Robot Suicide: ವಿಶ್ವದಲ್ಲೇ ಮೊದಲು ಕೆಲಸದ ಒತ್ತಡಕ್ಕೆ 'ರೋಬೋಟ್' ಆತ್ಮಹತ್ಯೆ, ನೆಟ್ಟಿಗರು ವಿಷಾದ
ಈ ಬದುಕಿನಲ್ಲಿ ಮನುಷ್ಯ ಹೊಟ್ಟೆಪಾಡಿಗಾಗಿ ಆರೋಗ್ಯ ಮರೆತು ಸಾಕಷ್ಟು ಸಮಸ್ಯೆಗಳ ನಡುವೆಯು ಕೆಲಸ ಮಾಡುತ್ತಿರುತ್ತಾರೆ. ಹೀಗಾಗಿ ಆನಾರೋಗ್ಯ ಕೆಲವೊಮ್ಮೆ ಮಾನಸಿಕ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ.ಕೆಲವರು ಈ ಒತ್ತಡ ತಾಳಲಾರದೇ ಆತ್ಮಹತ್ಯೆ ದಾರಿ ಹಿಡಿದಿದ್ದನ್ನು ನಾವೆರಲ್ಲರೂ ನೋಡಿದ್ದೇವೆ. ಇದೀಗ ಈ ಸಾಲಿಗೆ ರೋಬೋಟ್ (Robot Suicide) ಸೇರಿದ್ದು, ಇದು ವಿಶ್ವದ ಮೊದಲ ಪ್ರಕರಣವಾಗಿದೆ.
ಹೌದು, ದಕ್ಷಿಣ ಕೋರಿಯಾದಲ್ಲಿ ವಿಚತ್ರ ಘಟನೆಯೊಂದು ನಡೆದಿದೆ. ಇಲ್ಲಿನ ರೋಬೋಟ್ ವೊಂದು ಕೆಲಸದ ಒತ್ತಡ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದೆ. ಈ ಮೊದಲ ಪ್ರಕರಣಕ್ಕೆ ವಿಶ್ವವೇ ಸಾಕ್ಷಿಯಾಗಿದೆ. ಇದೆಲ್ಲ ನಿಜವೇ? ಹೇಗೆ ಸಾಧ್ಯ? ಎಂದು ಕೇಳುವವರು ಮುಂದೆ ಓದಿ.

ಕೆಲಸದ ಒತ್ತಡಕ್ಕೆ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನಾವೆಲ್ಲರು ಕೇಳಿದ್ದೇವೆ. ಅದೆ ರೀತಿ ನಿರಂತರ ಕೆಲಸದ ಒತ್ತಡದಿಂದಾಗಿ ರೋಬೋಟ್ ಕಚೇರಿಯ ಮೆಟ್ಟಿಲುಗಳಿಂದ ಜಿಗಿದು ಸೂಸೈಡ್ ಮಾಡಿಕೊಂಡಿದೆ ಎಂದು ವರದಿ ಆಗಿದೆ. ಈ ಕುರಿತು ಫೋಟೋಗಳು ಸಾಮಾಜಿಕ ಜಾತಲಾಣಗಳಲ್ಲಿ ಹರಿದಾಡುತ್ತಿವೆ.
ರೋಬೋಟ್ ಭಾಗ ಒಡೆದು ಛಿದ್ರ
ದಕ್ಷಿಣ ಕೋರಿಯಾದ ಗುಮಿ ನಗರ ಪಾಲಿಕೆಯಲ್ಲಿ ಕೆಲಸಕ್ಕೆಂದು ಈ ರೋಬೋಟ್ ಅನ್ನು ಇಡಲಾಗಿತ್ತು. ಇಲ್ಲಿನ ಕೆಲಸ ಹೆಚ್ಚಾಗಿ ರೋಬೋಟ್ ಒತ್ತಡಕ್ಕೆ ಒಳಗಾಗಿತ್ತು ಎನ್ನಲಾಗಿದೆ. ಹೀಗಾಗಿ ಕಚೇರಿ ಒಳಗೆ ಮೆಟ್ಟಿಲುಗಳಿಂದ ಜಿಗಿದಿದೆ. ಪರಿಣಾಮ ರೋಬೋಟ್ ಭಾಗಗಳು ಒಡೆದು ಚೆಲ್ಲಾ ಪಿಲ್ಲಿಯಾಗಿವೆ.
ಸದ್ಯ ರೋಬೋಟ್ ಬಿಡಿಭಾಗಗಳನ್ನು ಆಯ್ದಿರುವ ಕಂಪನಿಯು ಅದರ ಹಿನ್ನೆಲೆ ಏನು, ಯಾತಕಾಗಿ ಈ ರೀತಿ ಮೆಟ್ಟಿಲುಗಳಿಂದ ಜಿಗಿದಿದೆ. ನಿಜವಾಗಿಯು ಕೆಲಸದ ಒತ್ತಡ ಇತ್ತಾ? ಎಂಬೆಲ್ಲ ಆಯಾದಲ್ಲಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದೆ.
ಸಿಟಿ ಕೌನ್ಸಿಲರ್ ಕಚೇರಿಯ ಅಧಿಕಾರಿ ಆಗಿದ್ದ ರೋಬೋಟ್
ಈ ರೋಬೋಟ್ ಅನ್ನು ಕ್ಯಾಲಿಫೋರ್ನಿಯಾದ ಬೇರ್ ರೋಬೋಟಿಕ್ಸ್ ಕಂಪನಿಯು ಅಭಿವೃದ್ಧಿ ಪಡಿಸಿದೆ. ಕಳೆದ ಒಂದು ವರ್ಷದಿಂದ ಈ ರೊಬೋಟ್ ನಗರ ಪಾಲಿಕೆಯಲ್ಲಿ ಸಿಟಿ ಕೌನ್ಸಿಲರ್ ಕಚೇರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿತ್ತು.
ನಗರಪಾಲಿಕೆಗೆ ಸಂಬಂಧಿಸಿದ ಕಡತ ಪರಿಶೀಲನೆ ಜತೆ ವಿಲೇವಾರಿ, ಅಗತ್ಯ ಪ್ರಚಾರ, ಆಡಳಿತ, ಅಗತ್ಯ ಮಾಹಿತಿ ಪೂರೈಕೆಯಂತ ಸೇವೆ ಮಾಡುತ್ತಿತ್ತು. ತನ್ನ ವ್ಯಾಪ್ತಿಯ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದೆ. ಸದ್ಯ ಈ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು ವಿಷಾದ ವ್ಯಕ್ತಪಡಿಸಿದ್ದಾರೆ.
ಸದ್ಯ ರೋಬೋಟ್ ಆತ್ಮಹತ್ಯೆ ಕುರಿತು ತನಿಖೆ ಆರಂಭಿಸಲಾಗಿದೆ. ಈ ಕುರಿತು ಆದಷ್ಟು ಶೀಘ್ರವೇ ಸತ್ಯಾಸತ್ಯತೆ ತಿಳಿದು ಬರಬೇಕಿದೆ ಎಂಬುದೇ ನೆಟ್ಟಿಗರ ಆಶಯವಾಗಿದೆ.
-
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
Kannada Vs Hindi: ಭಾಷಾ ಶಿಕ್ಷಣ–ಸಮಸ್ಯೆ ಇರುವುದು ಫೈನ್ ಟ್ಯೂನಿಂಗ್ನಲ್ಲಿ: ರಾಜಾರಾಂ ತಲ್ಲೂರು ಬರಹ -
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications