• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

UAE Golden Visa:ಯುಎಇ ಗೋಲ್ಡನ್ ವೀಸಾ ಎಂದರೇನು; ನೀವು ಪಡೆಯುವುದು ಹೇಗೆ?

|
Google Oneindia Kannada News

ನವದೆಹಲಿ, ಆಗಸ್ಟ್ 27: ಯುನೈಟೆಡ್ ಅರಬ್ ಎಮಿರೈಟ್ಸ್ ಸರ್ಕಾರದಿಂದ ದಕ್ಷಿಣ ಭಾರತದ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ಮಮ್ಮುಟಿ ಗೋಲ್ಡನ್ ವೀಸಾ ಪಡೆದುಕೊಂಡ ನಂತರದಲ್ಲಿ ಈ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ.

ಇದೇ ಗೋಲ್ಡನ್ ವೀಸಾ ಅನ್ನು ಬಾಲಿವುಡ್ ಸ್ಟಾರ್ ನಟರಾದ ಶಾರೂಕ್ ಖಾನ್, ಸಂಜಯ್ ದತ್ ಪಡೆದಿದ್ದಾರೆ. ಇವರ ಜೊತೆಗೆ ಎಂ ಎ ಯೂಸಫ್ ಅಲಿ, ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ ನೊವೊಕ್ ಜೊಕೊವಿಕ್ ಅವರಿಗೆ ಗೋಲ್ಡನ್ ವೀಸಾ ನೀಡಲಾಗಿದೆ.

ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿಗೆ ಆಶ್ರಯ ನೀಡಿದ್ದೇಕೆ ಯುಎಇ!?ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿಗೆ ಆಶ್ರಯ ನೀಡಿದ್ದೇಕೆ ಯುಎಇ!?

ಗೋಲ್ಡನ್ ವೀಸಾ ಎಂದರೇನು?, ಗೋಲ್ಡನ್ ವೀಸಾಗಳಿಗೆ ಯಾಕಷ್ಟು ಡಿಮ್ಯಾಂಡ್ ಇದೆ?, ಗೋಲ್ಡನ್ ವೀಸಾ ಪಡೆದುಕೊಳ್ಳಲು ಯಾರು ಅರ್ಹರು?, ಯುಎಇ ಗೋಲ್ಡನ್ ವೀಸಾ ಪಡೆದುಕೊಳ್ಳುವುದು ಹೇಗೆ?, ಗೋಲ್ಡನ್ ವೀಸಾ ನೀಡುವಾಗ ಯಾವ ರೀತಿ ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ. ಹೀಗೆ ನೂರಾರು ಪ್ರಶ್ನೆಗಳಿಗೆ ಒಂದೇ ಒಂದು ವರದಿಯು ಸವಿಸ್ತಾರವಾಗಿ ಉತ್ತರ ನೀಡಲಿದೆ. ಗೋಲ್ಡನ್ ವೀಸಾಗಳ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಗೋಲ್ಡನ್ ವೀಸಾ ಎಂಬುದರ ಅರ್ಥ

ಗೋಲ್ಡನ್ ವೀಸಾ ಎಂಬುದರ ಅರ್ಥ

ಯುನೈಟೆಡ್ ಅರಬ್ ಎಮಿರೈಟ್ಸ್ ಸರ್ಕಾರದ ಪ್ರಕಾರ, ವಿದೇಶಿಗರು ದೀರ್ಘಾವಧಿವರೆಗೂ ವಾಸಿಸಲು ಅನುಕೂಲವಾಗುವುದಕ್ಕಾಗಿ ಗೋಲ್ಡನ್ ವೀಸಾ ನೀಡಲಾಗುತ್ತದೆ. ಯುಎಇ ನೆಲದಲ್ಲಿ ಯಾವುದೇ ಪ್ರಾಯೋಜಕತ್ವ ಅಥವಾ ಸಂಪೂರ್ಣ ಹೂಡಿಕೆಯ ವ್ಯವಹಾರವನ್ನು ಹೊಂದಿರದ ಹೊರತಾಗಿಯೂ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಗೆ ಈ ವೀಸಾ ಸೌಲಭ್ಯವನ್ನು ಒದಗಿಸಲಾಗುತ್ತದೆ. ಗೋಲ್ಡನ್ ವೀಸಾ ಅವಧಿಯು 5 ರಿಂದ 10 ವರ್ಷಗಳವರೆಗೂ ಇರಲಿದ್ದು, ತದನಂತರದಲ್ಲಿ ಸ್ವಯಂ ಚಾಲಿತವಾಗಿ ವೀಸಾ ಅವಧಿ ನವೀಕೃತಗೊಳ್ಳುತ್ತದೆ. ಯುಎಇ ಸರ್ಕಾರವು 2019ರಲ್ಲಿ ಈ ಗೋಲ್ಡನ್ ವೀಸಾ ಸೌಲಭ್ಯವನ್ನು ಆರಂಭಿಸಿತ್ತು.

ಗೋಲ್ಡನ್ ವೀಸಾ ಪಡೆಯುವುದಕ್ಕೆ ಅರ್ಹತೆಗಳೇನು?

ಗೋಲ್ಡನ್ ವೀಸಾ ಪಡೆಯುವುದಕ್ಕೆ ಅರ್ಹತೆಗಳೇನು?

ವೀಸಾದ ಅವಧಿಯ ಮಾನದಂಡದ ಮೇಲೆ ಅರ್ಹತೆಯನ್ನು ನಿರ್ಧರಿಸಲಾಗುತ್ತದೆ. ಗೋಲ್ಡನ್ ವೀಸಾವನ್ನು ಉದ್ಯಮಿಗಳು, ವ್ಯಾಪಾರಸ್ಥರು, ವಿಶೇಷ ಪಾಂಡಿತ್ಯ ಉಳ್ಳವರು, ವಿಜ್ಞಾನ, ತಂತ್ರಜ್ಞಾನ ವಲಯಗಳಲ್ಲಿ ಸಂಶೋಧಕರು ಹಾಗೂ ವೈದ್ಯಕೀಯ ರಂಗದಲ್ಲಿ ಪ್ರಜ್ವಲ ಭವಿಷ್ಯದ ವಿಶ್ವಾಸವನ್ನು ಮೂಡಿಸುವ ವಿದ್ಯಾರ್ಥಿಗಳಿಗೆ ಈ ಗೋಲ್ಡನ್ ವೀಸಾ ಅನ್ನು ನೀಡಲಾಗುತ್ತದೆ.

ಎಂಥ ಹೂಡಿಕೆದಾರರಿಗೆ ವೀಸಾ?

ಎಂಥ ಹೂಡಿಕೆದಾರರಿಗೆ ವೀಸಾ?

ಯುನೈಟೆಡ್ ಅರಬ್ ಎಮಿರೈಟ್ಸ್ ಸರ್ಕಾರವು 10 ವರ್ಷಗಳ ಅವಧಿಗೆ ಈ ಗೋಲ್ಡನ್ ವೀಸಾವನ್ನು ನೀಡುತ್ತದೆ. ದೇಶದಲ್ಲಿ ಸರಿಸುಮಾರು 1 ಕೋಟಿ ಯುಎ ಡಾಲರ್(20.18 ಕೋಟಿ ರೂಪಾಯಿ) ಹೂಡಿಕೆ ಮಾಡುವವರಿಗೆ ಈ ವೀಸಾ ನೀಡಲಾಗುವುದು. ದೇಶದಲ್ಲಿ ವಿದೇಶಿಗರು ಮಾಡುವ ಹೂಡಿಕೆಯು ಹಣದ ಠೇವಣಿ ರೂಪದಲ್ಲಿ ಇರುಬೇಕು. ಯುಎಇಯಲ್ಲಿ ಇರುವ ಸಹಭಾಗಿತ್ವದ ಕಂಪನಿಯಲ್ಲಿ ಹೂಡಿಕೆ ಪ್ರಮಾಣವು ಕನಿಷ್ಠ 20.18 ಕೋಟಿ ರೂಪಾಯಿ ಆಗಿರಬೇಕು. ರಿಯಲ್ ಎಸ್ಟೇಟ್ ಹೊರತಾಗಿ ಯಾವುದೇ ವಲಯದಲ್ಲಿ ಹೂಡಿಕೆ ಮಾಡುವ ವಿದೇಶಿಗರು ಒಟ್ಟು ಹೂಡಿಕೆಯ ಶೇ.60ರಷ್ಟು ಪಾಲು ಹೊಂದಿರಬೇಕು. 5 ವರ್ಷ ಗೋಲ್ಡನ್ ವೀಸಾ ಪಡೆದುಕೊಳ್ಳುವ ಹೂಡಿಕೆದಾರರು ಕನಿಷ್ಠ 10 ಕೋಟಿ ರೂಪಾಯಿ ಹಣ ಹೂಡಿಕೆ ಮಾಡಬೇಕು. ಹೀಗೆ ಹೂಡಿಕೆ ಮಾಡಿದ ಹಣದ ಮೇಲೆ ಸಾಲ ಪಡೆದುಕೊಳ್ಳುವುದಕ್ಕಾಗಿ ಹಿಂತಿರುಗಿಸುವುದಕ್ಕಾಗಲಿ ಅವಕಾಶ ಇರುವುದಿಲ್ಲ. ಗೋಲ್ಡನ್ ವೀಸಾ ಪಡೆದ ವಿದೇಶಿಗರ ಹೂಡಿಕೆಯನ್ನು ಕನಿಷ್ಠ 3 ವರ್ಷಗಳವರೆಗೂ ಶಾಶ್ವತವಾಗಿ ಇರಿಸಿಕೊಳ್ಳಲಾಗುತ್ತದೆ.

ಗೋಲ್ಡನ್ ವೀಸಾ ಪಡೆಯಲು ವಿಶೇಷ ಪಾಂಡಿತ್ಯದ ಅಗತ್ಯ

ಗೋಲ್ಡನ್ ವೀಸಾ ಪಡೆಯಲು ವಿಶೇಷ ಪಾಂಡಿತ್ಯದ ಅಗತ್ಯ

ವಿಶೇಷ ಪಾಂಡಿತ್ಯವನ್ನು ಹೊಂದಿದವರಿಗೆ 10 ವರ್ಷಗಳ ಅವಧಿಗೆ ಗೋಲ್ಡನ್ ವೀಸಾ ನೀಡಲಾಗುತ್ತದೆ. ಈ ವಲಯದಲ್ಲಿ ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ವೈದ್ಯರು, ತಜ್ಞರು, ವಿಜ್ಞಾನಿಗಳು, ಅನ್ವೇಷಕರು ಸೇರಿದಂತೆ ಸಾಂಸ್ಕೃತಿಕ ಹಾಗೂ ಕಲೆಯ ವಿಭಾಗದಲ್ಲಿ ಅತ್ಯಂತ ವಿಭಿನ್ನ ಹಾಗೂ ವಿಶೇಷ ಪಾಂಡಿತ್ಯವನ್ನು ಹೊಂದಿದವರಿಗೆ ಈ ವೀಸಾ ನೀಡಲಾಗುತ್ತದೆ. ಈ ವಲಯದಲ್ಲಿ ಗುರುತಿಸಿಕೊಂಡವರ ಪತ್ನಿ ಮತ್ತು ಮಕ್ಕಳಿಗೂ ಗೋಲ್ಡನ್ ವೀಸಾ ನೀಡಲಾಗುತ್ತದೆ. ಈ ಎಲ್ಲ ವಿಭಾಗಗಳಲ್ಲಿ ಪಾಂಡಿತ್ಯವಂತರು ಎಂದು ಗುರುತಿಸಲಾದ ಹಾಗೂ ಯುಎಇಯಲ್ಲಿ ಸಂಬಂಧಿತ ಉದ್ಯೋಗಕ್ಕಾಗಿ ಆಗಮಿಸಿರುವ ಬಗ್ಗೆ ಗುರುತಿನ ಚೀಟಿಯನ್ನು ಒದಗಿಸುವುದು ಮುಖ್ಯವಾಗಿರುತ್ತದೆ.

ಗೋಲ್ಡನ್ ವೀಸಾ ಉದ್ಯಮಿಗಳಿಗೆ ನೀಡಲಾಗುತ್ತದೆಯೇ?

ಗೋಲ್ಡನ್ ವೀಸಾ ಉದ್ಯಮಿಗಳಿಗೆ ನೀಡಲಾಗುತ್ತದೆಯೇ?

ಉದ್ಯಮಿಗಳು ಐದು ವರ್ಷಗಳ ಅವಧಿಗೆ ಗೋಲ್ಡನ್ ವೀಸಾ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಈ ವಿಭಾಗದಲ್ಲಿ ಕನಿಷ್ಠ 1 ಕೋಟಿ ರೂಪಾಯಿ ಮೌಲ್ಯದ ಯೋಜನೆಯಲ್ಲಿ ಕೆಲಸ ಮಾಡುವುದಕ್ಕೆ ಆಗಮಿಸುವ ಉದ್ಯಮಿಗೆ ಅಥವಾ ದೇಶದಲ್ಲಿ ಅನುಮೋದನೆ ಪಡೆದುಕೊಂಡಿರುವ ಕಂಪನಿಯ ಶಿಫಾರಸ್ಸಿನ ಮೇಲೆ ಉದ್ಯಮಿಗೆ ಗೋಲ್ಡನ್ ವೀಸಾ ನೀಡಲಾಗುತ್ತದೆ. ಉದ್ಯಮಿಗಳಿಗೆ ಹಲವು ವಿಭಾಗಗಳಲ್ಲಿ ವೀಸಾ ನೀಡಲಾಗುತ್ತದೆ. 6 ತಿಂಗಳ ಅವಧಿಗೆ ಮೊದಲು ಹಾಗೂ ಎರಡನೇ ಬಾರಿಗೆ ಮತ್ತೆ 6 ತಿಂಗಳ ಅವಧಿಗೆ ಗೋಲ್ಡನ್ ವೀಸಾ ನೀಡಲಾಗುತ್ತದೆ. ದೀರ್ಘಾವಧಿ ವೀಸಾ ನೀಡುವ ವೇಳೆ ಪತ್ನಿ ಹಾಗೂ ಮಕ್ಕಳನ್ನೂ ಸೇರ್ಪಡೆಗೊಳಿಸಲು ಅವಕಾಶವಿದೆ.

ಪ್ರತಿಭಾವಂತರಿಗೆ ಗೋಲ್ಡನ್ ವೀಸಾ ಅವಕಾಶ

ಪ್ರತಿಭಾವಂತರಿಗೆ ಗೋಲ್ಡನ್ ವೀಸಾ ಅವಕಾಶ

ಐದು ವರ್ಷಗಳ ಅವಧಿಗೆ ಗೋಲ್ಡನ್ ವೀಸಾ ಪಡೆಯುವುದಕ್ಕಾಗಿ ಪ್ರತಿಭಾವಂತ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು. ಪ್ರೌಢಶಿಕ್ಷಣದಲ್ಲಿ ಕನಿಷ್ಠ 95ರಷ್ಟು ಅಂಕಗಳನ್ನು ಪಡೆದುಕೊಂಡಿರುವ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪದವಿಯಲ್ಲೂ ಗರಿಷ್ಠ ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿರುತ್ತದೆ.

ಗೋಲ್ಡನ್ ವೀಸಾ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗಿರುತ್ತದೆ?

ಗೋಲ್ಡನ್ ವೀಸಾ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗಿರುತ್ತದೆ?

ಯುನೈಟೆಡ್ ಅರಬ್ ಎಮಿರೈಟ್ಸ್ ಸರ್ಕಾರದ ಪೌರತ್ವ ಮತ್ತು ಗುರುತು ಪತ್ತೆ ಪ್ರಾಧಿಕಾರದ https://ica.gov.ae/en/ ಮತ್ತು ವಿದೇಶಿ ವ್ಯವಹಾರ ಮತ್ತು ನಿವಾಸಿಗಳ ನಿರ್ದೇಶನಾಲಯದ https://www.gdrfad.gov.ae/en ಅಧಿಕೃತ ಜಾಲತಾಣದ ಮೂಲಕ ಗೋಲ್ಡನ್ ವೀಸಾ ಪಡೆದುಕೊಳ್ಳುವುದಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.

English summary
UAE's Golden Visa is a long-term residence visa that enables foreigners to live, work and study in the UAE. Know who is eligible and how to apply in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X