ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುದ್ಧ ಅಪರಾಧ ಎಂದರೇನು?; ಯುದ್ಧ ಅಪರಾಧಿ ಎನಿಸಿಕೊಂಡಿದ್ದೇಕೆ ರಷ್ಯಾ ಅಧ್ಯಕ್ಷ ಪುಟಿನ್?

|
Google Oneindia Kannada News

ಕೀವ್, ಮಾರ್ಚ್ 17: ಉಕ್ರೇನ್-ರಷ್ಯಾ ನಡುವಿನ ಯುದ್ಧದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೇ ಯುದ್ಧ ಅಪರಾಧಿ ಎಂದು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬೈಡನ್ ಆರೋಪಿಸಿದ್ದಾರೆ. ಬೈಡನ್ ನೀಡಿರುವ ಈ ಹೇಳಿಕೆಯು ಸ್ವೀಕಾರಾರ್ಹವಲ್ಲ ಮತ್ತು ಇದನ್ನು ಕ್ಷಮಿಸಲಾಗುವುದಿಲ್ಲ ಎಂದು ಕ್ರೆಮ್ಲಿನ್ ತೀವ್ರವಾಗಿ ಖಂಡಿಸಿದೆ.

ಬೈಡೆನ್ ಬುಧವಾರ ಈ ಪದವನ್ನು ಬಳಸಿದ ನಂತರ, ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಅವರು ಈ ಕುರಿತು ಸ್ಪಷ್ಟನೆ ನೀಡಿದರು. ಉಕ್ರೇನ್‌ನಲ್ಲಿ ನಡೆಯುತ್ತಿರುವ "ಅನಾಗರಿಕ" ಹಿಂಸಾಚಾರವನ್ನು ನೋಡಿ ಅಧ್ಯಕ್ಷ ಜೋ ಬೈಡನ್ "ಅವರು ಹೃದಯಪೂರ್ವಕವಾಗಿ ಮಾತನಾಡಿದ್ದಾರೆ" ಎಂದು ಹೇಳಿದರು.

ರಷ್ಯಾದ ಕಚ್ಚಾತೈಲದಿಂದ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ!?ರಷ್ಯಾದ ಕಚ್ಚಾತೈಲದಿಂದ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ!?

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕುರಿತಾಗಿ ಯುಎಸ್ ಅಧ್ಯಕ್ಷ ಜೋ ಬೈಡನ್ ಯುದ್ಧ ಅಪರಾಧಿ ಎಂದು ಕರೆಯುವುದಕ್ಕೆ ಕಾರಣವೇನು?, ಅಸಲಿಗೆ ಈ ಯುದ್ಧ ಅಪರಾಧಿ ಎಂದರೆ ಯಾರು?, ಯುದ್ಧ ಅಪರಾಧ ಎಂದರೆ ಏನು? ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಈ ಬಗ್ಗೆ ಉಲ್ಲೇಖವಾಗಿದ್ದು ಏಕೆ ಎಂಬುದರ ಕುರಿತು ಒಂದು ವರದಿ ಇಲ್ಲಿದೆ ಓದಿ.

ಯಾರು ಯುದ್ಧ ಅಪರಾಧಿ?

ಯಾರು ಯುದ್ಧ ಅಪರಾಧಿ?

ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ನಾಯಕರು ಅಳವಡಿಸಿಕೊಂಡ ಸಶಸ್ತ್ರ ಸಂಘರ್ಷದ ಕಾನೂನು ನಿಯಮಗಳನ್ನು ಉಲ್ಲಂಘಿಸುವವರಿಗೆ "ಯುದ್ಧ ಅಪರಾಧಿ" ಎಂದು ಕರೆಯಲಾಗುತ್ತದೆ. ಯುದ್ಧದ ಸಂದರ್ಭದಲ್ಲಿ ಯಾವ ದೇಶಗಳು ಹೇಗೆ ವರ್ತಿಸುತ್ತವೆ ಹಾಗೂ ಹೇಗೆ ವರ್ತಿಸಬೇಕು ಎಂಬುದನ್ನು ಈ ನಿಯಮಗಳು ನಿಯಂತ್ರಿಸುತ್ತವೆ. ಎರಡನೆ ಮಹಾಯುದ್ಧದ ನಂತರ ಜಿನೀವಾ ಒಪ್ಪಂದಗಳಿಂದ ಕೆಲವು ಹೊಸ ಶಿಷ್ಟಾಚಾರಗಳನ್ನು ಸೇರಿಸಲಾಗಿತ್ತು. ಕಳೆದ ಶತಮಾನದಲ್ಲಿ ಈ ನಿಯಮಗಳನ್ನು ಬದಲಾಯಿಸಿ, ವಿಸ್ತರಣೆ ಮಾಡಲಾಗಿತ್ತು.

ಯುದ್ಧದಲ್ಲಿ ಭಾಗವಹಿಸದ ಅಮಾಯಕ ಜನರನ್ನು ರಕ್ಷಿಸುವ ಉದ್ದೇಶದಿಂದ ಕೆಲವು ನಿಯಮಗಳನ್ನು ಅಳವಡಿಸಿಕೊಳ್ಳಲಾಗಿತ್ತು. ವೈದ್ಯರು, ದಾದಿಯರು, ಗಾಯಗೊಂಡ ಸೈನಿಕರು, ಯುದ್ಧ ಕೈದಿಗಳು ಹಾಗೂ ಅಮಾಯಕ ನಾಗರಿಕರು ಯುದ್ಧದಿಂದ ಸಮಸ್ಯೆಯನ್ನು ಎದುರಿಸಬಾರದು ಎನ್ನುವುದೇ ಈ ನಿಯಮಗಳ ಮುಖ್ಯ ಗುರಿಯಾಗಿತ್ತು.

 Russia-Ukraine War Stop: ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವುದಕ್ಕೆ ಹೀಗೊಂದು ಕಂಡೀಷನ್!? Russia-Ukraine War Stop: ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವುದಕ್ಕೆ ಹೀಗೊಂದು ಕಂಡೀಷನ್!?

ಯಾರನ್ನು ಮತ್ತು ಏಕೆ ಯುದ್ಧ ಅಪರಾಧಿ ಎನ್ನುತ್ತಾರೆ?

ಯಾರನ್ನು ಮತ್ತು ಏಕೆ ಯುದ್ಧ ಅಪರಾಧಿ ಎನ್ನುತ್ತಾರೆ?

ಶತ್ರು ರಾಷ್ಟ್ರದ ಮೇಲೆ ಉದ್ದೇಶಪೂರ್ವಕವಾಗಿ ಅತಿಯಾದ ನೋವು ಮತ್ತು ಸಂಕಟದ ಸನ್ನಿವೇಶವನ್ನು ಸೃಷ್ಟಿ ಮಾಡುವುದು. ಅನಗತ್ಯವಾಗಿ ಸಮರ್ಥಿಸಿಕೊಳ್ಳಲು ಆಗದಷ್ಟು ಆಸ್ತಿ ಪಾಸ್ತಿ ಮತ್ತು ಮಿಲಿಟರಿ ಅನ್ನು ನಾಶಪಡಿಸುವುದು ಮತ್ತು ಸ್ವಾಧೀನಪಡಿಸಿಕೊಳ್ಳುವುದು ಯುದ್ಧ ಅಪರಾಧ ಎನಿಸಿಕೊಳ್ಳುತ್ತದೆ. ಇದರ ಜೊತೆ ಇತರ ಯುದ್ಧ ಅಪರಾಧಗಳಲ್ಲಿ ಉದ್ದೇಶಪೂರ್ವಕವಾಗಿ ನಾಗರಿಕರನ್ನು ಗುರಿಯಾಗಿಸುವುದು, ಅಸಮಾನ ಬಲವನ್ನು ಬಳಸುವುದು, ಮಾನವ ಗುರಾಣಿಗಳನ್ನು ಬಳಸುವುದು ಮತ್ತು ಒತ್ತೆಯಾಳುಗಳನ್ನು ಇರಿಸಿಕೊಳ್ಳುವುದು ಕೂಡ ಯುದ್ಧ ಅಪರಾಧ ಎನಿಸಿಕೊಳ್ಳುತ್ತದೆ.

ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯವು "ಯಾವುದೇ ನಾಗರಿಕರ ವಿರುದ್ಧ ವ್ಯಾಪಕ ಅಥವಾ ವ್ಯವಸ್ಥಿತ ದಾಳಿಯ" ನಡೆಸಿದ ಸಂದರ್ಭದಲ್ಲಿ ಮಾನವೀಯತೆ ವಿರುದ್ಧದ ಅಪರಾಧಗಳನ್ನು ವಿಚಾರಣೆಗೆ ಒಳಪಡಿಸುತ್ತದೆ. ಇವುಗಳಲ್ಲಿ ಕೊಲೆ, ನಿರ್ನಾಮ, ಬಲವಂತದ ವರ್ಗಾವಣೆ, ಚಿತ್ರಹಿಂಸೆ, ಅತ್ಯಾಚಾರ ಮತ್ತು ಲೈಂಗಿಕ ಗುಲಾಮಗಿರಿಯ ಕೃತ್ಯಗಳು ಸೇರಿವೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಯುದ್ಧ ಅಪರಾಧಿ ಎಂದು ಗುರುತಿಸಬೇಕು ಎಂದು ಉಕ್ರೇನಿಯನ್ ರಕ್ಷಣಾ ಸಚಿವ ಓಲೆಕ್ಸಿ ರೆಜ್ನಿಕೋವ್, ಯುರೋಪಿಯನ್ ಒಕ್ಕೂಟದ ರಾಜಕಾರಣಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕಳೆದ ಬುಧವಾರ 1200 ಮಹಿಳೆಯರು ಮತ್ತು ಮಕ್ಕಳು ಆಶ್ರಯ ಪಡೆದಿರುವ ಚಿತ್ರಮಂದಿರದ ಮೇಲೆ ರಷ್ಯಾ ವೈಮಾನಿಕ ದಾಳಿ ನಡೆಸಿರುವ ಬಗ್ಗೆ ಅವರು ಉಲ್ಲೇಖಿಸಿದ್ದಾರೆ. ಆದರೆ ಉಕ್ರೇನ್ ಆರೋಪವನ್ನು ರಷ್ಯಾ ತಿರಸ್ಕರಿಸಿದೆ.

ಉಕ್ರೇನ್ ಯುದ್ಧಕ್ಕೆ ಅಂತ್ಯ ಹಾಡುತ್ತಾರಾ ಪುಟಿನ್?

ಉಕ್ರೇನ್ ಯುದ್ಧಕ್ಕೆ ಅಂತ್ಯ ಹಾಡುತ್ತಾರಾ ಪುಟಿನ್?

ರಷ್ಯಾ ಉಕ್ರೇನ್ ಮೇಲಿನ ಯುದ್ಧವನ್ನು ಅಂತ್ಯಗೊಳಿಸುತ್ತದೆಯೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಏಕೆಂದರೆ ರಷ್ಯಾ ಅಂತಾರಾಷ್ಟ್ರೀಯ ಅಪರಾಧ ಕೋರ್ಟ್ ನ್ಯಾಯವ್ಯಾಪ್ತಿ ಅನ್ನು ಗುರುತಿಸುವುದಿಲ್ಲ. ನೆದರ್ಲ್ಯಾಂಡ್ಸ್‌ನ ಹೇಗ್‌ನಲ್ಲಿರುವ ನ್ಯಾಯಾಲಯದ ಪ್ರಧಾನ ಕಚೇರಿಗೆ ಯಾರನ್ನೂ ಕಳುಹಿಸಿಲ್ಲ ಎಂದು ಶಂಕಿಸಲಾಗಿದೆ. ಯುಎಸ್ ನ್ಯಾಯಾಲಯದ ಅಧಿಕಾರವನ್ನು ಗುರುತಿಸುವುದಿಲ್ಲ. ವಿಶ್ವಸಂಸ್ಥೆ ಅಥವಾ ಸಂಬಂಧಿತ ರಾಷ್ಟ್ರಗಳ ಒಕ್ಕೂಟದಿಂದ ಆಯ್ಕೆಯಾದ ದೇಶದಲ್ಲಿ ಪುಟಿನ್ ಅವರನ್ನು ವಿಚಾರಣೆಗೆ ಒಳಪಡಿಸಬಹುದು. ಆದರೆ ಅವರು ಅಲ್ಲಿಗೆ ಬರುವುದು ಕಷ್ಟಸಾಧ್ಯವಾಗುತ್ತದೆ.

ಕಾನೂನು ಸಿದ್ಧಾಂತದ ಮೂಲಕ ಪುಟಿನ್ ಅವರನ್ನು ಯುದ್ಧ ಅಪರಾಧಿಯಾಗಿ ಗುರುತಿಸುವಲ್ಲಿ ಕಮಾಂಡ್ ಜವಾಬ್ದಾರಿ ಹೆಚ್ಚಾಗಿರುತ್ತದೆ. ಕಮಾಂಡರ್‌ಗಳು ಆದೇಶಿಸಿದರೆ ಅಥವಾ ತಿಳಿಸಿದರೆ ಅಥವಾ ಅಪರಾಧಗಳ ಬಗ್ಗೆ ತಿಳಿದುಕೊಳ್ಳುವ ಸ್ಥಿತಿಯಲ್ಲಿದ್ದರೆ ಮತ್ತು ಅದನ್ನು ತಡೆಯಲು ಏನನ್ನೂ ಮಾಡದಿದ್ದರೆ, ಅವರನ್ನು ಕಾನೂನುಬದ್ಧವಾಗಿ ಹೊಣೆಗಾರರನ್ನಾಗಿ ಮಾಡಬಹುದು.

ಯುದ್ಧ ಅಪರಾಧಿಗಳ ವಿರುದ್ಧ ಕ್ರಮ ತೆಗೆದುಕೊಂಡಿರುವ ಹಿನ್ನಲೆ?

ಯುದ್ಧ ಅಪರಾಧಿಗಳ ವಿರುದ್ಧ ಕ್ರಮ ತೆಗೆದುಕೊಂಡಿರುವ ಹಿನ್ನಲೆ?

ನ್ಯೂರೆಂಬರ್ಗ್ ಮತ್ತು ಟೋಕಿಯೋದಲ್ಲಿನ ಎರಡನೇ ವಿಶ್ವಯುದ್ಧದ ನಂತರದ ನ್ಯಾಯ ಮಂಡಳಿಗಳಿಂದ ಹಿಡಿದು ಇತ್ತೀಚಿನ ತಾತ್ಕಾಲಿಕ ನ್ಯಾಯ ಮಂಡಳಿಗಳವರೆಗೆ ಬೋಸ್ನಿಯಾ, ಕಾಂಬೋಡಿಯಾ ಮತ್ತು ರುವಾಂಡಾ ದೇಶಗಳಲ್ಲಿ ಹಿರಿಯ ನಾಯಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. 1990ರ ದಶಕದ ಆರಂಭದಲ್ಲಿ ಯುಗೊಸ್ಲಾವಿಯಾ ಕುಸಿಯುತ್ತಿದ್ದಂತೆ ರಕ್ತಸಿಕ್ತ ಸಂಘರ್ಷಗಳನ್ನು ಹುಟ್ಟುಹಾಕಿದ್ದಕ್ಕಾಗಿ ಯುಗೊಸ್ಲಾವ್ ಮಾಜಿ ನಾಯಕ ಸ್ಲೊಬೊಡಾನ್ ಮಿಲೋಸೆವಿಕ್ ಅವರನ್ನು ಹೇಗ್‌ನಲ್ಲಿರುವ ವಿಶ್ವಸಂಸ್ಥೆಯ ನ್ಯಾಯಮಂಡಳಿಯು ವಿಚಾರಣೆಗೆ ಒಳಪಡಿಸಿತು. ನ್ಯಾಯಾಲಯವು ತೀರ್ಪು ನೀಡುವುದಕ್ಕೂ ಮೊದಲೇ ಅವರು ಸೆಲ್‌ನಲ್ಲಿ ನಿಧನರಾದರು.

ಅವರ ಬೋಸ್ನಿಯನ್ ಸರ್ಬ್ ಮಿತ್ರ ರಾಡೋವನ್ ಕರಾಡ್ಜಿಕ್ ಮತ್ತು ಬೋಸ್ನಿಯನ್ ಸೆರ್ಬ್ ಮಿಲಿಟರಿ ನಾಯಕ ಜನರಲ್ ರಾಟ್ಕೊ ಮ್ಲಾಡಿಕ್ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಇಬ್ಬರೂ ನಾಯಕರಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಯಿತು.

ಲೈಬೀರಿಯಾದ ಚಾರ್ಲ್ಸ್ ಟೇಲರ್ ನೆರೆಯ ಸಿಯೆರಾ ಲಿಯೋನ್‌ನಲ್ಲಿ ದೌರ್ಜನ್ಯ ನಡೆಸಿದ ಆರೋಪದ ಹಿನ್ನೆಲೆ 50 ವರ್ಷಗಳ ಶಿಕ್ಷೆ ವಿಧಿಸಲಾಯಿತು. ಚಾಡ್‌ನ ಮಾಜಿ ಆಡಳಿತಗಾರ ಹಿಸ್ಸೆನೆ ಹಬ್ರೆ ಆಫ್ರಿಕನ್ ನ್ಯಾಯಾಲಯದಿಂದ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಶಿಕ್ಷೆ ಅನುಭವಿಸಿದ ಮೊದಲ ರಾಷ್ಟ್ರೀಯ ಮುಖ್ಯಸ್ಥರಾಗಿದ್ದಾರೆ.

ರಷ್ಯಾಗೆ ಯುದ್ಧ ನಿಲ್ಲಿಸಲು ಅಂತಾರಾಷ್ಟ್ರೀಯ ಕೋರ್ಟ್ ಸೂಚನೆ

ರಷ್ಯಾಗೆ ಯುದ್ಧ ನಿಲ್ಲಿಸಲು ಅಂತಾರಾಷ್ಟ್ರೀಯ ಕೋರ್ಟ್ ಸೂಚನೆ

ಉಕ್ರೇನ್ ಮೇಲಿನ ಹಗೆತನವನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆಯ ಕೋರ್ಟ್ ರಷ್ಯಾಗೆ ಬುಧವಾರ ಆದೇಶಿಸಿದೆ. ಕಳೆದ ಎರಡು ವಾರಗಳ ಹಿಂದೆ ವಿಶ್ವ ನ್ಯಾಯಾಲಯ ಎಂದೂ ಕರೆಯಲ್ಪಡುವ ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್ ಅನ್ನು ಮಧ್ಯಪ್ರವೇಶಿಸುವಂತೆ ಉಕ್ರೇನ್ ಮನವಿ ಮಾಡಿಕೊಂಡಿತ್ತು. ರಷ್ಯಾ 1948ರ ನರಮೇಧದ ನಿಯಮವನ್ನು ಉಲ್ಲಂಘಿಸಿದೆ ಎಂದು ಉಕ್ರೇನ್ ಆರೋಪಿಸಿತು.

"ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ರಷ್ಯಾ ವಿರುದ್ಧದ ತನ್ನ ಪ್ರಕರಣದಲ್ಲಿ ಉಕ್ರೇನ್ ಸಂಪೂರ್ಣ ಜಯ ಸಾಧಿಸಿದೆ. ದಾಳಿಯನ್ನು ತಕ್ಷಣವೇ ನಿಲ್ಲಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ. ಈ ಆದೇಶವು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಬದ್ಧವಾಗಿರುತ್ತದೆ. ರಷ್ಯಾ ತಕ್ಷಣ ಅದನ್ನು ಅನುಸರಿಸಬೇಕು. ಈ ಆದೇಶವನ್ನು ನಿರ್ಲಕ್ಷಿಸುವುದು ರಷ್ಯಾವನ್ನು ಮತ್ತಷ್ಟು ಪ್ರತ್ಯೇಕಿಸುತ್ತದೆ," ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಟ್ವೀಟ್ ಮಾಡಿದ್ದಾರೆ.

English summary
Who is the War Criminals in Russia’s invasion of Ukraine; know about War crimes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X