ವಾಕಿಂಗ್, ಜಾಗಿಂಗ್ ಮಾಡಲು ಎಂತಹ ಶೂಗಳು ಬೆಸ್ಟ್: ಈ ಅಂಶಗಳ ಬಗ್ಗೆ ಗಮನವಿರಲಿ
ಬೆಳಗ್ಗೆಯ ಚುಮುಚುಮು ಚಳಿಯಲ್ಲಿ ಎದ್ದು ದೈನಂದಿನ ಕೆಲಸವನ್ನು ಮುಗಿಸಿ, ಡ್ರೆಸ್ ಹಾಕಿಕೊಂಡು, ವಾರ್ಮ್ ಅಪ್ ಆಗಿ ಹೆಂಡತಿಗೆ ಬಾಯ್ ಹೇಳಿ ವಾಕಿಂಗ್ ಹೋರುಡ್ತಾ ಇದ್ದೀರಾ. ಹಾಗಿದ್ದರೆ ನೀವು ವಾಕಿಂಗ್‌ಗೆ ಬಳಿಸುವ ಶೂಗಳು ಎಂತಹವು ಎಂದು ಪರೀಕ್ಷಿಸಿಕೊಳ್ಳಿ, ಇಲ್ಲದಿದ್ದರೆ ನಿಮಗೆ ಹಾನಿ ಆಗಬಹುದು.
ಸೂರ್ಯ ಪೂರ್ವದಲ್ಲಿ ತನ್ನ ಕಾರ್ಯವನ್ನು ಆರಂಭಿಸುವ ಮುನ್ನವೇ ಅದೆಷ್ಟೋ ಜನರು, ಮನೆ ಬಿಟ್ಟು ಪಾರ್ಕ್, ಗ್ರೌಂಡ್ ಹಾಗೂ ವಿವಿಧ ಸ್ಥಳಗಳಲ್ಲಿ ವಾಕಿಂಗ್ ಮಾಡುತ್ತಾ ಇರುತ್ತಾರೆ. ವಾಕಿಂಗ್ ಮಾಡುವುದು ನಿಜಕ್ಕೂ ಹೆಲ್ತ್‌ಗೆ ತುಂಬನೇ ಬೆಸ್ಟ್. ಇದರಿಂದ ಫ್ರೆಚ್ ಗಾಳಿ ನಮಗೆ ಸಿಗುತ್ತದೆ. ಅಲ್ಲದೆ ದಿನವಿಡೀ ರಿಲ್ಯಾಕ್ಸ್ ಆಗಿ ಇರಲು ಸಹಾಯ ಮಾಡುತ್ತದೆ.

ನಿಮಗೆ ಯಾವುದಾದರೂ ಕಾಯಿಲೆ ಇದ್ದಲ್ಲಿ ಇದನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ವೈದ್ಯರು ನಿಮಗೆ ಸೂಚಿಸುವ ಒಂದು ವ್ಯಾಯಾಮ ವಾಕಿಂಗ್. ಬೆಳಗ್ಗೆಯ ನಡಿಗೆ ದೇಹಕ್ಕೆ ತುಂಬ ಉಪಯುಕ್ತವಾಗಿದೆ. ಇನ್ನು ಕೆಲವರು ವಾಕಿಂಗ್ ಹಾಗೂ ಜಾಗಿಂಗ್ ಮಾಡ್ತಾರೆ. ಹಾಗಿದ್ದರೆ ಈ ಲೇಖದಲ್ಲಿ ವಾಕಿಂಗ್ ಹಾಗೂ ಜಾಗಿಂಗ್‌ಗೆ ಬಳಸುವ ಶೂಗಳು ಹೇಗಿರಬೇಕು ಎಂಬುದರ ಬಗ್ಗೆ ಚಿಕ್ಕದಾಗಿ ಡಿಟೇಲ್ ಇದೆ.
ಸಾಮಾನ್ಯವಾಗಿ ನಾವೆಲ್ಲಾ ವಾಕಿಂಗ್ ಹಾಗೂ ಜಾಗಿಂಗ್‌ಗೆ ಒಂದೇ ರೀತಿಯ ಶೂಗಳನ್ನು ಬಳಸುತ್ತೇವೆ. ಹೀಗೆ ಮಾಡುವುದರಿಂದ ಸಮಯ ಕಳೆದಂತೆ ಬೇರೆ ರೀತಿಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಹೀಗೆ ಮಾಡುವುದರಿಂದ ಕಾಲುಗಳಿಗೆ ನೋವನ್ನು ತರುತ್ತದೆ. ಓಡುವ ಬೂಟುಗಳನ್ನು ಹಾಕಿಕೊಂಡು ನಡೆಯುವುದು ಮತ್ತು ವಾಕಿಂಗ್ ಶೂಗಳನ್ನು ಹಾಕಿಕೊಂಡು ಓಡುವುದು ನರಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ.
ಹೀಗಾಗಿ ನಿಮ್ಮ ಬೂಟುಗಳು ನಿಮ್ಮ ವ್ಯಾಯಾಮಕ್ಕೆ ಸೂಕ್ತವೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಮರೆಯದಿರಿ? ನೀವು ಹೊಸ ಬೂಟುಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ಈ ಮಾಹಿತಿಯನ್ನು ತಿಳಿದುಕೊಳ್ಳಿ.

ವಾಕಿಂಗ್ ಶೂಗಳು ಹೇಗಿರಬೇಕು?
ವಾಕಿಂಗ್ ಮಾಡುವ ಬೂಟುಗಳು ರನ್ನಿಂಗ್ ಮಾಡುವ ಶೂಗಳಿಂದ ಸ್ವಲ್ಪ ಭಾರವಾಗಿರುತ್ತವೆ. ನೀವು ಒಳ್ಳೆಯ ವಾಕಿಂಗ್ ಮಾಡಲು ಹೊರಟರೆ ಭಾರ ಅಲ್ಲದ ಉತ್ತಮ ಮೆತ್ತನೆಯ ಬೂಟುಗಳನ್ನು ಖರೀದಿಸಿ. ಇದು ಪಾದಗಳಲ್ಲಿ ಸುಡುವ ಸಂವೇದನೆ ಅಥವಾ ನೋವನ್ನು ಕಡಿಮೆ ಮಾಡುತ್ತದೆ.
ರನ್ನಿಂಗ್ ಶೂಗಳಂತೆ ವಾಕಿಂಗ್ ಶೂಗಳ ಮಿಡ್ಲ್ ಸೋಲ್ ಚೆನ್ನಾಗಿರಬೇಕು. ನೀವು ವಾಕಿಂಗ್ ಮಾಡುವ ಕೊಂಚ ವೇಗವಾಗಿ ನಡೆದರೂ, ಇವುಗಳು ನಿಮಗೆ ಯಾವ ತೊಂದರೆಯನ್ನು ಸಹ ಮಾಡುವುದಿಲ್ಲ.
ವಾಕಿಂಗ್‌ಗೆ ಹಾಕಿಕೊಳ್ಳುವ ಶೂಗಳು ಹೀಲ್ಸ್ ಟೈಪ್ ಇರಲೇ ಬಾರದು. ಹೀಗೆ ಇದ್ದಲ್ಲಿ ವಾಕಿಂಗ್ ಮಾಡುವಾಗ ಹೆಚ್ಚು ದೂರವನ್ನು ನೀವು ಕ್ರಮಿಸಲು ಪ್ರಯತ್ನಿಸುತ್ತಿದ್ದರೆ ತೊಂದರೆಯಾಗುತ್ತದೆ. ವಾಕಿಂಗ್‌ಗೆ ಹೀಲ್ಸ್ ಇಲ್ಲದ ಶೂಗಳನ್ನೇ ಬಳಸಿ. ಇವು ನಿಮ್ಮ ಆರೋಗ್ಯಕ್ಕೆ ಸಹಾಯಕ.

ರನ್ನಿಂಗ್ ಶೂಗಳು ಹೇಗಿರಬೇಕು?
ರನ್ನಿಂಗ್‌ಗೆ ಉಪಯೋಗಿಸುವ ಬೂಟುಗಳು ತೂಕದಲ್ಲಿ ಹಗುರವಾಗಿರಬೇಕು. ಇದರಿಂದ ನೀವು ಅವುಗಳನ್ನು ಧರಿಸಿ ಸುಲಭವಾಗಿ ಓಡಬಹುದು. ಕಡಿಮೆ ತೂಕದ ಬೂಟುಗಳನ್ನು ಧರಿಸಿ ಓಡುವುದು ಪಾದಗಳ ಮೇಲೆ ಕಡಿಮೆ ಬೀರುತ್ತದೆ ಮತ್ತು ನಿಮಗೆ ಆಯಾಸವನ್ನು ಕಡಿಮೆ ಮಾಡುತ್ತದೆ.
ವಾಕಿಂಗ್‌ಗೆ ಬಳಸುವ ಶೂಗಳಂತೆ ರನ್ನಿಂಗ್ ಶೂಗಳಿಗೂ ಹೀಲ್ಸ್ ಹೊಂದಿರಲೇ ಬಾರದು. ಫ್ಲ್ಯಾಟ್ ಆಗಿದ್ದರೆ ಉತ್ತಮ. ಹೀಲ್ಸ್ ಹೊಂದಿರುವ ಶೂಗಳು ಪಾದಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತವೆ. ಮತ್ತು ಜಾಗಿಂಗ್ ಮಾಡುವಾಗ ಬೇಗನೆ ದಣಿವಾಗುತ್ತದೆ.
ವಾಕಿಂಗ್ ಶೂಗಳಂತೆ ಜಾಗಿಂಗ್ ಶೂಗಳ ಮಿಡ್ಲ್ ಸೋಲ್‌ನಲ್ಲಿ ಕುಷನ್ ಇದ್ದರೆ, ಓಡಲು ನಿಮಗೆ ಸಹಾಯಕವಾಗುತ್ತದೆ. ಇವುಗಳು ಕಾಲುಗಳ ನರಗಳ ಮೇಲೆ ಕಡಿಮೆ ಒತ್ತಡವನ್ನು ಇರಿಸಲಾಗುತ್ತದೆ. ಜಾಗಿಂಗ್ ಶೂ ಹೆಚ್ಚು ಕುಶನ್ ಅನ್ನು ಹೊಂದಿರುತ್ತವೆ, ಇದರಿಂದ ನಿಮ್ಮ ಸಮತೋಲನವನ್ನು ಕಾಪಾಡಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ.
ಜಾಗಿಂಗ್ ಶೂಗಳ ಮುಂಭಾಗದಲ್ಲಿ ಹೆಚ್ಚು ಫ್ಲೆಕ್ಸಿಬಲಿಟಿ ನೀಡಲಾಗುತ್ತದೆ. ಇದರಿಂದ ನಿಮಗೆ ವೇಗವಾಗಿ ಓಡಲು ಸಹಾಯ ಮಾಡುತ್ತದೆ. ಅಂತಹ ಬೂಟುಗಳು ಜಾಗಿಂಗ್ ಮಾಡುವಾಗ ಬೀಳದಂತೆ ನಿಮ್ಮನ್ನು ರಕ್ಷಿಸಲು ಸಹಾಯವಾಗುತ್ತವೆ.
ವಾಕಿಂಗ್ ಮಾಡುವಾಗ ಶೂ ಹಾಕಿಕೊಳ್ಳುವುದ ಬೆಸ್ಟ್.. ಕಾಯಿಲೆ ಇದ್ದವರು ವಾಕಿಂಗ್ ಏನಾದ್ರೂ ಚುಚ್ಚಿದರೆ, ಕಾಲಿಗೆ ಪೆಟ್ಟಾದರೆ, ಗುಣವಾಗುವುದು ಕೊಂಚ ಲೇಟ್ ಹೀಗಾಗಿ ವಾಕಿಂಗ್ ಮಾಡುವಾಗ ಶೂ ಹಾಕಿಕೊಳ್ಳುವುದು ಉತ್ತಮ.












Click it and Unblock the Notifications