Viral Video: ಯಾವುದೇ ಐಶಾರಾಮಿ ಹೊಟೇಲ್‌ಗೂ ಕಮ್ಮಿ ಇಲ್ಲ ಮೊಬೈಲ್ ಮನೆ: ಇಲ್ಲಿದೆ ವಿಡಿಯೋ
ವೈರಲ್ ಪ್ರಪಂಚವೇ ಹಾಗೇ.. ಈ ಪ್ರಪಂಚದಲ್ಲಿ ಎಲ್ಲರೂ ಪ್ರಸಿದ್ಧಿ ಪಡೆಯಲು ನಾನಾ ರೀತಿಯ ಕಸರತ್ತು ಮಾಡುತ್ತಾರೆ. ಕೆಲವರು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಪಬ್ಲಿಸಿಟಿ ಪಡೆದರೆ, ಇನ್ನು ಹಲವರು ಜನಪ್ರಿಯತೆಗಾಗಿಯೇ ಹಣವನ್ನು ವ್ಯಯಮಾಡುತ್ತಾರೆ. ಭಾರತದಲ್ಲಿ ಕಸದಿಂದ ರಸ ಮಾಡುವವರ ಸಂಖ್ಯೆ ಏನು ಕಮ್ಮಿ ಇಲ್ಲ.
ಚಿಕ್ಕ ವಸ್ತುಗಳನ್ನು ಬಳಸಿಕೊಂಡು ಎಲ್ಲರೂ ಮೆಚ್ಚುವಂತಹ ಕಾರ್ಯವನ್ನು ಕೆಲವರು ಮಾಡಿದ್ದಾರೆ. ಜನರು ತಮ್ಮಲ್ಲಿರುವ ಕ್ರಿಯೇಟಿವಿಟಿ ಮೂಲಕ ವೈರಲ್ ಆಗುತ್ತಾರೆ. ತಮ್ಮ ಜಾಣ್ಮೆಯನ್ನೇ ಪ್ರದರ್ಶಿಸುವ ಜನ, ಬೇರೆಯವರ ಪ್ರೀತಿಗೆ ಪಾತ್ರರಾಗುತ್ತಾರೆ. ಈ ವಿಡಿಯೋಗಳನ್ನು ನೋಡಿ ತಾವು ಈ ರೀತಿ ಏನನ್ನಾದ್ರೂ ಮಾಡಬೇಕಲ್ಲಾ ಎಂಬ ಚಿಂತೆ ಜನರಲ್ಲಿ ಮೂಡುತ್ತದೆ.

ವೈರಲ್ ವಿಡಿಯೋದಲ್ಲಿ ಏನಿದೆ?
ಇದೀಗ ಅಂತಹುದೇ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನಂತರ ನಿಮ್ಮ ಕಣ್ಣುಗಳನ್ನು ನೀವು ನಂಬಲು ಆಗದು. ಒಂದು ಚೂರು ಸಮಯವನ್ನು ಕೊಟ್ಟು ಈ ವೈರಲ್ ವಿಡಿಯೋವನ್ನು ನೋಡಿದರೆ, ಸ್ಟನ್ ಆಗೋದು ಗ್ಯಾರಂಟಿ.
ಈ ವೈರಲ್ ವಿಡಿಯೋವನ್ನು ಪ್ಲೇ ಮಾಡಿದಾಗ ಇದರಲ್ಲೇನು ವಿಶೇಷ.. ಒಂದು ಗುಡಿಸಲು ಎಂದು ಭಾವಿಸುತ್ತೀರಿ. ಆದರೆ, ಇದು ನಡೆದಾಡುವ ಮನೆ. ಹೀಗೆ ಹೇಳಿದ ಮೇಲೆ ನಿಮಗೆ ತಲೆ ಕೆಡುತ್ತದೆ. ಹೌದು ಐಶಾರಾಮಿ ಮನೆಯಲ್ಲಿ ಇರಬೇಕಾದ ಎಲ್ಲ ವ್ಯವಸ್ಥೆಗಳೂ ಈ ಗುಡಿಸಲಿನಲ್ಲಿ ಇವೆ. ಒಮ್ಮೆ ಈ ವಿಡಿಯೋ ನೋಡಿದರೆ ಸ್ಟನ್ ಅಗುವುದು ಗ್ಯಾರಂಟಿ.
ಐಶಾರಾಮಿ ಸೌಲಭ್ಯಗಳನ್ನು ಹೊಂದಿರುವ ಮೊಬೈಲ್ ಮನೆ
ಈ ಗುಡಿಸಲಿನ ಕೆಳಭಾಗದಲ್ಲಿ ಚಕ್ರಗಳು ಸಹ ಜೋಡಿಸಲ್ಪಟ್ಟಿರುವುದರಿಂದ ಅದನ್ನು ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗಬಹುದು. ಇದಲ್ಲದೇ ವ್ಯಕ್ತಿ ಆ ಗುಡಿಸಲಿನಲ್ಲಿ ಕೂಲರ್, ಲೈಟ್, ಟಿವಿ ಕೂಡ ಅಳವಡಿಸಿದ್ದಾರೆ. ಗುಡಿಸಲಿನಲ್ಲಿ ದೀಪಗಳು ಉರಿಯುತ್ತಿದ್ದು, ಟಿವಿ ಕೂಡ ಇದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

ಈ ವೀಡಿಯೊವನ್ನು Xನಲ್ಲಿ @Gulzar_sahab ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ವೀಡಿಯೋವನ್ನು ಹಂಚಿಕೊಳ್ಳುವಾಗ, 'ಇದರ ಮುಂದೆ ವಿಶ್ವದ ಅತ್ಯಂತ ದುಬಾರಿ ಹೋಟೆಲ್‌ಗಳು ಸಹ ಸಪ್ಪೆ' ಎಂಬ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಸುದ್ದಿ ಬರೆಯುವವರೆಗೂ ಈ ವಿಡಿಯೋವನ್ನು 5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವೀಡಿಯೊವನ್ನು ನೋಡಿದ ನಂತರ, ಬಳಕೆದಾರರು ಮನಸೋ ಇಚ್ಛೆ ಕಮೆಂಟ್ ಮಾಡಿದ್ದಾರೆ. ಅನೆಕ ನೆಟ್ಟಿಗರು ಈ ಮೊಬೈಲ್ ಮನೆ ನೋಡಿ ಶ್ಲಾಘಿಸಿದ್ದಾರೆ.












Click it and Unblock the Notifications