ಈ ಪ್ರದೇಶದಲ್ಲಿ ಉಚಿತ ಕರೆ, ಡೇಟಾ ನೀಡಲು ಮುಂದಾದ ವೊಡಾಫೋನ್-ಐಡಿಯಾ, ಏರ್‌ಟೆಲ್
ನವದೆಹಲಿ: ದೇಶದಲ್ಲಿ ಮಳೆ ಹಲವು ಪ್ರದೇಶಗಳಲ್ಲಿ ಬಿಟ್ಟು ಬಿಡದೆ ಸುರಿಯುತ್ತಿದೆ. ಈ ವೇಳೆ ಹಲವು ಗಂಭೀರ ಚಿತ್ರಗಳು ಕಣ್ಣು ಮುಂದೆ ಬರುತ್ತವೆ. ಅದರಲ್ಲಿ ಕೇರಳದ ವಯನಾಡಿನ ಭೂಕುಸಿತದ ದೃಶ್ಯ ಕರಳು ಕಿತ್ತು ಬರುವಂತಿದೆ. ಈ ದುರ್ಘಟನೆಯಲ್ಲಿ ಅಪಾರ ಸಂಖ್ಯೆಯ ಜನ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಣಾ ಪಡೆಗಳಿಂದ ರಕ್ಷಣಾ ಕಾರ್ಯ ಚುರುಕಿನಿಂದ ನಡೆಯುತ್ತಿದೆ. ಅಲ್ಲಿಯ ಸಂತ್ರಸ್ಥರಿಗೆ ಅನುಕೂಲವಾಗಲೆಂದು ಹಲವು ಟೆಲಿಕಾಂ ಕಂಪನಿಗಳು ವಿಶೇಷ ಪ್ಯಾಕೇಜ್ ರಿಲೀಸ್ ಮಾಡಿವೆ.
ಖಾಸಗಿ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ ಹಾಗೂ ಏರ್‌ಟೆಲ್ ಕಂಪನಿಗಳು ವಯನಾಡ್‌ಗೆ ದೊಡ್ಡ ಘೋಷಣೆ ಮಾಡಿವೆ. Vi ತನ್ನ ವಯನಾಡ್ ಬಳಕೆದಾರರಿಗೆ ಉಚಿತ ಕರೆ ಮತ್ತು ಡೇಟಾವನ್ನು ಘೋಷಿಸಿದೆ. ಈ ಎರಡು ಕಂಪನಿಗಳು ಅಲ್ಲಿನ ಗ್ರಾಹಕರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಹಲವು ಘೋಷಣೆ ಮಾಡಿವೆ.

ವೊಡಾಫೋನ್-ಐಡಿಯಾ ವಿಶೇಷ ಆಫರ್
Vi ತನ್ನ ವಯನಾಡ್ ಪ್ರಿಪೇಡ್ ಹಾಗೂ ಪೋಸ್ಟ್ ಪೇಡ್ ಬಳಕೆದಾರರಿಗೆ ಅನುಕೂಲಕ್ಕಾಗಿ ಹೊಸ ಯೋಜನೆ ಬಿಡುಗಡೆ ಮಾಡಿದೆ. ಪ್ರಿಪೇಡ್ ಬಳಕೆದಾರರು 7 ದಿನಗಳವರೆಗೆ ಉಚಿತ ಕರೆಯನ್ನು ನೀಡಲು ನಿರ್ಧರಿಸಿದೆ. ಕಂಪನಿಯು ಗ್ರಾಹಕರಿಗೆ ಪ್ರತಿದಿನ 1GB ಉಚಿತ ಡೇಟಾವನ್ನು 7 ದಿನಗಳವರೆಗೆ ನೀಡುತ್ತದೆ. ಹೆಚ್ಚುವರಿ ಡೇಟಾ ಸ್ವಯಂ ಚಾಲಿತವಾಗಿ ಬಳಕೆದಾರರ ಸಂಖ್ಯೆಗಳಿಗೆ ಕ್ರೆಡಿಟ್ ಆಗಲಿದೆ.
ಇನ್ನು ವಿಐ ತನ್ನ ಪೋಸ್ಟ್ ಪೇಡ್ ಬಳಕೆದಾರರ ಬಿಲ್ ಪಾವತಿ ದಿನಾಂಕವನ್ನು 10 ದಿನಗಳ ಹೆಚ್ಚಿಸಿದೆ. ಈ ಮೂಲಕ ಗ್ರಾಹಕರಲ್ಲಿ ಮಂದಹಾಸ ಮೂಡಿಸುವ ಕೆಲಸವನ್ನು ಕಂಪನಿ ಮಾಡಿದೆ.
ಸಂತ್ರಸ್ತ್ರರ ನೆರವಿಗೆ ಬಂದ ಏರ್‌ಟೆಲ್
ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿರುವ ಏರ್‌ಟೆಲ್ ಸಹ ವಯನಾಡಿನ ಬಳಕೆದಾರರ ನೆರವಿಗೆ ಮುಂದಾಗಿದೆ. ಏರ್‌ಟೆಲ್ ತನ್ನ ಬಳಕೆದಾರರಿಗೆ 3 ದಿನಗಳವರೆಗೆ ಉಚಿತ ಕರೆ ಮತ್ತು ಪ್ರತಿದಿನ 1 GB ಡೇಟಾವನ್ನು ಉಚಿತವಾಗಿ ನೀಡುವುದಾಗಿ ತಿಳಿಸಿದೆ. ಇನ್ನು ಏರ್‌ಟೆಲ್ ಸಿಮ್ ಹೊಂದಿದ್ದು ವ್ಯಾಲಿಡಿಟಿ ಮುಗಿದು ಹೋಗಿದ್ದರೂ ಸಹ ಗ್ರಾಹಕರು ಇದರ ಲಾಭವನ್ನು ಪಡೆಯಬಹುದಾಗಿದೆ.

ವಯನಾಡಿನಲ್ಲಿ ಭೂ ಕುಸಿತ ಸಂಭವಿಸಿದ್ದು, ಈಗಾಗಲೇ 300ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಲ್ಲದೆ ಹಲವು ಜನರು ನಾಪತ್ತೆ ಆಗಿದ್ದಾರೆ. ನಾಪತ್ತೆ ಆದವರ ಶೋಧ ಕಾರ್ಯ ಭರದಿಂದ ನಡೆದಿದೆ. ಇನ್ನು ಸೇನೆ ತುಕುಡಿ ಹಾಗೂ ಎನ್‌ಡಿಆರ್‌ಎಫ್ ತಂಡಗಳಿಂದ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಈ ಪ್ರದೇಶದಲ್ಲಿ ಅಕ್ಷರಶಃ ಸ್ಮಶಾನ ಮೌನ ಆವರಿಸಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications