ಅನರ್ಹರ ಪರ ಜನರ ಒಲವು? ಸಮೀಕ್ಷೆಗಳು ಹೇಳುವುದೇನು?
ಬೆಂಗಳೂರು, ಡಿಸೆಂಬರ್ 5: ಅನರ್ಹ ಶಾಸಕರ ರಾಜೀನಾಮೆ ಮತ್ತು ಅದರ ಸುತ್ತಲಿನ ಘಟನೆಗಳು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಸಹಾಯ ಮಾಡಿತ್ತು. ಇದನ್ನು ಸ್ವತಃ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿಕೊಂಡಿದ್ದರು. ಸರ್ಕಾರ ಉಳಿಯಬೇಕೆಂದರೆ ಅನರ್ಹ ಶಾಸಕರ ಗೆಲುವು ಅನಿವಾರ್ಯ. ಕನಿಷ್ಠ ಏಳು ಶಾಸಕರ ಗೆಲುವು ಬಿಜೆಪಿಗೆ ಅಗತ್ಯವಾಗಿದೆ. ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರ ಇರುವುದರಿಂದ ಈ ಸರ್ಕಾರ ಉಳಿದರೆ ರಾಜ್ಯದ ಪ್ರಗತಿ ಸಾಧ್ಯ ಎಂದು ಕಮಲ ಪಕ್ಷ ಪ್ರತಿಪಾದಿಸುತ್ತಿದೆ.
ಅತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ ಶಾಸಕರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಬಯಸುತ್ತಿವೆ. ರಾಜ್ಯದ ಮಾನ ಉಳಿಸಲು ಮತ್ತು ಪ್ರಜಾಪ್ರಭುತ್ವದ ಮೌಲ್ಯ ಕಾಪಾಡಲು ಅನರ್ಹ ಶಾಸಕರನ್ನು ತಿರಸ್ಕರಿಸಿ ಎಂಬ ಅಭಿಯಾನ ಕೂಡ ವಿರೋಧಪಕ್ಷಗಳಿಗೆ ನೆರವಾಗಿದೆ. ಆದರೆ ಮತದಾರರ ತೀರ್ಪು ಯಾವ ಕಡೆಗಿದೆ ಎಂಬುದನ್ನು ಊಹಿಸಲು ಕಷ್ಟ. ಮತದಾರರು ಅನರ್ಹರನ್ನು ತಿರಸ್ಕರಿಸುತ್ತಾರೆಯೇ ಅಥವಾ ಅವರನ್ನು ಬೆಂಬಲಿಸುವ ಮೂಲಕ ಬಿಜೆಪಿ ಸರ್ಕಾರದ ಕೈ ಹಿಡಿಯುತ್ತಾರೆಯೇ ಎಂಬ ಲೆಕ್ಕಾಚಾರ ನಡೆಯುತ್ತಿದೆ.
ದೇಶದ ಗಮನ ಸೆಳೆದಿರುವ ರಾಜ್ಯ ರಾಜಕೀಯದ ಬೆಳವಣಿಗೆ, ಫಲಿತಾಂಶದ ಬಳಿಕ ಹೊಸ ದಿಕ್ಕುಪಡೆದುಕೊಳ್ಳುವ ಸಾಧ್ಯತೆ ಇದೆ. ಅಧಿಕೃತ ಫಲಿತಾಂಶ ಡಿ. 9ರಂದು ಪ್ರಕಟಗೊಳ್ಳಲಿದೆ. ಅದಕ್ಕೂ ಮೊದಲೇ ವಿವಿಧ ಮಾಧ್ಯಮಗಳು ತಮ್ಮದೇ ಸಮೀಕ್ಷೆ ನೀಡಿವೆ. ಈ ಸಮೀಕ್ಷೆಗಳ ಪ್ರಕಾರ ಬಿಜೆಪಿ ಒಟ್ಟಾರೆ ಮೇಲುಗೈ ಸಾಧಿಸಲಿದೆ. ಸಿ-ವೋಟರ್ ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂಬ ಲೆಕ್ಕಾಚಾರ ನೀಡಿದೆ.

ಭೈರತಿ ಬಸವರಾಜುಗೆ ಜಯ
ಕೆಆರ್ ಪುರಂನಲ್ಲಿ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜು ಮುನ್ನಡೆ ಪಡೆದುಕೊಳ್ಳಲಿದ್ದಾರೆ. ಕಾಂಗ್ರೆಸ್‌ನ ನಾರಾಯಣ ಸ್ವಾಮಿ ಮತ್ತು ಜೆಡಿಎಸ್‌ನ ಕೃಷ್ಣಮೂರ್ತಿ ನಂತರದ ಸ್ಥಾನಗಳನ್ನು ಗಳಿಸಲಿದ್ದಾರೆ ಎಂದು ಸಿ-ವೋಟರ್ ಸಮೀಕ್ಷೆ ಹೇಳಿದೆ.
ಗೋಕಾಕ್‌ನಲ್ಲಿ ಬಿಜೆಪಿಯ ರಮೇಶ್ ಜಾರಕಿಹೊಳಿ ಮುನ್ನಡೆ ಸಾಧಿಸಲಿದ್ದು, ಕಾಂಗ್ರೆಸ್‌ನ ಲಖನ್ ಜಾರಕಿಹೊಳಿ ಎರಡನೆಯ ಮತ್ತು ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಮೂರನೇ ಸ್ಥಾನ ಪಡೆದುಕೊಳ್ಳಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಯಲ್ಲಾಪುರ, ಹೊಸಪೇಟೆ, ಯಶವಂತಪುರ
ಯಲ್ಲಾಪುರ
ಬಿಜೆಪಿಯ ಶಿವರಾಂ ಹೆಬ್ಬಾರ್ ಮುನ್ನಡೆ
ಕಾಂಗ್ರೆಸ್‌ನ ಭೀಮಣ್ಣ ನಾಯ್ಕ್ ಎರಡನೇ ಸ್ಥಾನ
ಜೆಡಿಎಸ್‌ನ ಚೈತ್ರಾಗೌಡ ಮೂರನೇ ಸ್ಥಾನ
ಹೊಸಪೇಟೆ
ಬಿಜೆಪಿಯ ಆನಂದ್ ಸಿಂಗ್ ಮುನ್ನಡೆ
ಕಾಂಗ್ರೆಸ್‌ನ ವೈವಿ ಘೋರ್ಪಡೆ ಎರಡನೇ ಸ್ಥಾನ
ಯಶವಂತಪುರ
ಬಿಜೆಪಿಯ ಸೋಮಶೇಖರ್ ಮುನ್ನಡೆ
ಜೆಡಿಎಸ್‌ನ ಜವರಾಯಿಗೌಡ ಎರಡನೇ ಸ್ಥಾನ
ಕಾಂಗ್ರೆಸ್‌ನ ಪಿ ನಾಗರಾಜ್ ಮೂರನೇ ಸ್ಥಾನ

ಹುಣಸೂರು, ಕೆಆರ್ ಪೇಟೆ, ಕಾಗವಾಡ, ಹೊಸಕೋಟೆ
ಹುಣಸೂರು
ಕಾಂಗ್ರೆಸ್ ಮಂಜುನಾಥ್ ಮುನ್ನಡೆ
ಜೆಡಿಎಸ್‌ನ ಸೋಮಶೇಖರ್ ಎರಡನೆಯ ಸ್ಥಾನ
ಬಿಜೆಪಿಯ ಎಚ್.ವಿಶ್ವನಾಥ್ ಮೂರನೇ ಸ್ಥಾನ
ಕಾಗವಾಡ
ಕಾಂಗ್ರೆಸ್‌ನ ರಾಜು ಕಾಗೆ
ಬಿಜೆಪಿ- ಶ್ರೀಮಂತ ಪಾಟೀಲ್ ಎರಡನೇ ಸ್ಥಾನ
ಕೆಆರ್ ಪೇಟೆ
ಜೆಡಿಎಸ್‌ನ ಬಿಎಲ್ ದೇವರಾಜು ಮತ್ತು ಬಿಜೆಪಿಯ ನಾರಾಯಣ ಗೌಡ ನಡುವೆ ಸಮಬಲ. ಕಾಂಗ್ರೆಸ್‌ನ ಕೆಬಿ ಚಂದ್ರಶೇಖರ್ ಮೂರನೇ ಸ್ಥಾನ.
ಹೊಸಕೋಟೆ
ಎಂಟಿಬಿ ನಾಗರಾಜ್ - ಬಿಜೆಪಿ
ಪದ್ಮಾವತಿ ಸುರೇಶ್- ಕಾಂಗ್ರೆಸ್
ಶರತ್ ಬಚ್ಚೇಗೌಡ- ಪಕ್ಷೇತರ

ಜಿದ್ದಾಜಿದ್ದಿನ ಕ್ಷೇತ್ರಗಳು
ಚಿಕ್ಕಬಳ್ಳಾಪುರ
ಬಿಜೆಪಿಯ ಸುಧಾಕರ್ ಮತ್ತು ಕಾಂಗ್ರೆಸ್‌ನ ಆಂಜಿನಪ್ಪ ನಡುವೆ ನೇರ ಹಣಾಹಣಿ.
ಶಿವಾಜಿನಗರ
ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ಮತ್ತು ಬಿಜೆಪಿಯ ಎಂ. ಸರವಣ ನಡುವೆ ತೀವ್ರ ಪೈಪೋಟಿ.
ರಾಣೆಬೆನ್ನೂರು
ಕಾಂಗ್ರೆಸ್‌ನ ಕೆಬಿ ಕೋಳಿವಾಡ ಮತ್ತು ಬಿಜೆಪಿಯ ಅರುಣ್ ಕುಮಾರ್ ನಡುವೆ ಜಿದ್ದಾಜಿದ್ದಿ

ಮಹಾಲಕ್ಷ್ಮಿ, ಅಥಣಿ, ಹಿರೇಕೆರೂರು
ಮಹಾಲಕ್ಷ್ಮಿ ಲೇಔಟ್
ಗೋಪಾಲಯ್ಯ- ಬಿಜೆಪಿ
ಎಂ ಶಿವರಾಜು- ಕಾಂಗ್ರೆಸ್
ಗಿರೀಶ್ ನಾಶಿ- ಜೆಡಿಎಸ್
ಅಥಣಿ
ಬಿಜೆಪಿಯ ಮಹೇಶ್ ಕುಮಠಳ್ಳಿ
ಕಾಂಗ್ರೆಸ್‌ನ ಗಜಾನನ ಮಂಗಸೂಳಿ
ಹಿರೇಕೆರೂರು
ಬಿಜೆಪಿಯ ಬಿಸಿ ಪಾಟೀಲ್
ಕಾಂಗ್ರೆಸ್‌ನ ಬಿಎಚ್ ಬನ್ನಿಕೋಡ್












Click it and Unblock the Notifications