• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಚ್ಚಾತೈಲ ಬೆಲೆ ನಿರಂತರ ಕುಸಿತ, ಭಾರತದಲ್ಲಿ ಹರ್ಷವೋ ಹರ್ಷ!

|

ಬೆಂಗಳೂರು, ನವೆಂಬರ್ 29: ಸೌದಿ ಅರೇಬಿಯಾ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಹಾಗೂ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವಿನ ತೈಲ ಒಪ್ಪಂದದಿಂದಾಗಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 50 ಡಾಲರ್ ಗೆ ಕುಸಿಯುವ ಲಕ್ಷಣಗಳು ಕಂಡಿವೆ.

ಕಳೆದ 15 ದಿನಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಗುರುವಾರ(ನವೆಂಬರ್ 29) ಪ್ರತಿ ಬ್ಯಾರೆಲ್ ಬೆಲೆ 58.17 ಡಾಲರ್ ನಷ್ಟಿತ್ತು. ಇತ್ತೀಚೆಗೆ 86 ಡಾಲರ್ ಪ್ರತಿ ಬ್ಯಾರೆಲ್ ನಂತೆ ಏರಿಕೆಯಾಗಿತ್ತು. ಇರಾನ್ ಮೇಲೆ ನಿರ್ಬಂಧವನ್ನು ಅಮೆರಿಕ ಮುಂದುವರೆಸಿದ್ದೇ ಆದಲ್ಲಿ ಕಚ್ಚಾ ತೈಲ ಬೆಲೆ 100 ಡಾಲರ್ ಮುಟ್ಟಿದರೂ ಅಚ್ಚರಿಯೇನಿಲ್ಲ ಎಂಬ ಮಾತು ಕೇಳಿ ಬಂದಿತ್ತು.

ಭರ್ಜರಿ ಏರಿಕೆ ಮೂಲಕ ಎದ್ದು ನಿಂತ ರುಪಾಯಿ, 70ಕ್ಕಿಂತ ಕೆಳಗಿಳಿದ ಡಾಲರ್

ಆದರೆ, ಇರಾನ್ ಮೇಲಿನ ನಿರ್ಬಂಧವನ್ನು ಯುನೈಟೆಡ್ ಸ್ಟೇಟ್ಸ್ ತಕ್ಕಮಟ್ಟಿಗೆ ಹಿಂದಕ್ಕೆ ಪಡೆದುಕೊಂಡಿದೆ. ಇದರಿಂದಾಗಿ, ಭಾರತ, ಚೀನಾ, ದಕ್ಷಿಣ ಕೊರಿಯಾ, ಜಪಾನ್, ಟರ್ಕಿ, ಇಟಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ತೈವಾನ್ ಗೆ ಅನುಕೂಲವಾಗಿದೆ.

8 ತಿಂಗಳಲ್ಲೇ ಇದೇ ಮೊದಲು, ಪೆಟ್ರೋಲ್ ಬೆಲೆ 75ರು ರೊಳಗೆ

ಇದಲ್ಲದೆ, ಡಾಲರ್ ಎದುರು ರೂಪಾಯಿ ಮೌಲ್ಯ (ಪ್ರತಿ 1 ಡಾಲರ್ =69.79ರುಪಾಯಿ) ಸುಧಾರಿಸಿದೆ. ಹೀಗಾಗಿ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಇಳಿಕೆಯಾಗುತ್ತಿದೆ.

2018ರ ತೈಲ ಬೆಲೆ ಏರಿಳಿತ

2018ರ ತೈಲ ಬೆಲೆ ಏರಿಳಿತ

ಬ್ರೆಂಟ್ ಕ್ರೂಡ್-ವಿಶ್ವವ್ಯಾಪ್ತಿ ಇಂಧನ ಖರೀದಿಗೆ ಇದುವೇ ಮಾನದಂಡವಾಗಿದೆ. 2018ರ ಪೂರ್ವಾರ್ಧದಲ್ಲಿ ಶೇ20ರಷ್ಟು ಏರಿಕೆ ಕಂಡಿತ್ತು. ನಾಲ್ಕು ವರ್ಷಗಳಲ್ಲೇ ಅಧಿಕ ಮಟ್ಟ ಮುಟ್ಟಿ ಪ್ರತಿ ಬ್ಯಾರೆಲ್ ಕಚ್ಚಾತೈಲ ಬೆಲೆ 86.07 ಡಾಲರ್(ಅಕ್ಟೋಬರ್) ಮುಟ್ಟಿ ಆತಂಕ ಮೂಡಿಸಿತ್ತು.

ಪೆಟ್ರೋಲಿಯಂ ರಫ್ತು ದೇಶಗಳ ಸಭೆ

ಪೆಟ್ರೋಲಿಯಂ ರಫ್ತು ದೇಶಗಳ ಸಭೆ

ಈಗ ಅಧಿಕ ಪೂರೈಕೆ ವಾತಾವರಣ ಸೃಷ್ಟಿಯಾಗಿದ್ದು, ಯುಎಸ್ ಹೊರತುಪಡಿಸಿ ಉಳಿದ ಪೆಟ್ರೋಲಿಯಂ ರಫ್ತು ದೇಶಗಳು(Opec) ವಿಯೆನ್ನಾದಲ್ಲಿ ಡಿಸೆಂಬರ್ 03ರಂದು ಸಭೆ ಸೇರಲಿವೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.

ಸರಿ ಸುಮಾರು 5,00,000 bpd ಉತ್ಪಾದನೆ ಹೊಂದಿರುವ ಸೌದಿ ಅರೇಬಿಯಾವು ಈಗ ತನ್ನ ಉತ್ಪಾದನೆಯನ್ನು ಕಡಿತಗೊಳಿಸಲು ಮುಂದಾಗಿದ್ದು, ಇದರಿಂದ ಬೆಲೆಯಲ್ಲಿ ಸ್ಥಿರತೆ ತರಲು ಯತ್ನಿಸುತ್ತಿದೆ.

ಬೋನಸ್ ಐರೀಸ್ ನಲ್ಲಿ ಜಿ20 ಶೃಂಗಸಭೆ

ಬೋನಸ್ ಐರೀಸ್ ನಲ್ಲಿ ಜಿ20 ಶೃಂಗಸಭೆ

ಇದಲ್ಲದೆ, ಬೋನಸ್ ಐರೀಸ್ ನಲ್ಲಿ ಜಿ20 ಶೃಂಗಸಭೆಯು ಶುಕ್ರವಾರದಿಂದ ಆರಂಭಗೊಳ್ಳಲಿದ್ದು, ವಾಷಿಂಗ್ಟನ್ ಹಾಗೂ ಬೀಜಿಂಗ್ ನಡುವಿನ ವ್ಯಾಪಾರ ಕದನವು ಮುಖ್ಯ ಚರ್ಚಾ ವಿಷಯವಾಗಿದ್ದರೂ. ಅತಿ ಹೆಚ್ಚು ಕಚ್ಚಾತೈಲ ಉತ್ಪಾದನಾ ರಾಷ್ಟ್ರಗಳಾದ ರಷ್ಯಾ, ಯುಎಸ್ಎ ಹಾಗೂ ಸೌದಿ ಅರೇಬಿಯಾದ ಪ್ರತಿನಿಧಿಗಳು ತೈಲ ಒಪ್ಪಂದದ ಬಗ್ಗೆ ಚರ್ಚಿಸಲಿದ್ದಾರೆ.

ಕಚ್ಚಾ ತೈಲ ಬೆಲೆ ಇನ್ನಷ್ಟು ಕುಸಿಯುವ ನಿರೀಕ್ಷೆಯಿದೆ.

ಕಚ್ಚಾ ತೈಲ ಬೆಲೆ ಇನ್ನಷ್ಟು ಕುಸಿಯುವ ನಿರೀಕ್ಷೆಯಿದೆ.

ಜೂನ್ 2014ರಲ್ಲಿ ಬ್ರೆಂಟ್ ಕ್ರೂಡ್ ಬೆಲೆ ಪ್ರತಿ ಬ್ಯಾರೆಲ್ ಗೆ 115 ಡಾಲರ್ ಗರಿಷ್ಠ ಬೆಲೆ ಕಂಡಿತ್ತು. 2015ರಲ್ಲಿ 36.05 ಡಾಲರ್ ಪ್ರತಿ ಬ್ಯಾರೆಲ್ ನಂತೆ ಕುಸಿದಿತ್ತು.

ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (ಬಿಪಿಸಿಎಲ್) ಹಾಗೂ ಹಿಂದೂಸ್ತಾನ್ ಪೆಟ್ರೋಲ್ ಕಾರ್ಪ್ ಲಿಮಿಟೆಡ್ (ಎಚ್ ಪಿ ಸಿಎಲ್) ಭಾನುವಾರ(ನವೆಂಬರ್ 25)ದಂದು ನೀಡಿರುವ ಪತ್ರಿಕಾ ಜಾಹೀರಾತು ಪ್ರಕಟಣೆಯಂತೆ ದೇಶದೆಲ್ಲೆಡೆ 55,649 ಪೆಟ್ರೋಲ್ ಪಂಪ್ ಗಳು ತಲೆ ಎತ್ತಲಿವೆ. ಇದು ಜಾರಿಗೆ ಬಂದ ನಂತರ ದೇಶದ ಪೆಟ್ರೋಲ್ ಪಂಪ್ ಗಳ ಸಂಖ್ಯೆ ಈಗಿರುವುದಕ್ಕಿಂತ ದ್ವಿಗುಣವಾಗಲಿದೆ.

English summary
Will Oil prices crashed below $50 a barrel for the first time in this year. Russia signaled little urgency to commit to supply cuts, while US crude stockpiles continue to grow. Brent Cude the major benchmark for oil purchases worldwide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more