Get Updates
Get notified of breaking news, exclusive insights, and must-see stories!

‘ದೊಡ್ಡಣ್ಣ’ನ ಸಬ್‌ಮರೀನ್‌ಗೆ ಅಪಘಾತ! ಬಡಿದಿದ್ದಾ? ಇಲ್ಲ ಬಡಿಸಿದ್ದಾ?

ಜಗತ್ತಿನಲ್ಲಿ ಕೆಲವೇ ರಾಷ್ಟ್ರಗಳ ಬಳಿ ನ್ಯೂಕ್ಲಿಯರ್ ಸಾಮರ್ಥ್ಯದ ಸಬ್‌ಮರೀನ್ಸ್ ಇರೋದು. ಅದ್ರಲ್ಲೂ ವಿಶ್ವದ ದೊಡ್ಡಣ್ಣ ಅಂತಾ ಬಿಲ್ಡಪ್ ಕೊಡುವ ಅಮೆರಿಕ ತನ್ನ ನೌಕಾಸೇನೆ ಶಕ್ತಿ ಬಗ್ಗೆ ಹೇಳಲು ಇದೇ ಸಬ್‌ಮರೀನ್‌ಗಳ ಉದಾಹರಣೆ ನೀಡುತ್ತಿರುತ್ತೆ. ಆದರೆ ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕದ ಸಬ್‌ಮರೀನ್‌ಗೆ ಯಾವುದೋ ಅಪರಿಚಿತ ವಸ್ತು ಬಡಿದು ಭಾರಿ ಆತಂಕ ಮನೆಮಾಡಿದೆ. ಅಂದಹಾಗೆ ಕಳೆದ ವಾರವೇ ಈ ಘಟನೆ ನಡೆದಿದ್ದರು ಕೂಡ ಅಮೆರಿಕ ಎಲ್ಲೂ ಈ ವಿಚಾರ ಹೊರಗೆ ತಿಳಿಸಿರಲಿಲ್ಲ. ನಿತ್ಯದ ಕೆಲಸದಲ್ಲಿ ಮಗ್ನವಾಗಿದ್ದ ವೇಳೆ ಅಮೆರಿಕ ಸಬ್‌ಮರೀನ್‌ಗೆ ಏಷ್ಯಾ ಫೆಸಿಫಿಕ್ ಸಾಗರದಲ್ಲಿ ಅಪರಿಚಿತ ವಸ್ತು ಬಡಿದಿದೆ.

ಕೂಡಲೇ ಜಲಾಂತರ್ಗಾಮಿಯನ್ನ ಪರಿಶೀಲನೆ ನಡೆಸಿದಾಗ ಯಾವುದೇ ಡ್ಯಾಮೇಜ್ ಕಂಡುಬಂದಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಆದರೆ ಇಬ್ಬರಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದ್ದು, ಈ ಘಟನೆ ಅಮೆರಿಕದ ನೌಕಾಸೇನೆಗೆ ದೊಡ್ಡ ಆಘಾತ ನೀಡಿದೆ. ಅದರಲ್ಲೂ ಚೀನಾ ವಿರುದ್ಧ 'ಆಕಸ್' (Aukus) ಒಕ್ಕೂಟ ಕಟ್ಟಿಕೊಂಡ ಕೆಲವೇ ದಿನಗಳಲ್ಲಿ ಅಮೆರಿಕ ಇಂತಹ ದೊಡ್ಡ ಆಘಾತ ಎದುರಿಸಿದೆ.

ಹೊಸ ಒಕ್ಕೂಟ ರಚನೆ..!

ಹೊಸ ಒಕ್ಕೂಟ ರಚನೆ..!

ಚೀನಾ ವಿರುದ್ಧ ಏಕಾಂಗಿಯಾಗಿ ನಿಲ್ಲೋಕೆ ಸಾಧ್ಯವಾಗದೆ ಅಮೆರಿಕ ಹೊಸ ಒಕ್ಕೂಟ ರಚಿಸಿದೆ. ಆಸ್ಟ್ರೇಲಿಯಾ ಹಾಗೂ ಬ್ರಿಟನ್ ಜೊತೆ ಅಮೆರಿಕ 'ಆಕಸ್' (Aukus) ಒಕ್ಕೂಟ ರಚಿಸಿಕೊಂಡಿದೆ. ಅಂದಹಾಗೆ ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಚೀನಾ ಪ್ರಭಾವ ತಗ್ಗಿಸಲು ಆಸ್ಟ್ರೇಲಿಯಾ, ಬ್ರಿಟನ್‌ ಜತೆ ಅಮೆರಿಕ ಹೊಸ ತ್ರಿಪಕ್ಷೀಯ ಮೈತ್ರಿಕೂಟ ರಚಿಸಿದೆ. ಮೈತ್ರಿ ಒಪ್ಪಂದದ ಹಿನ್ನೆಲೆಯಲ್ಲಿ ಯುಎಸ್ ಹಾಗೂ ಬ್ರಿಟನ್‌ 8 ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ಅಥವಾ ಸಬ್‌ಮರೀನ್ ಅಭಿವೃದ್ಧಿಗೆ ಆಸ್ಟ್ರೇಲಿಯಾಗೆ ನೆರವು ನೀಡಲಿವೆ. ಆದರೆ ಈ ಹೊಸ ಬೆಳವಣಿಗೆ ನಡೆದ ಕೆಲವೇ ದಿನಗಳಲ್ಲಿ ಅಮೆರಿಕದ ನೌಕಾಸೇನೆಗೆ ದೊಡ್ಡ ಶಾಕ್ ಸಿಕ್ಕಿದೆ.

ಟ್ರಿಲಿಯನ್ ಡಾಲರ್ ಜಾಗಕ್ಕೆ ವಾರ್..?

ಟ್ರಿಲಿಯನ್ ಡಾಲರ್ ಜಾಗಕ್ಕೆ ವಾರ್..?

ದಕ್ಷಿಣ ಚೀನಾ ಸಮುದ್ರದಲ್ಲಿ ಹಿಡಿತ ಸಾಧಿಸುವ ಚೀನಾ ಪ್ರಯತ್ನ ಇಂದು, ನಿನ್ನೆಯದಲ್ಲ. ಸುಮಾರು 3-4 ದಶಕಗಳಿಂದಲೂ ಈ ಜಾಗಕ್ಕಾಗಿ ರಕ್ತ ರಹಿತ ಬಡಿದಾಟ ನಡೆಯುತ್ತಲೇ ಇದೆ. ಅಮೆರಿಕ ಚೀನಾ ವಿರುದ್ಧ ಈ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಕತ್ತಿ ಮಸೆಯುತ್ತಲೇ ಇದೆ. ಇಷ್ಟಕ್ಕೆಲ್ಲಾ ಕಾರಣವಾಗಿರುವುದು ದಕ್ಷಿಣ ಚೀನಾ ಸಮುದ್ರದಲ್ಲಿ ಅವಿತಿರುವ ಸಂಪತ್ತು. ಸುಮಾರು 3.5 ಮಿಲಿಯನ್ ಸ್ಕ್ವೇರ್ ಕಿಲೋ ಮೀಟರ್ ಅಂದರೆ ಭಾರತ ಹೊಂದಿರುವ ಭೂಭಾಗಕ್ಕಿಂತಲೂ ದೊಡ್ಡದಾದ ಪ್ರದೇಶ ದಕ್ಷಿಣ ಚೀನಾ ಜಲಗಡಿಗೆ ಇದೆ. ಭಾರಿ ಪ್ರಮಾಣದ ನೈಸರ್ಗಿತ ಸಂಪನ್ಮೂಲ ಹಾಗೂ ವ್ಯವಹಾರ ನಡೆಸುವ ಜಾಗ ಇದಾಗಿದೆ.

5.3 ಟ್ರಿಲಿಯನ್ ಡಾಲರ್ ವಹಿವಾಟು..!

5.3 ಟ್ರಿಲಿಯನ್ ಡಾಲರ್ ವಹಿವಾಟು..!

ಆಶ್ಚರ್ಯವಾದರೂ ಇದು ನಂಬಲೇಬೇಕಾದ ವಿಚಾರ. ದಕ್ಷಿಣ ಚೀನಾ ಸಮುದ್ರ ತೈಲ ಹಾಗೂ ಅದಿರುಗಳನ್ನು ಮಾತ್ರ ಹೊಂದಿಲ್ಲ. ಸಂಪದ್ಭರಿತ ವ್ಯಾಪಾರವನ್ನೂ ನಡೆಸುತ್ತಾ ಬಂದಿದೆ. ಸೌತ್ ಚೀನಾ ಸಮುದ್ರ ಮಾರ್ಗವಾಗಿ ಪ್ರತಿವರ್ಷವೂ ಸುಮಾರು 5.3 ಟ್ರಿಲಿಯನ್ ಮೊತ್ತದ ವ್ಯಾಪಾರ, ವಹಿವಾಟು ನಡೆಯುತ್ತಿದೆ. ಇದು ಜಗತ್ತಿನಲ್ಲಿ ಜಲ ಮಾರ್ಗದ ಮೂಲಕ ನಡೆಯುವ ವ್ಯಾಪಾರದ 3ನೇ ಒಂದು ಭಾಗವಾಗಿದೆ. ಭಾರತವು ಕೂಡ ಪ್ರತಿವರ್ಷ 200 ಬಿಲಿಯನ್ ಡಾಲರ್ ಮೊತ್ತದ ವಹಿವಾಟನ್ನ ದಕ್ಷಿಣಚೀನಾ ಸಮುದ್ರ ಮಾರ್ಗದ ಮೂಲಕ ನಡೆಸುತ್ತದೆ. ಅಮೆರಿಕ, ಜಪಾನ್, ಚೀನಾ, ಕೊರಿಯಾ, ಆಸ್ಟ್ರೇಲಿಯಾ ಹೀಗೆ ಹತ್ತಾರು ದೇಶಗಳು ಇದೇ ಮಾರ್ಗ ಬಳಸಿ ವ್ಯಾಪಾರ ನಡೆಸುತ್ತಿವೆ. ಇದೇ ಕಾರಣಕ್ಕೆ ದಕ್ಷಿಣ ಚೀನಾ ಸಮುದ್ರ ಸಂಘರ್ಷದ ತಾಣವಾಗಿ ಮಾರ್ಪಟ್ಟಿದೆ.

ಎಷ್ಟಿದೆ ಗೊತ್ತಾ ಸಂಪತ್ತಿನ ಪ್ರಮಾಣ..?

ಎಷ್ಟಿದೆ ಗೊತ್ತಾ ಸಂಪತ್ತಿನ ಪ್ರಮಾಣ..?

ಅಮೆರಿಕದ ಸರ್ಕಾರಿ ಸಂಸ್ಥೆ ನೀಡಿರುವ ಮಾಹಿತಿಯಂತೆ ದಕ್ಷಿಣ ಚೀನಾ ಸಮುದ್ರದಲ್ಲಿ 190 ಟ್ರಿಲಿಯನ್ ಕ್ಯೂಬಿಕ್ ಅಡಿ ನೈಸರ್ಗಿಕ ಅನಿಲ ಅಡಗಿದೆ. ಇಷ್ಟು ಗ್ಯಾಸ್ ಸಿಕ್ಕರೆ ಹತ್ತಾರು ವರ್ಷ ಚೀನಾ ಯಾರ ಬಳಿಯೂ ನ್ಯಾಚ್ಯುರಲ್ ಗ್ಯಾಸ್‌ಗೆ ಕೈಚಾಚುವ ಅವಶ್ಯಕತೆ ಇರೋದಿಲ್ಲ. ಹಾಗೇ 11 ಬಿಲಿಯನ್ ಬ್ಯಾರೆಲ್‌ ಪೆಟ್ರೋಲ್, ಡೀಸೆಲ್ ಸಂಯುಕ್ತ ಇಲ್ಲಿ ಅಡಗಿದೆ. ಇಷ್ಟೇ ಆಗಿದ್ದರೆ ಚೀನಾ ಅಷ್ಟೊಂದು ತಲೆಕೆಡಿಸಿಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತಿತ್ತೇನೋ. ಆದರೆ ಇದೆಲ್ಲವನ್ನೂ ಮೀರಿಸುವ ಖಜಾನೆ ದಕ್ಷಿಣ ಚೀನಾ ಸಮುದ್ರದಲ್ಲಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಅಮೂಲ್ಯ ಅದಿರುಗಳಿವೆ. ಚಿನ್ನ ಸೇರಿದಂತೆ ಟಿನ್, ಕ್ರೋಮೈಟ್, ಮ್ಯಾಗ್ನಟೈಟ್, ಜಿರ್ಕಾನ್ ಮತ್ತಿತರ ಅದಿರುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಇಷ್ಟು ಪ್ರಮಾಣದ ಸಂಪತ್ತನ್ನು ಬಿಟ್ಟುಕೊಡಲು ಚೀನಾ ಬಿಲ್‌ಕುಲ್ ಸಿದ್ಧವಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+