1: ಜಿ ಹೆಚ್ ರೈಸೋನಿ ಕಾಲೇಜ್ ಆಫ್ ಇಂಜಿನಿಯರಿಂಗ್, ನಾಗ್ಪುರ
ರ್‍ಯಾಂಕ್ 2: ಆರ್.ಎಂ.ಕೆ. ಇಂಜಿನಿಯರಿಂಗ್ ಕಾಲೇಜು
ರ್‍ಯಾಂಕ್ 3: ಕೆಐಇಟಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್
ರ್‍ಯಾಂಕ್ 4: ಶ್ರೀ ಕೃಷ್ಣ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ
ರ್‍ಯಾಂಕ್ 5: ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

ನಾನ್-ಟೆಕ್ನಿಕಲ್ ವಿಭಾಗದ ಸಂಸ್ಥೆಗಳು
ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ, ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಸಿಎಫ್‌ಟಿಐಗಳು (ತಾಂತ್ರಿಕವಲ್ಲ)
ರ್‍ಯಾಂಕ್ 1: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ
ರ್‍ಯಾಂಕ್ 2: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕೋಯಿಕ್ಕೋಡ್
ಸಾಮಾನ್ಯ (ತಾಂತ್ರಿಕವಲ್ಲದ ವಿಭಾಗ) ಟಾಪ್ 5
ರ್‍ಯಾಂಕ್ 1: ಭಾರತ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ
ರ್‍ಯಾಂಕ್ 2: ಶ್ರೀ ನಾರಾಯಣ ಕಾಲೇಜು
ರ್‍ಯಾಂಕ್ 3: ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ
ರ್‍ಯಾಂಕ್ 4: ಪಿಎಸ್‌ಜಿ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್
ರ್‍ಯಾಂಕ್ 5: ಹೋಲಿ ಕ್ರಾಸ್ ಕಾಲೇಜು, ತಿರುಚಿರಾಪಳ್ಳಿ