'ಹೆಂಡತಿ ಬೇಕು': ಇ-ರಿಕ್ಷಾ ಮೇಲೆ ಬಯೋ ಡೇಟಾ ಹಾಕಿಕೊಂಡು ಸಂಚರಿಸಿದ ಚಾಲಕ!
ದಾಮೋಹ್ ಫೆಬ್ರವರಿ 19: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಸಾಲು ಸಾಲು ಮದುವೆಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ವಧು ವರರ ಹುಡುಕಾಟ ಬಲೂ ಜೋರಾಗಿ ಸಾಗುತ್ತದೆ. ಕೆಲವರಿಗೆ ಹುಡುಗಿ ಸಿಕ್ಕರೆ ಇನ್ನೂ ಕೆಲವರಿಗೆ ಹುಡುಗಿ ಸಿಗುವುದೇ ದೊಡ್ಡ ಸವಾಲಾಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಇ-ರಿಕ್ಷಾ ಮೇಲೆ ಬಯೋ ಡೇಟಾ ಹಾಕಿಕೊಂಡು ಚಾಲಕನೊಬ್ಬ ಸಂಚಾರ ಮಾಡುತ್ತಿರುವುದು ಮಧ್ಯಪ್ರದೇಶದ ಬೀದಿಗಳಲ್ಲಿ ಕಂಡುಬಂದಿದೆ.
ಮಧ್ಯಪ್ರದೇಶದ ದಾಮೋಹ್‌ನ ವ್ಯಕ್ತಿಯೊಬ್ಬ ತನ್ನ ಇ-ರಿಕ್ಷಾ ಮೇಲೆ ಬಯೋ ಡೇಟಾ ಹಾಕಿಕೊಂಡು ಪ್ರಯಾಣಿಸುವ ದೃಶ್ಯ ಕಂಡು ಬಂದಿದೆ. ಅಂದಹಾಗೆ 29 ವರ್ಷದ ದೀಪೇಂದ್ರ ರಾಥೋಡ್ ತನಗಾಗಿ ವಧುವನ್ನು ಹುಡುಕಲು ಈ ವಿಶಿಷ್ಟವಾದ ವಿಧಾನವನ್ನು ತೆಗೆದುಕೊಂಡಿದ್ದಾರೆ. ಅವರು ತಮ್ಮ ಇ-ರಿಕ್ಷಾದ ಮೇಲೆ ತಮ್ಮ ಮದುವೆಗಾಗಿ ವಧು ಬೇಕಾಗಿರುವ ಬಗ್ಗೆ ಬಯೋ ಡೇಟಾದ ಹೋರ್ಡಿಂಗ್ ಮಾಡಿಸಿಕೊಂಡು ವೈಯಕ್ತಿಕ ವಿವರಗಳನ್ನು ಲಗತ್ತಿಸಿದ್ದಾರೆ.

ಮದುವೆ ಎಲ್ಲರ ಜೀವನದ ಪ್ರಮುಖ ಘಟ್ಟ. ಈ ಕಾಲಘಟ್ಟದ ಅನುಭವವನ್ನು ಎಲ್ಲರೂ ಬಹಳ ಮುತುವರ್ಜಿಯಿಂದ ಕಾಪಾಡಿಟ್ಟುಕೊಳ್ಳಲು ಬಯಸುತ್ತಾರೆ. ದೀಪೇಂದ್ರ ಅವರ ಪ್ರಕಾರ, ಅವರು ಮದುವೆಯಾಗಲು ಬಯಸುತ್ತಾರೆ. ಆದರೆ ಸಮಾಜದಲ್ಲಿ ಮಹಿಳೆಯರ ಕೊರತೆಯಿಂದಾಗಿ ಪರಿಪೂರ್ಣ ಸಂಗಾತಿಯನ್ನು ಹುಡುಕಲಾಗಲಿಲ್ಲ. ಧರ್ಮ ಮತ್ತು ಜಾತಿ ಭೇದಗಳು ತನಗೆ ಮುಖ್ಯವಲ್ಲ. ಯಾವುದೇ ಮಹಿಳೆ ಮದುವೆಯ ಪ್ರಸ್ತಾಪದೊಂದಿಗೆ ತನ್ನನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ರಾಥೋರ್ ವಧುವನ್ನು ಹುಡುಕಲು ವಧು ವರರ ವೇದಿಕೆಗೂ ಸೇರಿಕೊಂಡರು. ಆದರೆ ಅವರಿಗೆ ತನ್ನ ನಗರದಿಂದ ಮಹಿಳೆಯನ್ನು ಹುಡುಕಲಾಗಲಿಲ್ಲ. ನಂತರ ಅವರು ತಮ್ಮ ವಿವರಗಳೊಂದಿಗೆ ಹೋರ್ಡಿಂಗ್ ಅನ್ನು ಹಾಕಲು ನಿರ್ಧರಿಸಿದರು.
ಹೋರ್ಡಿಂಗ್‌ನಲ್ಲಿ 29 ವರ್ಷದ ದೀಪೇಂದ್ರ ರಾಥೋಡ್ ಅವರ ಎತ್ತರ, ಹುಟ್ಟಿದ ದಿನಾಂಕ ಮತ್ತು ಸಮಯ, ರಕ್ತದ ಗುಂಪು, ಶೈಕ್ಷಣಿಕ ಅರ್ಹತೆಗಳು, ಗೋತ್ರ ಇತ್ಯಾದಿಗಳನ್ನು ಒಳಗೊಂಡ ವಿವರಗಳನ್ನು ಮುದ್ರಿಸಲಾಗಿದೆ.
ಪರಿಪೂರ್ಣ ಜೀವನ ಸಂಗಾತಿಯನ್ನು ಪಡೆಯುವ ಅವರ ವಿಧಾನವನ್ನು ದೀಪೇಂದ್ರ ಅವರ ಪೋಷಕರು ಸಹ ಬೆಂಬಲಿಸುತ್ತಾರೆ. "ನನ್ನ ಪೋಷಕರು ಪೂಜೆಯಲ್ಲಿ ನಿರತರಾಗಿದ್ದಾರೆ, ಆದ್ದರಿಂದ ನನಗೆ ಹುಡುಗಿಯನ್ನು ಹುಡುಕಲು ಅವರಿಗೆ ಸಾಧ್ಯವಾಗುತ್ತಿಲ್ಲ ಮತ್ತು ಆದ್ದರಿಂದ ನಾನು ಅದನ್ನು ಮಾಡಬೇಕಾಗಿದೆ" ಎಂದು ರಾಥೋರ್ ಹೇಳಿದ್ದಾರೆ.
ರಾಥೋಡ್ ತನ್ನ ಸ್ವಂತ ಇ-ರಿಕ್ಷಾವನ್ನು ಓಡಿಸುವ ಮೂಲಕ ತನ್ನ ಕುಟುಂಬವನ್ನು ನಡೆಸುತ್ತಾರೆ. ಇದರಿಂದ ನನಗೆ ಅಂದುಕೊಂಡ ಜೀವನ ಸಂಗಾತಿ ಸಿಕ್ಕರೆ ನನಗೆ ಸಂತೋಷವಾಗುತ್ತದೆ ಎನ್ನುತ್ತಾರೆ ರಾಥೋಡ್ ಅವರು.
ಕಲಬುರಗಿಯಲ್ಲಿ ಭಯಾನಕ ಘಟನೆ:
ಮದುವೆ ಮಾಡಿಲ್ಲ ಎಂದು ತನ್ನ ತಾಯಿಯನ್ನೇ ಮಗ ಕೊಲೆ ಮಾಡಿದ ಹೇಯಾ ಕೃತ್ಯ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪೋಚಾವರಂನಲ್ಲಿ ಇತ್ತೀಚೆಗೆ ನಡೆದಿತ್ತು.
ಶೋಭಾ (45) ಮಗನಿಂದಲೇ ಕೊಲೆಯಾದ ಮಹಿಳೆಯಾಗಿದ್ದಾಳೆ. ಮಗ ಅನೀಲ್ ಎಂಬಾತ ಈ ಕೃತ್ಯ ಎಸಗಿದ್ದು ಮದುವೆ ಮಾಡಿಸಿಲ್ಲ ಅಂತಾ ಕುಡಿದ ನಶೆಯಲ್ಲಿ ಜಗಳವಾಡಿ ಕಟ್ಟಿಗೆಯಿಂದ ಹೊಡೆದು ಯಾಯಿಯನ್ನು ಕೊಂದಿದ್ದಾನೆ. ಘಟನೆ ಬಳಿಕ ಕೊಲೆ ಮಾಡಿದ ಅನೀಲ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications