Watch video: ಮುದ್ದು ಆನೆ ಮರಿ ಡೆಲಿವರಿಗೆ 2 ಗಂಟೆ ರೈಲು ಸಂಚಾರ ಬಂದ್, ಇಲ್ಲಿದೆ ವೈರಲ್ ವಿಡಿಯೋ!
ಮುದ್ದಾದ ಆನೆ ಮರಿಯ ಡೆಲಿವರಿಗಾಗಿ ರೈಲೊಂದನ್ನು ಬರೋಬ್ಬರಿ 2 ಗಂಟೆಗಳ ಕಾಲ ನಿಲ್ಲಿಸಿರುವ ಅಪರೂಪದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೌದು ತುಂಬು ಗರ್ಭಿಣಿಯಾಗಿದ್ದ ಆನೆಯೊಂದು ಪ್ರಸವ ವೇದನೆಯಲ್ಲಿತ್ತು. ಅಲ್ಲದೇ ಅದು ರೈಲು ಹಳಿಗಳ ಸಮೀಪದಲ್ಲೇ ಇರುವುದನ್ನು ರೈಲಿನ ಲೋಕೋ ಪೈಲೆಟ್ (Loco Pilot or Train Driver) ಗಮನಿಸಿದ್ದಾರೆ. ಕೂಡಲೇ ಆ ರೈಲಿನ ಸಂಚಾರವನ್ನು ನಿಲ್ಲಿಸಲಾಗಿದೆ. ಈ ಅಪರೂಪದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಾಯಿ ಹಾಗೂ ಮರಿ ಆನೆ ನಡೆಯುತ್ತಿರುವ ಹೃದಯಸ್ಪರ್ಶಿ ದೃಶ್ಯ ನೋಡುವುದಕ್ಕೆ ಸೊಗಸಾಗಿದೆ. ಅದರ ವಿವರ ಹಾಗೂ ವಿಡಿಯೋ ನೋಡೋಣ.
ಆನೆ - ಮಾನವ ಸಂಘರ್ಷ ಹೆಚ್ಚಾಗುತ್ತಲ್ಲೇ ಇದೆ. ಅದರಲ್ಲೂ ಕಾಡಂಚಿನ ಪ್ರದೇಶಗಳಲ್ಲಿ ಆನೆ - ಮಾನವ ಸಂಘರ್ಷದ ಬಗ್ಗೆ ಪದೇ ಪದೇ ವರದಿ ಆಗುತ್ತಲ್ಲೇ ಇದೆ. ಆದರೆ, ಜಾರ್ಖಂಡ್‌ನಲ್ಲಿ ಇಡೀ ರೈಲನ್ನೇ ಆನೆಯ ಹೆರಿಗೆಯ ಕಾರಣಕ್ಕೆ ಬರೋಬ್ಬರಿ ಎರಡು ಗಂಟೆಗಳ ಕಾಲ ನಿಲ್ಲಿಸಲಾಗಿದೆ. ಜಾರ್ಖಂಡ್‌ನ ಕಾಡು ಮಾರ್ಗದಲ್ಲಿ ರೈಲು ಹೋಗುತ್ತಿತ್ತು. ಆ ಸಂದರ್ಭದಲ್ಲಿ ಆನೆಯೊಂದು ಹೆರಿಗೆ ನೋವಿನಲ್ಲಿ ಒದ್ದಾಡುತ್ತಿರುವುದನ್ನು ರೈಲು ಚಾಲಕ ನೋಡಿದ್ದಾರೆ. ಕೂಡಲೇ ಆ ರೈಲು ಚಾಲಕ ರೈಲನ್ನು ನಿಲ್ಲಿಸಿದ್ದಾರೆ. ರೈಲು ನಿಲ್ಲಿಸಿದ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯದ ನಂತರ ಆನೆ ಮರಿಗೆ ಜನ್ಮ ನೀಡಿದೆ. ಇದಾದ ಮೇಲೂ ರೈಲು ಹಳಿಗಳನ್ನು ದಾಟುವುದಕ್ಕೆ ತುಸು ಸಮಯ ತೆಗೆದುಕೊಂಡಿದೆ.

ಮರಿ ಆನೆ ಹಾಗೂ ತಾಯಿ ಆನೆ ಮರಿ ಹಳಿಯಿಂದ ದಾಟಿ ಹೋಗುವವರೆಗೂ ರೈಲನ್ನು ನಿಲ್ಲಿಸಲಾಗಿದೆ. ಎರಡೂ ಆನೆಗಳು ಹಳಿ ದಾಟಿದ ಮೇಲಷ್ಟೇ ರೈಲು ಮುಂದಕ್ಕೆ ಹೋಗಿದೆ. ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು. ಜನ ರೈಲು ಡ್ರೈವರ್‌ನ ಸಮಯ ಪ್ರಜ್ಞೆಗೆ ಫಿದಾ ಆಗಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರು, ಮಾನವ-ಪ್ರಾಣಿ ಸಂಘರ್ಷದ ನಡುವೆ ಈ ವಿಡಿಯೋ ಮಾನವ-ಪ್ರಾಣಿ ಸಾಮರಸ್ಯ ಹಾಗೂ ಸಹಬಾಳ್ವೆಯನ್ನು ತೋರಿಸುತ್ತದೆ. ಈ ವಿಡಿಯೋವನ್ನು ಹಂಚಿಕೊಳ್ಳಲು ಸಂತೋಷವಾಗಿದೆ. ಜಾರ್ಖಂಡ್‌ನಲ್ಲಿ ಒಂದು ರೈಲು ಎರಡು ಗಂಟೆಗಳ ಕಾಲ ಕಾದಿದೆ. ಆನೆಯೊಂದು ತನ್ನ ಮರಿಗೆ ಜನ್ಮ ನೀಡಿದ ಮೇಲೆ ಮುಂದಕ್ಕೆ ಹೋಗಿದೆ. ಈ ವೇಳೆ ಎರಡು ಆನೆಗಳು ಸಂತೋಷದಿಂದ ಹೋಗಿರುವುದು ವಿಡಿಯೋದಲ್ಲಿ ಇದೆ.
ಮಗುವಿಗೆ ಜನ್ಮ ನೀಡುತ್ತಿರುವ ಆನೆ, 2 ಗಂಟೆ ಕಾದ ರೈಲು ನಂತರ ತಾಯಿ ಮಗು ಖುಷಿಯಿಂದ ಹೋಗುತ್ತಿರುವ ಮನಮೋಹಕ ದೃಶ್ಯ 😍😍
— oneindiakannada (@OneindiaKannada) July 10, 2025
ವಿಡಿಯೋ ಕೃಪೆ: @byadavbjp #ElephantLove #Jharkhand #WildlifeMoments #Heartwarming #MotherAndCalf #ViralVideo #ViralWatch #OIKannada pic.twitter.com/t751yAPNCB
ಸರ್ಕಾರವು ಮಾನವ - ಪ್ರಾಣಿ ಸಂಘರ್ಷ ತಪ್ಪಿಸಲು ಕ್ರಮ ತೆಗೆದುಕೊಳ್ಳುತ್ತಿದೆ. ದೇಶದಲ್ಲಿ 3,500 ಕಿ.ಮೀ. ರೈಲ್ವೆ ಹಳಿಗಳನ್ನು ಸಮೀಕ್ಷೆ ಮಾಡುವ ಮೂಲಕ 110ಕ್ಕೂ ಹೆಚ್ಚು ಸೂಕ್ಷ್ಮ ಸ್ಥಳಗಳನ್ನು ಗುರುತಿಸಲಾಗಿದೆ. ಇಂತಹ ಹೃದಯಸ್ಪರ್ಶಿ ಫಲಿತಾಂಶಗಳನ್ನು ನೀಡುವ ಪ್ರಯತ್ನಗಳನ್ನು ನೋಡುವುದು ಸಂತೋಷಕರವಾಗಿದೆ. ಆನೆ ತನ್ನ ಮರಿಗೆ ಜನ್ಮ ನೀಡುವುದಕ್ಕೆ ಸಹಾಯ ಮಾಡಿದ ಹಾಗೂ ಸೂಕ್ಷ್ಮತೆ ಪ್ರದರ್ಶಿಸಿದ ಜಾರ್ಖಂಡ್ ಅಧಿಕಾರಿಗಳಿಗೆ ಅಭಿನಂದನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications