ಮೊದಲು ಓದಿ: ಭಾರತದಲ್ಲಿ ಭಯ ಹುಟ್ಟಿಸಿದ ಕಪ್ಪಾ ರೂಪಾಂತರ ವೈರಸ್ ಬಗ್ಗೆ ತಿಳಿದುಕೊಳ್ಳಿ

ನವದೆಹಲಿ, ಜುಲೈ 09: ಕೊರೊನಾವೈರಸ್ ರೂಪಾಂತರ ತಳಿ ಹಾಗೂ ಅಲೆಗಳ ಹಾವಳಿ ಮುಂದುವರಿದಿದೆ. ಉತ್ತರ ಪ್ರದೇಶದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿರುವ 109 ಮಾದರಿಗಳ ಪೈಕಿ ಇಬ್ಬರಲ್ಲಿ ಕಪ್ಪಾ ಮಾದರಿಯ ಸೋಂಕು ಪತ್ತೆಯಾಗಿರುವುದು ಆತಂಕವನ್ನು ಹೆಚ್ಚಿಸಿದೆ.

ಭಾರತದಲ್ಲಿ ಮೊದಲಿಗೆ 2020ರ ಅಕ್ಟೋಬರ್ ತಿಂಗಳಿನಲ್ಲಿ ಪತ್ತೆಯಾದ ಕೊರೊನಾವೈರಸ್ ಸೋಂಕಿನ B.1.617.1 ಅನ್ನು ಕಪ್ಪಾ ವೈರಸ್ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೆಸರಿಸಿತ್ತು. ಹಲವು ರಾಷ್ಟ್ರಗಳಲ್ಲಿ ಪತ್ತೆ ಆಗುತ್ತಿರುವ ಕೊವಿಡ್-19 ರೂಪಾಂತರಗಳ ಹಿಂದೆ ದೇಶದ ಹೆಸರಿನ ಬದಲಿಗೆ ಮಾದರಿ ಆಧಾರಿತ ಹೆಸರುಗಳನ್ನು ನೀಡಲಾಗಿದೆ.

ಉತ್ತರ ಪ್ರದೇಶ ಲಕ್ನೋದ ಕಿಂಗ್ ಜಾರ್ಜ್ಸ್ ಮೆಡಿಕಲ್ ಕಾಲೇಜಿನಲ್ಲಿ ನಡೆಸಿರುವ ವೈದ್ಯಕೀ ಪರೀಕ್ಷೆಯಲ್ಲಿ ಇಬ್ಬರಿಗೆ ಕಪ್ಪಾ ರೂಪಾಂತರ ವೈರಸ್ ತಗುಲಿರುವುದು ಪತ್ತೆಯಾಗಿದೆ. 109 ಮಾದರಿಯಲ್ಲಿ 107 ಜನರಿಗೆ ಡೆಲ್ಟಾ ಪ್ಲಸ್ ಹಾಗೂ ಇಬ್ಬರಿಗೆ ಕಪ್ಪಾ ವೈರಸ್ ತಗುಲಿದ್ದು, ಹೊಸ ಆತಂಕ ಸೃಷ್ಟಿಸಿದೆ. ಕಪ್ಪಾ ವೈರಸ್ ಎಂದರೇನು, ಈ ಸೋಂಕು ತಗುಲಿದವರಲ್ಲಿ ಯಾವ ಲಕ್ಷಣಗಳು ಗೋಚರಿಸುತ್ತವೆ. ಈ ಕಪ್ಪಾ ರೂಪಾಂತರವು ಹೊಸ ರೂಪಾಂತರವೇ ಎಂಬುದರ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.

ಕಪ್ಪಾ ಎನ್ನುವುದು ಹೊಸ ರೂಪಾಂತರವಾಗಿದೆಯೇ?

ಕಪ್ಪಾ ಎನ್ನುವುದು ಹೊಸ ರೂಪಾಂತರವಾಗಿದೆಯೇ?

ಕಪ್ಪಾ ಎನ್ನುವುದು ಹೊಸ ರೂಪಾಂತರ ವೈರಸ್ ಅಲ್ಲವೇ ಅಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2020ರ ಅಕ್ಟೋಬರ್ ತಿಂಗಳಿನಲ್ಲಿ ಪತ್ತೆಯಾಗಿದ್ದ ಕೊರೊನಾವೈರಸ್ ಸೋಂಕಿನ B.1.617.1 ಮಾದರಿಯನ್ನು ಕಪ್ಪಾ ವೈರಸ್ ಎಂದು ಹೆಸರಿಸಲಾಗಿತ್ತು. ಭಾರತದಲ್ಲಿ ಮೊದಲು ಪತ್ತೆಯಾದ B.1.617.1 ಮಾದರಿಯನ್ನು ಕಪ್ಪಾ ಹಾಗೂ B.1.617.2 ಮಾದರಿಯನ್ನು ಡೆಲ್ಟಾ ಎಂದು ಹೆಸರಿಸಲಾಗಿದೆ.

ಕಾಳಜಿಯ ರೂಪಾಂತರವೇ ಕಪ್ಪಾ ವೈರಸ್?

ಕಾಳಜಿಯ ರೂಪಾಂತರವೇ ಕಪ್ಪಾ ವೈರಸ್?

ವಿಶ್ವ ಆರೋಗ್ಯ ಸಂಸ್ಥೆಯು ಕಪ್ಪಾ ರೂಪಾಂತರವನ್ನು ಕಾಳಜಿಯ ರೂಪಾಂತರ ಎಂದು ವರ್ಗೀಕರಿಸಿಲ್ಲ. ಈಗಾಗಲೇ ವಿಶ್ವದಾದ್ಯಂತ 30 ದೇಶಗಳಲ್ಲಿ ಹರಡಿರುವ ಲ್ಯಾಂಬ್ಡಾ ರೂಪಾಂತರದ ರೀತಿಯೇ ಕಪ್ಪಾ ಕೂಡ ಆಸಕ್ತಿಯ ರೂಪಾಂತರವಾಗಿದೆ.

ಅವಳಿ ಮಾದರಿಗಳ ಸಮ್ಮಿಶ್ರಣವೇ ಕಪ್ಪಾ ರೂಪಾಂತರ?

ಅವಳಿ ಮಾದರಿಗಳ ಸಮ್ಮಿಶ್ರಣವೇ ಕಪ್ಪಾ ರೂಪಾಂತರ?

ಕಪ್ಪಾ ರೂಪಾಂತರವು ಡೆಲ್ಟಾ ರೂಪಾಂತರದ ರೀತಿಯಲ್ಲೇ ಎರಡು ಮಾದರಿಗಳ ಸಮ್ಮಿಶ್ರಣವಾಗಿದೆ. ಕಪ್ಪಾ ರೂಪಾಂತರ ವೈರಸ್ ಎರಡು ಮಾದರಿಗಳನ್ನು ಒಳಗೊಂಡಿದೆ. EE484Q ಮತ್ತು L452R ಎಂಬ ಎರಡು ಮಾದರಿಗಳು ಕಪ್ಪಾ ರೂಪಾಂತರದಲ್ಲಿ ಕಂಡು ಬಂದಿವೆ. L452R ಮಾದರಿಯು ಮನುಷ್ಯನ ದೇಹದಲ್ಲಿರುವ ಸಹಜ ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.

ಭಾರತದಲ್ಲಿ ಕಪ್ಪಾ ರೂಪಾಂತರ ವೈರಸ್ ಪ್ರಕರಣ ಇದೇ ಮೊದಲಾ?

ಭಾರತದಲ್ಲಿ ಕಪ್ಪಾ ರೂಪಾಂತರ ವೈರಸ್ ಪ್ರಕರಣ ಇದೇ ಮೊದಲಾ?

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮಧ್ಯೆ ರೂಪಾಂತರ ವೈರಸ್ ಯಾವಾಗ ಪತ್ತೆಯಾಗಿತ್ತು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕಪ್ಪಾ ರೂಪಾಂತರ ವೈರಸ್ ಭಾರತದಲ್ಲಿ ಪತ್ತೆ ಆಗುತ್ತಿರುವುದು ಮೊದಲೇನಲ್ಲ. ಈ ಹಿಂದೆ 2020ರ ಅಕ್ಟೋಬರ್ ತಿಂಗಳಿನಲ್ಲಿ ಮೊದಲ ಕಪ್ಪಾ ರೂಪಾಂತರ ವೈರಸ್ ಪ್ರಕರಣ ವರದಿಯಾಗಿತ್ತು. ಇದೀಗ ದೇಶದ ಹಲವು ರಾಜ್ಯಗಳಲ್ಲಿ ಕಪ್ಪಾ ರೂಪಾಂತರ ವೈರಸ್ ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

ಡೆಲ್ಟಾ ಹಾಗೂ ಕಪ್ಪಾ ರೂಪಾಂತರ ವೈರಸ್ ನಡುವಿನ ವ್ಯತ್ಯಾಸ

ಡೆಲ್ಟಾ ಹಾಗೂ ಕಪ್ಪಾ ರೂಪಾಂತರ ವೈರಸ್ ನಡುವಿನ ವ್ಯತ್ಯಾಸ

2020ರ ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ಮೊದಲ ಪತ್ತೆಯಾದ B.1,617 ತಳಿಗೆ ಕಪ್ಪಾ ಹಾಗೂ ಡೆಲ್ಟಾ ಎರಡೂ ರೂಪಾಂತರಗಳು ಸೇರಿವೆ. 2021ರ ಏಪ್ರಿಲ್ ತಿಂಗಳಿನಲ್ಲಿ ಆಸಕ್ತಿಕರ ರೂಪಾಂತರವಾಗಿ ಡೆಲ್ಟಾ ಪತ್ತೆಯಾಯಿತು. 2021ರ ಮೇ ತಿಂಗಳಿನಲ್ಲಿ ಕಾಳಜಿಯ ರೂಪಾಂತರವಾಗಿ ಕಪ್ಪಾ ಪತ್ತೆಯಾಯಿತು. ಡೆಲ್ಟಾ ರೂಪಾಂತರ ವೈರಸ್ ಜಗತ್ತಿನಾದ್ಯಂತ ಹರಡಿದ್ದು, ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಗೆ ಇದೇ ಡೆಲ್ಟಾ ವೈರಸ್ ಕಾರಣವಾಗಿತ್ತು.

ಯಾವ ದೇಶದ ಕೊವಿಡ್ ರೂಪಾಂತರಕ್ಕೆ ಯಾವ ಹೆಸರು?

ಯಾವ ದೇಶದ ಕೊವಿಡ್ ರೂಪಾಂತರಕ್ಕೆ ಯಾವ ಹೆಸರು?

ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಪತ್ತೆಯಾಗಿರುವ ಕೊರೊನಾವೈರಸ್ ರೂಪಾಂತರ ತಳಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯು ವಿವಿಧ ಹೆಸರುಗಳನ್ನು ನೀಡಿದೆ. ಈ ಕೊವಿಡ್-19 ರೂಪಾಂತರ ತಳಿಗಳ ಮೂಲ ವಂಶಾವಳಿ, ರಾಷ್ಟ್ರ, ರೂಪಾಂತರ ತಳಿ ಕಾಣಿಸಿಕೊಂಡ ವರ್ಷ ಹಾಗೂ ತಿಂಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ.

ಕೊರೊನಾವೈರಸ್ ತಳಿ ಹೆಸರು ದೇಶ ಮತ್ತು ದಿನಾಂಕ ರೋಗಾಣುವಿನ ವಂಶಾವಳಿ
ಆಲ್ಫಾ ಯುನೈಟೆಡ್ ಕಿಂಗ್ ಡಮ್, ಸಪ್ಟೆಂಬರ್ 2020 B.1.1.7
ಬೇಟಾ ದಕ್ಷಿಣ ಆಫ್ರಿಕಾ, ಮೇ 2020 B.1.351
ಗಮ್ಮಾ ಬ್ರೆಜಿಲ್, ನವೆಂಬರ್ 2020 P.1
ಡೆಲ್ಟಾ ಭಾರತ, ಅಕ್ಟೋಬರ್, 2020 B.1.617.2
ಎಪ್ಸಿಲೋನ್ ಯುಎಸ್ಎ, ಮಾರ್ಚ್, 2020 B.1.427/B.1.429
ಜೇಟಾ ಬ್ರೆಜಿಲ್, ಏಪ್ರಿಲ್ 2020 P.2
ಎಟಾ ಹಲವು ರಾಷ್ಟ್ರಗಳಲ್ಲಿ, ಡಿಸೆಂಬರ್,2020 B.1.525
ಥೇಟಾ ಫಿಲಿಫೈನ್ಸ್, ಜನವರಿ, 2021 P.3
ಲೋಟಾ ಯುಎಸ್ಎ, ನವೆಂಬರ್,2020 B.1.526
ಕಪ್ಪಾ ಭಾರತ, ಅಕ್ಟೋಬರ್, 2020 B.1.617.1
ದೇಶದಲ್ಲಿ ರೂಪಾಂತರ ಕೊರೊನಾವೈರಸ್ ಅಂಕಿ-ಅಂಶ

ದೇಶದಲ್ಲಿ ರೂಪಾಂತರ ಕೊರೊನಾವೈರಸ್ ಅಂಕಿ-ಅಂಶ

ಕೊರೊನಾವೈರಸ್ ರೂಪಾಂತರಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯು ಹೆಸರು ನೀಡಿದ್ದು ಆಗಿದೆ. ಭಾರತದಲ್ಲಿ ಯಾವ ರೂಪಾಂತರದ ಎಷ್ಟು ಪ್ರಕರಣಗಳು ವರದಿಯಾಗಿವೆ ಎಂಬುದರ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಅದರ ಪ್ರಕಾರ, ದೇಶದಲ್ಲಿ 3969 ಅಲ್ಪಾ ರೂಪಾಂತರ ಪ್ರಕರಣ, 149 ಬೇಟಾ ರೂಪಾಂತರ ಪ್ರಕರಣ, 1 ಗಮ್ಮಾ ರೂಪಾಂತರ ಪ್ರಕರಣ, 16,238 ಡೆಲ್ಟಾ ಹಾಗೂ ಕಪ್ಪಾ ರೂಪಾಂತರ ಪ್ರಕರಣಗಳು ವರದಿಯಾಗಿವೆ.

Recommended Video

    ರೈನಾ, ಧೋನಿ ಗೆಳೆತನ ಎಷ್ಟು ಗಟ್ಟಿಯಾಗಿದೆ ಅನ್ನೋದು ರೈನಾ ಮಾತಿಂದ ಗೊತ್ತಾಗುತ್ತೆ | Oneindia Kannada
    ಕೊವಿಡ್-19 ಮೇಲೆ ನಿಯಂತ್ರಣ ಹೊಂದಿದ ಭಾರತ

    ಕೊವಿಡ್-19 ಮೇಲೆ ನಿಯಂತ್ರಣ ಹೊಂದಿದ ಭಾರತ

    ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 43,393 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 911 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಇದೇ ಅವಧಿಯಲ್ಲಿ 44,459 ಸೋಂಕಿತರು ಗುಣಮುಖರಾಗಿದ್ದಾರೆ. ಶುಕ್ರವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು 3,07,52,950 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,98,88,284 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಗೆ ಈವರೆಗೂ 4,05,939 ಮಂದಿ ಬಲಿಯಾಗಿದ್ದಾರೆ. ಇದರ ಹೊರತಾಗಿ 4,58,727 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.

    ದೇಶದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವುದಕ್ಕಾಗಿ ನಾಲ್ಕು ಹಂತಗಳಲ್ಲಿ ಲಸಿಕೆ ವಿತರಣೆ ಅಭಿಯಾನ ನಡೆಸಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 40,23,173 ಮಂದಿಗೆ ಕೊವಿಡ್-19 ಲಸಿಕೆ ನೀಡಲಾಗಿದ್ದು, 174 ದಿನಗಳಲ್ಲಿ ಒಟ್ಟು 36,89,91,222 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+