• search

ವಿಶ್ವವಾಣಿ ಸಮೀಕ್ಷೆ: ಕೈ ಮೇಲು, ಕಮಲಕ್ಕೆ ಬೆಳ್ಳಿ, ಜೆಡಿಎಸ್ ಕೊನೆ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಮತ್ತೆ 'ಕೈ' ಮೇಲಾಗಲಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಪೂರ್ವ ಸಮೀಕ್ಷೆಯೊಂದು ಅದೇ ಭವಿಷ್ಯ ನುಡಿದಿದೆ. ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲೊಂದಾದ ವಿಶ್ವವಾಣಿ, ಸ್ಟಾರ್ ಪೋಲ್ ಹಾಗೂ ಜನಮನ ಸಂಸ್ಥೆ ಸಮೀಕ್ಷೆ ನಡೆಸಿದ್ದು, ಅದರ ಪ್ರಕಾರ ಇಂದೇ ಚುನಾವಣೆ ನಡೆದರೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯುತ್ತದೆ.

  ಕಳೆದ ನವೆಂಬರ್ ಹಾಗೂ ಡಿಸೆಂಬರ್ ಮಧ್ಯೆ ನಲವತ್ತು ದಿನಗಳ ಕಾಲ ಈ ಸಮೀಕ್ಷೆ ನಡೆಸಿದ್ದು, ವಲಯವಾರು ಐನೂರರಂತೆ ಒಟ್ಟು ಮೂರು ಸಾವಿರ ಮತದಾರರ ಸಂದರ್ಶನ ನಡೆಸಿ, ಅಭಿಪ್ರಾಯ ಪಡೆಯಲಾಗಿದೆ. ಇದರಲ್ಲಿ ಮಹಿಳೆಯರು, ಪುರುಷರು ಹಾಗೂ ಯುವ ಸಮುದಾಯದವರು ಪಾಲ್ಗೊಂಡಿದ್ದರು.

  ಇಡೀ ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ದೊರಕಬಹುದು, ವಲಯವಾರು ಎಷ್ಟು ಸೀಟುಗಳಲ್ಲಿ ಗೆಲ್ಲಬಹುದು, ಯಾವ ಪಕ್ಷಕ್ಕೆ ಎಷ್ಟು ಪ್ರಮಾಣದ ಮತ ಸಿಗಬಹುದು, ಯಾವ ಪಕ್ಷದಿಂದ ಯಾರು ಮುಖ್ಯಮಂತ್ರಿ ಆಗಬೇಕು ಇತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟು ಉತ್ತರ ಪಡೆಯಲಾಗಿದೆ. ಸಮೀಕ್ಷೆಯ ಸಂಪೂರ್ಣ ವಿವರ ಪಡೆಯಲು ಮುಂದೆ ಓದಿ.

  ಯಾವ ಪಕ್ಷಕ್ಕೆ ಎಷ್ಟು ಸ್ಥಾನ, ಯಾವ ಪ್ರಮಾಣದ ಮತ

  ಯಾವ ಪಕ್ಷಕ್ಕೆ ಎಷ್ಟು ಸ್ಥಾನ, ಯಾವ ಪ್ರಮಾಣದ ಮತ

  ಕಾಂಗ್ರೆಸ್ 110-115 ಶೇಕಡಾ 34ರಿಂದ 37ರಷ್ಟು ಮತ

  ಬಿಜೆಪಿ 70-75 ಶೇಕಡಾ 33ರಿಂದ 35ರಷ್ಟು ಮತ

  ಜೆಡಿಎಸ್ 33-38 ಶೇಕಡಾ 18ರಿಂದ 21ರಷ್ಟು ಮತ

  ಪಕ್ಷವಾರು ಮುಖ್ಯಮಂತ್ರಿ ಅಭ್ಯರ್ಥಿಗಳು ಮತ್ತು ಜನ ಬೆಂಬಲ

  ಪಕ್ಷವಾರು ಮುಖ್ಯಮಂತ್ರಿ ಅಭ್ಯರ್ಥಿಗಳು ಮತ್ತು ಜನ ಬೆಂಬಲ

  ಕಾಂಗ್ರೆಸ್: ಸಿದ್ದರಾಮಯ್ಯ- ಶೇ 58, ಡಿಕೆ ಶಿವಕುಮಾರ್- ಶೇ 18, ಮಲ್ಲಿಕಾರ್ಜುನ ಖರ್ಗೆ- ಶೇ 13, ಡಾ.ಜಿ.ಪರಮೇಶ್ವರ- ಶೇ 10

  ಬಿಜೆಪಿ: ಬಿಎಸ್ ಯಡಿಯೂರಪ್ಪ-ಶೇ 52, ಅನಂತಕುಮಾರ್- ಶೇ 28, ಅನಂತ ಕುಮಾರ್ ಹೆಗಡೆ- ಶೇ 12, ಸಂತೋಷ್- ಶೇ 8

  ಜೆಡಿಎಸ್: ಎಚ್.ಡಿ.ಕುಮಾರಸ್ವಾಮಿ- ಶೇ 90, ಎಚ್.ಡಿ.ರೇವಣ್ಣ- ಶೇ 10

  ಯಾವ ಪಕ್ಷಕ್ಕೆ, ಯಾವುದು ಅನುಕೂಲಕರ ಅಂಶ

  ಯಾವ ಪಕ್ಷಕ್ಕೆ, ಯಾವುದು ಅನುಕೂಲಕರ ಅಂಶ

  ಕಾಂಗ್ರೆಸ್: ಸ್ಥಿರ ಆಡಳಿತ- ಶೇ 45, ಭ್ರಷ್ಟಾಚಾರರಹಿತ ಆಳ್ವಿಕೆ- ಶೇ 15, ನಾನಾ ಭಾಗ್ಯಗಳು- ಶೇ 40

  ಬಿಜೆಪಿ: ಮೋದಿ ಅಲೆ-ಶೇ 65, ಅಮಿತ್ ಶಾ ತಂತ್ರಗಾರಿಕೆ- ಶೇ 25, ಹಿಂದುತ್ವ ವಾದ- ಶೇ 10

  ಜೆಡಿಎಸ್: ಪರ್ಯಾಯ ಶಕ್ತಿ- ಶೇ 25, ಸಮ್ಮಿಶ್ರ ಸರಕಾರದ ಸಾಧನೆ- ಶೇ 60, ಪ್ರಾದೇಶಿಕ ಪಕ್ಷದ ಅನಿವಾರ್ಯತೆ- ಶೇ 15

  ಯಾವ ಪಕ್ಷಕ್ಕೆ ಯಾವುದು ನಕಾರಾತ್ಮಕ ಅಂಶ

  ಯಾವ ಪಕ್ಷಕ್ಕೆ ಯಾವುದು ನಕಾರಾತ್ಮಕ ಅಂಶ

  ಕಾಂಗ್ರೆಸ್: ಅಹಿಂದ ಓಲೈಕೆ- ಶೇ 55, ಕಾನೂನು ವ್ಯವಸ್ಥೆ ವೈಫಲ್ಯ- ಶೇ 25, ಕಾವೇರಿ, ಮಹಾದಾಯಿ ವಿವಾದ- ಶೇ 20

  ಬಿಜೆಪಿ: ಆಂತರಿಕ ಕಚ್ಚಾಟ-ಶೇ 54, ಮಹಾದಾಯಿ ವಿವಾದ- ಶೇ 30, ಪ್ರತಿಪಕ್ಷ ಹೊಣೆ ನಿರ್ವಹಣೆಯಲ್ಲಿ ವೈಫಲ್ಯ- ಶೇ 16

  ಜೆಡಿಎಸ್: ಸಂಘಟನೆ ಕೊರತೆ- ಶೇ 48, ಭಿನ್ನಮತ- ಶೇ 40, ಕುಟುಂಬ ರಾಜಕೀಯ- ಶೇ 12

  ಪ್ರಭಾವ ಬೀರದ ಉಪೇಂದ್ರ, ಕೇಜ್ರಿವಾಲ್

  ಪ್ರಭಾವ ಬೀರದ ಉಪೇಂದ್ರ, ಕೇಜ್ರಿವಾಲ್

  ಸಮೀಕ್ಷೆ ವೇಳೆ ಉಪೇಂದ್ರರ ಕೆಪಿಜೆಪಿ ಹಾಗೂ ಅರವಿಂದ್ ಕೇಜ್ರಿವಾಲ್ ರ ಆಮ್ ಆದ್ಮಿ ಪಕ್ಷ ಯಾವುದೇ ಪರಿಣಾಮ ಬೀರಲ್ಲ ಎಂಬ ಅಂಶ ಬಹಿರಂಗವಾಗಿದ್ದರೆ, ನೋಟಾ (ಮತ ನಿರಾಕರಣೆ)ದಿಂದ ಹತ್ತಕ್ಕಿಂತ ಹೆಚ್ಚು ಕ್ಷೇತ್ರಗಳ ಫಲಿತಾಂಶ ಬದಲಾವಣೆ ಆಗಲಿದೆ ಎಂಬುದು ಬಹಿರಂಗವಾಗಿದೆ.

  ಲಿಂಗಾಯತ ಮತಗಳು ಕಾಂಗ್ರೆಸ್ ಬುಟ್ಟಿಗೆ

  ಲಿಂಗಾಯತ ಮತಗಳು ಕಾಂಗ್ರೆಸ್ ಬುಟ್ಟಿಗೆ

  ಲಿಂಗಾಯತ ಸತಂತ್ರ ಧರ್ಮ ಹೋರಾಟಕ್ಕೆ ಬೆಂಬಲ ನೀಡಿರುವುದು ಕಾಂಗ್ರೆಸ್ ಪಾಲಿಗೆ ಪ್ಲಸ್ ಆಗಲಿದೆ. ಈ ಹೋರಾಟಕ್ಕೆ ಸಿದ್ದರಾಮಯ್ಯ ನೇರವಾಗಿ ಬೆಂಬಲ ಕೊಡದಿದ್ದರೂ ಅವರ ಸಂಪುಟ ಸಹೋದ್ಯೋಗಿಗಳಾದ ಎಂ.ಬಿ.ಪಾಟೀಲ ಹಾಗೂ ವಿನಯ ಕುಲಕರ್ಣಿ ಸ್ವತಂತ್ರ ಧರ್ಮದ ಪರವಾಗಿರುವುದು ಆ ಪಕ್ಷಕ್ಕೆ ನೆರವಾಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸ್ವತಂತ್ರ ಧರ್ಮದ ವಿಚಾರವಾಗಿ ಯಾವುದೇ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸದಿರುವುದರಿಂದ ಆ ಪಕ್ಷಕ್ಕೆ ಅಂಥ ಲಾಭವಾಗುವುದಿಲ್ಲ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Kannada news paper Vishwavani, Star poll and Jana Mana organisation conducted poll survey of Karnataka assembly election reveal that, If election held today Congress will form the government. Here is the complete result of poll survey.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more