Virat Kohli: ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಈ ಸಿಕ್ರೇಟ್‌ ಬಗ್ಗೆ ನಿಮಗೆ ಗೊತ್ತಾ?

ನಟಿ ಅನುಷ್ಕಾ ಶರ್ಮಾ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ನಟಿಯಾಗಿ ಅನುಷ್ಕಾ ಅಭಿಮಾನಿಗಳಿಗೆ ಎಷ್ಟು ಇಷ್ಟವೋ..! ಟೀಮ್​ ಇಂಡಿಯಾ ಬ್ಯಾಟ್ಸ್​ಮನ್, ಕಿಂಗ್‌ ವಿರಾಟ್‌ ಕೊಹ್ಲಿ ಪತ್ನಿಯಾಗಿ ಅದಕ್ಕಿಂತ ಹೆಚ್ಚು ಅನುಷ್ಕಾ ಶರ್ಮಾರನ್ನು ಅಭಿಮಾನಿಗಳು ಇಷ್ಟಪಡುತ್ತಾರೆ. ಯಾಕೆಂದರೆ ಅನುಷ್ಕಾ ಶರ್ಮಾ ಅಷ್ಟರ ಮಟ್ಟಿಗೆ ವಿರಾಟ್‌ ಕೊಹ್ಲಿ ಅವರನ್ನು ಬೆಂಬಲಿಸುತ್ತಾರೆ.

ಪಂದ್ಯ ಯಾವುದೇ ಇರಲಿ ವಿರಾಟ್‌ ಹೇಗೆ ಆಡಲಿ ಅನುಷ್ಕಾ ಶರ್ಮಾ ತಮ್ಮ ಪತಿಯನ್ನು ಹುರಿದುಂಬಿಸಲು ಬಹುತೇಕ ಪಂದ್ಯಗಳಿಗೆ ಹಾಜರಾಗುತ್ತಾರೆ. ವಿರಾಟ್‌ ಗೆಲುವನ್ನು ಸಂಭ್ರಮಿಸುತ್ತಾರೆ. ಸೋತಾಗ ಅವರ ಜೊತೆ ನಿಲ್ಲುತ್ತಾರೆ. ಹೀಗಾಗಿ ಅನುಷ್ಕಾ ಶರ್ಮಾ ಎಂದರೆ ಕ್ರಿಕೆಟ್‌ ಅಭಿಮಾನಿಗಳಿಗೂ ಕೂಡ ಹೆಚ್ಚು ಪ್ರೀತಿ.

Virat Kohli Wife Actress Anushka Sharma Revealed The Secret Of Her

ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ ಅವರ ಜೋಡಿ ಅಭಿಮಾನಿಗಳ ಫೇವರೇಟ್‌ ಆಗಿದ್ದು, ಈ ಜೋಡಿ ಕೆಲವು ವಿಚಿತ್ರ ಆಸೆಗಳನ್ನು ಹೊಂದಿದ್ದಾರೆ. ಅದರಲ್ಲಿ ಒಂದನ್ನು ಅನುಷ್ಕಾ ಶರ್ಮಾ ಹಂಚಿಕೊಂಡಿದ್ದಾರೆ. ವಿರಾಟ್‌ ಕೊಹ್ಲಿ ಅವರ ಬಟ್ಟೆಗಳನ್ನು ಧರಿಸುವುದು ಎಂದರೆ ಅನುಷ್ಕಾ ಶರ್ಮಾಗೆ ತುಂಬಾ ಇಷ್ಟವಂತೆ. ಹಾಗಂದ ಮಾತ್ರಕ್ಕೆ ವಿರಾಟ್‌ ಕೊಹ್ಲಿ ಅವರು ತಂದ ಬಟ್ಟೆಗಳನ್ನು ಕೇಳಿ ಪಡೆಯುವುದಿಲ್ಲವಂತೆ. ಬದಲಿಗೆ ಕಳ್ಳತನ ಮಾಡುತ್ತಾರಂತೆ.

ವಿರಾಟ್​ ಕೊಹ್ಲಿ ಮನೆಯಲ್ಲಿಲ್ಲದ ಸಮಯದಲ್ಲಿ ಅವರ ವಾಡ್ರೋಬ್‌ ಹುಡುಕಾಡುವ ಅನುಷ್ಕಾ ಶರ್ಮಾ, ಕೊಹ್ಲಿ ಅವರ ಟೀ ಶರ್ಟ್​ ಹಾಗೂ ಜಾಕೆಟ್​​​ಗಳನ್ನು ಕಳ್ಳತನ ಮಾಡುತ್ತಾರಂತೆ. ಬಳಿಕ ಅವುಗಳನ್ನು ತೊಟ್ಟು ಖುಷಿ ಪಡುತ್ತಾರಂತೆ. ಈ ವಿಚಾರ ವಿರಾಟ್‌ ಕೊಹ್ಲಿಗೂ ಗೊತ್ತಿದ್ದು, ಅನುಷ್ಕಾ ಶರ್ಮಾ ತಮ್ಮ ಬಟ್ಟೆ ಧರಿಸಿರುವುದನ್ನು ನೋಡಿ ವಿರಾಟ್​​ ಕೊಹ್ಲಿ ಕೂಡ ಖುಷಿ ಪಡುತ್ತಾರಂತೆ. ತಮ್ಮ ನಡುವಿನ ಈ ಸಿಕ್ರೇಟ್‌ ಅನ್ನು ಅನುಷ್ಕಾ ಶರ್ಮಾ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಅನುಷ್ಕಾ ಶರ್ಮಾ ಹುಟ್ಟುಹಬ್ಬ ಸೆಲೆಬ್ರೇಷನ್

ಇನ್ನು ಪುತ್ರ ಅಕಾಯ್ ಜನಿಸಿದ ನಂತರ ಮೊದಲ ಬಾರಿಗೆ ಅನುಷ್ಕಾ ಶರ್ಮಾ ಬೆಂಗಳೂರಿನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಇತ್ತೀಚಿಗೆ ಅನುಷ್ಕಾ ತಮ್ಮ ಹುಟ್ಟುಹಬ್ಬವನ್ನು ಬೆಂಗಳೂರಿನಲ್ಲಿ ಆಚರಿಸಿಕೊಂಡರು. ಅನುಷ್ಕಾ ಶರ್ಮಾ ಹಾಗೂ ವಿರಾಟ್‌ ಆರ್​ಸಿಬಿ ಆಟಗಾರರೊಂದಿಗೆ ಬರ್ತ್​ಡೇ ಪಾರ್ಟಿ ಮಾಡಿದ್ದಾರೆ. ಐಷಾರಾಮಿ ಹೋಟೆಲ್​ನಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಅನುಷ್ಕಾ ಮತ್ತು ವಿರಾಟ್ ಹಾಗೂ ಅವರ ಆಪ್ತರು ಕಾಣಿಸಿಕೊಂಡಿದ್ದರು. ಅನುಷ್ಕಾ ಹುಟ್ಟುಹಬ್ಬದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ಅನುಷ್ಕಾ ಶರ್ಮಾ ಕಾಣಿಸಿಕೊಂಡಿದ್ದು, ವಿರಾಟ್​ ಕೊಹ್ಲಿ ತಂಡವನ್ನು ಹುರಿದುಂಬಿಸಿದ್ದರು. ಈ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

Actress Anushka Sharma revealed the secret of her. Know more,

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+