ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಮೊದಲು ಬಜೆಟ್‌ ರಚನೆ ಮಾಡಿದ ವ್ಯಕ್ತಿ ಇವರೇ ನೋಡಿ

|
Google Oneindia Kannada News

ಫೆಬ್ರವರಿ 1 ರಂದು ಕೇಂದ್ರ ಬಜೆಟ್ 2022 ಅನ್ನು ಮಂಡಿಸಲು ಸಜ್ಜಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ ಪುಸ್ತಕದಲ್ಲಿ ಏನಿದೆ ಎಂದು ತಿಳಿಯಲು ಎಲ್ಲರೂ ಉತ್ಸುಕರಾಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ನಾವು ಭಾರತದ ಮೊದಲ ಬಜೆಟ್ ರಚಿಸಿದ ಜೇಮ್ಸ್ ವಿಲ್ಸನ್ ಬಗ್ಗೆ ತಿಳಿಯುವುದು ಬೇಡವೇ?

1805 ರಲ್ಲಿ ಸ್ಕಾಟ್ಲೆಂಡ್‌ನ ಸಣ್ಣ ಗಡಿ ಪಟ್ಟಣವಾದ ಹಾವಿಕ್‌ನಲ್ಲಿ ಜನಿಸಿದ ವಿಲ್ಸನ್, ನವೆಂಬರ್ 28, 1859 ರಂದು ಮೊದಲು ಭಾರತಕ್ಕೆ ಬಂದರು. ಬಳಿಕ ಅವಿಭಜಿತ ಭಾರತದಲ್ಲಿ ವೈಸ್‌ರಾಯ್ ಲಾರ್ಡ್ ಕ್ಯಾನಿಂಗ್ಸ್ ಕೌನ್ಸಿಲ್‌ನಲ್ಲಿ ಹಣಕಾಸು ಸದಸ್ಯರಾಗಿ ನೇಮಕಗೊಂಡರು. ಇದಾದ ಬಳಿಕ ಭಾರತವನ್ನು ಆಳುತ್ತಿದ್ದ ಬ್ರಿಟಿಷ್ ಸರ್ಕಾರವು ಭಾರಿ ಸಂಕಷ್ಟದಲ್ಲಿ ಸಿಲುಕಿತ್ತು. ಆರ್ಥಿಕ ಬಿಕ್ಕಟ್ಟು ಕಾಣಿಸಿಕೊಂಡಿತು. ಈ ಸಂದರ್ಭದಲ್ಲಿ 1860 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಜೆಟ್‌ ಅನ್ನು ಮಂಡನೆ ಮಾಡಿದವರು ಜೇಮ್ಸ್ ವಿಲ್ಸನ್.

 ವೃತ್ತಿಪರರಿಗೆ ಸಿಹಿಸುದ್ದಿ ನೀಡಲಿದೆ ಬಜೆಟ್‌: ಏನು ಪ್ರಯೋಜನ? ವೃತ್ತಿಪರರಿಗೆ ಸಿಹಿಸುದ್ದಿ ನೀಡಲಿದೆ ಬಜೆಟ್‌: ಏನು ಪ್ರಯೋಜನ?

ಜೇಮ್ಸ್ ವಿಲ್ಸನ್ ಮೊದಲು ಆದಾಯ ತೆರಿಗೆ ಕಾಯ್ದೆಯನ್ನು ಪರಿಚಯಿಸಿದರು. ಇದನ್ನು ಆ ಸಂದರ್ಭದಲ್ಲಿ ಜಮೀನ್ದಾರರು ತೀವ್ರವಾಗಿ ವಿರೋಧಿಸಿದರು. ಆದ್ದರಿಂದ ಇದು ದೊಡ್ಡ ವಿವಾದಕ್ಕೆ ಕಾರಣವಾಯಿತು. ಸಿದ್ಧಾಂತದ ವಿಷಯದಲ್ಲಿ ಹೇಳುವುದಾದರೆ ಜೇಮ್ಸ್ ವಿಲ್ಸನ್ ಉದಾರವಾದಿ ಮತ್ತು ಲೈಸೆಜ್-ಫೇರ್ ನೀತಿಯ ಪ್ರಬಲ ಪ್ರತಿಪಾದಕರಾಗಿದ್ದರು. ವಿಲ್ಸನ್ ಮಾರುಕಟ್ಟೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿರುವ ವ್ಯಕ್ತಿಯಾಗಿದ್ದರು.

 ಬಜೆಟ್‌ 2022: ದ್ವಿಚಕ್ರ ವಾಹನ, ಸೆಕೆಂಡ್‌ಹ್ಯಾಂಡ್‌ ಕಾರುಗಳ ಮೇಲಿನ ಜಿಎಸ್‌ಟಿ ಕಡಿತವಾಗುತ್ತಾ? ಬಜೆಟ್‌ 2022: ದ್ವಿಚಕ್ರ ವಾಹನ, ಸೆಕೆಂಡ್‌ಹ್ಯಾಂಡ್‌ ಕಾರುಗಳ ಮೇಲಿನ ಜಿಎಸ್‌ಟಿ ಕಡಿತವಾಗುತ್ತಾ?

 ಕಾರ್ಲ್ ಮಾರ್ಕ್ಸ್ ಕ್ಯಾಪಿಟಲ್‌ನಲ್ಲಿ ಜೇಮ್ಸ್ ವಿಲ್ಸನ್ ಉಲ್ಲೇಖ

ಕಾರ್ಲ್ ಮಾರ್ಕ್ಸ್ ಕ್ಯಾಪಿಟಲ್‌ನಲ್ಲಿ ಜೇಮ್ಸ್ ವಿಲ್ಸನ್ ಉಲ್ಲೇಖ

1859 ರಲ್ಲಿ, ಬ್ರಿಟಿಷರು 1857 ರ ದಂಗೆಯಿಂದ ಚೇತರಿಸಿಕೊಳ್ಳುತ್ತಿದ್ದಂತೆ, ಭಾರತದ ಆರ್ಥಿಕ ಬಿಕ್ಕಟ್ಟು ಕಾಣಿಸಿಕೊಂಡಿತು. ಈ ಸಂದರ್ಭ ಆರ್ಥಿಕ ಪರಿಹಾರ ಕಂಡುಕೊಳ್ಳಲು ಸ್ಕಾಟಿಷ್ ಉದ್ಯಮಿಯನ್ನು ಹಣಕಾಸು ಸದಸ್ಯರಾಗಿ ಬ್ರಿಟಿಷ್‌ ಸರ್ಕಾರ ನೇಮಿಸಿತು. ಜೇಮ್ಸ್ ವಿಲ್ಸನ್, ಆ ಸಮಯದಲ್ಲಿ ದಿ ಎಕನಾಮಿಸ್ಟ್ ಪತ್ರಿಕೆಯ ಸಂಸ್ಥಾಪಕರಾಗಿ ಹೆಚ್ಚು ಪ್ರಸಿದ್ಧರಾಗಿದ್ದರು. ಆರ್ಥಿಕ ಸಿದ್ಧಾಂತ ಮತ್ತು ನೀತಿಯ ಮೇಲೆ ದೃಢವಾದ ಹಿಡಿತ ಮತ್ತು ವಾಣಿಜ್ಯ ವ್ಯವಹಾರಗಳ ಪ್ರಾಯೋಗಿಕ ಜ್ಞಾನಕ್ಕಾಗಿ ಇಂಗ್ಲೆಂಡ್‌ನಲ್ಲಿ ವಿಶ್ವಾಸಾರ್ಹ ವ್ಯಕ್ತಿ ಇವರಾಗಿದ್ದರು. ರಾಜಕೀಯ ಆರ್ಥಿಕತೆ ವಿಶ್ಲೇಷಕ, ಆರ್ಥಿಕ ತಜ್ಞ ಕಾರ್ಲ್ ಮಾರ್ಕ್ಸ್ ತನ್ನ "ಕ್ಯಾಪಿಟಲ್" ಪುಸ್ತಕದಲ್ಲಿ ಜೇಮ್ಸ್ ವಿಲ್ಸನ್ ಬಗ್ಗೆ ಉಲ್ಲೇಖ ಮಾಡಿದ್ದಾರೆ. ‘an economic mandarin of high standing' ಅಂದರೆ 'ಉನ್ನತ ಸ್ಥಾನಮಾನದ ಆರ್ಥಿಕ ಅಧಿಕಾರಿ' ಎಂದು ಕಾರ್ಲ್ ಮಾರ್ಕ್ಸ್ ಹೇಳಿದ್ದರು.

 ಭಾರತದಲ್ಲಿ ಮೊದಲ ಬಾರಿಗೆ ಇಂಗ್ಲಿಷ್ ಬಜೆಟ್‌

ಭಾರತದಲ್ಲಿ ಮೊದಲ ಬಾರಿಗೆ ಇಂಗ್ಲಿಷ್ ಬಜೆಟ್‌

"ಜೇಮ್ಸ್ ವಿಲ್ಸನ್ ಭಾರತದಲ್ಲಿ ಮೊದಲ ಬಾರಿಗೆ ಇಂಗ್ಲಿಷ್ ಮಾದರಿಯ ಮೇಲೆ ರೂಪಿಸಲಾದ ಹಣಕಾಸಿನ ಬಜೆಟ್ ಅನ್ನು ಪರಿಚಯಿಸಿದರು. ಈ ಮೂಲಕ ಪ್ರೇರಣೆ ನೀಡಿದರು. ಮಿಲಿಟರಿ ಮತ್ತು ರಾಜಕೀಯ ಪ್ರಭಾವದಿಂದಾಗಿ ಮುರಿದು ಚದುರಿಹೋಗಿದ್ದ ಹಣಕಾಸು ನೀತಿಯನ್ನು ಸರಿಹೊಂದಿಸಿದರು. ಅಸ್ತಿತ್ವದಲ್ಲಿರುವ ಲೆಕ್ಕಪರಿಶೋಧನೆ ಮತ್ತು ಖಾತೆಯ ವ್ಯವಸ್ಥೆ ಪರಿಶೀಲನೆ, ವಿತ್ತ ಮಂತ್ರಿ ಮತ್ತು ಸಾಮಾನ್ಯ ಸರ್ಕಾರದ ಸದಸ್ಯರಿಗೆ ವಹಿಸುವ ಕರ್ತವ್ಯ ಮೊದಲಾದವುಗಳನ್ನು ನಿಭಾಯಿಸಿದರು," ಎಂದು 'Financial Foundations of the British Raj' (ಬ್ರಿಟಿಷ್ ರಾಜ್‌ನ ಆರ್ಥಿಕ ಅಡಿಪಾಯಗಳು) ಎಂಬ ಪುಸ್ತಕದಲ್ಲಿ ಸಬ್ಯಶಾಚಿ ಭಟ್ಟಾಚಾರ್ಯ ಉಲ್ಲೇಖ ಮಾಡಿದ್ದಾರೆ.

 ಜೇಮ್ಸ್ ವಿಲ್ಸನ್ ಯಾರು?

ಜೇಮ್ಸ್ ವಿಲ್ಸನ್ ಯಾರು?

ಜೇಮ್ಸ್ ವಿಲ್ಸನ್ 1805 ರಲ್ಲಿ ಸ್ಕಾಟಿಷ್ ಗಡಿಯಲ್ಲಿರುವ ಹಾವಿಕ್ ಎಂಬ ಪಟ್ಟಣದಲ್ಲಿ ಕ್ವೇಕರ್ ಕುಟುಂಬದಲ್ಲಿ ಜನಿಸಿದರು. 16 ನೇ ವಯಸ್ಸಿನಲ್ಲಿ, ಟೋಪಿ ಕಾರ್ಖಾನೆಯಲ್ಲಿ ಅಪ್ರೆಂಟಿಸ್ ಆದರು. ದಿನವಿಡೀ ಕೆಲಸ ಮಾಡಿ, ವಿಲ್ಸನ್ ರಾತ್ರಿ ಅರ್ಥಶಾಸ್ತ್ರದ ಬಗ್ಗೆ ಓದುತ್ತಿದ್ದರು. 1824 ರಲ್ಲಿ, ಲಂಡನ್‌ಗೆ ಬಂದರು. 1837 ರ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ, ವಿಲ್ಸನ್ ತನ್ನ ಹೆಚ್ಚಿನ ಸಂಪತ್ತನ್ನು ಕಳೆದುಕೊಂಡರು. ಬೇರೆ ದಾರಿ ಇಲ್ಲದೆ ತನ್ನ ಉಳಿದ ಆಸ್ತಿಯನ್ನು ಮಾರಾಟ ಮಾಡಿದರು. ಒಂದು ದಶಕದ ನಂತರ 1853 ರಲ್ಲಿ, ವಿಲ್ಸನ್ ಚಾರ್ಟರ್ಡ್ ಬ್ಯಾಂಕ್ ಆಫ್ ಇಂಡಿಯಾ, ಆಸ್ಟ್ರೇಲಿಯಾ ಮತ್ತು ಚೀನಾವನ್ನು ಸ್ಥಾಪಿಸಿದರು. ನಂತರ 1969 ರಲ್ಲಿ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಆಯಿತು. ವಿಲ್ಸನ್ 1843 ರಲ್ಲಿ ದಿ ಎಕನಾಮಿಸ್ಟ್ ಪತ್ರಿಕೆ ಸ್ಥಾಪಿಸಿದರು.

 1860 ರ ವಿಲ್ಸನ್‌ ಬಜೆಟ್ ತಂದ ಬದಲಾವಣೆಗಳು ಯಾವುವು?

1860 ರ ವಿಲ್ಸನ್‌ ಬಜೆಟ್ ತಂದ ಬದಲಾವಣೆಗಳು ಯಾವುವು?

ದಂಗೆಯ ನಂತರ ಬ್ರಿಟಿಷ್ ಸಾಮ್ರಾಜ್ಯವು ಎದುರಿಸುತ್ತಿರುವ ಬಿಕ್ಕಟ್ಟು ವಾರ್ಷಿಕ ಮಿಲಿಟರಿ ವೆಚ್ಚಗಳ ಅಗಾಧವಾದ ಹೆಚ್ಚಳದಿಂದಾಗಿ ಘೋರ ಸ್ಥಿತಿಗೆ ತಲುಪಿತು. ಈ ಸಂದರ್ಭದಲ್ಲಿ ವಿಲ್ಸನ್‌ ಬಜೆಟ್‌ ಮಂಡನೆ ಮಾಡಿದ್ದಾರೆ. "ಸೇನೆ, ಮಿಲಿಟರಿ ಪೋಲೀಸ್, ಹೊಸ ಲೆವಿಗಳು, ಪೊಲೀಸ್ ಮತ್ತು ಮಿಲಿಟರಿ ಸಾರ್ವಜನಿಕ ಕಾರ್ಯಗಳಿಗಾಗಿ ವಾರ್ಷಿಕ ವೆಚ್ಚ 13.2 ಕೋಟಿ ರೂಪಾಯಿಯಿಂದ (1856-57) ರೂ. 17.2 ಕೋಟಿ (1857-58), ರೂ. 24.7 ಕೋಟಿಗಳು (1858-59) ಆಗಿತ್ತು.

ಅದೇ ಅವಧಿಯಲ್ಲಿ ಭಾರತ ಸರ್ಕಾರದ ಸಾಲಗಳು 36 ಪ್ರತಿಶತದಷ್ಟು ಹೆಚ್ಚಾಯಿತು," ಇತಿಹಾಸಕಾರ ಸಬ್ಯಸಾಚಿ ಭಟ್ಟಾಚಾರ್ಯ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ. ವಿಲ್ಸನ್ ಮಾಡಿದ ಪ್ರಮುಖ ಪ್ರಸ್ತಾಪಗಳಲ್ಲಿ ವ್ಯಾಪಾರ ವರ್ಗಗಳಿಗೆ ತೆರಿಗೆ ವಿಧಿಸುವುದು, ಸರ್ಕಾರಿ ಕಾಗದದ ಕರೆನ್ಸಿ, ಬಜೆಟ್‌ನೊಂದಿಗೆ ಹಣಕಾಸು ವ್ಯವಸ್ಥೆಯ ಸುಧಾರಣೆ, ಅಂದಾಜುಗಳು ಮತ್ತು ಲೆಕ್ಕಪರಿಶೋಧನೆ, ಸಿವಿಲ್ ಪೋಲೀಸ್ ರಚನೆ ಮತ್ತು ಸಾರ್ವಜನಿಕ ಕೆಲಸಗಳು ಮತ್ತು ರಸ್ತೆಗಳಿಗಾಗಿ ಇಲಾಖೆಯನ್ನು ನಿರ್ಮಿಸುವುದು ಒಳಗೊಂಡಿದೆ. ಮಿಲಿಟರಿ ಹಣಕಾಸು ಆಯೋಗ ಮತ್ತು ನಾಗರಿಕ ಹಣಕಾಸು ಆಯೋಗವನ್ನು ಸ್ಥಾಪಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ವಿಲ್ಸನ್ ತನ್ನ ಬಜೆಟ್ ಅನ್ನು ಫೆಬ್ರವರಿ 18, 1860 ರಂದು ಮಂಡಿಸಿದರು. ಈ ಸಂದರ್ಭದಲ್ಲಿ ಆದಾಯ ತೆರಿಗೆ, ಪರವಾನಗಿ ತೆರಿಗೆ ಮತ್ತು ತಂಬಾಕು ಸುಂಕ ಎಂಬ ಮೂರು ರೀತಿಯ ತೆರಿಗೆಗಳನ್ನು ಪರಿಚಯಿಸಿದರು. (ಒನ್‌ಇಂಡಿಯಾ ಸುದ್ದಿ)

Recommended Video

Virat Kohli ಬ್ಯಾಟಿಂಗ್ ಮುಗಿಸಿ Dance ಮಾಡಿಕೊಂಡು ಕೂತಿದ್ರಾ | Oneindia Kannada

English summary
Union Budget 2022: Know About James Wilson, the man who created India's first-ever Budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X