ಬಡ ಮಗುವಿಗೆ ಹಣ ಕೊಟ್ಟ ಉರ್ಫಿ ಜಾವೇದ್: ಹಣ ವಾಪಸ್ ಪಡೆದು ಮೈತುಂಬಾ ಬಟ್ಟೆ ಖರೀದಿಸಿ ಎಂದು ಸಲಹೆ ನೀಡಿದ ನೆಟ್ಟಿಗರು!
ಉಡುವ ಬಟ್ಟೆಯಲ್ಲಿ ನೋಡುಗರನ್ನು ಆಕರ್ಷಿಸುವ ನಟಿ ಉರ್ಫಿ ಜಾವೇದ್ ಬಡ ಬಾಲಕನಿಗೆ ಹಣ ಕೊಟ್ಟು ಸುದ್ದಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ನೆಟ್ಟಿಗರೊಬ್ಬರು ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿದ್ದು, ಬಡ ಬಾಲಕನಿಗೆ ಕೊಟ್ಟ ಹಣವನ್ನು ವಾಪಸ್ಸು ಪಡೆದು ಮೈತುಂಬಾ ಬಟ್ಟೆ ಹಾಕಿ ಎಂದು ಸಲಹೆ ನೀಡಿದ್ದಾರೆ.
ಸೋಷಿಯಲ್ ಮೀಡಿಯಾ ಸೆನ್ಸೇಷನ್ ಈ ಹಿಂದಿ ಕಿರುತೆರೆ ನಟಿ. ಉರ್ಫಿ ಜಾವೇದ್ ಅವರು ತಮ್ಮ ಉಡುಗೆಗಳಿಂದಲೇ ಖ್ಯಾತಿ ಗಳಿಸಿದ ರೀತಿ ಮಾತ್ರ ತುಂಬಾ ವಿಶೇಷ. ಈ ಬಾರಿ ವೈರಲ್ ಆದ ವಿಡಿಯೋದಲ್ಲಿ ಇವರು ಮೈಕಾಣುವ ನೆಟ್‌ನಂತ ಬಟ್ಟೆಯನ್ನು ಧರಿಸಿದ್ದರು. ಕಾರಿನಿಂದ ಕೆಳಗಿಳಿದು ನಡೆಯುವಾಗ ಅವರ ಮೇಲೆ ಕೋರ್ಟ್ ಹೊದಿಸಲಾಗುತ್ತದೆ. ಆಗ ಇವರ ಬಳಿ ಕೈಚಾಚಿದ ಬಡ ಬಾಲಕನಿಗೆ ಉರ್ಫಿ ಹಣವನ್ನು ನೀಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

'ಬಡವರಿಗೆ ಹಣ ಕೊಟ್ಟರೆ ಅವರಿಗೆ ಒಳ್ಳೆದಾಗಲಿ' ಎನ್ನುತ್ತಾರೆ ಜನ. ಆದರೆ ಇಲ್ಲಿ ಉರ್ಫಿಯನ್ನು ಟ್ರೋಲ್ ಮಾಡಿದ್ದಾರೆ. ಕೊಟ್ಟ ಹಣವನ್ನು ವಾಪಾಸ್ ಪಡೆಯಲು ತಿಳಿಸಿದ್ದಾರೆ. '500 ವಾಪಸ್ ತೆಗೆದುಕೊಂಡು ಸರಿಯಾಗಿ ಡ್ರೆಸ್ ಮಾಡಿಕೊಳ್ಳಿ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಉರ್ಫಿಯ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ವೈರಲ್ ಆಗುತ್ತಿವೆ.
ಉರ್ಫಿ ಜಾವೇದ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿರುವ ನಟಿ. ಒಂದಕ್ಕಿಂತ ಹೆಚ್ಚು ವೀಡಿಯೊಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಮಾತ್ರವಲ್ಲದೆ ಉರ್ಫಿ ಜಾವೇದ್ ಅವರ ಅಭಿಮಾನಿಗಳು ಅವರ ವಿಭಿನ್ನ ಶೈಲಿಯ ಉಡುಪಿನ್ನು ನೋಡಲು ಕಾತುರದಿಂದ ಕಾಯುತ್ತಿರುತ್ತಾರೆ. ಹೀಗಿರುವಾಗ ಈ ಚೆಲುವೆ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡುವುದರಲ್ಲಿ ಹಿಂದೆ ಬಿದ್ದಿಲ್ಲ.
ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ.

ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್ ಆಗುವುದು ಎಂದರೆ ಈಕೆಗೆ ತುಂಬಾ ಖುಷಿ. ಇತ್ತೀಚೆಗೆ ಈಕೆಯ ಡ್ರೆಸ್ಗಾಗಿಯೇ ಮುಂಬೈನ ರೆಸ್ಟೋರೆಂಟ್ನಲ್ಲಿ ಎಂಟ್ರಿ ಸಿಕ್ಕಿರಲಿಲ್ಲ. ಈ ಕುರಿತು, ಉರ್ಫಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದರು.












Click it and Unblock the Notifications