ಜಿಮ್ ತರಬೇತಿದಾರರು ತಿಳಿದುಕೊಳ್ಳಲೇಬೇಕಾದ ಸಂಗತಿ: ಇಲ್ಲಿದೆ ಸಲಹೆಗಳು
ದೇಹದ ಆರೋಗ್ಯ ಕಾಪಾಡಿಕೊಳ್ಳುವುದಲ್ಲದೆ, ದೇಹವನ್ನು ಜೀರೋ ಸೈಜ್ ನಲ್ಲಿಟ್ಟು ಕೊಳ್ಳಲೆಂದೇ ಯುವ ಜನತೆ ಜಿಮ್‌ನತ್ತ ಮುಖ ಮಾಡುತ್ತಿದ್ದಾರೆ. ಅದರಲ್ಲೂ ನಗರದಲ್ಲಿ ಲಿಂಗಬೇಧವಿಲ್ಲದೆ ಜಿಮ್‌ಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಜಿಮ್‌ಗೆ ಹೋಗುವವರು ಒಂದಷ್ಟು ಮುಂಜಾಗ್ರತೆ ವಹಿಸುವುದು ಒಂದೆಡೆಯಾದರೆ ಜಿಮ್ ತರಬೇತಿದಾರರು ಕೂಡ ಕೆಲವೊಂದು ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ ಅಥವಾ ತರಬೇತಿಯನ್ನು ಪಡೆದುಕೊಳ್ಳುವುದು ಅಗತ್ಯವಾಗಿದ್ದು, ಇದರಿಂದ ಜಿಮ್ ಮಾಡುವಾಗ ಒಂದು ವೇಳೆ ಹೃದಯಸ್ಥಂಭನವಾದರೆ ಅಂತಹವರ ಪ್ರಾಣ ರಕ್ಷಣೆ ಮಾಡಲು ಸಾಧ್ಯವಾಗಲಿದೆ.
ಈಗಾಗಲೇ ಜಿಮ್ ಮಾಡುತ್ತಿದ್ದಾಗಲೇ ಕೆಲವರು ಹೃದಯಾಘಾತದಿಂದ ಸಾವನ್ನಪ್ಪಿದ ಪ್ರಕರಣಗಳು ನಡೆದಿದ್ದು, ಇದು ಬಹುದೊಡ್ಡ ಸುದ್ದಿಯಾಗಿತ್ತು. ಜತೆ ಜತೆಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ನೈಜ ಸುದ್ದಿಗಳಿಗಿಂತ ಹೆಚ್ಚಾಗಿ ಊಹಾ ಪೋಹದ ಸುದ್ದಿಗಳೇ ಜಾಸ್ತಿಯಾಗಿ ಹರಡಿದ್ದರಿಂದ ಕೆಲವರು ಜಿಮ್ ಗೆ ಹೋಗಲು ಭಯಪಡುವಂತಹ ವಾತಾವರಣವೂ ನಿರ್ಮಾಣವಾಗಿದ್ದನ್ನು ನಾವು ಮರೆಯುವಂತಿಲ್ಲ.

ಇದು ಎಷ್ಟರ ಮಟ್ಟಿಗೆ ಜನರಲ್ಲಿ ಆತಂಕವನ್ನು ಸೃಷ್ಟಿಸಿತೆಂದರೆ ಜಿಮ್ ಮಾಡಿದರೆ ಹೃದಯಸ್ತಂಭನವಾಗುತ್ತದೆ ಎಂಬ ಮಾತುಗಳು ಕಾಡ್ಗಿಚ್ಚಿನಂತೆ ಹರಡಲಾರಂಭಿಸಿತು. ಇದರಿಂದ ಕೆಲವರು ಜಿಮ್ ನಿಂದ ಹಿಂದೆ ಸರಿದಿದ್ದರು. ಹಾಗಾದರೆ ನಿಜವಾಗಿಯೂ ಜಿಮ್ ನಿಂದ ಹೃದಯ ಸ್ತಂಭನವಾಗುತ್ತದೆಯಾ ಎಂಬ ಪ್ರಶ್ನೆ ಎಲ್ಲರನ್ನು ಕಾಡದಿರದು.? ಆದರೆ ಈ ಪ್ರಶ್ನೆಗಳಿಗೆ ಹಂಡ್ರೆಡ್ ಪರ್ಸೆಂಟ್ ನಿಜ ಎಂದು ಹೇಳಲು ಸಾಧ್ಯವಿಲ್ಲ. ವೈದ್ಯರು ಕೂಡ ನಿಜವೆಂದು ನಂಬುವುದಿಲ್ಲ.
ಹೃದಯ ಸ್ತಂಭನವಾಗಲು ಕಾರಣವೇನು?
ಹಾಗಾದರೆ ಹೃದಯ ಸ್ತಂಭನವಾಗಲು ಕಾರಣವೇನು ಎಂಬುದಕ್ಕೆ ವೈದ್ಯರು ನೀಡುವ ಉತ್ತರವೇ ಬೇರೆಯಾಗಿದೆ. ಅದು ಏನೆಂದರೆ ಕೆಲವರು ಡಯಾಬಿಟೀಸ್, ರಕ್ತದೊತ್ತಡ ದಂತಹ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಅಂತಹವರು ಅತಿ ಹೆಚ್ಚಾಗಿ ವ್ಯಾಯಾಮ ಅಥವಾ ಜಿಮ್ ಮಾಡುವುದರಿಂದ ಕೆಲವೊಮ್ಮೆ ಅವರಲ್ಲಿ ಹೃದಯ ಸ್ತಂಭನ ವಾಗುವ ಸಾಧ್ಯತೆಗಳಿವೆ. ಹಾಗೆಂದು ಜಿಮ್ ಮಾಡುವವರಿಗೆಲ್ಲ ಹೃದಯಸ್ತಂಭನವಾಗುತ್ತದೆ ಎಂಬುದು ನಿಜವಲ್ಲ ಎಂಬುದಾಗಿ ಅಭಿಪ್ರಾಯಪಡುತ್ತಾರೆ.

ಜಿಮ್ ತರಬೇತಿದಾರರು ಜಿಮ್ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೋ ಹಾಗೆಯೇ ಹೃದಯಸ್ಥಂಭನದಂತಹ ಘಟನೆಗಳು ನಡೆದಾಗ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆಯೂ ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ. ಅದರಲ್ಲೂ ಜಿಮ್ ತರಬೇತಿದಾರರು ಮುಖ್ಯವಾಗಿ ಸಿಪಿಆರ್ (ಕಾರ್ಡಿಯೋ ಪಲ್ಮನರಿ ರಿಸಕ್ಸಿಟೇಷನ್) ಬಗ್ಗೆ ತಿಳಿದುಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಏಕೆಂದರೆ ಕಾರ್ಡಿಯೋ ಪಲ್ಮನರಿ ರಿಸಕ್ಸಿಟೇಷನ್ (ಸಿಪಿಆರ್) ಎನ್ನುವುದು ಜೀವರಕ್ಷಕ ತಂತ್ರವಾಗಿದ್ದು, ಹೃದಯಾಘಾತವಾದಾಗ ಮತ್ತು ಇನ್ನು ಅನೇಕ ತುರ್ತು ಸಂದರ್ಭಗಳಲ್ಲಿ, ಹೃದಯ ಬಡಿತವು ನಿಂತು ಹೋದರೆ ಮತ್ತೆ ಹೃದಯವನ್ನು ಎಚ್ಚರಿಸಲು ಇದು ಸಾಧ್ಯಿವಾಗುತ್ತದೆ. ಆದ್ದರಿಂದ ಪ್ರತಿ ಜಿಮ್ ಕೇಂದ್ರಗಳಲ್ಲಿ ಜಿಮ್ ತರಬೇತಿದಾರರು ಸಿಪಿಆರ್ ಬಗ್ಗೆ ತರಬೇತಿ ಪಡೆಯುವುದು ಬಹುಮುಖ್ಯ ಎನ್ನುವುದು ತಜ್ಞ ವೈದ್ಯರ ಅಭಿಪ್ರಾಯವಾಗಿದೆ.
ಹೃದ್ರೋಗ ತಜ್ಞರು ನೀಡುವ ಸಲಹೆ ಏನು?
ಈ ಕುರಿತಂತೆ ಈ ಹಿಂದೆಯೇ ನಮ್ಮ ಮೈಸೂರು ಫಿಟ್ ಮೈಸೂರು ಕಾರ್ಯಕ್ರಮ ನಡೆಸಿರುವ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ. ಕೇಶವಮೂರ್ತಿ ವಿ. ಅವರ ನೇತೃತ್ವದ ವೈದ್ಯಕೀಯ ತಂಡವು ಮೈಸೂರು ನಗರದ ಸುಮಾರು 200ಕ್ಕೂ ಹೆಚ್ಚು ಜಿಮ್ ತರಬೇತುದಾರರಿಗೆ ಸಿಪಿಆರ್ ವಿಧಾನದ ಬಳಕೆಯ ಕುರಿತು ಮಾಹಿತಿ ಮತ್ತು ಈ ವೈದ್ಯಕೀಯ ವಿಧಾನದ ಮಹತ್ವದ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಿ ಗಮನಸೆಳೆದಿದೆ.
ಇತ್ತೀಚಿನ ದಿನಗಳಲ್ಲಿ ಜಿಮ್ ಮಾಡುವವರಲ್ಲಿ ಜಿಮ್ ಮಾಡುವ ಸಮಯದಲ್ಲಿ ಹೃದಯ ಸ್ತಂಭನವಾಗುತ್ತಿದೆ ಎಂಬ ಅಂಶವು ಚಾಲ್ತಿಯಲ್ಲಿದ್ದು, ಜಿಮ್ ಮಾಡುವುದರಿಂದ ಹೃದಯ ಸ್ತಂಭನವಾಗುತ್ತದೆ ಎಂಬುದು ಸತ್ಯವಲ್ಲ ಎಂದು ಹೃದ್ರೋಗ ತಜ್ಞರಾದ ಡಾ. ಕೇಶವಮೂರ್ತಿ ಅವರು ಮನದಟ್ಟು ಮಾಡಿ ಜಿಮ್ ತರಬೇತಿದಾರರಿಗೆ ಶಕ್ತಿ ತುಂಬಿದ್ದಾರೆ.
ತಮ್ಮ ದೇಹದ ಸಾಮರ್ಥ್ಯಕ್ಕನುಗುಣವಾಗಿ ನಿಯಮಿತವಾಗಿ ಜಿಮ್ ಮಾಡುವುದರಿಂದ ಆರೋಗ್ಯಕರ ಜೀವನವನ್ನು ನಡೆಸಬಹುದಾಗಿದ್ದು, ಈ ನಿಟ್ಟಿನಲ್ಲಿ. ಪ್ರತಿಯೊಬ್ಬ ಜಿಮ್ ತರಬೇತುದಾರು ಜೀವ ರಕ್ಷಣಾ ವಿಧಾನದ ತರಬೇತಿ ಪಡೆದುಕೊಳ್ಳುವುದು ಅತ್ಯವಶ್ಯಕ ವಾಗಿದೆ ಎಂಬುದು ಅವರ ಸಲಹೆಯಾಗಿದೆ. ಜಿಮ್ ನಡೆಸುವವರು ತಮ್ಮಲ್ಲಿರುವ ತರಬೇತಿದಾರರಿಗೆ ಕಾರ್ಡಿಯೋ ಪಲ್ಮನರಿ ರಿಸಕ್ಸಿಟೇಷನ್ (CPR) ಬಗ್ಗೆ ತರಬೇತಿ ನೀಡಿದರೆ ಇನ್ನಷ್ಟು ಅನುಕೂಲವಾಗಲಿದೆ. ಇದರಿಂದ ಜಿಮ್ ಮಾಡಲು ತೆರಳುವವರಿಗೂ ಯಾವುದೇ ಆತಂಕವಿರುವುದಿಲ್ಲ.
-
Vastu Tips: ಈ ವಾಸ್ತು ಟಿಪ್ಸ್ ಪಾಲಿಸಿದರೆ ಧನ ಮತ್ತು ಯಶಸ್ಸು ನಿಮ್ಮದೇ -
Vastu Tips: ವಾಸ್ತು ಪ್ರಕಾರ ನಮ್ಮ ಮನೆಯ ಸುತ್ತಮುತ್ತಲಿನ ವಿನ್ಯಾಸ ಹೇಗಿರಬೇಕು -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ












Click it and Unblock the Notifications