ವಿಡಿಯೋ: ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿದ ಗೋಲ್ಡನ್ ಮಂಕಿ
ಒಂದು ಸಮಯದಲ್ಲಿ ವಿಶ್ವದ ನಾಲ್ಕು ಕಡೆ ಅತಿ ಹೆಚ್ಚು ಕಂಡು ಬರುತ್ತಿದ್ದ 'ಗೋಲ್ಡನ್ ಮಂಕಿ'ಗಳು ಇಂದು ಕಾಣೆಯಾಗುತ್ತಿದೆ. ಜನರು ತಮ್ಮ ದಿನಬಳಕೆಗಾಗಿ ಮರಗಳನ್ನು ಕಡಿಯುತ್ತಿದ್ದು, ಈ ಗೋಲ್ಡನ್ ಮಂಕಿಗಳ ತಳಿಯೂ ನಶಿಸಿ ಹೋಗುತ್ತಿವೆ.
Recommended Video
ಈ ಕುರಿತು ಈ ವಿಡಿಯೋದಲ್ಲಿ ವಿವರಿಸಲಾಗಿದೆ. ಈ ಗೋಲ್ಡನ್ ಮಂಕಿಗಳು ಓಲ್ಡ್ ವರ್ಲ್ಡ್ ಮಂಕಿ ಪ್ರಬೇಧ ಸೇರುತ್ತವೆ. ಇದು ಸೆಂಟ್ರಲ್ ಆಫ್ರಿಕಾದ ವಿರುಂಗ ವಾಲ್ಕ್ಯಾನಿಕ್ ಮೌಂಟೇನ್, ನಾಲ್ಕು ರಾಷ್ಟ್ರೀಯ ಉದ್ಯಾನಗಳು, ಸೌತ್‌ವೆಸ್ಟ್ ಉಗಾಂಡಾ, , ನಾರ್ಥ್‌ವೆಸ್ಟ್ ರವಾಂಡಾ ಹಾಗೂ ಕಾಂಗೋದ ವಿರುಂಗ, ಕಹುಜಿ ಬೇಗಾದಲ್ಲಿ ಕಂಡುಬರುವ ಪ್ರಾಣಿಯಾಗಿದೆ.
ಇದರಲ್ಲೇ ಬ್ಲ್ಯೂ ಮಂಕಿ ಎನ್ನುವ ಪ್ರಭೇದವಿದೆ, ಈ ಗೋಲ್ಡನ್ ಮಂಕಿಗಳು ಬಂಗಾರ ಬಣ್ಣದ ಕೂದಲುಗಳನ್ನು ಹೊಂದಿರುತ್ತವೆ. ಆದರೂ ಎರಡೂ ನೋಡಲು ಸ್ವಲ್ಪ ಒಂದೇ ರೀತಿಯಲ್ಲಿರುತ್ತದೆ.

ಈ ಗೋಲ್ಡನ್ ಮಂಕಿಗಳ ನಡವಳಿಕೆಗಳ ಬಗ್ಗೆ ಅಷ್ಟು ಮಾಹಿತಿ ಇಲ್ಲ, ಆದರೆ ಇವು ಬಿದಿರು ಹಾಗೂ ಹಣ್ಣುಗಳನ್ನು ತಿಂದು ಬದುಕುತ್ತವೆ.
ಇತ್ತೀಚಿನ ದಿನಗಳಲ್ಲಿ ಈ ಗೋಲ್ಡನ್ ಮಂಕಿಗಳು ಕಣ್ಮರೆಯಾಗುತ್ತಿವೆ. ರವಾಂಡಾದಲ್ಲಿ ಜನರು ನಿತ್ಯ ಆಹಾರವನ್ನು ಬೇಯಿಸಲು ಬೆಂಕಿಯ ಒಲೆಗೆ ಮರದ ಕಟ್ಟಿಗೆಗಳನ್ನು ಬಳಕೆ ಮಾಡುತ್ತಾರೆ ಹೀಗಾಗಿ ಮರಗಳ ನಾಶವಾಗುತ್ತಿತ್ತು. ಆದರೆ
2017ರಲ್ಲಿ ಆಸ್ಟ್ರೇಲಿಯಾದ ಹೊಸ ಕಂಪನಿಯೊಂದು ಕಟ್ಟಿಗೆ ಕಡಿಮೆ ಬಳಕೆ ಮಾಡಿ ಆಹಾರ ಉತ್ಪಾದಿಸಬಲ್ಲ ಕುಕಿಂಗ್ ಸ್ಟವ್ ಒಂದನ್ನು ಅಭಿವೃದ್ಧಿಪಡಿಸಿತು. ಇದೀಗ ಅಲ್ಲಿಯ ಜನರು ಈ ವಿಶೇಷ ಸ್ಟವ್ ಬಳಕೆ ಮಾಡುತ್ತಿರುವುದರಿಂದ ಕಟ್ಟಿಗೆಗಳೂ ಉಳಿದಿವೆ, ಗೋಲ್ಡನ್ ಮಂಕಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ.
ಇನ್ನು ಸಿಂಹ ಬಾಲದ ಕೋತಿ ಇದಕ್ಕೆ ಮಕಾಕಾ ಸಿಲೆನಸ್ ಎಂದು ಕರೆಯುತ್ತಾರೆ, ಇದರ ಕೌಟುಂಬಿಕ ಹೆಸರು ಸೆರ್ಕೊಫಿಥೆಸಿಡೆ ಇವು ಕೂಡ ಅಳಿವಿನಂಚಿನಲ್ಲಿವೆ, ಸಿಂಹ ಬಾಲದ ಕೋತಿಗೆ ಸಿಂಹದ ರೀತಿಯ ಉದ್ದ, ಸಪೂರ ಮತ್ತು ಕುಚ್ಚು ಇರುವ ಬಾಲ ಇರುವುದರಿಂದ ಆ ಹೆಸರು ಬಂದಿದೆ. ಗಲ್ಲದ ಸುತ್ತ ಉದ್ದ ಕೂದಲಿರುವ ಹಿನ್ನೆಲೆಯಲ್ಲಿ ಇದಕ್ಕೆ ಗಡ್ಡದ ಕೋತಿ ಎಂದೂ ಕರೆಯಲಾಗುತ್ತದೆ.












Click it and Unblock the Notifications