ಶುಕ್ರವಾರ 13ನೇ ದಿನಾಂಕ ಯಾರಿಗೆ ಶುಭ, ಯಾರಿಗೆ ಅಶುಭ
ಇಂದು ಶುಕ್ರವಾರ 13ನೇ ತಾರೀಖು. 13ನೇ ಸಂಖ್ಯೆ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಮಹತ್ವ ಪಡೆದ ಸಂಖ್ಯೆ. ಪಾಶ್ಚಿಮಾತ್ಯರಲ್ಲಿ 13 ಸಂಖ್ಯೆ ಅದರಲ್ಲೂ ಶುಕ್ರವಾರದಂದು 13ನೇ ತಾರೀಖು ಬಂದರೆ ಬೆಚ್ಚು ಬೀಳುತ್ತಾರೆ. ಗ್ರೆಗೋರಿಯನ್ ಕ್ಯಾಲೆಂಡರ್ ಅನುಸರಿಸುವ ನಾವುಗಳು ಜನ ಸಮಾನ್ಯರು, ಚಂದ್ರಮಾನ, ಸೌರಮಾನ ಪಂಚಾಂಗ ನೋಡುವ ಮಂದಿಗೆ 13ರ ಸಂಖ್ಯೆ ವಿವಿಧ ರೀತಿ ಅನುಭವ ಕೊಡಬಹುದು. ಆದರೆ, ದಿನದ ಕೊನೆಯಲ್ಲಿ 13 ಕೇವಲ ಸಂಖ್ಯೆ ಅಷ್ಟೇ, 13ನೇ ತಾರೀಖಿನಂದು ನಡೆದ ಕೆಟ್ಟ ವಿಚಾರಗಳು ಕಾಕತಾಳೀಯವಷ್ಟೇ ಎನ್ನಬಹುದು.
ಉಗ್ರರಿಗೆ 13 ಹಾಗೂ 26 ಅಚ್ಚುಮೆಚ್ಚಿನ ದಿನಾಂಕ. ರಾಹು ಹಾಗೂ ಶನಿ ಕೃಪೆ ಪಡೆದ ಉಗ್ರರು ಭಾರತದಲ್ಲಿ ಅಟ್ಟಹಾಸ ಮೆರೆದಿದ್ದು ಈ ಎರಡು ದಿನಾಂಕಗಳಲ್ಲಿ ಎಂಬುದು ಗಮನಾರ್ಹ.
Recommended Video
ಸಂಖ್ಯೆ 13ಕ್ಕೂ ಭಯೋತ್ಪಾದನಾ ಕೃತ್ಯಗಳಿಗೂ ಏನಾದರೂ ಲಿಂಕ್ ಇದೆಯೇ? ಅನೇಕ ಅಪಘಾತಗಳು, ಬಾಂಬ್ ಸ್ಫೋಟಗಳು, ಅಹಿತಕರ ಘಟನೆಗಳಿಗೆ 13ನೇ ದಿನಾಂಕ ಸಾಕ್ಷಿಯಾಗಿ ನಿಂತಿರುವುದು ಕೇವಲ ಕಾಕತಾಳೀಯವೇ? ವಿದೇಶಿಯರಿಗೆ ಅಶುಭವಾದ ಸಂಖ್ಯೆ 13, ಹಿಂದೂ ಜ್ಯೋತಿಷಿಗಳು ಹೇಳುವ ಹಾಗೆ ರಾಹು ಕಾಟದ ಪ್ರಭಾವೇ. ಒಂದು ಸ್ಪಷ್ಟತೆ ಇಲ್ಲ.

ಸಂಖ್ಯೆ 13, 7 ದುರದುಷ್ಟಕರ ಎಂದು ನಂಬಲಾಗಿದೆ
ಸಂಖ್ಯೆ 13, 7 ದುರದುಷ್ಟಕರ ಎಂದು ನಂಬಲಾಗಿದೆ. ಕೈಸ್ತರಲ್ಲಿ 666 ಕೂಡಾ ಅಶುಭ, ಇದು ಪೈಶಾಚಿಕ ಕೃತ್ಯಕ್ಕೆ ಹೇಳಿ ಮಾಡಿಸಿದ ಸಂಖ್ಯೆಯಂತೆ. ಮುಸ್ಲಿಮರಿಗೆ 786 ದೈವತ್ವದ ಸಂಖ್ಯೆ. ಹೀಗೆ ಸಂಖ್ಯಾಶಾಸ್ತ್ರದ ಪ್ರಕಾರ ಸೂರ್ಯ =1; ಚಂದ್ರ=2;ಗುರು=3;ರಾಹು=4;ಬುಧ=5;ಶುಕ್ರ=6;ಕೇತು=7;ಶನಿ=8;ಮಂಗಳ=9 ಉಗ್ರರಿಗೆ 13 ಹಾಗೂ 26 ಅಚ್ಚುಮೆಚ್ಚಿನ ದಿನಾಂಕ. ರಾಹು ಹಾಗೂ ಶನಿ ಕೃಪೆ ಪಡೆದ ಉಗ್ರರು ಭಾರತದಲ್ಲಿ ಅಟ್ಟಹಾಸ ಮೆರೆದಿದ್ದು ಈ ಎರಡು ದಿನಾಂಕಗಳಲ್ಲಿ ಎಂಬುದು ಗಮನಾರ್ಹ.

ಬುಧವಾರ ಬಂದರೂ ಉಗ್ರರಿಗೆ ಪ್ರಿಯವಾದ ದಿನ
1+3=4 ಸಂಖ್ಯೆಯ ಅಧಿಪತಿ ರಾಹು, ಕ್ರೂರತೆಯ ಸಂಕೇತ. 2+6=ಸಂಖ್ಯೆಯ ಅಧಿಪತಿ ಶನಿ, ಅಂಧಕಾರ ಲೋಕಕ್ಕೆ ರಾಜ. ಮಂಗಳವಾರ ಹಾಗೂ ಶನಿವಾರ ಪಾತಕಿಗಳ ಅಚ್ಚುಮೆಚ್ಚಿನ ದಿನ. ಆದರೆ, 26/11 ಮುಂಬೈ ದಾಳಿಗೆ ವಿಶೇಷವಾಗಿ ಮಂಗಳವಾರ ಹಾಗೂ ಶನಿವಾರ ಬದಲು ಬುಧವಾರ ಆರಿಸಿದ್ದೇವೆ ಎಂದು ಉಗ್ರರು ಹೇಳಿಕೆ ನೀಡಿದ್ದರು. ಸರಣಿ ಸ್ಫೋಟ ಇತಿಹಾಸ ಗಮನಿಸಿದರೆ ಬಹುಶಃ ಬುಧವಾರ ಕೂಡಾ ಉಗ್ರರ ನೆಚ್ಚಿನ ದಿನ ಆಗುವ ಸಾಧ್ಯತೆಗಳು ಗೋಚರಿಸುತ್ತಿದೆ.

4,8,9 ಸಂಖ್ಯೆ ಒಟ್ಟಿಗೆ ಸೇರಿದರೆ ಅನಾಹುತ
* 13 ಡಿಸೆಂಬರ್ 2001: ಮಂಗಳವಾರ; ಭಾರತೀಯ ಸಂಸತ್ತಿನ ಮೇಲೆ ದಾಳಿ(12 ಜನ ಸಾವು)
* 13 ಮೇ 2008: ಮಂಗಳವಾರ; ಜೈಪುರ ಬಾಂಬ್ ಸ್ಫೋಟ(68 ಜನ ಸಾವು)
* 26 ಜುಲೈ 2008: ಶನಿವಾರ; ಅಹಮದಾಬಾದ್ ಸ್ಫೋಟ(57 ಜನ ಸಾವು)
* 13 ಸೆಪ್ಟೆಂಬರ್ 2008: ಶನಿವಾರ; ದೆಹಲಿ ಸ್ಫೋಟ(13 ಜನ ಸಾವು)
* 26 ನವೆಂಬರ್ 2008: ಬುಧವಾರ; ಮುಂಬೈ ಸರಣಿ ಸ್ಫೋಟ(166 ಜನ ಸಾವು)
* 13 ಫೆಬ್ರವರಿ 2008: ಶನಿವಾರ; ಪುಣೆ ಸ್ಫೋಟ(9 ಜನ ಸಾವು) ಮೂರು ವರ್ಷದಲ್ಲಿ ಮೂರು ಬಾರಿ ಸ್ಫೋಟ ನಡೆದಿದೆ.
* ಜುಲೈ 13, 2011; ಪುಣೆ ಫೆ.13, 2010, ನವದೆಹಲಿ, ಸೆ.13, 2008 ,ಜೈಪುರ ಮೇ 13,2008 ಹಾಗೂ 1993ರಲ್ಲಿ ಸರಣಿ ಸ್ಫೋಟ ಸಂಭವಿಸಿದ್ದು 13 ಕಡೆ. 4,8,9 ಸಂಖ್ಯೆ ಒಟ್ಟಿಗೆ ಸೇರಿದರೆ ಅನಾಹುತ ಗ್ಯಾರಂಟಿ.

ವಿಶ್ವದ ಇತರೆಡೆ ಕೂಡಾ ಅನೇಕ ದುರಂತಗಳು
3 ದಿನಾಂಕದಂದು ಭಾರತದಷ್ಟೇ ಅಲ್ಲ ವಿಶ್ವದ ಇತರೆಡೆ ಕೂಡಾ ಅನೇಕ ದುರಂತಗಳು ಸಂಭವಿಸಿದ ಉದಾಹರಣೆಗಳಿವೆ.
* ವಿಲ್ನಿಯಸ್, ಲಿಥ್ಯೂನಿಯಾ 1991: 13 ಜನ ಸಾವು, 140 ಜನ ಗಾಯಾಳು
* ಕೋಲ್ಕತ್ತಾ 1964: ಹಿಂದೂ ಮುಸ್ಲಿಂ ಘರ್ಷಣೆ ಸಾವಿರಕ್ಕೂ ಅಧಿಕ ಜನ ಸಾವು
* ಸಾಲ್ವಡರ್ 2001: 1000 ಜನ ಸಾವು, ಪ್ರಬಲ ಭೂಕಂಪ
* ಬಾಗ್ದಾದ್ 1991: ಅಮೆರಿಕ ಪಡೆ ದಾಳಿ, ನೂರಾರು ಜನ ಬಲಿ
* ಸ್ಕಾಟ್ಲೆಂಡ್ 1996: 16 ಶಾಲಾ ಮಕ್ಕಳ ಬಲಿ ತೆಗೆದುಕೊಂಡ ಗನ್ ಮ್ಯಾನ್
* ಪ್ಯಾಲೆಸ್ಟೇನ್ 1975: ಕ್ರೈಸ್ತ ಉಗ್ರವಾದಿಗಳು ಪ್ಯಾಲೆಸ್ಟೇನ್ ಗೆರಿಲ್ಲಾ ದಾಳಿ 17 ಜನ ಸಾವು
* 1981 ರೋಮ್: ಸಾರ್ವಜನಿಕ ಸ್ಥಳದಲ್ಲೇ ಪೋಪ್ ಹತ್ಯೆ
* 1992 ಇಂಗ್ಲೆಂಡ್: 31 ಸಾವಿರ ಗಣಿ ನೌಕರರು ಕೆಲಸದಿಂದ ವಜಾ
* 1985 ಕೊಲಂಬಿಯಾ: ಅಗ್ನಿಪರ್ವತ ಸ್ಫೋಟ, 20 ಸಾವಿರಕ್ಕೂ ಅಧಿಕ ಜನ ಸಾವು
***
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications