ಮಾಸ್ಕ್ ಧರಿಸಿದರೆ ಕೊರೊನಾ ವೈರಸ್ ಬರುವುದಿಲ್ಲವೇ?

ಗಾಳಿ ಕಲುಷಿತವಾಗಿದ್ದರೆ, ದೂಳು ಮತ್ತು ಹೊಗೆ ಅಧಿಕವಾಗಿದ್ದಾಗ, ಥಂಡಿ ಇದ್ದಾಗ ಹಾಗೂ ಆರೋಗ್ಯ ಸಮಸ್ಯೆಗಳು ಉಂಟಾದಾಗ ಮುಖಗವುಸು ತೊಡವುದು ಸಾಮಾನ್ಯ. ಕೊರೊನಾ ವೈರಸ್ ಹರಡುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಮಾಸ್ಕ್‌ಗಳಿಗೆ ವಿಪರೀತ ಬೇಡಿಕೆ ಬಂದಿವೆ. ಸಾರ್ವಜನಿಕ ಸ್ಥಳಗಳಿಗೆ ಹೋಗುವ ಮುನ್ನ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂಬಂತೆ ಬಳಸುತ್ತಿದ್ದಾರೆ.

ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಮತ್ತು ಕಾಯಿಲೆ ಹರಡುವಂತಹ ಸ್ಥಳಗಳಲ್ಲಿ ಮಾಸ್ಕ್ ಬಳಕೆ ಹೆಚ್ಚು ಸಹಕಾರಿ ನಿಜ. ಆದರೆ ಮಾಸ್ಕ್ ತೊಡುವುದರಿಂದ ಈ ಮಾರಕ ಕೊರೊನಾ ವೈರಸ್ ಅಥವಾ ಕೋವಿಡ್-19 ಅನ್ನು ತಡೆಗಟ್ಟಬಹುದೇ? ಮಾಸ್ಕ್ ಧರಿಸಿದ ಮಾತ್ರಕ್ಕೆ ಕೊರೊನಾ ನಮ್ಮ ಹತ್ತಿರ ಸುಳಿಯುವುದಿಲ್ಲವೇ?

ಚೀನಾದಲ್ಲಿ ವ್ಯಾಪಕವಾಗಿರುವ ಕೊರೊನಾ ವೈರಸ್ ಭೀತಿಯಿಂದ ಮಾಸ್ಕ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಎದುರಾಗಿದೆ. ಚೀನಾದಲ್ಲಿ ಮಾಸ್ಕ್‌ಗಳಿಗೆ ಕೊರತೆ ಉಂಟಾಗಿದೆ. ಅಲ್ಲಿನ ಪ್ರಮುಖ ಮಾಸ್ಕ್ ತಯಾರಿಕಾ ಕಂಪೆನಿಯಲ್ಲಿಯೇ ಸರಕು ಉಳಿದಿಲ್ಲ. ಇದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಲೇಬೇಕು ಎಂದು ನಿಯಮವನ್ನು ಪಾಲಿಸಲು ಚೀನಾದ ನಾಗರಿಕರು ಒದ್ದಾಡುವಂತಾಗಿದೆ.

ಸಾಮಾನ್ಯ ಮಾಸ್ಕ್‌ಗಳಿಂದ ಉಪಯೋಗವಿಲ್ಲ

ಸಾಮಾನ್ಯ ಮಾಸ್ಕ್‌ಗಳಿಂದ ಉಪಯೋಗವಿಲ್ಲ

ಹೆಚ್ಚಿನ ಜನರು ಮಾಸ್ಕ್ ಧರಿಸುವುದಕ್ಕೆ ಅರ್ಥವೇ ಇಲ್ಲ. ಅನಾವಶ್ಯಕವಾಗಿ ಮುಖ ಗವುಸುಗಳನ್ನು ತೊಡಬೇಡಿ. ಕೊರೊನಾ ವೈರಸ್ ತಡೆಯಲು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ತೊಟ್ಟುಕೊಳ್ಳುವುದರಿಂದ ಪ್ರಯೋಜನವಿಲ್ಲ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರಗಳು ಸಲಹೆ ನೀಡಿವೆ.

ವೈರಸ್‌ ತಗುಲಿರುವವರು ಅಥವಾ ತಮಗೆ ಸೋಂಕು ತಗುಲಿದೆ ಎಂದು ಎನಿಸಿರುವವರು ಮಾತ್ರ ತಮ್ಮ ಜತೆಯಲ್ಲಿ ವಾಸಿಸುವವರಿಗೂ ಅದು ಹರಡದಂತೆ ತಡೆಯಲು ಮಾಸ್ಕ್ ತೊಟ್ಟರೆ ಸಾಕು ಎಂದು ಆರೋಗ್ಯ ಸಂಸ್ಥೆ ಹೇಳಿದೆ.

'ಅವರು ಕೆಮ್ಮುತ್ತಿದ್ದಾರೆ, ಅವರಲ್ಲಿ ಯಾವುದಾದರೂ ಅನಾರೋಗ್ಯದ ಲಕ್ಷಣ ಕಾಣಿಸುತ್ತಿದೆ ಎಂದಾದಾಗ ನಮ್ಮ ವೈಟಿಂಗ್ ರೂಮ್‌ಗೆ ಬರುವಾಗ ಮತ್ತು ಹೊರಗೆ ಓಡಾಡುವಾಗ ಮಾಸ್ಕ್ ಧರಿಸುವಂತೆ ಸೂಚಿಸುತ್ತೇವೆ. ಇದು ಸೋಂಕು ಹರಡದಂತೆ ತಡೆಯಲು ಸಹಾಯ ಮಾಡುತ್ತದೆ' ಎಂದು ಅಮೆರಿಕದ ವೈದ್ಯರೊಬ್ಬರು ತಿಳಿಸಿದ್ದಾರೆ.

ದಪ್ಪಗಿನ ಮಾಸ್ಕ್ ಬಳಸಬೇಕು

ದಪ್ಪಗಿನ ಮಾಸ್ಕ್ ಬಳಸಬೇಕು

ನಾವು ಧರಿಸುವುದು ಸಾಮಾನ್ಯ ಶಸ್ತ್ರಚಿಕಿತ್ಸಾ ಮುಖ ಗವುಸಾಗಿದ್ದರೆ ಯಾವ ಪ್ರಯೋಜನವೂ ಇಲ್ಲ. ಎನ್‌95 ರೆಸ್ಪಿರೇಟರ್‌ಯಂತಹ ವಿಶೇಷ ಮಾಸ್ಕ್‌ಗಳು ಕೊರೊನಾ ವೈರಸ್‌ ಅಥವಾ ಕೋವಿಡ್-19ನಿಂದ ರಕ್ಷಿಸಬಲ್ಲದು. ಈ ಶ್ವಾಸಕ ಮಾಸ್ಕ್ ಶಸ್ತ್ರಚಿಕಿತ್ಸಾ ಮಾಸ್ಕ್‌ಗಿಂತ ಹೆಚ್ಚು ದಪ್ಪಗಿರುತ್ತದೆ. ಆದರೆ ಅದನ್ನು ಈ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬಳಸುವುದು ಸೂಕ್ತವಲ್ಲ ಎನ್ನುತ್ತಾರೆ ಟೆನಿಸ್ಸಿಯಲ್ಲಿನ ವಾಂಡರ್‌ಬಿಲ್ಟ್ ವಿಶ್ವವಿದ್ಯಾಲಯದ ಸೋಂಕು ಕಾಯಿಲೆ ತಜ್ಞ ಡಾ. ವಿಲಿಯಂ ಷಫ್ನರ್.

ಮಾಸ್ಕ್ ಸರಿಯಾಗಿ ಧರಿಸಬೇಕು

ಮಾಸ್ಕ್ ಸರಿಯಾಗಿ ಧರಿಸಬೇಕು

ಈ ಮಾಸ್ಕ್‌ಅನ್ನು ಧರಿಸುವುದು ಮತ್ತು ಅದನ್ನು ಸುದೀರ್ಘ ಸಮಯದವರೆಗೆ ಹಾಕಿಕೊಳ್ಳುವುದು ಸುಲಭವಲ್ಲ. ಈ ಮಾಸ್ಕ್‌ಗಳು ಮೂಗಿನ ಸುತ್ತ, ಕೆನ್ನೆ ಹಾಗೂ ಗಲ್ಲವನ್ನು ಆವರಿಸುವಂತೆ ಮತ್ತು ಮಾಸ್ಕ್‌ನ ತುದಿಗಳಿಂದ ಉಸಿರಾಟ ನಡೆಸದಂತೆ ನೋಡಿಕೊಳ್ಳುವಷ್ಟು ಸಮರ್ಪಕವಾಗಿ ಅದು ಮುಖದ ಮೇಲೆ ಕೂರುವಂತಿರಬೇಕು.

'ಒಂದು ವೇಳೆ ಮಾಸ್ಕ್ ತೊಟ್ಟಿದ್ದು ಸಮರ್ಪಕವಾಗಿರದೆ ಇದ್ದರೆ ಅದರಿಂದ ಉಸಿರಾಡಲು ಕಷ್ಟಪಡಬೇಕಾಗುತ್ತದೆ, ಗಾಲಿ ಕೂಡ ದಪ್ಪನೆಯ ವಸ್ತುವನ್ನು ಸೇವಿಸಿದಷ್ಟು ಗಟ್ಟಿ ಎನಿಸುತ್ತದೆ. ನೀವು ಆಮ್ಲಜನಕ ಎಳೆದುಕೊಂಡು ಇಂಗಾಲದ ಡೈ ಆಕ್ಸೈಡನ್ನು ಹೊರಹಾಕಬೇಕು. ಈ ಪ್ರಕ್ರಿಯೆ ಯಾವ ಅಡೆತಡೆಗಳಿಲ್ಲದೆ ಸುಗಮವಾಗಿ ನಡೆಯಬೇಕು. ಆದರೆ ಮಾಸ್ಕ್ ಮುಖದ ಭಾಗವನ್ನು ಒದ್ದೆ ಮಾಡುತ್ತದೆ ಹಾಗೂ ಬಿಸಿಗೊಳಿಸುತ್ತದೆ.

ಸುದೀರ್ಘ ಉಸಿರಾಡಿ ವಿರಮಿಸಿ

ಸುದೀರ್ಘ ಉಸಿರಾಡಿ ವಿರಮಿಸಿ

ಒಂದು ವೇಳೆ ಅರ್ಧ ಗಂಟೆ ಸತತವಾಗಿ ಮಾಸ್ಕ್ ಧರಿಸಿದ್ದರೆ ಅದರಿಂದ ಕೆಲ ಸಮಯ ಮುಕ್ತಿ ಪಡೆಯುವುದು ಅನಿವಾರ್ಯ. ಸೋಂಕಿನ ಭೀತಿ ಉಳ್ಳವರು ಪ್ರತ್ಯೇಕ ಕೊಠಡಿಗೆ ಹೋಗಿ ಕೆಲವು ಸಮಯ ಸುದೀರ್ಘ ಉಸಿರು ತೆಗೆದುಕೊಂಡು ದೇಹವನ್ನು ತಣಿಸಿಕೊಳ್ಳಬೇಕು. ನಂತರ ಮತ್ತೆ ಮಾಸ್ಕ್ ತೊಟ್ಟು ಹೊರಹೋಗಬೇಕು.

ಹಾಗೆಯೇ ಈ ಎನ್95 ಮಾಸ್ಕ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದರೂ ಅವುಗಳನ್ನು ಖರೀದಿ ಮಾಡುವುದು ಸೂಕ್ತವಲ್ಲ ಎನ್ನುವುದು ವೈದ್ಯರ ಅಭಿಪ್ರಾಯ. ಅದಕ್ಕಿಂತ ನೇರವಾಗಿ ಅಂಗಡಿಗಳಲ್ಲಿ ಗುಣಮಟ್ಟ ಪರಿಶೀಲಿಸಿ ಖರೀದಿಸುವುದು ಒಳ್ಳೆಯದು.

ಸರ್ಜಿಕಲ್ ಮಾಸ್ಕ್‌ಗಳು ಪರಿಣಾಮಕಾರಿಯಲ್ಲ

ಸರ್ಜಿಕಲ್ ಮಾಸ್ಕ್‌ಗಳು ಪರಿಣಾಮಕಾರಿಯಲ್ಲ

ತೆಳುವಾದ ಸರ್ಜಿಕಲ್ ಮಾಸ್ಕ್‌ಗಳು ಇರುವುದು ಸರ್ಜನ್‌ಗಳಿಗಾಗಿ. ಇವು ಶಸ್ತ್ರ ಚಿಕಿತ್ಸೆ ನಡೆಸುವ ವೈದ್ಯರ ಮೂಗು ಮತ್ತು ಬಾಯಿಯಿಂದ ರೋಗಕಾರಕ ಅಂಶಗಳು ಆ ಕೊಠಡಿಯೊಳಗೆ ಬರದಂತೆ ತಡೆಯುತ್ತವೆ. ಚೀನಾ, ಜಪಾನ್‌ನಂತಹ ದೇಶಗಳಲ್ಲಿ ಜನರು ಸರ್ಜಿಕಲ್ ಮಾಸ್ಕ್‌ಗಳನ್ನು ಬಳಸುತ್ತಿರುವುದು ಸಾಮಾನ್ಯವಾಗಿದೆ. ಆದರೆ ಈ ಮಾಸ್ಕ್‌ಗಳು ವೈರಸ್ ಒಳಪ್ರವೇಶಿಸದಂತೆ ತಡೆಯುವಷ್ಟು ಶಕ್ತವಾಗಿಲ್ಲ. ಏಕೆಂದರೆ ಅವುಗಳನ್ನು ವೈರಲ್ ಕಣಗಳನ್ನು ಹೊರಗಿಡುವಂತೆ ವಿನ್ಯಾಸಗೊಳಿಸಿಲ್ಲ. ಅಲ್ಲದೆ ಅವು ಮೂಗು ಮತ್ತು ಬಾಯಿಯನ್ನು ಗಟ್ಟಿಯಾಗಿ ಮುಚ್ಚಲಾರವು.

ಸೋಂಕು ತಡೆಯುವಷ್ಟು ಸಮರ್ಥವಲ್ಲ

ಸೋಂಕು ತಡೆಯುವಷ್ಟು ಸಮರ್ಥವಲ್ಲ

ಅವುಗಳಿಂದ ಯಾವ ಉಪಯೋಗವೂ ಇಲ್ಲ ಎಂದಲ್ಲ. ಆದರೆ ಇಂತಹ ಮಾರಕ ವೈರಸ್‌ಗಳಿಂದ ರಕ್ಷಿಸಲಾರವು. ಕೆಲವರು ಅನಾರೋಗ್ಯಕ್ಕೆ ಒಳಗಾಗಿರುವ ಕಾರಣದಿಂದ ಬೇರೆಯವರಿಗೆ ಅದು ಹರಡದಂತೆ ಮಾಸ್ಕ್ ಧರಿಸಿರುತ್ತಾರೆ, ಇಂತಹ ತೆಳುವಾದ ಮಾಸ್ಕ್‌ಗಳು ಇತರರಿಗೆ ಕಾಯಿಲೆ ಹರಡುವುದನ್ನು ತಡೆಯಲಾರವು. ಇದರಿಂದ ಸೋಂಕು ಹೊಂದಿರುವವರು ಸಾರ್ವಜನಿಕ ಸ್ಥಳಗಳಿಗೆ ಹೋಗದೆ ಇರುವುದೇ ವಾಸಿ ಎಂದು ತಜ್ಞರು ಹೇಳುತ್ತಾರೆ.

ಸ್ವಚ್ಚತೆ ಕಾಪಾಡುವುದು ಮುಖ್ಯ

ಸ್ವಚ್ಚತೆ ಕಾಪಾಡುವುದು ಮುಖ್ಯ

ಕೊರೊನಾ ವೈರಸ್‌ನಿಂದ ದೂರವಿರಲು ನೀವು ಮೊದಲು ಮಾಡಬೇಕಿರುವುದು ಚೀನಾದಂತಹ ಸೋಂಕು ಪೀಡಿತ ದೇಶಕ್ಕೆ ಪ್ರಯಾಣ ಬೆಳೆಸದೆ ಇರುವುದು. ಸಾರ್ವಜನಿಕ ಸ್ಥಳಕ್ಕೆ ಹೋಗಿ ಬಂದಾಗ ನಿಮ್ಮ ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟದೆ ಮನೆಗೆ ಬಂದು ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಅನಾರೋಗ್ಯಪೀಡಿತ ವ್ಯಕ್ತಿಗಳ ಸಂಪರ್ಕದಿಂದ ಆದಷ್ಟು ದೂರವೇ ಇರುವುದು ಒಳಿತು.

ನಾಯಿಗಳಿಗೆ ಮಾಸ್ಕ್ ಬೇಡ

ನಾಯಿಗಳಿಗೆ ಮಾಸ್ಕ್ ಬೇಡ

ಕೆಲವು ನಾಯಿ ಮತ್ತು ಇತರೆ ಸಾಕು ಪ್ರಾಣಿಗಳಿಗೂ ಮಾಸ್ಕ್ ಹಾಕಿದ ಚಿತ್ರಗಳು ವೈರಲ್ ಆಗುತ್ತಿವೆ. ನಾಯಿಗಳಿಗೆ ಕೊರೊನಾ ತಗುಲುತ್ತದೆ ಎನ್ನುವುದಕ್ಕೆ ಯಾವುದೇ ಸಾಕ್ಷಿಯಿಲ್ಲ. ಅಲ್ಲದೆ, ಅವು ನಾಲಿಗೆ ಹೊರಚಾಚಿ ಉಸಿರಾಡುತ್ತವೆ. ಮಾಸ್ಕ್ ಹಾಕುವುದರಿಂದ ಅವುಗಳ ಸಹಜ ಉಸಿರಾಟ ಪ್ರಕ್ರಿಯೆಗೆ ತೊಂದರೆಯಾಗುತ್ತದೆ. ಇದರಿಂದ ಪ್ರಾಣಿಗಳು ಹೆಚ್ಚು ಪರದಾಡಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+