• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಕಲ್ಲಂಗಡಿ ಹಿಡಿಯುವ ಮೂಲಕ ಮನುಷ್ಯನ 'ಮ್ಯಾಜಿಕ್'

|
Google Oneindia Kannada News

ಒಬ್ಬ ವ್ಯಕ್ತಿಯು ವಿಶೇಷ ಕೌಶಲ್ಯವನ್ನು ಹೊಂದಿದ್ದರೆ, ಅದು ಜಗತ್ತಿನಲ್ಲಿ ಚರ್ಚೆಗೆ ಗ್ರಾಸವಾಗುತ್ತದೆ. ಇಂಟರ್‌ನೆಟ್ ಪ್ರಪಂಚ ಅಂಥವರನ್ನು ಗುರುತಿಸಲು ಸಹಾಯ ಕೂಡ ಮಾಡುತ್ತದೆ. ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಂಟರ್‌ನೆಟ್ ಜಗತ್ತಿನಲ್ಲಿ ಕೌಶಲ್ಯಗಳನ್ನು ಪ್ರದರ್ಶಿಸುವುದು ಈಗ ಸುಲಭವಾಗಿದೆ. Tansu YEGEN ಎಂಬ ಬಳಕೆದಾರರ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು ವೈರಲ್ ಆಗಿದೆ. ಈ ವಿಡಿಯೋಕ್ಕೆ ಅವರು 'ಕಲ್ಲಂಗಡಿಗಳ ಅಧಿಪತಿ' ಎಂದು ಬರೆದಿದ್ದಾರೆ. ವಾಸ್ತವವಾಗಿ ಈ ವಿಡಿಯೊದಲ್ಲಿ, ಒಬ್ಬ ವ್ಯಕ್ತಿಯು ಕಲ್ಲಂಗಡಿ ಹಣ್ಣನ್ನು ಸುಲಭವಾಗಿ ಹಿಡಿದು ವಾಹನದಲ್ಲಿ ತುಂಬಿಸುತ್ತಿದ್ದಾರೆ. ಬಹುಶಃ ಮಾರುಕಟ್ಟೆಗೆ ಕೊಂಡೊಯ್ಯಲು ವಾಹನದಲ್ಲಿ ಕಲ್ಲಂಗಡಿ ತುಂಬಿಸಲಾಗುತ್ತಿರಬಹುದು.

ವಿಡಿಯೋದಲ್ಲಿ ಕಪ್ಪು ಟೀ ಶರ್ಟ್ ತೊಟ್ಟ ವ್ಯಕ್ತಿಯೊಬ್ಬ ಕಲ್ಲಂಗಡಿ ಹಣ್ಣನ್ನು ಕೈಯಲ್ಲಿ ಹಿಡಿದುಕೊಳ್ಳುವ ಬಗೆ ನೆಟ್ಟಿಗರ ಮನಗೆದ್ದಿದೆ. ಕಲ್ಲಗಂಡಿ ಮೊದಲೇ ಭಾರವಾಗಿರುತ್ತದೆ. ಅದನ್ನು ಎರಡು ಕೈಯಿಂದ ಹಿಡಿಯಬೇಕು. ಯಾರಾದರೂ ಅದನ್ನು ಕ್ಯಾಚ್ ನೀಡಿದರೆ ಅದನ್ನು ಎರಡು ಕೈಯಿಂದಲೇ ಹಿಡಿಯಬೇಕು.

ವಿಡಿಯೋ ವೈರಲ್

ಆದರೆ ಇಲ್ಲೊಬ್ಬ ವ್ಯಕ್ತಿ ಕಲ್ಲಂಗಡಿಯನ್ನು ಕೈಯಿಂದ ಮುಟ್ಟುವುದಿಲ್ಲ. ಆದರೂ ಆತ ಅದನ್ನು ಸುಲಭವಾಗಿ ವಾಹನದಲ್ಲಿ ವರ್ಗಾಯಿಸುತ್ತಾನೆ. ಇವರ ಈ ಕೌಶಲ್ಯಕ್ಕೆ ಜನ ಫಿದಾ ಆಗಿದ್ದಾರೆ. ಕಲ್ಲಂಗಡಿಯನ್ನು ಚಂಡಿನಂತೆ ಸುಲಭವಾಗಿ ಭಾರವಿಲ್ಲವೆಂಬಂತೆ ವ್ಯಕ್ತಿ ವರ್ಗಾಯಿಸುತ್ತಾನೆ.

ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣಿನ ತೂಕ ಎರಡರಿಂದ ಮೂರು ಕಿಲೋ ಇರುತ್ತದೆ. ಇದರೊಂದಿಗೆ, ಇದು ಗಾತ್ರದಲ್ಲಿಯೂ ಸಹ ಭಾರವಾಗಿರುತ್ತದೆ. ಆದರೆ ವ್ಯಕ್ತಿಯು ಅದನ್ನು ಕೇವಲ ಒಂದು ಕೈಯಿಂದ ಹಿಡಿಯುತ್ತಾನೆ. ಈ ಕೌಶಲ್ಯವು ನಿಜವಾಗಿಯೂ ವೀಕ್ಷಿಸಲು ಯೋಗ್ಯವಾಗಿದೆ. ವಿಡಿಯೋ ಹಂಚಿಕೊಂಡಾಗಿನಿಂದ ವಿಡಿಯೋವನ್ನು ಜನ ಮೆಚ್ಚಿಕೊಂಡಿದ್ದಾರೆ, ಹಲವಾರು ಬಾರಿ ಶೇರ್ ಮಾಡಿದ್ದಾರೆ.

ಚಿಕ್ಕ ಮಗುವಿನಲ್ಲಿ ದೊಡ್ಡ ಧೈರ್ಯ

ಚಿಕ್ಕ ಮಗುವಿನಲ್ಲಿ ದೊಡ್ಡ ಧೈರ್ಯ

ಮಗು ಚಿಕ್ಕದಾಗಿದೆ, ಆದರೆ ದೈತ್ಯ ಹಾವನ್ನು ನಿರ್ಭಯವಾಗಿ ಹಿಡಿಯುವು ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿ ಜನ ಆಶ್ಚರ್ಯಗೊಂಡಿದ್ದಾರೆ. ಹಾವಿನ ಹೆಸರು ಕೇಳಿದ ತಕ್ಷಣ ಜನ ಬೆವರುತ್ತಾರೆ. ಹಾವನ್ನು ನೋಡಿ ದೂರ ನಿಂತುಕೊಳ್ಳುವವರೇ ಹೆಚ್ಚು. ಆದರೆ ಇತ್ತೀಚಿನ ದಿನಗಳಲ್ಲಿ ಸಣ್ಣ ಮಗುವಿನ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ವೈರಲ್ ಆಗಿದ್ದು, ಅದರಲ್ಲಿ ಮಗು ನಕಲಿ ಆಟಿಕೆಯಂತೆ ದೈತ್ಯ ಹಾವನ್ನು ಎಳೆಯುತ್ತಿದೆ. ಈ ವಿಡಿಯೋ ನೋಡಿ ಇಡೀ ಇಂಟರ್ನೆಟ್ ಬೆಚ್ಚಿಬಿದ್ದಿದೆ. ಇಷ್ಟು ಚಿಕ್ಕ ಮಗುವಿನಲ್ಲಿ ಇಷ್ಟು ದೊಡ್ಡ ಧೈರ್ಯ ಎಲ್ಲಿಂದ ಬಂತು ಎಂದು ಬಳಕೆದಾರರು ಆಶ್ಚರ್ಯ ಪಡುತ್ತಾರೆ.

ಹಾವಿನೊಂದಿಗೆ ಚಿಕ್ಕ ಮಗು ಆಟ

ಹಾವಿನೊಂದಿಗೆ ಚಿಕ್ಕ ಮಗು ಆಟ

ಹಾವನ್ನು ಕಂಡರೆ ಜನ ಭಯಭೀತರಾಗುತ್ತಾರೆ. ಆದರೆ ಪುಟ್ಟ ಮಗು ದೈತ್ಯ ಹಾವನ್ನು ಹಗ್ಗದಂತೆ ಎಳೆದುಕೊಂಡು ಹೋಗುತ್ತಿದ್ದು, ಈ ಮಗುವನ್ನು ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ, ಹಾವನ್ನು ಆಟಿಕೆ ಎಂದು ಭಾವಿಸುವ ಈ ಮಗುವಿಗೆ 2 ವರ್ಷ ವಯಸ್ಸಾಗಿದ್ದು, ಆಸ್ಟ್ರೇಲಿಯಾ ನಿವಾಸಿಯಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಾಹಿತಿಯ ಪ್ರಕಾರ, ಇದು ಮ್ಯಾಟ್ ರೈಟ್ ಅವರ ಮಗ. ಅವರು ಆಸ್ಟ್ರೇಲಿಯಾದಲ್ಲಿ ಕ್ರಾಕ್ ರಾಂಗ್ಲರ್ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. ಅವರ ಹೆಸರು ಬೊಂಜೊ. ಪುಟ್ಟ ಮಗುವಿನ ಧೈರ್ಯದ ಕೆಲಸವನ್ನು ನೋಡಿದ ಜನರು ಈ ಮಗು ಹಾವಿನ ಬಾಲದೊಂದಿಗೆ ಹೇಗೆ ಆಟವಾಡುತ್ತಿದೆ ಎಂದು ಬೆಚ್ಚಿಬಿದ್ದಿದ್ದಾರೆ. ವಿಡಿಯೋದಲ್ಲಿ ಮಗುವಿನೊಂದಿಗೆ ಅವರ ತಂದೆ ಇದ್ದಾರೆ.

ಅಪ್ಪನಿಂದ ಮಗುವಿಗೆ ಕಲಿಕೆ

ಅಪ್ಪನಿಂದ ಮಗುವಿಗೆ ಕಲಿಕೆ

ಈ ವಿಡಿಯೋವನ್ನು ಮಗುವಿನ ಅಪ್ಪ ಮ್ಯಾಟ್ ರೈಟ್ ಅವರು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಬಹಳ ಹಿಂದೆಯೇ ಪೋಸ್ಟ್ ಮಾಡಿದ್ದಾರೆ. ಅದು ಮತ್ತೊಮ್ಮೆ ವೈರಲ್ ಆಗಿದೆ. ಮಗು ತೋಟದಲ್ಲಿ ದೊಡ್ಡ ಹಾವಿನ ಬಾಲ ಹಿಡಿದು ಎಳೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇಷ್ಟೇ ಅಲ್ಲ, ರೈಟ್ ತನ್ನ ಮಗುವಿಗೆ ಹಾವನ್ನು ಹೇಗೆ ನಿಭಾಯಿಸಬೇಕೆಂದು ಕಲಿಸುತ್ತಾನೆ.

ಬೇಬಿ ಬೊಂಜೊ ಅವರ ಈ ವೀಡಿಯೊವನ್ನು Instagram ನಲ್ಲಿ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಬೊಂಜೊ ಅವರ ತಂದೆ ಅಂದರೆ ಮ್ಯಾಟ್ ರೈಟ್ ಮೊಸಳೆಗಳನ್ನು ಹಿಡಿಯುವಲ್ಲಿ ಪರಿಣತರಾಗಿದ್ದಾರೆ ಮತ್ತು ಉತ್ತರ ಪ್ರಾಂತ್ಯದಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡುತ್ತಾರೆ. ಅವರು ತಮ್ಮ ಇನ್ಸ್ಟಾದಲ್ಲಿ ಪ್ರಾಣಿಗಳೊಂದಿಗೆ ಸಾಕಷ್ಟು ಫೋಟೋಗಳನ್ನು ಹೊಂದಿದ್ದಾರೆ. ಇನ್ಸ್ಟಾದಲ್ಲಿ ಅವರನ್ನು 4 ಲಕ್ಷಕ್ಕೂ ಹೆಚ್ಚು ಜನರು ಅನುಸರಿಸುತ್ತಿದ್ದಾರೆ.

Recommended Video

   ಕುತೂಹಲ ಮೂಡಿಸುತ್ತಿದೆ ಬಿಗ್ ಬಾಸ್ ಹೊಸ ಸೀಸನ್ | *Entertainment | OneIndia Kannada
   English summary
   In two separate incidents a man performs magic in holding a watermelon. A video of a child catching a giant snake has gone viral.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X