ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ್ ದಿವಸ್ 2022: ಇತಿಹಾಸ, ಮಹತ್ವ ಮತ್ತು ದಿನದ ಪ್ರಮುಖ ಸಂಗತಿಗಳು ಇಲ್ಲಿದೆ

|
Google Oneindia Kannada News

1971 ರಲ್ಲಿ ಪಾಕಿಸ್ತಾನದ ಮೇಲೆ ಭಾರತೀಯ ಪಡೆಗಳ ವಿಜಯದ ಸ್ಮರಣಾರ್ಥವಾಗಿ ಪ್ರತೀ ವರ್ಷ ಡಿಸೆಂಬರ್ 16 ರಂದು ಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ಏನಿದು ವಿಜಯ್ ದಿವಸ್‌ನ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ.

1971ರಲ್ಲಿ ಪಾಕಿಸ್ತಾನದ ಮೇಲೆ ನಿರ್ಣಾಯಕ ವಿಜಯವನ್ನು ಗುರುತಿಸಲು ಭಾರತದಲ್ಲಿ ವಿಜಯ್ ದಿವಸ್ ಅನ್ನು ಡಿಸೆಂಬರ್ 16 ರಂದು ಆಚರಿಸಲಾಗುತ್ತದೆ. ಇದು ಬಾಂಗ್ಲಾದೇಶದ ಸೃಷ್ಟಿಗೆ ಮತ್ತು ಪೂರ್ವ ಪಾಕಿಸ್ತಾನದ ವಿಮೋಚನೆಗೆ ಕಾರಣವಾಯಿತು. ವಿಜಯ್ ದಿವಸ್ ದಿನದ ಕುರಿತು ಕೆಲವು ಪ್ರಮುಖ ಸಂಗತಿಗಳನ್ನು ತಿಳಿಯೋಣ.

ಡಿಸೆಂಬರ್ 3 ರಂದು ಭಾರತ-ಪಾಕಿಸ್ತಾನ ಯುದ್ಧ 1971 ರಲ್ಲಿ ಪ್ರಾರಂಭವಾಯಿತು. ಇದು ಬರೋಬ್ಬರು 13 ದಿನಗಳವರೆಗೆ ನಡೆಯಿತು. ಯುದ್ಧವು ಡಿಸೆಂಬರ್ 16 ರಂದು ಕೊನೆಗೊಂಡು ಪಾಕಿಸ್ತಾನ ಭಾರತಕ್ಕೆ ಶರಣಾಯಿತು. ಹದಿಮೂರು ದಿನಗಳ ಯುದ್ಧದ ಬಳಿಕ ಪಾಕಿಸ್ತಾನಿ ಪಡೆಗಳು ಭಾರತಕ್ಕೆ ಸಂಪೂರ್ಣ ಶರಣಾಯಿತು. ಜೊತೆಗೆ ಬಾಂಗ್ಲಾದೇಶದ ಸೃಷ್ಟಿಗೆ ಕಾರಣವಾಯಿತು. ಪಾಕಿಸ್ತಾನದ ಸೇನೆಯು ಸುಮಾರು 93,000 ಸೈನಿಕರೊಂದಿಗೆ ಭಾರತದ ಮುಂದೆ ಶರಣಾಯಿತು. ಇದನ್ನು ಭಾರತದ "ಗ್ರೇಟೆಸ್ಟ್ ಎವರ್ ವಿಕ್ಟರಿ" ಎಂದು ಕರೆಯಲಾಗುತ್ತದೆ.

1971 ರ ಭಾರತ-ಪಾಕಿಸ್ತಾನ ಯುದ್ಧದ ಪ್ರಮುಖ ಸಂಗತಿಗಳು

1971 ರ ಭಾರತ-ಪಾಕಿಸ್ತಾನ ಯುದ್ಧದ ಪ್ರಮುಖ ಸಂಗತಿಗಳು

ಪಶ್ಚಿಮ ಪಾಕಿಸ್ತಾನ ಜನರನ್ನು ಕೆಟ್ಟದಾಗಿ ನಡೆಸಿಕೊಂಡು ಪೂರ್ವ ಪಾಕಿಸ್ತಾನದಲ್ಲಿ ಚುನಾವಣಾ ಫಲಿತಾಂಶಗಳನ್ನು ದುರ್ಬಲಗೊಳಿಸಿತು. ನಂತರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಪರಿಣಾಮವಾಗಿ ಈ ಸಂಘರ್ಷ ಸಂಭವಿಸಿತು. ಮಾರ್ಚ್ 26, 1971 ರಂದು ಉತ್ತರಾಧಿಕಾರದ ಕರೆಯನ್ನು ಪೂರ್ವ ಪಾಕಿಸ್ತಾನ ಅಧಿಕೃತವಾಗಿ ಎತ್ತಿತು.

ಪಾಕಿಸ್ತಾನದ ಜನರ ವ್ಯಾಪಕ ನರಮೇಧ

ಪಾಕಿಸ್ತಾನದ ಜನರ ವ್ಯಾಪಕ ನರಮೇಧ

1971 ರ ಯುದ್ಧ ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಸಂಘರ್ಷ ಏರ್ಪಟ್ಟಿತು. ಪಾಕಿಸ್ತಾನದ ಜನರಲ್ ಯಾಹ್ಯಾ ಖಾನ್ ನೇತೃತ್ವದಲ್ಲಿ ಪೂರ್ವ ಪಾಕಿಸ್ತಾನದ ಜನರ ವ್ಯಾಪಕ ನರಮೇಧದಿಂದಾಗಿ ಯುದ್ಧ ನಡೆಯಿತು. ಇದು ಡಿಸೆಂಬರ್ 3, 1971 ರಂದು ಪಾಕಿಸ್ತಾನದಿಂದ 11 ಭಾರತೀಯ ವಾಯುಪಡೆಯ ನಿಲ್ದಾಣಗಳ ಮೇಲೆ ಪೂರ್ವಭಾವಿ ವೈಮಾನಿಕ ದಾಳಿಯೊಂದಿಗೆ ಪ್ರಾರಂಭವಾಯಿತು. ಇದರ ಪರಿಣಾಮವಾಗಿ, ಪೂರ್ವ ಪಾಕಿಸ್ತಾನದಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಂಗಾಳಿ ರಾಷ್ಟ್ರೀಯತಾವಾದಿ ಗುಂಪುಗಳನ್ನು ಬೆಂಬಲಿಸಲು ಭಾರತೀಯ ಸೇನೆಯು ಒಪ್ಪಿಕೊಂಡಿತು.

ಭಾರತೀಯ ಸೈನಿಕರು ನಾಶ

ಭಾರತೀಯ ಸೈನಿಕರು ನಾಶ

ಡಿಸೆಂಬರ್ 4, 1971 ರಂದು ಆಪರೇಷನ್ ಟ್ರೈಡೆಂಟ್ ಅನ್ನು ಭಾರತ ಪ್ರಾರಂಭಿಸಿತು. ಈ ಕಾರ್ಯಾಚರಣೆಯಲ್ಲಿ, ಭಾರತೀಯ ನೌಕಾಪಡೆಯ ಪಶ್ಚಿಮ ನೌಕಾ ಕಮಾಂಡ್ ಕರಾಚಿ ಬಂದರಿನ ಮೇಲೆ ಹಠಾತ್ ದಾಳಿಯನ್ನು ಯಶಸ್ವಿಯಾಗಿ ನಡೆಸಿತು. ಇದನ್ನು ಟ್ರೈಡೆಂಟ್ ಎಂಬ ಸಂಕೇತನಾಮದಲ್ಲಿ ಮಾಡಲಾಯಿತು. ಪೂರ್ವ ಪಾಕಿಸ್ತಾನದಲ್ಲಿ ಮುಕ್ತಿ ಬಹಿನಿ ಗೆರಿಲ್ಲಾಗಳು ಪೂರ್ವದಲ್ಲಿ ಪಾಕಿಸ್ತಾನಿ ಪಡೆಗಳ ವಿರುದ್ಧ ಹೋರಾಡಲು ಭಾರತೀಯ ಪಡೆಗಳೊಂದಿಗೆ ಕೈಜೋಡಿಸಿದರು.

ಯುದ್ಧದ ಸಮಯದಲ್ಲಿ ದಕ್ಷಿಣ ಕಮಾಂಡ್ ಪಾಕಿಸ್ತಾನದ ವಿರುದ್ಧ ರಾಷ್ಟ್ರದ ಗಡಿಗಳನ್ನು ರಕ್ಷಿಸಿತು. ಪಾಕಿಸ್ತಾನದ ಶಸ್ತ್ರಸಜ್ಜಿತ ಪಡೆಗಳನ್ನು ಭಾರತೀಯ ಸೈನಿಕರು ನಾಶಪಡಿಸಿದರು. ಲೆಫ್ಟಿನೆಂಟ್ ಕರ್ನಲ್ (ನಂತರ ಬ್ರಿಗೇಡಿಯರ್) ಭವಾನಿ ಸಿಂಗ್ ನೇತೃತ್ವದ ಹೆಸರಾಂತ 10 ಪ್ಯಾರಾ ಕಮಾಂಡೋ ಬೆಟಾಲಿಯನ್‌ನ ಸೈನಿಕರು ಪಾಕಿಸ್ತಾನದ ಚಚ್ರೋ ಪಟ್ಟಣದ ಮೇಲೆ ದಾಳಿ ನಡೆಸಿದರು. ಈ ಯುದ್ಧಗಳು ಇತಿಹಾಸದಲ್ಲಿ ಒಂದು ಉದಾಹರಣೆಯನ್ನು ಸೃಷ್ಟಿಸಿವೆ ಮತ್ತು ನಮ್ಮ ಸೈನಿಕರ ಧೈರ್ಯ, ದೃಢತೆ ಮತ್ತು ಶೌರ್ಯವನ್ನು ತೋರಿಸುತ್ತವೆ.

ಭಾರತದಲ್ಲಿ ಐತಿಹಾಸಿಕ ಯುದ್ಧ

ಭಾರತದಲ್ಲಿ ಐತಿಹಾಸಿಕ ಯುದ್ಧ

ಡಿಸೆಂಬರ್ 14 ರಂದು ಪೂರ್ವ ಪಾಕಿಸ್ತಾನದ ಗವರ್ನರ್ ಜೊತೆ ಸಭೆ ನಡೆಯುತ್ತಿದ್ದ ಮನೆಯ ಮೇಲೆ ಐಎಎಫ್ ದಾಳಿ ನಡೆಸಿತು. ಈ ದಾಳಿಯಿಂದ ಪಾಕಿಸ್ತಾನ ತತ್ತರಿಸಿದೆ. ಇದರ ಪರಿಣಾಮವಾಗಿ ಸುಮಾರು 93,000 ಪಾಕಿಸ್ತಾನಿ ಪಡೆಗಳು ಶರಣಾದವು. ಹೀಗಾಗಿ, ಡಿಸೆಂಬರ್ 16, 1971 ರಂದು ಬಾಂಗ್ಲಾದೇಶವು ಹೊಸ ರಾಷ್ಟ್ರವಾಗಿ ಜನಿಸಿತು ಮತ್ತು ಪೂರ್ವ ಪಾಕಿಸ್ತಾನವು ಪಾಕಿಸ್ತಾನದಿಂದ ಸ್ವತಂತ್ರವಾಯಿತು.

ಈ ಯುದ್ಧವನ್ನು ಭಾರತದಲ್ಲಿ ಐತಿಹಾಸಿಕ ಯುದ್ಧವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಡಿಸೆಂಬರ್ 16 ರಂದು ದೇಶಾದ್ಯಂತ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ ನೆನಪಿಗಾಗಿ 'ವಿಜಯ್ ದಿವಸ್' ಎಂದು ಆಚರಿಸಲಾಗುತ್ತದೆ. 1971 ರ ಯುದ್ಧದಲ್ಲಿ ಸುಮಾರು 3,900 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು ಮತ್ತು ಸುಮಾರು 9,851 ಮಂದಿ ಗಾಯಗೊಂಡರು ಎಂದು ಹೇಳಲಾಗುತ್ತದೆ.

English summary
Vijay Diwas 2022: Date, History, Significance of India's Victory over Pakistan in the 1971 war in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X