ನೀವು ಖರೀದಿಸುವ ಹೊಸ ಕಾರಿನಲ್ಲಿ ಯಾವೆಲ್ಲ ಸುರಕ್ಷತೆ ಸೌಲಭ್ಯಗಳಿರಬೇಕು?-ಇಲ್ಲಿವೆ ಪ್ರಮುಖಂಶಗಳು
ಆಟೋಮೊಬೈಲ್ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಅಭಿವೃದ್ಧಿಗಳ ಕ್ರಾಂತಿಯೇ ಆಗುತ್ತಿದೆ. ಕೈಗೆಟಕುವ ದರದಲ್ಲಿ ವಾಹನಗಳನ್ನು ಮಾರುಕಟ್ಟೆಗೆ ಬಿಡುವ ಮೂಲಕ ಗ್ರಾಹಕರನ್ನು ಸೆಳೆಯುವ ಕೆಲಸವನ್ನು ವಾಹನ ತಯಾರಕ ಕಂಪನಿಗಳು ಮಾಡುತ್ತಿವೆ. ಈ ಮೂಲಕ ಇದೀಗ ವಾಹನಗಳ ಮಾರಾಟದಲ್ಲೂ ಭಾರೀ ಸ್ಪರ್ಧೆ ಏರ್ಪಟ್ಟಿದೆ. ಆದರೆ ಗ್ರಾಹಕರು ಕಡಿಮೆ ದರದಲ್ಲಿ ಕಾರು ಸಿಗುತ್ತದೆ ಎಂದು ಕೊಳ್ಳುವ ಮುಂಚೆ ಸುರಕ್ಷತೆ ಬಗ್ಗೆಯೋ ಯೋಚನೆ ಮಾಡಬೇಕಾಗುತ್ತದೆ. ಹಾಗಾದರೆ ಯಾವೆಲ್ಲ ಸುರಕ್ಷತೆಗಳು ಇರಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹೊಸ ಕಾರುಗಳ ಖರೀದಿ ಆದ್ಯತೆಯು ಕಳೆದ ಒಂದು ದಶಕದ ಅವಧಿಯಲ್ಲಿ ತುಂಬಾ ಬದಲಾವಣೆ ಆಗಿದ್ದು, ಗ್ರಾಹಕರು ಈ ಹಿಂದಿನಂತೆ ಬೆಲೆ ಮತ್ತು ಮೈಲೇಜ್ ಕುರಿತಾಗಿ ಹೆಚ್ಚು ಯೋಚಿಸದೆ ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ಶ್ರೇಣಿಯ ಕಾರುಗಳನ್ನು ಖರೀದಿ ಮಾಡುತ್ತಿದ್ದು, ಈ ನಿರ್ಧಾರ ಮುಂದೆ ಆಗುವ ಅನಾಹುತಗಳಿಗೂ ಕಾಣವಾಗಬಹುದು. ಆದ್ದರಿಂದ ಅಳೆದು ತೂಗಿ ಎಲ್ಲಾ ಸುರಕ್ಷತೆಗಳ ಬಗ್ಗೆ ವಿಚಾರಿಸಿ ವಾಹನಗಳನ್ನು ಕೊಳ್ಳುಯವುದು ಒಳಿತು.

ಹೊಸ ಕಾರು ಖರೀದಿದಾರರು ಇದೀಗ ಮಾರುಕಟ್ಟೆಯಲ್ಲಿ ಉತ್ತಮ ಸುರಕ್ಷತೆಯ ಕಾರುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಭವಿಷ್ಯದಲ್ಲಿ ಕಾರು ಖರೀದಿಸುವವರು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ರೇಟಿಂಗ್ಸ್ ಹೊಂದಿರುವ ಮಾದರಿಗಳನ್ನೇ ಖರೀದಿಸುವುದು ಉತ್ತಮ. ಜೊತೆಗೆ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಹೊಂದಿರುವ ಕಾರುಗಳು ಸಹ ಉತ್ತಮ ಸುರಕ್ಷತೆ ಖಾತ್ರಿಪಡಿಸಲಿದ್ದು, ಈ ಮಾರ್ಗ ಅಪಘಾತಗಳನ್ನು ತಡೆಯುವ ಮೂಲಕ ಜೀವಹಾನಿ ಪ್ರಕರಣಗಳನ್ನು ತಡೆಯಲು ಸಹಾಯವಾಗುತ್ತದೆ.
ಹೊಸ ಕಾರುಗಳಲ್ಲಿ ಇನ್ಮುಂದೆ ಎಬಿಎಸ್ ಮತ್ತು ಇಬಿಡಿ ಸೌಲಭ್ಯಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಿ. ಇವು ಸಹ ಅಪಘಾತವನ್ನು ನಿಯಂತ್ರಿಸಲು ಸಹಾಯ ಆಗಲಿದೆ. ಈ ಎಬಿಎಸ್ ಸೌಲಭ್ಯವು ಸಡನ್ ಆಗಿ ಬ್ರೇಕ್ ಹಾಕಿದಾಗ ಚಕ್ರಗಳು ಲಾಕ್ ಆಗುವುದನ್ನು ತಪ್ಪಿಸುತ್ತದೆ. ಹಾಗೆಯೇ ಇಬಿಡಿ ಸೌಲಭ್ಯವು ತುರ್ತು ಸಂದರ್ಭದಲ್ಲಿ ಸಡನ್ ಬ್ರೇಕ್ ಬಳಸಿದಾಗ ಉಂಟಾಗುವ ಬಲವನ್ನು ಎಲ್ಲಾ ಚಕ್ರಗಳಿಗೂ ಸಮತೋಲಿತವಾಗಿ ಪೂರೈಸುವ ಮೂಲಕ ಕಾರಿನ ವೇಗವನ್ನು ಸುರಕ್ಷಿತವಾಗಿ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಲಿದೆ.
ಇನ್ನು ಇತ್ತೀಚಿನ ಹೊಸ ಕಾರುಗಳಲ್ಲಿ ರಿಯರ್ ಪಾರ್ಕಿಂಗ್ ಕ್ಯಾಮೆರಾ ಸೌಲಭ್ಯವು ಕಾರುಗಳ ಪಾರ್ಕಿಂಗ್ ಸಮಯದಲ್ಲಿ ತುಂಬಾ ಸಹಾಯ ಆಗಲಿದ್ದು, ಸೆನ್ಸಾರ್ ಸೌಲಭ್ಯವು ಸಹ ಇಕ್ಕಟ್ಟಾದ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡುವ ಸಮಯದಲ್ಲಿ ಚಾಲಕನಿಗೆ ತುಂಬಾ ಸಹಕಾರಿಯಾಗಲಿದೆ. ಆದ್ದರಿಂದ ಈ ಎರಡೂ ಸೇಫ್ಟಿ ಸೌಲಭ್ಯಗಳು ನಿಮ್ಮ ಹೊಸ ಕಾರಿನಲ್ಲಿ ಇವೆಯಾ ಎಂದು ಮೊದಲು ತಿಳಿದುಕೊಳ್ಳಿ.
ಅದರಲ್ಲೀ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ತಾಪಾಮನದ ಪ್ರಮಾಣ ಹೆಚ್ಚಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ದೀರ್ಘಕಾಲದ ಕಾರು ಪ್ರಯಾಣವನ್ನು ಅರಾಮದಾಯಕಗೊಳಿಸುವಲ್ಲಿ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಸೌಲಭ್ಯವು ತುಂಬಾ ಸಹಕಾರಿಯಾಗಲಿದೆ. ಈ ಹೊಸ ಸೌಲಭ್ಯವು ಹೊರಗಿನ ವಾತಾವರಣಕ್ಕೆ ತಕ್ಕಂತೆ ಸ್ವಯಂಚಾಲಿತವಾಗಿ ಕಾರಿನ ಒಳಾಂಗಣ ತಾಪಮಾನವನ್ನು ನಿಯಂತ್ರಿಸುವ ಮೂಲಕ ಕಾರು ಚಾಲನೆಯನ್ನು ಸುಲಭಗೊಳಿಸಲಿದೆ.
ಕಾರು ಚಾಲನೆ ಸಮಯದಲ್ಲಿ ಡಿಜಿಟಲ್ ಇನ್ಪೋಟೈನ್ ಮೆಂಟ್ ಸಿಸ್ಟಂ ಸೌಲಭ್ಯವು ಹಲವು ಮಾಹಿತಿಗಳನ್ನು ಒದಗಿಸುವುದರ ಜೊತೆ ಮನರಂಜನೆಗೆ ಸಹಕಾರಿಯಾಗಿದದೆ. ಆದ್ದರಿಂದ ಹೊಸ ಕಾರುಗಳಲ್ಲಿ ಇನ್ಪೋಟೈನ್ ಮೆಂಟ್ ಸಿಸ್ಟಂ ಸೌಲಭ್ಯವು ಸಾಕಷ್ಟು ಜನಪ್ರಿಯ ಆಗುತ್ತಿದ್ದು, ಇವು ವೈರ್‌ಲೆಸ್ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಸಪೋರ್ಟ್‌ನೊಂದಿಗೆ ಇನ್ ನ್ಯಾವಿಗೇಷನ್ ಒದಗಿಸಲಿವೆ.
ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೌಲಭ್ಯವು ಸಹ ಆಧುನಿಕ ತಾಂತ್ರಿಕ ಸೌಲಭ್ಯ ಪ್ರೇರಿತ ಕಾರುಗಳಲ್ಲಿ ಪ್ರಮುಖ ಆಗಿದೆ. ಟಿಪಿಎಂಎಸ್ ಸೌಲಭ್ಯವು ಚಕ್ರಗಳಲ್ಲಿ ಗಾಳಿಯ ಒತ್ತಡದ ಮಾಹಿತಿಯನ್ನು ಡಿಜಿಟಲ್ ಮೂಲಕ ತಿಳಿಯಬಹುದಾಗಿದ್ದು, ಅಪಘಾತಗಳನ್ನು ತಡೆಯುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ ಹೊಸ ಕಾರು ಖರೀದಿಸುವ ಮುನ್ನ ಗ್ರಾಹಕರು ಈ ಮೇಲಿನ ಎಲ್ಲಾ ಅಂಶಗಳು ಇವೆಯಾ ಎಂದು ಗಮನಿಸಬೇಕಾಗುತ್ತದೆ.
ಒಟ್ಟಿನಲ್ಲಿ ಕಾರುಗಳನ್ನು ಖರೀದಿ ಮಾಡುವುದು ದೊಡ್ಡ ವಿಷಯವಲ್ಲ, ಆದರೆ ಅವುಗಳಲ್ಲಿ ಯಾವೆಲ್ಲ ಸೆಫ್ಟಿ ಸೌಲಭ್ಯಗಳನ್ನು ಹೊಂದಿವೆ ಎಂದು ಖರೀದಿಗೂ ಮೊದಲು ಗಮನಿಸಬೇಕಾಗುತ್ತದೆ.












Click it and Unblock the Notifications