ಭಾರತದಲ್ಲಿ 4,189 ಕಿ.ಮೀ ಕ್ರಮಿಸುವ ಅತಿ ಉದ್ದದ ರೈಲು ಇದು..

ನವದೆಹಲಿ, ನವೆಂಬರ್ 20: ರೈಲು ಪ್ರಯಾಣಿಕರು ವಿವೇಕ್ ಎಕ್ಸ್‌ಪ್ರೆಸ್ ರೈಲು ಬಗ್ಗೆ ಕೇಳಿರಬಹುದು. ಈಗ ಈ ದೇಶದಲ್ಲಿ ರೈಲು ವಾರದಲ್ಲಿ ಒಂದಲ್ಲ, ಎರಡು ಬಾರಿ ಸಂಚರಿಸಲಿದೆ. ವಿವೇಕ್ ಎಕ್ಸ್‌ಪ್ರೆಸ್ ಭಾರತದ ಅತಿ ಉದ್ದದ ರೈಲು. ದಿಬ್ರುಗಢ-ಕನ್ಯಾಕುಮಾರಿ-ದಿಬ್ರುಗಢ ಮಾರ್ಗದಲ್ಲಿ ವಿವೇಕ್ ಎಕ್ಸ್‌ಪ್ರೆಸ್ ರೈಲು ವಾರಕ್ಕೆ ಎರಡು ಬಾರಿ ಓಡಿಸಲು ರೈಲ್ವೆ ಪ್ರಾಧಿಕಾರ ನಿರ್ಧರಿಸಿದೆ ಎಂದು ಎನ್‌ಎಫ್‌ಆರ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಬ್ಯಸಾಚಿ ಡೇ ತಿಳಿಸಿದ್ದಾರೆ.

ವಿವೇಕ್ ಎಕ್ಸ್‌ಪ್ರೆಸ್ ರೈಲು ನಂ. 15906 (ದಿಬ್ರುಗಢ ಕನ್ಯಾಕುಮಾರಿ) ಈ ಹಿಂದೆ ಶನಿವಾರದಂದು ಓಡುತ್ತಿದ್ದ ವಿವೇಕ್ ಎಕ್ಸ್‌ಪ್ರೆಸ್ ಈಗ ನವೆಂಬರ್ 22ರಿಂದ ಪ್ರತಿ ಮಂಗಳವಾರ ಹೆಚ್ಚುವರಿಯಾಗಿ ಚಲಿಸಲಿದೆ. ಅಲ್ಲದೆ ರೈಲು ನಂ. 15905 (ಕನ್ಯಾಕುಮಾರಿ ದಿಬ್ರುಗಢ) ವಿವೇಕ್ ಎಕ್ಸ್‌ಪ್ರೆಸ್ ಪ್ರಸ್ತುತ ಗುರುವಾರ ಮಾತ್ರ ಚಲಿಸುತಿತ್ತು. ಆದರೆ, ಇದೇ ನವೆಂಬರ್ 27ರಿಂದ ಭಾನುವಾರವೂ ಈ ಕನ್ಯಾಕುಮಾರಿಯಿಂದ ಅಸ್ಸಾಂನ ದಿಬ್ರುಗಡವರಿಗೂ ರೈಲು ಸಂಚರಿಸಲಿದೆ.

Vivek Express: Indias longest train, Vivek Express, to Operate Twice a Week

ಭಾರತದ ಅತಿ ಉದ್ದದ ರೈಲಿನ ಹೆಸರೇನು?

ಭಾರತದ ಅತಿ ಉದ್ದದ ರೈಲಿನ ಹೆಸರು ವಿವೇಕ್ ಎಕ್ಸ್‌ಪ್ರೆಸ್. ಈ ರೈಲು ಒಟ್ಟು ಒಂಬತ್ತು ರಾಜ್ಯಗಳ ಮೂಲಕ ಹಾದು ಹೋಗುತ್ತದೆ. ಈ 9 ರಾಜ್ಯಗಳಾದ ಅಸ್ಸಾಂ, ನಾಗಾಲ್ಯಾಂಡ್, ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡು ಈ 9 ರಾಜ್ಯದಲ್ಲೂ ಈ ರೈಲು ಸಂಚರಿಸುತ್ತದೆ. ಈ ರೈಲು 59 ನಿಲುಗಡೆಗಳನ್ನು ಹೊಂದಿದೆ. ವಿವೇಕ್ ಎಕ್ಸ್‌ಪ್ರೆಸ್ ಅಸ್ಸಾಂನ ದಿಬ್ರುಗಢದಿಂದ ತಮಿಳುನಾಡಿನ ಕನ್ಯಾಕುಮಾರಿಗೆ ಸಂಚರಿಸುತ್ತದೆ. ಈ ರೈಲು ಒಟ್ಟು 4,189 ಕಿಮೀ ದೂರವನ್ನು ಕ್ರಮಿಸುತ್ತದೆ.

Vivek Express: Indias longest train, Vivek Express, to Operate Twice a Week

ಈ ರೈಲನ್ನು 2011ರಂದು ಪರಿಚಯಿಸಲಾಯಿತು

4,189 ಕಿಮೀ ಮಾರ್ಗದಲ್ಲಿ ರೈಲು 59 ನಿಲ್ದಾಣಗಳನ್ನು ಹೊಂದಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಈ ರೈಲನ್ನು 19 ನವೆಂಬರ್ 2011ರಂದು ಪರಿಚಯಿಸಲಾಯಿತು. ವಿವೇಕ್ ಎಕ್ಸ್‌ಪ್ರೆಸ್ ರೈಲು ಕಳೆದ 11 ವರ್ಷಗಳಿಂದ ನಿರಂತರವಾಗಿ ದೇಶದಲ್ಲಿ ಓಡುತ್ತಿದೆ. ಆಗಿನ ರೈಲ್ವೆ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿ ಅವರು 2011-12ರ ರೈಲ್ವೆ ಬಜೆಟ್‌ನಲ್ಲಿ ವಿವೇಕ್ ಎಕ್ಸ್‌ಪ್ರೆಸ್ ರೈಲುನ್ನು ಘೋಷಿಸಿದ್ದರು. ವಿವೇಕ್ ಎಕ್ಸ್‌ಪ್ರೆಸ್ ಸರಣಿಯಡಿ ನಾಲ್ಕು ಹೊಸ ರೈಲುಗಳನ್ನು ಪ್ರಾರಂಭಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+