ಚಲನಚಿತ್ರ ಕೃತಿಚೌರ್ಯ, ಕಾಪಿರೈಟ್ ಉಲ್ಲಂಘನೆ ಹೇಗೆ?
ಕನ್ನಡ ಚಿತ್ರರಂಗದಲ್ಲಿ ಹಾಡೊಂದನ್ನು ಕದ್ದಿರುವ ಆರೋಪ ಹೊರೆಸಿ ನಟ ರಕ್ಷಿತ್ ಶೆಟ್ಟಿ ಹಾಗೂ ತಂಡದ ವಿರುದ್ಧ ಲಹರಿ ಆಡಿಯೋ ಸಂಸ್ಥೆ ಹಾಕಿದ್ದ ಕೇಸ್ ಕಳೆದ ವರ್ಷವೇ ರಕ್ಷಿತ್ ತಂಡದ ಪರವಾಗಿ ತೀರ್ಪು ಬಂದಿದೆ. ಏನಿದು ಕೇಸ್? ಹೆಚ್ಚಿನ ವಿವರಕ್ಕೆ ರಕ್ಷಿತ್ ಶೆಟ್ಟಿ ಟ್ವೀಟ್ ನೋಡಬಹುದು. ಸದ್ಯ ಚಲನಚಿತ್ರ ಜಗತ್ತಿನಲ್ಲಿ ಕೃತಿಚೌರ್ಯ, ಕಾಪಿರೈಟ್ ಉಲ್ಲಂಘನೆ ಹೇಗೆ ಆಗುತ್ತದೆ? 2019ರಲ್ಲಿ ಕೇಂದ್ರ ಸರ್ಕಾರ ಮಾಡಿರುವ ತಿದ್ದುಪಡಿಗಳೇನು ಎಂಬ ವಿವರ ಇಲ್ಲಿದೆ.
Recommended Video
1952 ರ ಸಿನೆಮಾಟೋಗ್ರಾಫಿ ಕಾಯ್ದೆಯನ್ನು ತಿದ್ದುಪಡಿ ಮಾಡುವುದಕ್ಕಾಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಸಿನೆಮಾಟೋಗ್ರಾಫಿ ವಿಧೇಯಕವನ್ನು 2019 ನ್ನು ಮಂಡಿಸುವುದಕ್ಕೆ ಕೇಂದ್ರ ಸಂಪುಟವು ತನ್ನ ಅನುಮೋದನೆ ನೀಡಿತ್ತು. ಈ ವಿಧೇಯಕವು ಚಲನಚಿತ್ರಗಳ ಚೌರ್ಯ, ನಕಲು ಮಾಡುವಿಕೆಯನ್ನು ತಡೆಯುವ, ಅನಧಿಕೃತ ಕ್ಯಾಮ್ ಕಾರ್ಡಿಂಗ್ ಮತ್ತು ಚೌರ್ಯ ಮಾಡುವುದಕ್ಕೆ ದಂಡನಾ ಪ್ರಸ್ತಾವನೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ತಡೆಯುವ ಉದ್ದೇಶವನ್ನು ಒಳಗೊಂಡಿದೆ.
ಅನುಮತಿ ಇಲ್ಲದೆ ಚಿತ್ರಕಥೆ, ಗೀತ ಸಾಹಿತ್ಯ, ಹಾಡಿನ ತುಣುಕು ಬಳಕೆ, ಹಾಡಿನ ಸಂಗೀತ ಬಳಕೆ, ಹಿನ್ನಲೆ ಸಂಗೀತ ಬಳಕೆ ಮಾಡಿದರೆ ಅಪರಾಧವಾಗುತ್ತದೆ. 2019ರ ಸಿನೆಮಾಟೋಗ್ರಾಫಿ ಕಾಯ್ದೆಯಲ್ಲಿ ಸೇರ್ಪಡೆಗೊಂಡ ಅಂಶಗಳ ಬಗ್ಗೆ ವಿವರ ಮುಂದಿದೆ...

ಯಾವೆಲ್ಲ ಹೊಸ ಅಂಶಗಳು ಸೇರ್ಪಡೆಯಾಗಿವೆ
ಚಲನಚಿತ್ರ ನಕಲು ಹಾವಳಿಯನ್ನು ತಡೆಗಟ್ಟುವುದಕ್ಕಾಗಿ ತಿದ್ದುಪಡಿಗಳು ಈ ಅವಕಾಶಗಳನ್ನು ಒದಗಿಸುತ್ತವೆ:
* ಅನಧಿಕೃತ ರೆಕಾರ್ಡಿಂಗ್ ಪ್ರತಿಬಂಧಿಸಲು ಹೊಸ ಸೆಕ್ಷನ್ 6 AA ಸೇರ್ಪಡೆ
-ಸಿನೆಮಾಟೋಗ್ರಾಫ್ ಕಾಯ್ದೆ 1952 ರ ಸೆಕ್ಷನ್ 6 A ಬಳಿಕ ಈ ಕೆಳಗಿನ ಸೆಕ್ಷನ್ ಅನ್ನು ಸೇರ್ಪಡೆ ಮಾಡಲಾಗುವುದು.
6 AA: "ಆದಾಗ್ಯೂ ಹಾಲಿ ಜಾರಿಯಲ್ಲಿರುವ ಯಾವುದೇ ಕಾನೂನು ಅನ್ವಯ ಲೇಖಕರ ಲಿಖಿತ ಅನುಮತಿ ಇಲ್ಲದೆ ಯಾವುದೇ ದೃಶ್ಯ -ಶ್ರಾವ್ಯ ಸಲಕರಣೆಯನ್ನು ಗೊತ್ತಿದ್ದೂ ಅದನ್ನು ಯಾ ಚಲನಚಿತ್ರದ ಪ್ರತಿಯನ್ನು ಅಥವಾ ಅದರ ಭಾಗವನ್ನು ವರ್ಗಾಯಿಸುವುದಕ್ಕೆ, ಪ್ರಸಾರ ಮಾಡುವುದಕ್ಕೆ ಅಥವಾ ಆ ಕೃತ್ಯಕ್ಕೆ ದುಷ್ಪ್ರೇರಣೆ ನೀಡಲು ಅವಕಾಶ ಇಲ್ಲ. "
* ಲೇಖಕರು ಎಂಬ ಪದದ ವಿವರಣೆ ಕಾಪಿ ರೈಟ್ ಕಾಯ್ದೆ 1957 ರ ಸೆಕ್ಷನ್ 2 ರ ನಿಬಂಧನೆ (d) ಯಲ್ಲಿ ವ್ಯಕ್ತಪಡಿಸಿದಂತೆ ಇರತಕ್ಕದ್ದು.

10 ಲಕ್ಷ ರು ದಂಡ, 3 ವರ್ಷ ಸೆರೆವಾಸ
ಸೆಕ್ಷನ್ 7 ಕ್ಕೆ ತಿದ್ದುಪಡಿಯನ್ನು ಸೆಕ್ಷನ್ 6 AA ಯ ಪ್ರಸ್ತಾವನೆಗಳನ್ನು ಉಲ್ಲಂಘಿಸಿದಲ್ಲಿ ದಂಡನಾ ಪ್ರಸ್ತಾವನೆಗಳನ್ನು ತರಲು ಮಾಡಲಾಗಿದೆ. : ಪ್ರಮುಖ ಕಾಯ್ದೆಯ ಸೆಕ್ಷನ್ 7 ರಲ್ಲಿ , ಉಪ ಸೆಕ್ಷನ್ 1 ರ ಬಳಿಕ ಈ ಕೆಳಗಿನ ಉಪಸೆಕ್ಷನ್ (1A) ಯನ್ನು ಸೇರಿಸಿಕೊಳ್ಳತಕ್ಕದ್ದು.
"ಯಾವುದೇ ವ್ಯಕ್ತಿಯು ಸೆಕ್ಷನ್ 6 AA ಯ ಪ್ರಸ್ತಾವನೆಗಳನ್ನು ಉಲ್ಲ್ಲಂಘಿಸಿದಲ್ಲಿ , ಆ ವ್ಯಕ್ತಿಗೆ 3 ವರ್ಷಕ್ಕೆ ವಿಸ್ತರಿಸಬಹುದಾದ ಅವಧಿಯ ಸೆರೆ ವಾಸ ಅಥವಾ 10 ಲಕ್ಷ ರೂ. ಗಳವರೆಗೆ ದಂಡ ಇಲ್ಲವೇ ಈ ಎರಡನ್ನೂ ವಿಧಿಸಬಹುದಾಗಿದೆ''
ಈ ಪ್ರಸ್ತಾವಿತ ತಿದ್ದುಪಡಿಗಳು ಉದ್ಯಮದ ಆದಾಯವನ್ನು, ಹೆಚ್ಚಿಸುವುದಲ್ಲದೆ, ಉದ್ಯೋಗ ಸೃಷ್ಟಿಗೂ ಉತ್ತೇಜನ ಕೊಡಲಿವೆ, ಮತ್ತು ಭಾರತದ ರಾಷ್ಟ್ರೀಯ ಐ.ಪಿ. ನೀತಿಯ ಪ್ರಮುಖ ಉದ್ದೇಶಗಳನ್ನು ಈಡೇರಿಸಲಿವೆ ಹಾಗು ಕೃತಿಚೌರ್ಯ ಮತ್ತು ಆನ್ ಲೈನ್ ಸಾಮಗ್ರಿಗಳ ಅತಿಕ್ರಮಣ ವಿರುದ್ದ ಪರಿಹಾರ ಒದಗಿಸಲಿವೆ.

ಸರಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ
ಸಿನೆಮಾ ಮಾಧ್ಯಮ, ಅದರೊಂದಿಗೆ ಅಡಕಗೊಂಡಿರುವ ಸಲಕರಣೆಗಳು ಮತ್ತು ತಂತ್ರಜ್ಞಾನ ಮತ್ತು ಅದರ ಪ್ರೇಕ್ಷಕರು , ಕೇಳುಗರು ಕಾಲಾನುಕ್ರಮದಲ್ಲಿ ಗಮನಾರ್ಹ ಬದಲಾವಣೆಗೆ ಒಳಪಟ್ಟಿದ್ದಾರೆ. ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಟಿ.ವಿ. ವಾಹಿನಿಗಳ ಪ್ರವೇಶದಿಂದ ಮತ್ತು ಕೇಬಲ್ ಜಾಲದಿಂದ ದೇಶಾದ್ಯಂತ ವ್ಯಾಪಕ ಬದಲಾವಣೆಗಳಾಗಿವೆ. ನವ ಡಿಜಿಟಲ್ ತಂತ್ರಜ್ಞಾನದ ಉದಯವು ಕೃತಿ ಚೌರ್ಯ, ನಕಲು ಹಾವಳಿಯ ಆತಂಕವನ್ನೂ ಉಂಟು ಮಾಡಿರುವುದಲ್ಲದೆ , ಅಂತರ್ಜಾಲದಲ್ಲಿ ಚಲನಚಿತ್ರಗಳ ಕೃತಿಚೌರ್ಯದ ಆವೃತ್ತಿಯನ್ನು ಬಿಡುಗಡೆ ಮಾಡುವುದಕ್ಕೂ ಅವಕಾಶ ನೀಡುತ್ತಿರುವುದರಿಂದ ಚಲನಚಿತ್ರ ಉದ್ಯಮ ಮತ್ತು ಸರಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ.

ಕ್ಯಾಮ್ ಕಾರ್ಡಿಂಗ್ ಮತ್ತು ನಕಲು ತಡೆ
ಚಲನ ಚಿತ್ರ ಉದ್ಯಮ ಬಹಳ ಧೀರ್ಘ ಕಾಲದಿಂದ , ಕ್ಯಾಮ್ ಕಾರ್ಡಿಂಗ್ ಮತ್ತು ನಕಲು ತಡೆಯಲು ಕಾನೂನು ತಿದ್ದುಪಡಿ ತರುವ ಬಗ್ಗೆ ಪರಿಶೀಲಿಸಬೇಕು ಎಂದು ಆಗ್ರಹಿಸುತ್ತಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಂಬಯಿಯಲ್ಲಿ 2019 ರ ಜನವರಿ 19 ರಂದು ಭಾರತೀಯ ಸಿನೆಮಾದ ರಾಷ್ಟ್ರೀಯ ವಸ್ತುಸಂಗ್ರಹಾಲಯ ಉದ್ಘಾಟನಾ ಸಮಾರಂಭದಲ್ಲಿ ಕ್ಯಾಮ್ ಕಾರ್ಡಿಂಗ್ ಹಾವಳಿ ಮತ್ತು ನಕಲು ತಡೆಗೆ ಕ್ರಮಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದರು. ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಈ ವಿಷಯವನ್ನು ಕೇಂದ್ರ ಸಂಪುಟದ ಪರಿಗಣನೆಗೆ ಮಂಡಿಸಿತ್ತು. ಮಾಹಿತಿ ಕೃಪೆ: ವಾರ್ತಾ ಇಲಾಖೆ, ಕಾಪಿರೈಟ್ ವೆಬ್ ತಾಣ
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications