Valentine's Day wishes: ಪ್ರೇಮಿಗಳ ದಿನಕ್ಕೆ ಹೃದಯ ಗೆಲ್ಲುವ ಸಾಲುಗಳು: ಇಲ್ಲಿವೆ ಟ್ರೆಂಡಿಂಗ್ ವಿಶ್‌ಗಳು

Valentine's Day: ಫೆಬ್ರವರಿ 14 ವಿಶ್ವದಾದ್ಯಂತ ಪ್ರೇಮಿಗಳ ಹೃದಯಗಳನ್ನು ಒಂದಾಗಿಸುವ ದಿನ. ಪ್ರೇಮಿಗಳ ದಿನದ ಪ್ರಯುಕ್ತ ಯುವಜನತೆ ಮಾತ್ರವಲ್ಲದೆ, ದಂಪತಿಗಳು, ಸ್ನೇಹಿತರು, ಹೊಸದಾಗಿ ಪ್ರೀತಿಯಲ್ಲಿ ಬಿದ್ದವರು ಎಲ್ಲರೂ ತಮ್ಮ ಮನದ ಮಾತು ಹೇಳಿಕೊಳ್ಳಲು ವಿಭಿನ್ನ ಮಾರ್ಗಗಳನ್ನು ಹುಡುಕುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರೇಮಿಗಳ ದಿನದಂದು ಪ್ರೇಮ ನಿವೇದನೆಗೆ ವಿಶೇಷ ಮತ್ತು ವಿಭಿನ್ನವಾದ ಶುಭಾಶಯಗಳ ಪಟ್ಟಿ ಇಲ್ಲಿದೆ. ನಿಮ್ಮ ನೆಚ್ಚಿನ ಸಾಲನ್ನು ನಿಮ್ಮ ಪ್ರಿಯತಮೆ/ಪ್ರಿಯಕರನೊಂದಿಗೆ ಹಂಚಿಕೊಳ್ಳಿ..

Valentines Day 2026

* ನಿನ್ನ ಜೊತೆ ಇರುವ ಪ್ರತಿಯೊಂದು ಕ್ಷಣವೂ ನನ್ನ ಜೀವನದ ಅತ್ಯಂತ ಸುಂದರ ಅಧ್ಯಾಯ.

* ನಿನ್ನ ನಗುವೇ ನನ್ನ ಪ್ರಪಂಚ, ಈ ಪ್ರೇಮಿಗಳ ದಿನ ನಮ್ಮ ಕನಸುಗಳಿಗೆ ಹೊಸ ಆರಂಭವಾಗಲಿ.

* ನಿನ್ನ ಕೈ ಹಿಡಿದು ಜೀವನಪಯಣ ಸಾಗಿಸುವುದು ನನ್ನ ದೊಡ್ಡ ಭಾಗ್ಯ.

* ನೀನು ನನ್ನ ಹೃದಯದ ಧ್ವನಿ, ನನ್ನ ಉಸಿರಿನ ಸಂಗೀತ.

* ನಿನ್ನ ಕಣ್ಣುಗಳಲ್ಲಿ ನನ್ನ ಭವಿಷ್ಯ ಕಾಣುತ್ತದೆ.

* ಪ್ರತಿ ಬೆಳಗ್ಗೆಯೂ ನಿನ್ನ ನೆನಪಿನಿಂದ ಆರಂಭವಾಗಲಿ, ಪ್ರತಿ ರಾತ್ರಿ ನಿನ್ನ ಕನಸಿನಲ್ಲಿ ಮುಗಿಯಲಿ.

* ನಮ್ಮ ಪ್ರೀತಿಯ ಪಯಣ ವರ್ಷಗಳಾದರೂ, ಪ್ರತಿದಿನವೂ ಹೊಸದಾಗಿ ಅರಳಲಿ.

* ನೀನು ನನ್ನ ಸಂಗಾತಿ ಮಾತ್ರವಲ್ಲ, ನನ್ನ ಅತ್ಯುತ್ತಮ ಸ್ನೇಹಿತ.

Valentines Day 2026

* ಪ್ರತಿ ಸವಾಲಿನಲ್ಲೂ ಜೊತೆಯಾಗಿ ನಿಂತ ನಿನ್ನ ಪ್ರೀತಿಗೆ ಧನ್ಯವಾದಗಳು.

* ನಿನ್ನ ಜೊತೆ ಪ್ರಾರಂಭವಾದ ಈ ಹೊಸ ಕಥೆ ಜೀವನಪೂರ್ತಿ ಮುಂದುವರಿಯಲಿ.

* ನಿನ್ನ ಒಂದು ಮೆಸೇಜ್‌ ಸಾಕು, ನನ್ನ ದಿನವೇ ವಿಶೇಷವಾಗುತ್ತದೆ.

* ಈ ಪ್ರೇಮಿಗಳ ದಿನ ನಮ್ಮ ಪ್ರೀತಿಗೆ ಮೊದಲ ಮುದ್ರೆ.

* Googleಗೂ ಉತ್ತರ ಸಿಗದ ಪ್ರಶ್ನೆ - 'ನಿನ್ನಿಲ್ಲದೇ ನಾನು ಹೇಗೆ?'

* ನೀನು Wi-Fi ಇದ್ದಂತೆ, ನೀನು ಇದ್ದರೆ ಮಾತ್ರ ನನ್ನ ಹೃದಯ ಕನೆಕ್ಟ್ ಆಗುತ್ತದೆ!

* ನಿನ್ನ ಪ್ರೀತಿ ನನ್ನ ಲೈಫ್‌ ಅಪ್‌ಡೇಟ್- ಪ್ರತಿದಿನ ಹೊಸ ವರ್ಷನ್.

* ನಮ್ಮ ಸ್ನೇಹವೇ ನನ್ನ ಮೊದಲ ಪ್ರೀತಿ.

* ನೀನು ಇದ್ದರೆ ಸಾಕು, ನನ್ನ ಪ್ರಪಂಚ ಸಂಪೂರ್ಣ.

* ನಿನ್ನೊಂದಿಗೆ ನನ್ನ ಜೀವನ ಹಂಚಿಕೊಳ್ಳಲು ಸಿದ್ದನಿದ್ದೇನೆ/ಸಿದ್ದಳಿದ್ದೇನೆ, ನೀನು ಒಪ್ಪುತ್ತೀಯಾ?

* ನನ್ನ ಕನಸುಗಳಲ್ಲಿ ಬಂದವಳು/ಬಂದವನೇ ನೀನೇನಾ?

* ನೀನು ಇಲ್ಲದೆ ನನ್ನ ಹೃದಯ 'Low Battery' ಆಗುತ್ತದೆ!

* ನಿನ್ನ ಪ್ರೀತಿ ನನ್ನ ಫೇವರಿಟ್‌ ನೋಟಿಫಿಕೇಶನ್.

* ನೀನು ಇದ್ದರೆ ನನ್ನ ಜೀವನವೇ HD ಕ್ವಾಲಿಟಿ!

* ನಿನ್ನ ನಗು ನನ್ನ ಸ್ಟೇಟಸ್ ಅಪ್‌ಡೇಟ್.

* ನಿನ್ನ ಪ್ರೀತಿಯೇ ನನ್ನ ಜೀವನದ ಆಧಾರ.

* ನಿನ್ನ ಕೈ ಹಿಡಿದು ವೃದ್ಧಾಪ್ಯವನ್ನೂ ನೋಡಲು ಇಷ್ಟ.

* ನಿನ್ನೊಂದಿಗಿನ ಕ್ಷಣಗಳು ನನ್ನ ಅಮೂಲ್ಯ ನೆನಪುಗಳು.

* ನಿನ್ನ ಪ್ರೀತಿ ನನ್ನ ಆತ್ಮದ ಶಾಂತಿ.

* ಸ್ನೇಹದಿಂದ ಆರಂಭವಾದ ನಮ್ಮ ಕಥೆ ಪ್ರೀತಿಯಾಗಿ ಅರಳಿದೆ.

* ನೀನು ನನ್ನ ಅತ್ಯುತ್ತಮ ಸ್ನೇಹಿತ ಹಾಗೂ ಜೀವನ ಸಂಗಾತಿ.

* ನಮ್ಮ ಬಾಂಧವ್ಯ ಸದಾಕಾಲ ಇರಲಿ.

ಪ್ರೇಮಿಗಳ ದಿನವು ಕೇವಲ ಉಡುಗೊರೆಗಳ ದಿನವಲ್ಲ. ಮನದಾಳದ ಭಾವನೆಗಳನ್ನು ಹಂಚಿಕೊಳ್ಳುವ ವಿಶೇಷ ಕ್ಷಣ. ಒಂದು ಸರಳ 'I Love You' ಕೂಡ ನಿಮ್ಮ ಜೀವನ ಬದಲಾಯಿಸಬಲ್ಲದು. ಈ ಪ್ರೇಮಿಗಳ ದಿನ ನಿಮ್ಮ ಪ್ರೀತಿಗೆ ಹೊಸ ಬೆಳಕು, ಹೊಸ ನೆನಪುಗಳನ್ನು ತಂದುಕೊಡಲಿ. ಎಲ್ಲ ಪ್ರೇಮಿಗಳಿಗೆ ಪ್ರೇಮಿಗಳ ದಿನದ ಹಾರ್ದಿಕ ಶುಭಾಶಯಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+