WhatsApp: ಬಳಕೆದಾರರಿಗೆ ಹೊಸ ಫೀಚರ್ ಪರಿಚಯಿಸಿದ ವಾಟ್ಸಾಪ್
ವಿಶ್ವದಾದ್ಯಂತ ಬಳಕೆಯಲ್ಲಿರುವ ಮೆಟಾ ಕಂಪನಿಯ ವಾಟ್ಸಾಪ್ (WhatsApp) ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಹೊಸ ಫೀಚರ್‌ವೊಂದನ್ನು ಪರಿಚಯಿಸಿದೆ. ಈ ಮೂಲಕ ವಾಟ್ಸಾಪ್ ಬಳಕೆದಾರರಿಗೆ ಸಿಹಿಸುದ್ದಿ ನೀಡಿದೆ. ಇನ್ನು ಶೀಘ್ರದಲ್ಲಿಯೇ ವಾಟ್ಸಾಪ್ ಕ್ವಿಕ್ ಟ್ರಾನ್ಸ್ಲೇಷನ್ (Quick translation) ಎಂಬ ಹೊಸ ಫೀಚರ್ ಪರಿಚಯಿಸುವುದಾಗಿ ಮೆಟಾ ಪ್ರಕಟಿಸಿದೆ.
ಇದರಿಂದ ಭಾಷಾ ಅಡೆತಡೆಗಳು ಮುಕ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಫೀಚರ್‌ನಿಂದ ಹಲವು ಭಾಷಿಕರೊಂದಿಗೆ ಸುಲಭವಾಗಿ ಮಾತನಾಡಬಹುದು ಎಂದು ಹೇಳಲಾಗಿದೆ. ಬಳಕೆದಾರರ ಅನುಕೂಲಕ್ಕಾಗಿ ವಾಟ್ಸಾಪ್ ಈ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ಹೊಸ ಫೀಚರ್‌ನಿಂದಾಗಿ ಕೋಟ್ಯಂತರ ಬಳಕೆದಾರರಿಗೆ ಅನುಕೂಲ ಆಗಲಿದೆ.

ಸಾಮಾನ್ಯವಾಗಿ ಈಗ ವಾಟ್ಸಾಪ್‌ನಲ್ಲಿ ಚಾಟ್ ಮಾಡುವಾಗ ಭಾಷೆ ಬಹಳ ಮುಖ್ಯ. ಸದ್ಯ ಟೈಪ್, ಆಡಿಯೋ, ವಿಡಿಯೋ ಕಾಲ್ ಮೂಲಕ ವಾಟ್ಸಾಪ್‌ನಲ್ಲಿ ಸಂದೇಶ ಕಳಿಸಬಹುದು. ಇದರಲ್ಲಿ ಭಾಷೆ ಕೂಡ ಮಹತ್ವದ್ದಾಗಿದೆ. ಈಗ ನಾವು ಬೇರೆ ಭಾಷೆಯವರೊಂದಿಗೆ ಮಾತನಾಡಬೇಕೆಂದರೆ ಅಥವಾ ಅವರ ಭಾಷೆಯಲ್ಲಿ ಚಾಟ್ ಮಾಡುವುದು ಕಷ್ಟಸಾಧ್ಯ. ಆದರೆ ಈ ಫೀಚರ್‌ನಿಂದಾಗಿ ಬೇರೆ ಭಾಷೆಗಳು ಕೂಡ ಸುಲಭವಾಗಲಿದೆ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ಬೇರೆ ಭಾಷೆಯವರ ಜೊತೆ ಮಾತನಾಡಲು ಟ್ರಾನ್ಸ್‌ಲೇಟ್ ಆಯ್ಕೆಯನ್ನು ಬಳಸಿಕೊಳ್ಳುತ್ತೇವೆ. ಅಲ್ಲಿಂದ ಅಕ್ಷರಗಳನ್ನು ಕೂಡಿಸಿಕೊಂಡು ಚಾಟ್ ಮಾಡುವ ವೇಳೆಗೆ ಸಾಕಾಗಿರುತ್ತೆ. ಹಾಗಾಗಿ ಆಪ್ ಮೂಲಕ ಅನುವಾದ ಮಾಡುವುದು ಸವಾಲಿನ ಕೆಲಸವಾಗಿದೆ. ಈ ಉದ್ದೇಶದೊಂದಿಗೆ ತನ್ನ ಬಳಕೆದಾರರಿಗೆ ಅನುಕೂಲ ಮಾಡಿಕೊಡಲು ಈ ಹೊಸ ಫೀಚರ್ ಅನ್ನು ಪರಿಚಯಿಸುತ್ತಿದೆ.
ಈ ಕ್ವಿಕ್ ಟ್ರಾನ್ಸ್ಲೇಷನ್ ಫೀಚರ್ ಮೂಲಕ ವಾಟ್ಸಾಪ್‌ನಲ್ಲೇ ಸುಲಭವಾಗಿ ಅನುವಾದ ಮಾಡಿಕೊಳ್ಳಬಹುದು. ಬೇರೆ ಭಾಷೆಯಲ್ಲೇ ಏನೇ ಮಾಹಿತಿ ಬಂದರೂ ಅದನ್ನು ಅನುವಾದ ಮಾಡಿಕೊಂಡು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಅನುವಾದಕ್ಕೆ ಬೇರೆ ಆಪ್‌ಗಳ ಮೊರೆ ಹೋಗದೆ ವಾಟ್ಸಾಪ್‌ನಲ್ಲೇ ಅನುವಾದ ಮಾಡಿಕೊಳ್ಳಬಹುದು ಎಂದು ಹೇಳಿದೆ.

ಸದ್ಯ ವಾಟ್ಸಾಪ್‌ನಲ್ಲಿ ಈ ಕ್ವಿಕ್ ಟ್ರಾನ್ಸ್ಲೇಟರ್ ಬಳಸಲು ಕೆಲವು ಲ್ಯಾಂಗ್ವೇಜ್ ಪ್ಯಾಕ್ಸ್ ಅನ್ನು ಬಳಕೆದಾರರು ಡೌನ್‌ಲೋಡ್ ಮಾಡಿಕೊಳ್ಳಬೇಕು. ಈ ಮೂಲಕ ವಾಟ್ಸಾಪ್‌ಗೆ ಬರುವ ಚಾಟ್ ಸಂದೇಶಗಳು ಅಥವಾ ಇನ್ನಿತರೆ ಪಠ್ಯವನ್ನು ಅದರ ಭಾಷೆಯನ್ನು ಪತ್ತೆ ಹಚ್ಚಲಿದೆ. ಇದರಿಂದ ಭಾಷಾ ಅನುವಾದ ಕೂಡ ಸುಲಭವಾಗಲಿದೆ ಎಂದು ಹೇಳಲಾಗುತ್ತಿದೆ.
ಜನವರಿ 1ರಿಂದ ತನ್ನ ಮೆಸೇಜಿಂಗ್ ಆಪ್‌ನಲ್ಲಿ ದೊಡ್ಡ ಬದಲಾವಣೆ ಮಾಡಲು ಮುಂದಾಗಿದೆ. ಇದಾದ ಬಳಿಕ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಇದು ಕೆಲವು ಆಂಡ್ರಾಯ್ಡ್ ಫೋನ್‌ಗಳಲ್ಲಿ ಮಾತ್ರವೇ ಈ ಬದಲಾವಣೆ ಆಗಲಿದೆ.
ಹೊಸ ವರ್ಷದಿಂದ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಹಾಗೂ ಹಳೆಯ ಆವೃತ್ತಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಕೆಲಸ ಮಾಡುವುದಿಲ್ಲ ಎಂದು ಶಾಕ್ ನೀಡಿದೆ. ಒಂದು ವೇಳೆ ನಿಮ್ಮ ಫೋನ್‌ನಲ್ಲಿ ಕೂಡ ಇದೇ ರೀತಿಯ ಹಳೆಯ ವರ್ಷನ್‌ಗಳು ರನ್ ಆಗುತ್ತಿದ್ದರೆ, ಜನವರಿ ಒಂದರಿಂದ ಅಪ್‌ಗ್ರೇಡ್ ಆಗುವಂತೆ ತಿಳಿಸಿದೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications