ವಿಡಿಯೋ: ಇದು ನಾಯಿ, ಹಸು, ಕುದುರೆ ಅಲ್ಲ ಕೋಳಿಯ ಹುಟ್ಟುಹಬ್ಬ
ಸಾಮಾನ್ಯವಾಗಿ ಪ್ರಾಣಿಪ್ರಿಯರು ತಮ್ಮ ಮುದ್ದಿನ ಸಾಕುನಾಯಿಯ ಹುಟ್ಟುಹಬ್ಬವನ್ನು ಆಚರಿಸುವುದನ್ನು ನಾವು ನೋಡಿದ್ದೇವೆ. ಬೆಕ್ಕು, ಕುದುರೆ, ಹಸು ಹೀಗೆ ಸಾಕು ಪ್ರಾಣಿಗಳ ಹುಟ್ಟುಹಬ್ಬವನ್ನು ಆಚರಿಸುವುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇಲ್ಲೊಂದು ಕುಟುಂಬ ತಮ್ಮ ಸಾಕು ಕೋಳಿಯ ಹುಟ್ಟುಹಬ್ಬವನ್ನು ಆಚರಿಸಿದೆ. ಕೇಳಲು ಆಶ್ಚರ್ಯ ಎನಿಸಿದ್ರೂ ಇದು ನಿಜ. ಸಾಕು ಕೋಳಿಯ ಹುಟ್ಟುಹಬ್ಬ ಆಚರಿಸಿದ ಕುಟುಂಬದ ವಿಶೇಷವಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಕುಟುಂಬವು ಸಾಕು ಕೋಳಿಯ ಎರಡನೇ ಹುಟ್ಟುಹಬ್ಬವನ್ನು ಸ್ಮರಣೀಯ ರೀತಿಯಲ್ಲಿ ಆಚರಿಸಿದೆ. ಮಾತ್ರವಲ್ಲದೆ ಕೋಳಿಯ ಹುಟ್ಟುಹಬ್ಬವನ್ನು ಆಚರಿಸಲು ಕುಟುಂಬವು ಹೆಚ್ಚಿನ ಸಂಖ್ಯೆಯ ಸ್ನೇಹಿತರನ್ನು ಆಹ್ವಾನಿಸಿದೆ. ಕೋಳಿದಿಂದಲೇ ಕೇಕ್ ಕತ್ತರಿಸಿ ಜನ್ಮದಿನದ ಶುಭಾಶಯದ ಹಾಡನ್ನು ಹಾಡಿದೆ. ವೈರಲ್ ವಿಡಿಯೋದಲ್ಲಿ ಒಂದು ಟೇಬಲ್ ಮೇಲೆ ದೊಡ್ಡ ಕೇಕ್ ಇರಿಸಲಾಗಿದೆ. ಈ ಟೇಬಲ್ ಅನ್ನು ಬಲೂನ್‌ಗಳು, ಲ್ಯಾಂಟರ್ನ್‌ಗಳು, ಪೋಮ್ ಮತ್ತು "ಜನ್ಮದಿನದ ಶುಭಾಶಯಗಳು" ಎಂದು ಬರೆಯುವ ಬ್ಯಾನರ್‌ನಿಂದ ಅಲಂಕರಿಸಲಾಗಿದೆ.
ಹುಟ್ಟುಹಬ್ಬದ ವಿಡಿಯೋ ವೈರಲ್
ಕೈಯಲ್ಲಿ ಕೋಳಿಯನ್ನು ಹಿಡಿದಿರುವ ಯುವತಿಯೊಬ್ಬಳು ಕೋಳಿಯ ಕಾಲಿಗೆ ಚಾಕು ಕಟ್ಟಿ ಕೇಕ್ ಕತ್ತರಿಸುತ್ತಾರೆ. ಇತರರು ಜನ್ಮದಿನದ ಶುಭಾಶಯಗಳನ್ನು ತಿಳಿಸುತ್ತಾರೆ. ಅಲ್ಲದೆ ಅದಕ್ಕೆ ಸಣ್ಣ ತುಂಡು ಕೇಕ್ ನೀಡಲಾಗುತ್ತದೆ. ವೀಡಿಯೊವನ್ನು @memes.bks ಪುಟದಲ್ಲಿಯೂ ಹಂಚಿಕೊಳ್ಳಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ 6,500 ಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಸಾಕಷ್ಟು ಕಾಮೆಂಟ್‌ಗಳೊಂದಿಗೆ ವೀಡಿಯೊ ಸಾಕಷ್ಟು ಗಮನ ಸೆಳೆದಿದೆ. ಕೆಲವು ಬಳಕೆದಾರರು ಇವರ ಸಾಕುಪ್ರಾಣಿಗಳ ಜನ್ಮದಿನವನ್ನು ಆಚರಿಸುವ ಕಲ್ಪನೆಯನ್ನು ಇಷ್ಟಪಟ್ಟಿದ್ದಾರೆ.

ಯುವಕನ ಹುಟ್ಟುಹಬ್ಬದಂದು ಹಸುವಿನ ಹುಟ್ಟುಹಬ್ಬ
ನಮ್ಮ ಬರ್ತಡೇ ಬಂತು ಅಂದ್ರೆ ಸಾಕು ಅದ್ಧೂರಿಯಾಗಿ ಕೇಕ್ ಕಟ್ ಮಾಡಿ, ಫ್ರೆಂಡ್ಸ್ಗೆಲ್ಲಾ ಪಾರ್ಟಿ ಕೊಟ್ಟು ಸಖತ್ ಎಂಜಾಯ್ ಮಾಡ್ತೀವಿ. ಆದ್ರೆ, ಯುವಕನೊಬ್ಬ ತಾನು ಸಾಕಿದ ತನ್ನ ಮುದ್ದಿನ ಹಸುವಿನ ಬರ್ತ್ಡೇ ಆಚರಿಸಿದ್ದಾನೆ. ಕಳೆದ ವರ್ಷ ಫೆಬ್ರವರಿಯಲ್ಲಿ ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗ್ರಾಮದ ಧ್ರುವರಾಜ್ ತನ್ನ ಪ್ರೀತಿಯ ಹಸು ಚಿನ್ಮಯಿಯ 3ನೇ ವರ್ಷದ ಹುಟ್ಟುಹಬ್ಬಕ್ಕೆ ಕೇಕ್ ಕಟ್ ಮಾಡಿಸಿ ತನ್ನ ಮುದ್ದಿನ ಸಾಕು ಪ್ರಾಣಿ ಜೊತೆ ಆಚರಿಸಿದ್ದನು.

ಸ್ನೇಹಿತ ಬಳಗದಿಂದ ಬೀದಿ ನಾಯಿ ಹುಟ್ಟುಹಬ್ಬ
ಚಿಕ್ಕಬಳ್ಳಾಪುರ ನಗರದ 4ನೇ ವಾರ್ಡ್ನ ಎಡಿ ಕಾಲೋನಿಯ ಸ್ನೇಹಿತ ಬಳಗದಿಂದ ಬೀದಿ ನಾಯಿಯ ಹುಟ್ಟುಹಬ್ಬವನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಚರಿಸಲಾಗಿತ್ತು. ಕೆಲವು ವರ್ಷಗಳ ಹಿಂದೆ ಸಾಕು ನಾಯಿಯನ್ನು ತಂದು ದೇವಸ್ಥಾನದ ಆವರಣದಲ್ಲಿ ಬಿಡಲಾಗಿತ್ತು. ಇದನ್ನು ಕಂಡ ಇಲ್ಲಿನ ಜನರು ಅದಕ್ಕೆ ಶೇರ್ ಖಾನ್ ಎಂದು ಹೆಸರು ಸಹ ಇಟ್ಟಿದ್ದರು. ಹೀಗಾಗಿ ಶೇರ್ ಖಾನ್ ಹುಟ್ಟುಹಬ್ಬದ ಪ್ರಯುಕ್ತ ಬೀದಿಯಲ್ಲಿ ಪ್ಲೇಕ್ಸ್ ಕಟ್ಟಿ, ಹುಟ್ಟುಹಬ್ಬ ಆಚರಣೆ ಮಾಡಿ ಪಟಾಕಿ ಹೊಡೆಯಲಾಗಿದೆ.

ಶಿವಮೊಗ್ಗದಲ್ಲಿ ವಿಚಿತ್ರ ಯೋಜನೆ
ಇನ್ನೂ ಕಳೆದೆರೆಡು ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಲೂರು ಗ್ರಾಮದ ಶ್ರೀಕಾಂತಗೌಡ ಎಂಬ ರೈತರೊಬ್ಬರು ತಮ್ಮ ಸಾಕು ನಾಯಿಗೆ ಹುಲಿಯಂತೆ ಕಾಣಲು ಅದರ ತುಪ್ಪಳಕ್ಕೆ ಬಣ್ಣ ಹಚ್ಚಿದ್ದರು. ಈ ಕುರಿತು ಮಾತನಾಡಿದ್ದ ಶ್ರೀಕಾಂತಗೌಡ ತಮ್ಮ ಕಾಫಿ ಮತ್ತು ಅಡಿಕೆ ಬೆಳೆಗಳನ್ನು ಕೋತಿಗಳ ಕಾಟದಿಂದ ರಕ್ಷಿಸಲು ತಾವು ಈ ವಿಶಿಷ್ಟ ಪರಿಹಾರಕ್ಕೆ ಕೈಹಾಕಿರುವುದಾಗಿ ಹೇಳಿದ್ದರು. ಈ ಹಿಂದೆಯೂ ಕೂಡ ಕೋತಿಗಳ ಕಾಟದಿಂದ ಪಾರಾಗಲು ಶ್ರೀಕಾಂತಗೌಡ ಹುಲಿಗಳ ಆಟಿಕೆಗಳನ್ನು ಬಳಸಿದ್ದರು. ಆದರೆ, ನೀರಿಕ್ಷಿತ ಫಲಿತಾಂಶ ಕಂಡು ಬರದ ಕಾರಣ ತಾವು ತಮ್ಮ ನಾಯಿ 'ಬುಲ್ ಬುಲ್'ಗೆ ಹುಲಿ ಬಣ್ಣ ಬಳೆಯಲು ನಿರ್ಧರಿಸಿರುವುದಾಗಿ ಹೇಳಿದ್ದರು.












Click it and Unblock the Notifications