ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮೇತರ ಪತ್ರಕರ್ತ ರಹಸ್ಯವಾಗಿ ಪವಿತ್ರ ಮೆಕ್ಕಾ ತಲುಪಿದ: ಮುಂದೆ ಏನಾಯ್ತು?

|
Google Oneindia Kannada News

ಮೆಕ್ಕಾದಲ್ಲಿ ಮುಸ್ಲಿಮೇತರರ ಪ್ರವೇಶವನ್ನು ನಿಷೇಧಿಸಲಾಗಿದೆ. ಇದರ ಹೊರತಾಗಿಯೂ, ಇಸ್ರೇಲ್‌ ಚಾನೆಲ್‌ನ ಪತ್ರಕರ್ತರೊಬ್ಬರು ಮುಸ್ಲಿಮರ ಈ ಪವಿತ್ರ ಸ್ಥಳಕ್ಕೆ ಹೋಗಿದ್ದಾರೆ. ನಂತರ ಪ್ರಪಂಚದಾದ್ಯಂತ ಜನರು ಇದನ್ನು ಖಂಡಿಸುತ್ತಿದ್ದಾರೆ. ಈ ಬೆಳವಣಿಗೆಯ ನಂತರ ಈ ಪತ್ರಕರ್ತನಿಗೆ ಸಹಾಯ ಮಾಡಿದ ಸೌದಿ ಪ್ರಜೆಯನ್ನು ಮೆಕ್ಕಾ ಪೊಲೀಸರು ಬಂಧಿಸಿದ್ದಾರೆ.

ಮುಸ್ಲಿಮೇತರ ಪತ್ರಕರ್ತರೊಬ್ಬರು ಮೆಕ್ಕಾ ನಗರವನ್ನು ತಲುಪಿದ ನಂತರ ಭಾರಿ ವಿವಾದ ಹುಟ್ಟಿಕೊಂಡಿದೆ. ಈ ಬಗ್ಗೆ ಜಗತ್ತಿನಾದ್ಯಂತ ಮುಸ್ಲಿಮರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ ಮೆಕ್ಕಾದಲ್ಲಿ ಮುಸ್ಲಿಮೇತರರ ಪ್ರವೇಶವನ್ನು ನಿಷೇಧಿಸಲಾಗಿದೆ.

ಇದೇ ಸಮಯದಲ್ಲಿ, ಸೌದಿ ಅರೇಬಿಯಾದ ಪವಿತ್ರ ನಗರವಾದ ಮೆಕ್ಕಾದಿಂದ ಇಸ್ರೇಲಿಯ ಯಹೂದಿ ಪತ್ರಕರ್ತನ ವರದಿಯ ಬಗ್ಗೆ ಗಲಾಟೆ ನಡೆದಿದೆ. ಈ ಪತ್ರಕರ್ತ ಸೌದಿ ಅರೇಬಿಯಾದ ಮೆಕ್ಕಾ ನಗರಕ್ಕೆ ರಹಸ್ಯವಾಗಿ ತಲುಪಿದ್ದ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಈ ಕೆಲಸದಲ್ಲಿ ವರದಿಗೆ ಸಹಾಯ ಮಾಡಿದ ಸೌದಿ ಪ್ರಜೆಯನ್ನು ಬಂಧಿಸಲಾಗಿದೆ.

 ಇಸ್ರೇಲ್‌ ವಾಹಿನಿಯೊಂದು ಮೆಕ್ಕಾದಿಂದ ವರದಿ

ಇಸ್ರೇಲ್‌ ವಾಹಿನಿಯೊಂದು ಮೆಕ್ಕಾದಿಂದ ವರದಿ

ಸೌದಿ ಅರೇಬಿಯಾದ ಮೆಕ್ಕಾ ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮೊಹಮ್ಮದ್ ಅವರ ಜನ್ಮಸ್ಥಳವಾಗಿದೆ. ಆದ್ದರಿಂದ ಈ ಸ್ಥಳವನ್ನು ಮುಸ್ಲಿಮರಿಗೆ ಸಾಕಷ್ಟು ಪವಿತ್ರವೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಹಜ್ ಮಾಡಲು ಪ್ರಪಂಚದಾದ್ಯಂತದ ಮುಸ್ಲಿಂ ಅನುಯಾಯಿಗಳು ಇಲ್ಲಿಗೆ ಬರುತ್ತಾರೆ. ಇತ್ತೀಚೆಗೆ ಹಜ್ ಯಾತ್ರೆ ಪೂರ್ಣಗೊಂಡಿದೆ. ಇಸ್ರೇಲ್‌ನ ಯಹೂದಿ ಪತ್ರಕರ್ತನ ಬಗ್ಗೆ ತೀವ್ರವಾಗಿ ಚರ್ಚಿಸಲಾಗುತ್ತಿದೆ. ಜುಲೈ 13ರ ಸೋಮವಾರದಂದು ಇಸ್ರೇಲ್‌ ವಾಹಿನಿಯೊಂದು ಮೆಕ್ಕಾದಿಂದ ವರದಿಯನ್ನು ತೋರಿಸಿದೆ ಎಂದು ಹೇಳಲಾಗುತ್ತಿದೆ.

ಈ ವರದಿಯಲ್ಲಿ ಚಾನೆಲ್‌ನ ವರ್ಲ್ಡ್ ನ್ಯೂಸ್ ಎಡಿಟರ್ ಗಿಲ್ ತಮರಿ ಮೆಕ್ಕಾ ನಗರದಲ್ಲಿ ಪ್ರಯಾಣಿಸಿ ವರದಿ ಮಾಡುತ್ತಿರುವುದನ್ನು ಕಾಣಬಹುದು. ಮೆಕ್ಕಾ ನಗರದ ಈ ವರದಿಯಲ್ಲಿ ವಿಶ್ವವಿಖ್ಯಾತ ಮೆಕ್ಕಾ ಗೇಟ್ ಅನ್ನು ಸಹ ತೋರಿಸಲಾಗಿದೆ. ಈ ದ್ವಾರದಿಂದ ಮೆಕ್ಕಾ ನಗರದ ಗಡಿಯನ್ನು ಪರಿಗಣಿಸಲಾಗಿದೆ. ಈ ಗೇಟ್ ಒಳಗೆ ಯಾವುದೇ ಮುಸ್ಲಿಮೇತರರ ಪ್ರವೇಶವನ್ನು ನಿಷೇಧಿಸಲಾಗಿದೆ. ಮುಸ್ಲಿಮೇತರರು ಇಲ್ಲಿಗೆ ಬಂದರೆ ದಂಡದೊಂದಿಗೆ ಗಡಿಪಾರು ಮಾಡಬಹುದು.

 ಪ್ರಪಂಚದಾದ್ಯಂತ ಮುಸ್ಲಿಮರ ಆಕ್ರೋಶ

ಪ್ರಪಂಚದಾದ್ಯಂತ ಮುಸ್ಲಿಮರ ಆಕ್ರೋಶ

ಈ ಪ್ರಸಿದ್ಧ ಮೆಕ್ಕಾ ಗೇಟ್ ಮೂಲಕ ವರದಿಗಾರ ತಮರಿ ಹಾದುಹೋಗುತ್ತಿರುವುದು ಕಂಡುಬಂದಿದೆ. ಹಜ್ ಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಸೇರುವ ಮೆಕ್ಕಾದ ಹೊರವಲಯದಲ್ಲಿರುವ ಅರಾಫತ್ ಪರ್ವತದಲ್ಲಿ ಅವರು ಸೆಲ್ಫಿ ತೆಗೆದುಕೊಂಡರು. ತಮರಿಯ ಮೆಕ್ಕಾ ಭೇಟಿಯ ಬಗ್ಗೆ ಪ್ರಪಂಚದಾದ್ಯಂತ ಮುಸ್ಲಿಮರು ತುಂಬಾ ಕೋಪಗೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ 'ಯಹೂದಿ ಜನಾನ' ಎಂಬ ಹ್ಯಾಶ್‌ಟ್ಯಾಗ್‌ ಹರಿದಾಡುತ್ತಿದೆ.

 ಮೆಕ್ಕಾ ಭೇಟಿಯು ಒಂದು ಪ್ರಮುಖ ಸಾಧನೆ

ಮೆಕ್ಕಾ ಭೇಟಿಯು ಒಂದು ಪ್ರಮುಖ ಸಾಧನೆ

ಈ ವಿಷಯದಲ್ಲಿ ವಿವಾದ ಉಲ್ಬಣಗೊಂಡಿದ್ದಕ್ಕಾಗಿ ಚಾನೆಲ್ 13 ಕ್ಷಮೆಯಾಚಿಸಿದರೂ, ವರ್ಲ್ಡ್ ನ್ಯೂಸ್ ಎಡಿಟರ್ ಗಿಲ್ ತಮರಿ ಅವರ ಮೆಕ್ಕಾ ಭೇಟಿಯು ಒಂದು ಪ್ರಮುಖ ಸಾಧನೆಯಾಗಿದೆ ಎಂದು ಒಟ್ಟಾಗಿ ತನ್ನ ವರದಿಗಾರನನ್ನು ಹೊಗಳಿತು. ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತರುವುದು ಇದರ ಉದ್ದೇಶವಾಗಿರಲಿಲ್ಲ. ಇದರಿಂದ ಯಾರಿಗಾದರೂ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮಿಸಿ ಎಂದಿದ್ದಾರೆ. ಪತ್ರಕರ್ತ ತಮರಿ ಕೂಡ ಟ್ವೀಟ್ ಮೂಲಕ ಕ್ಷಮೆ ಯಾಚಿಸಿದ್ದು, 'ಮೆಕ್ಕಾ ಮತ್ತು ಅದರ ಪ್ರಮುಖ ಸ್ಥಳಗಳ ಸೌಂದರ್ಯವನ್ನು ತೋರಿಸುವುದು ಈ ವಿಡಿಯೋದ ಉದ್ದೇಶವೇ ಹೊರತು ಯಾರ ಭಾವನೆಗಳಿಗೂ ಧಕ್ಕೆ ತರಬಾರದು'ಎಂದು ಹೇಳಿದ್ದಾರೆ.

ಇನ್ನು ಈ ಕುರಿತು ಸೌದಿ ಹೀಬ್ರೂ ಭಾಷೆಯಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದು, ನನ್ನ ಆತ್ಮೀಯ ಇಸ್ರೇಲ್ ಸ್ನೇಹಿತರೇ, ನಿಮ್ಮ ಪತ್ರಕರ್ತರೊಬ್ಬರು ಮೆಕ್ಕಾ ನಗರಕ್ಕೆ ಬಂದು ಇಡೀ ನಗರ ಸುತ್ತಿ ವಿಡಿಯೋ ಮಾಡುತ್ತಾರೆ ಮತ್ತು ನಿಮ್ಮ ಚಾನೆಲ್ ಕೂಡ ಅದನ್ನು ಪ್ರಸಾರ ಮಾಡುತ್ತದೆ. ನಿಮಗೆ ನಾಚಿಕೆಯಾಗಬೇಕು ನಾವು ಮೋಸದಿಂದ ನಿಮ್ಮ ಪವಿತ್ರ ಸ್ಥಳಕ್ಕೆ ಬಂದರೆ ಹೇಗೆ ಅನಿಸುತ್ತದೆ? ನೀವು ಇಸ್ಲಾಂ ಧರ್ಮವನ್ನು ಅವಮಾನಿಸಿದ್ದೀರಿ ಎಂದು ಬರೆದುಕೊಂಡಿದ್ದಾನೆ.

 ಮೆಕ್ಕಾಗೆ ಹೋಗಲು ವಿಶೇಷ ಪರವಾನಗಿ ಬೇಕು

ಮೆಕ್ಕಾಗೆ ಹೋಗಲು ವಿಶೇಷ ಪರವಾನಗಿ ಬೇಕು

ಮೆಕ್ಕಾಗೆ ಹೋಗಲು ವಿಶೇಷ ಪರವಾನಗಿ ಅಗತ್ಯವಿದೆ. ಈ ಸ್ಥಳಕ್ಕೆ ಹೋಗುವ ವ್ಯಕ್ತಿ ಮುಸ್ಲಿಂ ಎಂಬುದಕ್ಕೆ ತನಿಖೆ ಮಾಡುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಯಾವುದೇ ಮುಸ್ಲಿಮೇತರರು ಈ ಸ್ಥಳಕ್ಕೆ ಬಂದರೆ, ಈ ಪವಿತ್ರ ಸ್ಥಳದ ಪಾವಿತ್ರ್ಯತೆ ನಾಶವಾಗುತ್ತದೆ ಎಂದು ಜನರು ನಂಬುತ್ತಾರೆ. ಈ ಪ್ರಯಾಣದಲ್ಲಿ ಯಹೂದಿ ಪತ್ರಕರ್ತರಿಗೆ ಸಹಾಯ ಮಾಡಿದ ಸೌದಿ ಪ್ರಜೆಯನ್ನು ಮೆಕ್ಕಾ ಪೊಲೀಸರು ಬಂಧಿಸಿದ್ದಾರೆ.

ಗ್ರ್ಯಾಂಡ್ ಮೆಕ್ಕಾ ಮಸೀದಿಯಿಂದ ಹಜ್ ಸಮಯದಲ್ಲಿ ಮುಸ್ಲಿಂ ಸಮುದಾಯದವರು ಬಳಸುವ ಮಾರ್ಗವಾದ ಅರಾಫತ್‌ಗೆ ಯಹೂದಿ ಪತ್ರಕರ್ತರಿಗೆ ಈ ವ್ಯಕ್ತಿ ಸಹಾಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮೆಕ್ಕಾ ಪೊಲೀಸ್ ವಕ್ತಾರರ ಪ್ರಕಾರ, ಯಹೂದಿ ಪತ್ರಕರ್ತರಿಗೆ ಮೆಕ್ಕಾ ನಗರವನ್ನು ತಲುಪಲು ಸಹಾಯ ಮಾಡಿದ ಸೌದಿ ಪ್ರಜೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸದ್ದಾರೆ.

English summary
What happened before the non-Muslim journalist secretly reached the holy Mecca? here more, journalist sneaks into Mecca, defying non-Muslim entry ban, Channel 13 reporter Gil Tamari apologises after driving past Grand Mosque and taking selfie on Mount Arafat Gil Tamari,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X