ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಮನುಷ್ಯನ ಮೇಲೆ ಏಕಾಏಕಿ ದಾಳಿ ಮಾಡಿದ ಹೆಬ್ಬಾವು

|
Google Oneindia Kannada News

ರೆಟಿಕ್ಯುಲೇಟೆಡ್ ಹೆಬ್ಬಾವು ವಿಶ್ವದ ಅತಿ ಉದ್ದದ ಹಾವು ಮತ್ತು ಮೂರು ಭಾರವಾದ ಹಾವುಗಳಲ್ಲಿ ಒಂದಾಗಿದೆ. ರೆಟಿಕ್ಯುಲೇಟೆಡ್ ಹೆಬ್ಬಾವುಗಳು ಮೊದಲು ಕಚ್ಚುತ್ತವೆ. ನಂತರ ಕೆಲವೇ ನಿಮಿಷಗಳಲ್ಲಿ ಉಸಿರುಗಟ್ಟಿಸಿ ಅಥವಾ ಹೃದಯ ಸ್ತಂಭನದಿಂದ ಬಲಿಪಶುವನ್ನು ಕೊಲ್ಲುತ್ತವೆ. ನಂತರ ಹೆಬ್ಬಾವುಗಳು ತಮ್ಮ ಬೇಟೆಯನ್ನು ಸಂಪೂರ್ಣವಾಗಿ ನುಂಗುತ್ತವೆ. ಅಕ್ಷರಶಃ ಕೆಲವೇ ಸೆಕೆಂಡುಗಳಲ್ಲಿ, ಹೆಬ್ಬಾವುಗಳು ವ್ಯಕ್ತಿಯ ದೇಹದ ಸುತ್ತ ತನ್ನ ಶಕ್ತಿಯುತ ಸುರುಳಿಗಳನ್ನು ಸುತ್ತುತ್ತವೆ. ಇದರಿಂದ ಮೆದುಳಿಗೆ ರಕ್ತ ಪರಿಚಲನೆಯನ್ನು ಕಡಿತಗೊಳಿಸುತ್ತವೆ, ಉಸಿರಾಟವನ್ನು ನಿರ್ಬಂಧಿಸುತ್ತವೆ ಮತ್ತು ಹೃದಯ ಸ್ತಂಭನವನ್ನು ತಡೆಯುತ್ತವೆ. ಈ ಎಲ್ಲಾ ಕಾರಣಗಳಿಂದ ಒಬ್ಬ ವ್ಯಕ್ತಿಯು ಬೇಗನೆ ಸಾಯುತ್ತಾನೆ. ಇಂತಹ ಬೃಹತ್ ಹೆಬ್ಬಾವು ಮನುಷ್ಯನ ಮೇಲೆ ದಾಳಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಹೆಚ್ಚಾವು ಏಕಾಏಕಿ ವ್ಯಕ್ತಿಯ ಮೇಲೆ ದಾಳಿ ಮಾಡಿದಾಗ ವ್ಯಕ್ತಿಯೊಬ್ಬ ನರಳಾಡಿದ ದೃಶ್ಯ ಮನೆಯಲ್ಲಿ ಅಳವಡಿಸಿದ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಕು ರೆಟಿಕ್ಯುಲೇಟೆಡ್ ಹೆಬ್ಬಾವು ಮಾಲೀಕನ ಮೇಲೆ ದಾಳಿ ಮಾಡಿದೆ. ಕ್ಲಿಪ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ 'laris_a9393' ಮೂಲಕ ಹಂಚಿಕೊಳ್ಳಲಾಗಿದೆ. ಇದು ಸಾವಿರಾರು ವೀಕ್ಷಣೆಗಳು ಮತ್ತು ಲೈಕ್‌ಗಳನ್ನು ಪಡೆದುಕೊಂಡಿದೆ. ವಿಡಿಯೊದಲ್ಲಿ, ವ್ಯಕ್ತಿ ತನ್ನ ಕೈಯಿಂದ ದೊಡ್ಡ ಹಾವನ್ನು ದೊಡ್ಡ ಪೆಟ್ಟಿಗೆಯಿಂದ ಎತ್ತುತ್ತಿರುವುದನ್ನು ಕಾಣಬಹುದು. ಹಿನ್ನಲೆಯಲ್ಲಿ ಮಗುವಿನೊಂದಿಗೆ ಮಹಿಳೆ ನಿಂತಿರುತ್ತಾಳೆ ಮತ್ತು ಸಾಕು ನಾಯಿಯೂ ಅಲ್ಲೇ ಇರುತ್ತದೆ.

Video: Python suddenly attacked a man

ಹೆಬ್ಬಾವು ಮನುಷ್ಯನ ಮೇಲೆ ದಾಳಿ ಮಾಡುವ ವೈರಲ್ ವಿಡಿಯೊವನ್ನು ಇಲ್ಲಿ ವೀಕ್ಷಿಸಿ:

ಇದ್ದಕ್ಕಿದ್ದಂತೆ ಬೃಹತ್ ಹೆಬ್ಬಾವು ಮನುಷ್ಯನ ಮುಖವನ್ನು ಕಚ್ಚುತ್ತದೆ. ತುಂಬಾ ಸಮಯದವರೆಗೆ ಹಾವು ಆತನನ್ನು ಬಿಡುವುದೇ ಇಲ್ಲ. ಅವನು ನೋವಿನಿಂದ ಕಿರುಚುತ್ತಾನೆ. ಇಡೀ ಕುಟುಂಬ ಅವನನ್ನು ಉಳಿಸಲು ಸಹಾಯ ಮಾಡಲು ಧಾವಿಸುತ್ತದೆ. ಅವರು ಮನುಷ್ಯನ ಮುಖವನ್ನು ಬಾಯಿಂದ ಬಲವಾಗಿ ಹಿಡಿದ ಹಾವನ್ನು ಬಿಡಿಸಲು ಪ್ರಯತ್ನ ಮಾಡುತ್ತಾರೆ. ಆದರೆ ಅದು ಸಾಧ್ಯವಾಗುವುದೇ ಇಲ್ಲ. ಕೆಲವು ಪುರುಷರು ಹಾವಿಗೆ ಹೊಡೆಯಲು ಪ್ರಯತ್ನಿಸುತ್ತಾರೆ. ಅದನ್ನು ಬಿಡಿಸಲು ಬಟ್ಟೆಯನ್ನೂ ಬಳಸುತ್ತಾರೆ. ಈ ಭಯಾನಕ ವಿಡಿಯೋ ನೋಡುಗರನ್ನು ಬೆಚ್ಚಿ ಬೀಳಿಸಿದೆ. ವಿಡಿಯೋ ಎಲ್ಲಿಯದ್ದು ಎಂಬ ಮಾಃಇತಿ ಲಭ್ಯವಿಲ್ಲ. ಆದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

English summary
A video of a giant python attacking a man has gone viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X