• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅದೊಂದು ನಿರ್ಧಾರ ದಾಂಪತ್ಯದಲ್ಲಿ ಸಮಸ್ಯೆ ತರಬಹುದು!

|

ಯುವಕ, ಯುವತಿಯರ ಮನಸ್ಥಿತಿ ಈಗ ಮೊದಲಿನಂತಿಲ್ಲ. ವಯಸ್ಸಿಗೆ ಬರುತ್ತಿದ್ದಂತೆಯೇ ಮದುವೆ ಮಾಡಿಕೊಳ್ಳಬೇಕು ಎಂಬುದು ಕಡಿಮೆಯಾಗಿದೆ. ಬದಲಾಗಿ ಬದುಕಿನಲ್ಲಿ ಸೆಟ್ಲ್ ಆಗಬೇಕು, ಆ ನಂತರ ಮದುವೆಯಾಗುತ್ತೇವೆ ಎನ್ನುವವರೇ ಹೆಚ್ಚು. ಹೆಣ್ಣು ಮಕ್ಕಳು ಕೂಡ ತಮಗೆ ಸಮನಾದ ಸಂಗಾತಿಯನ್ನು ಬಯಸುತ್ತಾರೆ. ಹೀಗಾಗಿ ಎಲ್ಲವೂ ಹೊಂದಾಣಿಕೆಯಾಗುವ ವರ-ವಧು ಸಿಗುವ ವೇಳೆಗೆ ವಯಸ್ಸು ಕೂಡ ಶರವೇಗದಲ್ಲಿ ಸಾಗುತ್ತಿರುತ್ತದೆ.

ಬದಲಾದ ಲೈಫ್ ಸ್ಟೈಲ್‍ಗಳಿಂದಾಗಿ ಮದುವೆಯಾದರೆ ಬದುಕಿನಲ್ಲಿ ಎಂಜಾಯ್ ಮಾಡುವುದಕ್ಕೆ ಆಗಲ್ಲ. ಹಾಗಾಗಿ ಒಂದೆರಡು ವರ್ಷ ತಡವಾಗಿ ಮದುವೆಯಾಗುತ್ತೇವೆ ಎಂಬ ನಿರ್ಧಾರಗಳನ್ನು ಹೆಚ್ಚಿನವರು ಮಾಡುತ್ತಾರೆ. ಇಂತಹ ಆಲೋಚನೆಗಳು ಹುಡುಗ ಮತ್ತು ಹುಡುಗಿಯರಲ್ಲೂ ಇರುತ್ತದೆ. ಇದೊಂದೇ ಕಾರಣವಲ್ಲ ಇನ್ನೂ ಅನೇಕ ಕಾರಣಗಳಿಂದ ಹುಡುಗ ಮತ್ತು ಹುಡುಗಿಯರು ತಡವಾಗಿ ಮದುವೆಯಾಗುತ್ತಿದ್ದಾರೆ.

ಆಹಾರ ಸೇವನೆಯಲ್ಲಿನ ಅಶಿಸ್ತು ಆರೋಗ್ಯಕ್ಕೆ ಮಾರಕ!

ಹೆಚ್ಚಾಗುತ್ತಿದೆ ವಯಸ್ಸು ಮೀರಿದ ಮದುವೆ

ಹೆಚ್ಚಾಗುತ್ತಿದೆ ವಯಸ್ಸು ಮೀರಿದ ಮದುವೆ

ಮದುವೆಯಾದ ಮೇಲೆ ಇಬ್ಬರೂ ಕೈತುಂಬಾ ದುಡಿಯಬೇಕು, ಐಷಾರಾಮಿ ಜೀವನ ನಡೆಸಬೇಕು, ಬದುಕಿನಲ್ಲಿ ಯಾವುದೇ ರೀತಿಯ ಆರ್ಥಿಕ ತೊಂದರೆಗಳು ಬರಬಾರದು ಎಂದು ಯೋಚಿಸುವವರೇ ಜಾಸ್ತಿ. ಹೀಗಾಗಿ ಅದಕ್ಕೊಸ್ಕರ ಆರ್ಥಿಕ ಸ್ಥಿತಿಯನ್ನು ಸದೃಢ ಮಾಡಿಕೊಂಡಿರುತ್ತಾರೆ. ಆದರೆ ಎಲ್ಲೋ ಒಂದು ಕಡೆ ಅವರಿಗೆ ತಮ್ಮ ವಯಸ್ಸು ಮೀರುತ್ತಿದೆ ಇದರಿಂದ ಸಂತಾನೋತ್ಪತ್ತಿ ವಿಚಾರದಲ್ಲಿ ತೊಂದರೆಯಾಗುತ್ತಿದೆ ಎಂಬುದು ಅರಿವೆಗೆ ಬರುವುದೇ ಇಲ್ಲ. ಇದೊಂದು ದಾಂಪತ್ಯ ಜೀವನದ ಸಮಸ್ಯೆಯಾಗಿಯೂ ಕಾಡಿದರೆ ಅಚ್ಚರಿಯಿಲ್ಲ.

ಡಾ.ದೇವಿಕಾ ಗುಣಶೀಲ ಅವರು ಹೇಳುವುದೇನು?

ಡಾ.ದೇವಿಕಾ ಗುಣಶೀಲ ಅವರು ಹೇಳುವುದೇನು?

ಇಷ್ಟಕ್ಕೂ ವಯಸ್ಸು ಮೀರಿದ ಬಳಿಕ ಮಗುವನ್ನು ಪಡೆಯುತ್ತೇವೆ ಎಂಬ ನಿರ್ಧಾರಕ್ಕೆ ಬಂದರೆ ಅಂಥವರು ಎಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂಬುದರ ಬಗ್ಗೆ ಖ್ಯಾತ ವೈದ್ಯರಾದ ಡಾ.ದೇವಿಕಾ ಗುಣಶೀಲ ಅವರು ಒಂದಷ್ಟು ಮಾಹಿತಿಯನ್ನು ನೀಡಿದ್ದಾರೆ. ಅವರು ಹೇಳುವಂತೆ, ""ಪುರುಷರಲ್ಲಿ ವಯಸ್ಸಾಗುತ್ತಿದ್ದಂತೆ ವಂಶಾವಳಿಯ ಮೇಲೆ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಅನೇಕ ಅಧ್ಯಯನಗಳಾಗಿವೆ. ಅಂದರೆ, ತಂದೆಗೆ ವಯಸ್ಸಾಗುತ್ತಿದ್ದಂತೇ ಹುಟ್ಟುವ ಮಗುವಿಗೆ ಮುಂದೆ ಮಾರ್ಫನ್ ಸಿಂಡ್ರೋಮ್, ಪಾಲಿಫಾರ್ಮೇಶನ್ ಇನ್ ಲಾರ್ಜ್ ಬಾವೆಲ್ ಮುಂತಾದ ಸಿಂಡ್ರೋಮ್‍ಗಳು ಕಾಣಿಸಿಕೊಳ್ಳಬಹುದಂತೆ. ಈ ವಿಷಯವನ್ನು ಆಳವಾಗಿ ನೋಡುವುದಾದರೆ, ತಂದೆಯಾಗುವ ಪ್ರಕ್ರಿಯೆಯಲ್ಲಿ ವಯಸ್ಸಾದಂತೆ ಹುಟ್ಟುವ ಮಕ್ಕಳಲ್ಲಿ ಇಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಬದುಕಿನಲ್ಲಿ ನೆಮ್ಮದಿಯಾಗಿರಬೇಕಾದರೆ ಏನು ಮಾಡಬೇಕು?

ಮಕ್ಕಳಲ್ಲಿ ಅನುವಂಶೀಯ ರೋಗ

ಮಕ್ಕಳಲ್ಲಿ ಅನುವಂಶೀಯ ರೋಗ

ಅಧ್ಯಯನದ ಪ್ರಕಾರ 30-34ವಯಸ್ಸಿನ ಅವಧಿಯಲ್ಲಿ ತಂದೆಯಾಗುವವರ ಮಕ್ಕಳಲ್ಲಿ 1000ಕ್ಕೆ ಒಂದು ಮಗುವಿಗೆ, 40-45ವಯಸ್ಸಿನಲ್ಲಿ ತಂದೆಯಾದರೆ ಅಂಥವರಲ್ಲಿ 1000ಕ್ಕೆ 4 ಅಥವಾ 5 ಮಕ್ಕಳಿಗೆ ಹಾಗೂ 45 ವಯಸ್ಸಿನ ನಂತರ ತಂದೆಯಾದರೆ 1000ಕ್ಕೆ 37 ಮಕ್ಕಳಿಗೆ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆಯಂತೆ. ಮಕ್ಕಳಲ್ಲಿ ಅನುವಂಶೀಯವಾಗಿ ಕಾಣಿಸಿಕೊಳ್ಳುವ ಅನೇಕ ತೊಂದರೆಗಳಿಗೆ ತಂದೆಯಾಗುವಾಗಿನ ವಯಸ್ಸು 40 ದಾಟಿರುವುದೇ ಮುಖ್ಯ ಕಾರಣವಂತೆ.

ಮಹಿಳೆಯರಲ್ಲಿ ಕ್ಷೀಣಿಸುವ ಅಂಡಾಣುವಿನ ಗುಣಮಟ್ಟ

ಮಹಿಳೆಯರಲ್ಲಿ ಕ್ಷೀಣಿಸುವ ಅಂಡಾಣುವಿನ ಗುಣಮಟ್ಟ

ಮಹಿಳೆಯರಲ್ಲಿ 25 ವರ್ಷ ವಯಸ್ಸಿನ ನಂತರ ಉತ್ಪತ್ತಿಯಾಗುವ ಅಂಡಾಣುವಿನ ಗುಣಮಟ್ಟ ಕಡಿಮೆಯಾಗುತಾ ಬರುತ್ತದೆ. ಗರ್ಭದಲ್ಲಿನ ಭ್ರೂಣದ ಮೊದಲ ಹಂತವು ಋತುಚಕ್ರದಲ್ಲಿ ನಷ್ಟವಾಗುವ ಪ್ರಮಾಣ ಹೆಚ್ಚುತ್ತದೆ. ಇದೂ ಒಂದು ರೀತಿಯಲ್ಲಿ ಗರ್ಭಪಾತವೇ ಆಗಿರುತ್ತದೆ. ಋತುಮತಿಯಾದ ಸಂದರ್ಭದಲ್ಲಿ ರಕ್ತಸ್ರಾವದ ಜೊತೆಗೆ ಈ ಬಗೆಯ ಗರ್ಭಪಾತ ಸಂಭವಿಸಿರುತ್ತದೆ. ಸಾಮಾನ್ಯವಾಗಿ ಋತುಚಕ್ರದ 17-18ನೇ ದಿನ ಈ ಪ್ರಕ್ರಿಯೆ ಸಂಭವಿಸಿರುತ್ತದೆ. ಮಹಿಳೆಯರ ಅರಿವಿಗೇ ಬಾರದಂತೆ ಇದು ನಡೆಯುತ್ತದೆ. ಉತ್ಪತ್ತಿಯಾದ ಭ್ರೂಣ ಗರ್ಭಪಾತವಾಗುವ ಅಪಾಯವು ಕಿರಿ ವಯಸ್ಸಿನ ಮಹಿಳೆಯರಲ್ಲಿ ಶೇ.24ರಷ್ಟು ಮತ್ತು 35 ವರ್ಷ ದಾಟಿದ ಮಹಿಳೆಯರಲ್ಲಿ ಶೇ.38ರಷ್ಟು ಇರುತ್ತದೆ.

ಮಹಿಳೆಯರಲ್ಲಿನ ಬಂಜೆತನ

ಮಹಿಳೆಯರಲ್ಲಿನ ಬಂಜೆತನ

ಅಂಡಾಣುಗಳ ಅಂಶವಷ್ಟೇ ಅಲ್ಲದೇ, ಗರ್ಭದ ಅಂಶಗಳೂ ಕೂಡ ವಯಸ್ಸಾದ ಮಹಿಳೆಯರಲ್ಲಿನ ಬಂಜೆತನದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಅಂಡಾಣುಗಳನ್ನು ಕಿರಿ ವಯಸ್ಸಿನ ಮಹಿಳೆಯರಿಂದ ಪಡೆದು, ವಿಭಿನ್ನ ವಯೋಮಾನದ ಮಹಿಳೆಯರ ಗರ್ಭಾಶಯಕ್ಕೆ ದಾನ ಮಾಡಿದಾಗ ಫಲಿತಾಂಶ ವಿಭಿನ್ನವಾಗಿಯೇ ಇರುತ್ತದೆ. ಉದಾಹರಣೆಗೆ 40 ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದ ಮಹಿಳೆಯರಲ್ಲಿ ಶೇ.10ರಷ್ಟು ಗರ್ಭ ಕಟ್ಟುವಿಕೆ ಯಶಸ್ವಿಯಾದರೆ, 35ಕ್ಕಿಂತ ಸಣ್ಣ ವಯಸ್ಸಿನ ಮಹಿಳೆಯರಲ್ಲಿ ಇದರ ಯಶಸ್ಸಿನ ಪ್ರಮಾಣ ಶೇ.23ರಷ್ಟು. ರೂಢಿಗತವಾಗಿ ಹೇಳುವುದಾದರೆ, ಮಹಿಳೆ ಮೊದಲ ಬಾರಿ ಗರ್ಭ ಧರಿಸುವಾಗ 30 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಬಾರದು.

ಫಲವತ್ತತೆ ಕಾಪಾಡಿಕೊಳ್ಳಲು ಏನು ಮಾಡಬೇಕು?

ಫಲವತ್ತತೆ ಕಾಪಾಡಿಕೊಳ್ಳಲು ಏನು ಮಾಡಬೇಕು?

ಈಗಿನ ಮಹಿಳೆಯರು ಮಹತ್ವಾಕಾಂಕ್ಷಿಗಳಾಗಿದ್ದಾರೆ, ವೃತ್ತಿಪರರಾಗುತ್ತಿದ್ದಾರೆ. ಮಗುವನ್ನು ಹೆರುವುದು ಮತ್ತು ಅದನ್ನು ನೋಡಿಕೊಳ್ಳುವುದು ದೊಡ್ಡ ಭಾರ ಎನ್ನುವ ಭಾವನೆಯನ್ನು ಬೆಳೆಸಿಕೊಂಡಿದ್ದಾರೆ. ಮಗುವನ್ನು ನೋಡಿಕೊಳ್ಳುವುದೆಂದರೆ ತಮ್ಮ ವೃತ್ತಿ ಜೀವನಕ್ಕೆ ತೊಂದರೆ ಹಾಗೂ ಆದಾಯಕ್ಕೂ ತೊಂದರೆ ಎನ್ನುವ ಭಾವನೆ ಹೆಚ್ಚುತ್ತಿದೆ. ವೃತ್ತಿಪರ ಮಹಿಳೆಯರು ತಮ್ಮ ಕುಟುಂಬದ ವಿಸ್ತರಣೆ ತಡವಾಗಲಿ ಎಂದು ಬಯಸಿದರೆ ಅಂಥವರು ತಮ್ಮ ದೇಹಾರೋಗ್ಯವನ್ನು (ಫಲವತ್ತತೆಯನ್ನು) ಸರಿಯಾಗಿ ಕಾಪಾಡಿಕೊಳ್ಳಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಬೊಜ್ಜು ಬೆಳೆಸಿಕೊಳ್ಳಬಾರದು. ಏಕೆಂದರೆ ಬೊಜ್ಜು ಫಲವತ್ತತೆಯ ವೈರಿ. ಬೊಜ್ಜು ಇರುವ ಮಹಿಳೆಯರಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಿ ಅದು ತಡವಾಗಿ ಗರ್ಭಧಾರಣೆ ಮಾಡಲು ಇಚ್ಛಿಸುವವರಿಗೆ ಅಡ್ಡಿ ಉಂಟುಮಾಡಬಲ್ಲದು. ಧೂಮಪಾನ ಕೂಡ ಮಾರಕ.

ಋತುಚಕ್ರದ ಮೇಲೆ ಅಡ್ಡ ಪರಿಣಾಮ

ಋತುಚಕ್ರದ ಮೇಲೆ ಅಡ್ಡ ಪರಿಣಾಮ

ಹಾಗೆಯೇ ಅತಿಯಾದ ಮದ್ಯ ಸೇವನೆಯೂ ಋತುಚಕ್ರದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಅತಿಯಾದ ಕಾಫಿ ಸೇವನೆಯೂ ಕೂಡ ತೊಂದರೆದಾಯಕ. ಇದು ಮಹಿಳೆಯರ ಫಲವತ್ತತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಜೊತೆಗೇ ಪದೇ ಪದೇ ಗರ್ಭಪಾತ ಆದರೆ ಅಥವಾ ಮಾಡಿಸಿಕೊಂಡರೂ ಮುಂದೆ ಹುಟ್ಟುವ ಮಗುವಿಗೆ ತೊಂದರೆಯಾಗುತ್ತದೆ. ಅನೇಕ ಬಾರಿ ವೃತ್ತಿಪರ ಕಾರಣಗಳಿಗೆ ಮದುವೆಯನ್ನು ಮುಂದೂಡಿದರೆ ಅದು ವಿವಾಹೇತರ ಸಂಬಂಧಗಳಲ್ಲಿ ಅಂತ್ಯವಾಗುವ ಸಾಧ್ಯತೆಗಳಿರುತ್ತವೆ. ಇದು ಅನೇಕ ದೈಹಿಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಇವೆಲ್ಲ ಕಾರಣಗಳಿಗೆ ಗರ್ಭಧಾರಣೆ ಸಮಸ್ಯೆ ಎದುರಾಗಬಹುದು.

ಕುಟುಂಬ ಯೋಜನೆ ಕ್ರಮ ಅನುಸರಿಸದಿರಿ

ಕುಟುಂಬ ಯೋಜನೆ ಕ್ರಮ ಅನುಸರಿಸದಿರಿ

ವಯಸ್ಸಾದಂತೆ ಗರ್ಭ ಧರಿಸಲು ಅಥವಾ ತಂದೆಯಾಗಲು ಬೇಕಾದ ಫಲವತ್ತತೆ ಕಡಿಮೆಯಾಗುತ್ತದೆ ಎಂಬುದು ಸತ್ಯ. 35 ವರ್ಷಕ್ಕಿಂತ ತಡವಾಗಿ ಮದುವೆಯಾಗುವ ಮಹಿಳೆಯರು ಕುಟುಂಬ ಯೋಜನೆಯ ಯಾವುದೇ ಕ್ರಮವನ್ನು ಅನುಸರಿಸದೇ ಇರುವುದು ಒಳ್ಳೆಯದು. ಇಂತಹ ಮಹಿಳೆಯರು ಮದುವೆಯಾದ 6 ತಿಂಗಳಲ್ಲಿ ಗರ್ಭವತಿಯರಾಗದೇ ಇದ್ದರೆ ಕೂಡಲೇ ತಜ್ಞರನ್ನು ಸಂಪರ್ಕಿಸಬೇಕು. ಇಂತಹ ಸನ್ನಿವೇಶದಲ್ಲಿ ಚಿಕಿತ್ಸೆ ಬೇಕಾಗಬಹುದು. ಈ ಸನ್ನಿವೇಶಗಳಲ್ಲಿ ಅಂಡಾಣು ವೃದ್ಧಿಗೆ ಸೂಕ್ತ ಚಿಕಿತ್ಸೆ ಹಾಗೂ ಅಗತ್ಯ ಬಿದ್ದರೆ ಕೃತಕ ಗರ್ಭಧಾರಣೆಯನ್ನೂ ಮಾಡುವ ಸಂದರ್ಭ ಬರಬಹುದು ಆದ್ದರಿಂದ ಎಚ್ಚರವಾಗಿರುವುದು ಒಳಿತು.

English summary
Today's youth community is making decisions about getting married a couple years late.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X