ವಿಡಿಯೋ: ಆಹಾರವನ್ನು ಹಂಚಿಕೊಂಡು ತಿನ್ನುವ ನಾಯಿಗಳು
ಸಾಮಾನ್ಯವಾಗಿ ನಾಯಿಯನ್ನು ಅತ್ಯಂತ ನಿಷ್ಠಾವಂತ ಪ್ರಾಣಿ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ನಮ್ಮಲ್ಲಿ ಮನುಷ್ಯರಿಗಿಂತ ಹೆಚ್ಚಾಗಿ ಪ್ರಾಣಿಗಳನ್ನು ಪ್ರೀತಿ ಮಾಡೋ ಜನ ಇದ್ದಾರೆ. ಅದ್ರಲ್ಲೂ ನಾಯಿಗಳು ಅಂದ್ರೆ ಸ್ವಂತ ಮಕ್ಕಳಿಗಿಂತಲೂ ಚೆನ್ನಾಗಿ ನೋಡಿಕೊಳ್ಳುವ ಜನ ಸಿಗ್ತಾರೆ. ಕೆಲವರಂತೂ ಬೀದಿಯಲ್ಲಿರೋ ನಾಯಿಗಳಿಗೆ ಊಟ ಹಾಕೋ ಮೂಲಕ ಪ್ರೀತಿ ತೋರಿಸುತ್ತಾರೆ. ಹೀಗೆ ಬೀದಿ ನಾಯಿಗಳಿಗೆ ಊಟ ಹಾಕುವಾಗ ಒಂದನ್ನು ನೀವು ಗಮನಿಸಿರಬಹುದು. ಯಾರಾದ್ರು ಊಟ ಅಥವಾ ತಿನ್ನಲು ಕೊಡ್ತಾರೆ ಅಂದ್ರೆ ಬೀದಿಯಲ್ಲಿರೋ ಯಾವುದೇ ನಾಯಿ ತನ್ನ ಹೊಟ್ಟೆ ತುಂಬಿದ್ರೆ ಸಾಕು ಅಂತ ಬೇರೆ ನಾಯಿಗಳಿಗೆ ಬರಲು ಬಿಡುವುದಿಲ್ಲ. ಹಾಗೊಂದು ವೇಳೆ ಬಂದರೆ ಕಚ್ಚಲು ಮುಂದಾಗುತ್ತದೆ. ಪರಸ್ಪರ ಜಗಳವಾಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಬೀದಿ ನಾಯಿಗಳು ಎಲ್ಲವೂ ಸೇರಿ ಊಟ ಮಾಡುತ್ತವೆ. ಒಂದನ್ನು ಬಿಟ್ಟು ಮತ್ತೊಂದು ಊಟ ಮಾಡುವುದಿಲ್ಲ. ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪ್ರಪಂಚದಾದ್ಯಂತ ಸಾವಿರಾರು ಪ್ರಾಣಿಗಳಿವೆ. ಇವುಗಳಲ್ಲಿ ಕೆಲವು ಮಾನವರೊಂದಿಗೆ ಬೆಳೆಯುವ ಪ್ರಾಣಿಗಳು ಇವೆ. ಇವುಗಳಲ್ಲಿ ಕೆಲವು ಶ್ರೀಮಂತರೊಂದಿಗೆ ಹೈಫೈ ಲೈಫ್‌ನಲ್ಲಿ ಬೆಳೆತ್ತದೆ. ಇನ್ನೂ ಕೆಲವು ಬೀದಿಯಲ್ಲೂ ಬೆಳೆಯುತ್ತವೆ. ಇಂಥಹ ನಾಯಿಗಳಿಂದ ಕೆಲವು ಆಸಕ್ತಿದಾಯಕ ಕಥೆಗಳನ್ನು ಕಾಣಬಹುದು. ಇತ್ತೀಚಿನ ದಿನಗಳಲ್ಲಿ ವೀಡಿಯೋವೊಂದು ಮುನ್ನೆಲೆಗೆ ಬಂದಿದ್ದು, ನಾಯಿಗಳ ಪರಸ್ಪರ ಬಾಂಧವ್ಯ ನೋಡುವವರಿಗೆ ಅಚ್ಚರಿ ಮೂಡಿಸಿದೆ.

ನಾಯಿಗಳಲ್ಲೂ ಬಾಂಧವ್ಯವಿದೆ
ವೈರಲ್ ವಿಡಿಯೋದಲ್ಲಿ ನಾಯಿ ಆಹಾರವನ್ನು ಪಾತ್ರೆಯಲ್ಲಿ ಹಾಕಿದಾಗ ಅದನ್ನು ವಾಸನೆ ನೋಡುತ್ತದೆ. ಆದರೆ ಅದನ್ನು ತಿನ್ನುವುದಿಲ್ಲ. ಎಲ್ಲಾ ನಾಯೊಗಳು ಬರುವವರೆಗೂ ಕಾಯುತ್ತದೆ. ನಾಯಿಗಳು ಬರುವಾಗಲೂ ಅದು ಆಹಾರವನ್ನು ಸೇವಿಸುವುದಿಲ್ಲ. ನಾಯಿಗಳು ಎಲ್ಲವೂ ಬಂದು ತನ್ನೊಂದಿಗೆ ನಿಂತುಕೊಳ್ಳುತ್ತವೆ ಆಗಲೇ ನಾಯಿ ಆಹಾರ ಸೇವಿಸುಲು ಸಿದ್ಧವಾಗುತ್ತದೆ. ವಿಡಿಯೋದಲ್ಲಿ ಆಹಾರ ವಿತರಕನೂ ಅವುಗಳಿಗೆ ಏನೋ ಹೇಳುವುದು ಕಂಡು ಬರುತ್ತದೆ.
ನೀವು ನೋಡಿರದ ಈ ಅದ್ಬುತ ದೃಶ್ಯ
ನಂತರ ಎರಡೂ ನಾಯಿಗಳು ಮನೆಯೊಳಗೆ ಬಂದು ಪಾತ್ರೆಯಲ್ಲಿ ಒಟ್ಟಿಗೆ ಆಹಾರವನ್ನು ತಿನ್ನುತ್ತವೆ. ಅದೇ ರೀತಿ, ಒಬ್ಬ ವ್ಯಕ್ತಿಯು ನಾಯಿಯ ಮುಂದೆ ಪಾತ್ರೆಯಲ್ಲಿ ಆಹಾರವನ್ನು ಹಾಕಿದಾಗ, ಇನ್ನೊಂದು ಪಾತ್ರೆಯು ಖಾಲಿಯಾಗಿರುತ್ತದೆ. ಇದರ ಮೇಲೆ, ನಾಯಿಯು ತನ್ನ ಪಾದಗಳನ್ನು ಇತರ ಖಾಲಿ ಪಾತ್ರೆಯಲ್ಲಿ ಹಾಕುವ ಮೂಲಕ ಆಹಾರವನ್ನು ಪಡೆಯುತ್ತದೆ. ಮತ್ತೊಂದು ಆಶ್ಚರ್ಯಕರ ದೃಶ್ಯ ಎಂದರೆ ಇದರಲ್ಲಿರುವ ಒಂದು ನಾಯಿ ಮಲಗಿರುವ ಇತರ ನಾಯಿಯ ಬಳಿಗೆ ಹೋಗಿ ಅವನನ್ನು ಎಬ್ಬಿಸುತ್ತದೆ. ನಂತರ ಎರಡು ನಾಯಿಗಳು ಒಟ್ಟಿಗೆ ಹೋಗಿ ಪ್ರತ್ಯೇಕ ಪಾತ್ರೆಗಳಲ್ಲಿ ಆಹಾರವನ್ನು ತಿನ್ನುತ್ತವೆ.

ನಾಯಿಗಳ ಮೇಲೆ ನಾಯಿಗಳಿಗೂ ಪ್ರೀತಿ
ಮೊದಲ ನಾಯಿಯ ಪಾತ್ರೆ ಖಾಲಿಯಾದಾಗ ಹುಡುಗಿ ಆಹಾರ ನೀಡುತ್ತಾಳೆ. ನಂತರ ಎರಡನೇ ನಾಯಿ ಮೊದಲ ನಾಯಿಯ ಪಾತ್ರೆಯನ್ನು ಎತ್ತುತ್ತದೆ, ಅದರಲ್ಲಿ ಆಹಾರವನ್ನು ಹಾಕಿದ ನಂತರವೇ ಅದು ತಿನ್ನುತ್ತದೆ. ಈ ವಿಡಿಯೋದಲ್ಲಿ ನಾಯಿಗಳ ಈ ಪರಸ್ಪರ ಕಾಳಜಿಯನ್ನು ನೋಡಿದವರೂ ಇಷ್ಟಪಟ್ಟಿದ್ದಾರೆ. ವಿಡಿಯೋ ಸುಮಾರು 2 ನಿಮಿಷಗಳಿದ್ದು, ಸಾವಿರಾರು ಕಾಮೆಂಟ್‌ಗಳು ಬಂದಿವೆ.

ಪ್ರಾಣಿ ಪ್ರಿಯರಿಗೆ ಖುಷಿ ಕೊಟ್ಟ ವಿಡಿಯೋ
ಈ ವಿಡಿಯೋ ಬಾರೀ ವೈರಲ್ ಆಗಿದೆ. ಪ್ರಾಣಿ ಪ್ರಿಯರು ಇದನ್ನು ಮೆಚ್ಚಿಕೊಂಡಿದ್ದಾರೆ. ನಿಯತ್ತಿಗೆ ಹೆಸರಾಗಿರುವ ನಾಯಿಗಳು ಬಾಂಧವ್ಯವನ್ನು ತೋರುಸುವ ಮೂಲಕ ಜನ ಮನಗೆದ್ದಿವೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ಹಲವಾರು ಬಾರಿ ಹಂಚಿಕೊಳ್ಳಲಾಗಿದೆ. ಆದರೆ ಈ ವಿಡಿಯೋ ಎಲ್ಲಿಯದ್ದು ಎನ್ನು ಮಾಹಿತಿ ಮಾತ್ರ ಲಭ್ಯವಾಗಿಲ್ಲ.












Click it and Unblock the Notifications