Beer: ರುಚಿ, ಪರಿಮಳ ವ್ಯತ್ಯಾಸವಾಗದಂತೆ ಗ್ಲಾಸಿಗೆ ಬಿಯರ್ ಸುರಿಯುವುದು ಗೊತ್ತೆ?: Video Viral
ಬಿಯರ್ (Beer) ಎಂದರೆ ಅದೊಂದು ತಂಪು ಪಾನೀಯ ಮಾತ್ರವಲ್ಲ. ಜಾಗತಿಕವಾಗಿ ಲಕ್ಷಾಂತರ ಜನರಿಗೆ, ಬಿಯರ್ ಹಿತವಾದ, ಮನಸ್ಥಿತಿಗೆ ಹೊಂದಿಕೊಳ್ಳುವ ಇಷ್ಟದ ಪಾನೀಯವಾಗಿದೆ. ಮೋಜು, ಮಸ್ತಿಗೆ, ಪಾರ್ಟಿಗಳಲ್ಲೂ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಬಿಯರ್ ಬಳಕೆ ಬಗ್ಗೆ ಕೆಲವು ವಿಷಯಗಳೇ ಎಷ್ಟೋ ಜನರಿಗೆ ಗೊತ್ತಿರುವುದಿಲ್ಲ. ಆ ಪೈಕಿ ಒಂದನ್ನು ಈ ವೈರಲ್ ಆದ ವಿಡಿಯೋದಲ್ಲಿ ನೋಡಬಹುದಾಗಿದೆ.
ಬಿಯರ್ ಕುರಿತು @taphaus ಎಂಬುವವರು ಗಾಜಿನ ಗ್ಲಾಸಿಗೆ ಬಿಯರ್ ಸುರಿಯುವ ಸರಿಯಾದ ವಿಧಾನಗಳನ್ನು ತಿಳಿಸುವ ವಿಡಿಯೋವನ್ನು (ರೀಲ್) ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಬಿಯರ್ ಪರಿಮಳ, ರುಚಿ ಕೆಡದಂತೆ ಸುರಿಯುವ ವಿಧಾನ ತಿಳಿಸಿದ್ದಾರೆ.

ನೀವು ಹೇಗೆ ಬಿಯರ್ ಸುರಿಯುತ್ತೀರಿ ಎಂಬುದರ ಮೇಲೆ ಬಿಯರ್ ಅನುಭವ ಮತ್ತು ತಕ್ಕಮಟ್ಟಿನ ರುಚಿ ಮತ್ತು ಪರಿಮಳ ಸಹ ಬದಲಾಗುತ್ತದೆ ಎಂದಿದ್ದಾರೆ. ಇದರಲ್ಲಿ ಬಿಯರ್ ಅನ್ನು ಗಾಜಿನ ಲೋಟಕ್ಕೆ ಗಟ್ಟಿಯಾದ ಸುರಿಯುವಿಕೆ ಮತ್ತು ಮೃದುವಾದ ಸುರಿಯುವಿಕೆಯ ವ್ಯತ್ಯಾಸವನ್ನು ಅವರು ವಿವರಿಸಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.
2.6 ಮಿಲಿಯನ್ ವೀಕ್ಷಣೆ ಕಂಡ ವಿಡಿಯೋ
ಈ ವೈರಲ್ ಆದ ಬಿಯರ್ ಸುರಿಯುವಿಕೆಯ ವೀಡಿಯೊ ಬರೋಬ್ಬರಿ 2.6 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಒಟ್ಟು 53,506 ಲೈಕ್ಸ್‌ನಗಳನ್ನು ಪಡೆದಿದೆ.
ನೀವು ಬಿಯರ್ ಅನ್ನು ತಪ್ಪು ರೀತಿಯಲ್ಲಿ ಗ್ಲಾಸಿಗೆ ಸುರಿಯುತ್ತಿದ್ದೀರಿ! ನಾವು ಬಿಯರ್ ಸುರಿಯುವ ಕಲೆಗೆ ಹೇಗೆಂದು ತಿಳಿಯೋಣ. ಏಕೆಂದರೆ ನೀವು ಅದನ್ನು ಹೇಗೆ ಸುರಿಯುತ್ತೀರಿ ಎಂಬುದು ಅದರ ರುಚಿ ಮತ್ತು ಪರಿಮಳವನ್ನು ಗಮನಾರ್ಹವಾಗಿ ವ್ಯತ್ಯಾಸವಾಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.
ಆ ವೀಡಿಯೋದಲ್ಲಿ ಏನಿದೆ?
ಈ ವೀಡಿಯೊದಲ್ಲಿ ಆತ ಮೊದಲು ಬಿಯರ್ ಕ್ಯಾನ್ ತೆಗೆದುಕೊಂಡು ಅದನ್ನು ಗ್ಲಾಸಿನ ಒಂದು ಬದಿಯಲ್ಲಿ ಮೃದುವಾಗಿ ಮತ್ತು ನಿಧಾನವಾಗಿ ಸುರಿಯುತ್ತಾನೆ. ಈ ವೇಳೆ ಗ್ಲಾಸು ಮತ್ತು ಬಿಯರ್ ಕ್ಯಾನ್ ಸ್ವಲ್ಪ ವಾಲಿಸಿ ಮುಖಾಮುಖಿಯಾಗಿ ಹಿಡಿದು ನಿಧಾನವಾಗಿ ಸುರಿಯುತ್ತಾರೆ.
ಮತ್ತೊಂದು ಪೊರ್ ಬಿಯರ್ ಕ್ಯಾನ್ ಅನ್ನು ಇನ್ನೋ ಗಾಜಿನ ಲೋಟಕ್ಕೆ ಬೇಗ ಬೇಗನೆ ಸುರಿದು ಆ ಕ್ಯಾನ್ ಖಾಲಿ ಮಾಡುತ್ತಾನೆ. ಇದರಿಂದ ಆ ಲೋಟದಲ್ಲಿ ಬಿಯರ್ ಗ್ಯಾಸ್ ನಿಂದ ನೊರೆ ರೀತಿ ಬರುತ್ತದೆ. ಇದರಲ್ಲಿ ಯಾವುದು ಉತ್ತಮ, ಯಾವ ರೀತಿಯಲ್ಲಿ ನೀವು ಗಾಜಿನ ಲೋಟಕ್ಕೆ ಬಿಯರ್ ಸುರಿದು ಕುಡಿಯುಬೇಕು ಎಂಬುದನ್ನು ಆತ ವಿವರಿಸಿದ್ದಾರೆ.

ಮೊದಲಿಗೆ ನಿಧಾನವಾಗಿ ಬಿಯರ್ ಸುರಿದ ಶೈಲಿಯನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಆದರೆ ತಪ್ಪು. ನಿಧಾನವಾಗಿ ಸುರಿದ ಬಿಯರ್ ಗ್ಲಾಸಿಗೆ ಒಂಟು ಟಿಶ್ಯೂ ಪೇಪರ್‌ನಿಂದ ಕೈಯಾಡಿಸಿದರೆ, ಅಲ್ಲಿ ಫೋಮ್ ರಚನೆಯಾಗುತ್ತದೆ. ನೊರೆ ರೀತಿ ಲೋಟದಿಂದ ಬಿಯರ್ ಉಕ್ಕುತ್ತದೆ. ಇದು ಕುಡಿಯಲು ಅಷ್ಟು ಸರಿಯಲ್ಲ ಎಂದು ಆತ ಹೇಳುತ್ತಾನೆ.
ಏಕೆಂದರೆ ಬಿಯರ್ ಅನ್ನು ಮೃದುವಾಗಿ ಸುರಿದ ನಂತರ ಅದರಲ್ಲಿ ಹೈಯರ್ ಕಾರ್ಬೊನೇಶನ್ ನಿಂದ ಜನರಿಗೆ ಹೊಟ್ಟು ಉಬ್ಬಿದ ಅನುಭವ ಆಗುತ್ತದೆ. ಅದೇ ಜೋರಾಗಿ ಗಾಜಿನ ಲೋಟಕ್ಕೆ ಸುರಿದ ಬಿಯರ್ ನಿಂದ ಹೊಟ್ಟೆ ಉಬ್ಬರ ತಡೆಯಬಹುದಾಗಿದೆ. ಅಲ್ಲದೇ ಇದರಿಂದ ಬಿಯರ್ ರುಚಿ ಜೊತೆಗೆ ಒಂದೊಳ್ಳೆ ಅನುಭವ ನಿಮ್ಮದಾಗುತ್ತದೆ. ಹೀಗಾಗಿ ಬಿಯರ್ ಅನ್ನು ನಿಧಾನವಾಗಿ ಸುರಿಯವುದನ್ನು ಬಿಟ್ಟುಬಿಡಿ ಎಂದು ಆತ ಹೇಳಿದ್ದಾನೆ.
ವಿಡಿಯೋಗೆ ನೆಟ್ಟಿಗರು ಏನಂದ್ರು?
ಈ ವಿಡಿಯೋಗೆ ನೆಟ್ಟಿಗರೊಬ್ಬರು "ನೀವು ವಿಡಿಯೋಗಾಗಿ ಎರಡು ಬಿಯರ್ ಕ್ಯಾನ್ ಅನ್ನು ಹಾಳು ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಾನು ನಿಮ್ಮ ಹಾಗೆ ಬಿಯರ್ ಅನ್ನು ಸುರಿಯುವುದಿಲ್ಲ. ಬದಲಾಗಿ ಬಾಟಿಲಿ ಇಲ್ಲವೇ ಕ್ಯಾನ್ ನಿಂದ ಲೋಟಕ್ಕೆ ಹಾಕದೇ ನೇರವಾಗಿ ಕುಡಿಯುತ್ತೇನೆ ಎಂದಿದ್ದಾರೆ.
ಬಿಯರ್ ಜೋರಾಗಿ ಸುರಿದರೆ ಅದರಲ್ಲಿನ ಚಿಲ್ಡ್ ಹೋಗಬಹುದು. ಹಾಗಾಗಿ ನಾವು ಹಳೆಯ ವಿಧಾನ, ನಿಧಾನವಾಗಿ ಸುರಿವಿಕೆ ವಿಧಾನ ಅನುಸರಿಸುತ್ತೇವೆ ಎಂದು ಮೂರನೇ ವ್ಯಕ್ತಿ ತಿಳಿಸಿದ್ದಾರೆ. ಹೀಗೆ ಬಿಯರ್ ಪ್ರಿಯರು ಒಬ್ಬೊಬ್ಬರು ಒಂದು ರೀತಿಯಲ್ಲಿ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.












Click it and Unblock the Notifications