ಕೊನೆಗೂ ಸಿಕ್ಕ ಕರಿಮಣಿ ಮಾಲಿಕ: ಯಾರು ಗೊತ್ತಾ?
'ಕರಿಮಣಿ ಮಾಲಿಕ ನೀನಲ್ಲ' ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೆಂಡ್ ಕ್ರಿಯೇಟ್ ಮಾಡಿರುವ ಹಾಡು. ನೀವು ಇನ್‌ಸ್ಟಾಗ್ರಾಂ, ಟ್ವಿಟರ್, ಫೇಸ್‌ಬುಕ್ ಎಲ್ಲೇ ಹೋದರು ಈ ಹಾಡನ್ನು ನೋಡಬಹುದು, ಕೇಳಬಹುದು.
ಕರಿಮಣಿ ಮಾಲಿಕ ಹಾಡಿನ ಜೊತೆ ಮೋಯೆ ಮೋಯೆ ಸಾಂಗ್ ಅನ್ನು ರೀಮಿಕ್ಸ್ ಮಾಡಿದ್ದು ಅದು ಕೂಡ ವೈರಲ್ ಆಗಿತ್ತು. ಸಾವಿರ ಸಾವಿರ ಸಂಖ್ಯೆಯ ವಿಡಿಯೋಗಳನ್ನು ಇನ್‌ಸ್ಟಾಗ್ರಾಂ, ಟ್ವಿಟರ್ ನಲ್ಲಿ ಹರಿಬಿಡಲಾಗಿದೆ.

'ಬೆಳ್ಳುಳ್ಳಿ ಕಬಾಬ್' ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಮತ್ತೊಂದು ವಿಡಿಯೋ. ಚಂದ್ರು ಎನ್ನುವವರು ಯೂಟ್ಯೂಬ್ ಚಾನಲ್‌ನಲ್ಲಿ ಬೆಳ್ಳುಳ್ಳಿ ಕಬಾಬ್ ರೆಸಿಪಿ ವಿಡಿಯೋ ಮಾಡಿದ್ದರು. ರಾಹುಲ್ ಎನ್ನುವ ತಮ್ಮ ಸಹಾಯಕನನ್ನು ಅವರು ಕರೆದಿದ್ದ ರೀತಿ ಸಖತ್ ವೈರಲ್ ಆಗಿತ್ತು. ರಾವುಲ್ಲಾ ಎಂದು ಆಡುಭಾಷೆಯಲ್ಲಿ ಕರೆದಿದ್ದು ಟ್ರೆಂಡ್ ಹುಟ್ಟುಹಾಕಿತ್ತು.
ಈ ವಿಡಿಯೋ ಯಾವ ಮಟ್ಟಿಗೆ ವೈರಲ್ ಆಗಿದೆ ಎಂದರೆ. ಬೆಂಗಳೂರು ಬುಲ್ಸ್ ತಂಡದ ಆಟಗಾರರು ಕೂಡ ಬೆಳ್ಳುಳ್ಳಿ ಕಬಾಬ್ ಬಗ್ಗೆ ವಿಡಿಯೋ ಮಾಡಿದ್ದರು. ಎಕ್ಸ್‌ನಲ್ಲಿ ಹಂಚಿಕೊಂಡಿದ್ದ ಈ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿತ್ತು.
Vickypedia X Chandru and Rahulla
— Vicky Pedia (@Vickypedia_007) February 11, 2024
On public demand pic.twitter.com/LMzRdlph3e
ಕರಿಮಣಿ ಮಾಲಿಕ ರಾವುಲ್ಲಾ!!
ಕರಿಮಣಿ ಮಾಲಿಕ ನೀನಲ್ಲ ಹಾಡಿನ ಜೊತೆ ಬೆಳ್ಳುಳ್ಳಿ ಕಬಾಬ್ ರಾಹುಲ್ ಸೇರಿದರೆ ಹೇಗಿರುತ್ತೆ? ಇಂತಹದ್ದೇ ಒಂದು ಪ್ರಯೋಗವನ್ನು ವಿಕಿಪೀಡಿಯಾ ಎಂದೇ ಹೆಸರಾಗಿರುವ ಕಂಟೆಂಟ್ ಕ್ರಿಯೇಟರ್ ಹೊಸ ವಿಡಿಯೋ ಹಂಚಿಕೊಂಡಿದ್ದು ಸದ್ಯ ಭಾರಿ ವೈರಲ್ ಆಗುತ್ತಿದೆ.
ಕರಿಮಣಿ ಮಾಲಿಕ ನೀನಲ್ಲ ಅಂದಾಗ ಮತ್ಯಾರು ಎಂದು ಕೇಳಿದ ಪ್ರಶ್ನೆಗೆ ರಾವುಲ್ಲಾ ಎಂದು ಹೇಳುವ ತಮಾಷೆಯ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಈ ವಿಡಿಯೋ ವೈರಲ್ ಆದ ಬಳಿಕ ಚಂದ್ರು ಮತ್ತು ನಿಜವಾದ ರಾಹುಲ್ ಜೊತೆ ವಿಡಿಯೋ ಮಾಡುವಂತೆ ನೆಟ್ಟಿಗರು ಒತ್ತಾಯಿಸಿದ್ದರು.
ಈಗ ವಿಕಿಪೀಡಿಯಾ, ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ಮತ್ತು ರಾಹುಲ್ ಜೊತೆ ವಿಡಿಯೋ ಮಾಡಿದ್ದಾರೆ. ಚಂದ್ರು ಅವರ ಹೋಟೆಲ್‌ನಲ್ಲಿ ವಿಡಿಯೋ ಮಾಡಲಾಗಿದ್ದು, ಕರಿಮಣಿ ಮಾಲಿಕ ರಾವುಲ್ಲಾ ಎಂದು ಹಾಡಿ ಕುಣಿದಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು ಇಷ್ಟು ದಿನ ಹುಡುಕುತ್ತಿದ್ದ ಕರಿಮಣಿ ಮಾಲಿಕ ಕೊನೆಗೂ ಸಿಕ್ಕರೂ ಎಂದು ತಮಾಷೆಯಾಗಿ ಹೇಳಿದ್ದಾರೆ. ಇನ್ನೂ ಕೆಲವರು ವಿಕಿಪೀಡಿಯಾ ಅವರ ಕ್ರಿಯೇಟಿವಿಟಿಯನ್ನು ಶ್ಲಾಘಿಸಿದ್ದಾರೆ. ಕರಿಮಣಿ ಮಾಲಿಕ ಹಾಡು ವೈರಲ್ ಆದಾಗಿನಿಂದ ಹಲವು ವರ್ಷನ್‌ಗಳಲ್ಲಿ ರೀಮಿಕ್ಸ್ ಆಗಿದ್ದು, ಎನ್ನು ಯಾವ ತರ ರೀಮಿಕ್ಸ್ ಬರುತ್ತದೋ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications