Get Updates
Get notified of breaking news, exclusive insights, and must-see stories!

ಮಕ್ಕಳು ಬರೆದ ಲವ್ ಲೆಟರ್ ಸಿಕ್ಕರೆ ಅಪ್ಪ-ಅಮ್ಮ ಮಾಡಬೇಕಾದ್ದು ಇಷ್ಟೇ

ಬಾಲ್ಯವನ್ನು ದಾಟಿ ಪ್ರೌಢಾವಸ್ಥೆಗೆ ತಲುಪಿರುವ ಮಕ್ಕಳು (10-15 ವರ್ಷದವರು) ಪ್ರೇಮ ಪತ್ರ ಬರೆಯುವ ಸಂಭವವಿರುತ್ತದೆ. ಎಲ್ಲ ಮಕ್ಕಳು ಪತ್ರ ಬರೆಯುವುದಿಲ್ಲ. ಕೆಲವು ಮಕ್ಕಳು ಬರೆಯಬಹುದು. ಹಾಗೆಯೇ, ಈ ಪತ್ರವನ್ನು ಕಾಗದದಲ್ಲಿ ಬರೆದಿರಬಹುದು ಅಥವಾ ಡಿಜಿಟಲ್ ಲೆಟರ್ ಕೂಡ ಆಗಿರಬಹುದು. ಆಕಸ್ಮಿಕವಾಗಿ ನಿಮ್ಮ ಮಗ ಅಥವಾ ಮಗಳ ರೂಂ ಅನ್ನು ಕ್ಲೀನ್ ಮಾಡುವಾಗ, ಇಲ್ಲವೇ ಮೊಬೈಲ್‌, ಲ್ಯಾಪ್‌ಟಾಪ್‌ನ ಒಂದು ಫೈಲ್‌ನಲ್ಲಿ ನಿಮಗೆ ಪ್ರೇಮ ಪತ್ರ ಸಿಗಬಹುದು. ಇಂತಹ ಸಂದರ್ಭದಲ್ಲಿ ಕೂಡಲೇ ನಿಮಗೆ ಆಘಾತವೂ ಆಗಬಹುದು. ಸಿಟ್ಟು, ಗಾಬರಿ ಮತ್ತು ಆತಂಕಗಳಿಗೂ ಒಳಗಾಗಬಹುದು. ಆಗ ನಿಮಗೆ ಏನು ಮಾಡಬೇಕೆಂದು ತೋಚದೆ ಮತ್ತಷ್ಟು ಒತ್ತಡವಾಗಬಹುದು. (ಬರಹ: ಭವ್ಯಾ ವಿಶ್ವನಾಥ)

ಈ ಸಡನ್ ಶಾಕ್‌ನಿಂದ ನಿಮ್ಮ ಮಿದುಳು ನೀವು ತೊಂದರೆ ಅಥವಾ ಅಪಾಯಕ್ಕೆ ಸಿಲುಕಿಕೊಂಡಿರಬಹುದೆಂದು ಭಾವಿಸಿ, ನೀವು ಸುರಕ್ಷಿತ ಕ್ರಮ ತೆಗೆದುಕೊಳ್ಳಲೆಂದು ತಕ್ಷಣವೇ ನಿಮ್ಮ ದೇಹದ ಮೂಲಕ ನಿಮಗೆ warning signs ಕೊಡಲು ಪ್ರಾರಂಭಿಸುತ್ತದೆ. ಇದರಿಂದಾಗಿ, ನಿಮ್ಮ ದೇಹದಲ್ಲಿ ಕೆಲವು ಬದಲಾವಣೆಗಳನ್ನು ಗಮನಿಸಿ. ಎದೆ ಬಡಿತ ಹೆಚ್ಚಾಗುವುದು, ವಿಪರೀತವಾಗಿ ಬೆವರುವುದು, ಉಸಿರಾಟದ ತೊಂದರೆ, ಕೈ ಕಾಲು ನಡುಗುವುದು ಮುಂತಾದ ಲಕ್ಷಣಗಳನ್ನು ನೀವು ಕಾಣಬಹುದು.

parents

ಆಗ ನಿಮ್ಮ ಭಾವನೆಗಳು ದುಃಖ, ಕೋಪ, ಹತಾಶೆ, ದುಗುಡ, ಗಾಬರಿ ಮತ್ತು ಆತಂಕದಿಂದ ಕೂಡಿರುತ್ತವೆ. ಈ ಸಮಯದಲ್ಲಿ ನಿಮ್ಮ ಆಲೋಚನೆಗಳ ಬಗ್ಗೆ ಗಮನವಿರಲಿ. ಬಾಲ್ಯವನ್ನು ದಾಟಿ, ನಿಮ್ಮ ಮಗ ಅಥವಾ ಮಗಳನ್ನು ಪುಟ್ಟ ಮಕ್ಕಳೆಂದು ನೀವು ಭಾವಿಸುತ್ತೀರಿ. ಹಾಗಾಗಿ, ಇನ್ನು ನನ್ನ ಮಕ್ಕಳು ಚಿಕ್ಕವರು, ಹೀಗೆ ಮಾಡಬಾರದು, ಇದು ತಪ್ಪು, ಒಳ್ಳೆಯದಲ್ಲ, ಮುಂದೇನು, ಪರಿಹಾರವೇನು..? ಹೀಗೆ ಹಲವಾರು ಆಲೋಚನೆಗಳು ನಿಮ್ಮಲ್ಲಿ ಮೂಡಬಹುದು.

Relax Your Body and Mind-ಆಚೆಯ ಫ್ರೆಶ್ ಗಾಳಿಯನ್ನು ತೆಗೆದುಕೊಳ್ಳಿ, 5ರಿಂದ 10 ಬಾರಿ ದೀರ್ಘವಾಗಿ ಉಸಿರಾಡಿ. ನಂತರ ನೀರನ್ನು ಕುಡಿಯಿರಿ. ಈಗ ಮನಸ್ಸು ಮತ್ತು ದೇಹ ಶಾಂತವಾಗಿ, ನಿಮ್ಮ ಹತೋಟಿಗೆ ಬರುತ್ತದೆ.

ಮಕ್ಕಳನ್ನು ನಿಭಾಯಿಸುವುದು ಹೇಗೆ?

1. ಮಾತನಾಡಲು ಸೂಕ್ತವಾದ ಸಮಯವನ್ನು ಆರಿಸಿಕೊಳ್ಳಿ. ಮಕ್ಕಳು ಮನೆಗೆ ಶಾಲೆಯಿಂದ ಬಂದ ತಕ್ಷಣವೇ ಹಸಿವು, ನಿದ್ರೆ, ಸುಸ್ತಾದಾಗ ಅಥವಾ ಓದಲು ಹೊರಟಾಗ ಮಾತಾನಾಡಬೇಡಿ. ರಜೆ ದಿನಗಳಲ್ಲಿ ಸಮಾಧಾನವಾಗಿದ್ದಾಗ ಸಮಯ ಸಂದರ್ಭ ನೋಡಿ ಮಾತನಾಡಿ.

2. ಈ ವಿಷಯವನ್ನು ಮಕ್ಕಳ ತಂದೆ ಅಥವಾ ನಿಮ್ಮ ಬಂಧುಗಳು, ಸ್ನೇಹಿತರ ಬಳಿ ತಿಳಿಸುವಾಗ, ಮಕ್ಕಳ ಮೇಲೆ ಅತಿಯಾಗಿ ದೂರಬೇಡಿ. ಹೀಯಾಳಿಸಿ ಮಾತನಾಡಬೇಡಿ.

3. ಆಲಿಸಿ-ಮಗುವಿನ ಮಾತನ್ನು ಗಮನದಲ್ಲಿಟ್ಟು ಆಲಿಸಿ. ಮಗುವಿನ ಮನಸ್ಥಿತಿ ಸಮಂಜಸವಾಗಿ ಅರ್ಥಮಾಡಿಕೊಳ್ಳಲು ಆಲಿಸಿ. ಮಗು ಮಾತನಾಡುವ ಮಧ್ಯೆ ನೀವು ಮಾತನಾಡಬೇಡಿ.

4. ಗೌರವಿಸಿ: ಮಕ್ಕಳ ಭಾವನೆಗಳು, ವಯಸ್ಸು, ಸ್ವಾತಂತ್ರ್ಯದ ಬಯಕೆಯನ್ನು ಗೌರವಿಸಿ.

5. ಸಹಾನುಭೂತಿ: ಮಕ್ಕಳ ಮನಸ್ಥಿತಿ ಮತ್ತು ಪರಿಸ್ಥಿತಿ ಎರಡಕ್ಕೂ ಸಹಾನುಭೂತಿ ತೋರಿಸಿ. ಪ್ರೌಢಾವಸ್ಥೆಯಲ್ಲಿ ಮಕ್ಕಳಿಗೆ ಪ್ರೀತಿಯ ಭಾವನೆಗಳು ಮೂಡುವುದು ಸಹಜ. ನೀವೂ ಕೂಡ ಚಿಕ್ಕ ವಯಸ್ಸಿನಲ್ಲಿ ಇಂತಹ ಭಾವನೆಗಳನ್ನು ದಾಟಿ ಬಂದಿರುವಿರಿ.

6. ತಡೆಯಬೇಕಾದ ಅಂಶಗಳು: ನಿರ್ಣಾಯಕಾರಿ ಹೇಳಿಕೆಗಳು, ನಿಂದನೆ, ಹೀಯಾಳಿಸುವುದನ್ನು ಬಿಡಿ.

7. ಶಿಕ್ಷೆ ಕೊಡಬೇಡಿ: ದೈಹಿಕ ಮತ್ತು ಮಾನಸಿಕ ಶಿಕ್ಷೆಯನ್ನು ತಡೆಯಿರಿ. ಮಕ್ಕಳ ಸ್ವಾಭಿಮಾನಕ್ಕೆ ಧಕ್ಕೆ ಬರುವ ಸಾಧ್ಯತೆ ಹೆಚ್ಚು. ತಮ್ಮ ತಪ್ಪು ತಿದ್ದುಕೊಳ್ಳುವ ಬದಲು, ನಿಮ್ಮ ಕ್ರಮದ ಮೇಲೆ ಅವರು ಗಮನಹರಿಸುತ್ತಾರೆ. ಭವಿಷ್ಯದಲ್ಲಿ ನಿಮ್ಮಿಂದ ವಿಷಯಗಳನ್ನು ಮುಚ್ಚಿಡಬಹುದು ಅಥವಾ ಸುಳ್ಳು ಹೇಳಬಹುದು.

parents

8. ಅತಿಯಾದ ಸಂಶಯ ಮತ್ತು ವಿಚಾರಣೆ ಬೇಡ: ಈ ಸನ್ನಿವೇಶದ ನಂತರ ಮಾತುಕತೆ ನಡೆಸಿ, ಬುದ್ಧಿವಾದ ಹೇಳಿ, ತಿದ್ದಿದ ನಂತರ ಮಕ್ಕಳ ಸ್ನೇಹಿತರು ಅಥವಾ ಶಿಕ್ಷಕರ ಬಳಿ ಅತಿಯಾದ ವಿಚಾರಣೆ ಮಾಡುವುದು, ದೂರು ಹೇಳುವುದನ್ನು ತಡೆಯಿರಿ. ಹಾಗೆಯೇ ಮಕ್ಕಳ ಮೇಲೆ ಅತಿಯಾದ ಸಂಶಯ ಪಡುವುದನ್ನು ತಡೆಯಿರಿ. ಇಲ್ಲವಾದಲ್ಲಿ, ಮಕ್ಕಳಿಗೆ ನಿಮ್ಮ ನಡತೆಯಿಂದ ಬೇಸರವಾಗಿ, ಆತ್ಮಗೌರವವನ್ನು ಕಳೆದುಕೊಳ್ಳಬಹುದು ಅಥವಾ ನಿಮ್ಮಿಂದ ಭಾವನಾತ್ಮಕವಾಗಿ ದೂರವೂ ಆಗಬಹುದು.

9. ಸಮಯ ನೀಡಿ: ಮಕ್ಕಳು ತಪ್ಪನ್ನು ತಿದ್ದಿಕೊಂಡು ಸರಿಯಾದ ದಾರಿಗೆ ಮರಳಿ ಬರುವುದಕ್ಕೆ ಕಾಲಾವಕಾಶ ನೀಡಿ. ಆತುರ ಬೇಡ.

ಸೂಚನೆ: ಮನೆಯಲ್ಲಿ ಮಕ್ಕಳಿಗೆ ಸಾಕಷ್ಟು ಪೋಷಕರು ಪ್ರೀತಿ, ಗೌರವ, ವಿಶ್ವಾಸ ಮತ್ತು ಗಮನ ನೀಡಿದರೆ, ಇವುಗಳನ್ನು ಹೊರಗಡೆ ಹುಡುಕುವುದನ್ನು ಸಾಧ್ಯವಾದಷ್ಟು ತಪ್ಪಿಸಬಹುದು. ಇವುಗಳ ಕೊರತೆ ಮನೆಯಲ್ಲಿ ಇದ್ದಷ್ಟು ಮಕ್ಕಳ ಗಮನ ಹೊರಗಿನ ಕಡೆಗೆ ಹೋಗುತ್ತದೆ. ಹಾಗೆಯೇ, ಮುಕ್ತವಾಗಿ ತಮ್ಮ ಭಾವನೆಗಳನ್ನು ಪೋಷಕರ ಬಳಿ ವ್ಯಕ್ತಪಡಿಸುವುದಕ್ಕೆ ಉತ್ತೇಜನ ನೀಡಿ.

(ಲೇಖಕಿ ಭವ್ಯಾ ವಿಶ್ವನಾಥ ಅವರು ಬೆಂಗಳೂರಿನಲ್ಲಿ ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಮಾನಸಿಕ ಸಮಸ್ಯೆಗಳು, ಪೇರೆಂಟಿಂಗ್ ಮತ್ತು ಸಂಬಂಧಗಳ ನಿರ್ವಹಣೆಯಲ್ಲಿ ಅವರ ಸಲಹೆಗಳು ಸಾವಿರಾರು ಕುಟುಂಬಗಳನ್ನು ಉಳಿಸಿದೆ. ಅವರ ವಾಟ್ಸಾಪ್ ಸಂಖ್ಯೆ: 9945743542)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+