ಆಫೀಸ್‌ನಲ್ಲಿ ನಿಮ್ಮ ನಡವಳಿಕೆ ಹೇಗಿರಬೇಕು? ಅನವಶ್ಯಕ ಮಾತುಗಳು ಕೆಲಸಕ್ಕೇ ಕುತ್ತು ತರಬಹುದು ಎಚ್ಚರ
ಸಮಾಜದಲ್ಲಿ ಪ್ರತಿಯೊಬ್ಬರ ಸ್ವಭಾವ, ಆಲೋಚಿಸುವ ರೀತಿ, ನೀತಿಗಳು ಹಾಗೂ ವರ್ತನೆಗಳು ಭಿನ್ನವಾಗಿರುತ್ತವೆ. ಯಾವುದೇ ಇಬ್ಬರು ವ್ಯಕ್ತಿಗಳ ನಡುವಿನ ಸ್ವಭಾವದಲ್ಲಿ, ಆಲೋಚಿಸುವ ಕ್ರಮದಲ್ಲಿ ಸಾಮ್ಯತೆ ಇದ್ದರೆ ಸ್ನೇಹಿತರಾಗುತ್ತಾರೆ. ಇಲ್ಲದಿದ್ದರೆ, ಪರಿಚಯಕ್ಕೆ ಸೀಮಿತವಾಗುತ್ತದೆ. ಕೆಲವೊಂದು ಸಲ ಸ್ವಭಾವಗಳು ವಿರುದ್ಧ ದಿಕ್ಕಿನಲ್ಲಿದ್ದರೆ ಜಗಳಗಳಾಗುವ ಸಂಭವವೇ ಇರುತ್ತದೆ.
ಕೆಲಸದ ಸ್ಥಳದಲ್ಲಿ ಸದಾ ಮುಖಾಮುಖಿಯಾಗಬೇಕಾದ ಸಂದರ್ಭದಲ್ಲಿ ವೈಮನಸ್ಸುಗಳು ಉಂಟಾಗದಂತೆ ಜಾಗೃತಿ ವಹಿಸುವುದು ಮುಖ್ಯವಾಗುತ್ತದೆ. ಹೀಗಾಗಿ ಕೆಲಸದಲ್ಲಿ ಸ್ಥಳದಲ್ಲಿ ಯಾವುದೇ ವೈಯಕ್ತಿಕ ಚಿಂತನೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಬಹಳ ಜಾಗ್ರತೆ ವಹಿಸುವುದು ಅಗತ್ಯವಾಗಿರುತ್ತದೆ.

ಕಂಪೆನಿಗಳಾಗಿರಬಹುದು, ಕಚೇರಿಗಳಾಗಿರುಬಹುದು ಬಹುತೇಕ ಕಡೆ ವೈಯಕ್ತಿಕ ಅಭಿಪ್ರಾಯಗಳು, ಆಲೋಚನೆಗಳ ಅಗತ್ಯವೇ ಬೀಳುವುದಿಲ್ಲ. ಆದರೂ ಕೆಲವೊಂದು ಸಲ ತಮ್ಮ ಮಾತನಾಡುವಾಗ ಬಾಯಿಗೆ ಬಂದದ್ದನ್ನು ಮಾತನಾಡಿ ಬಿಡುತ್ತಾರೆ. ಇದರಿಂದ ಕೆಲಸದ ವಾತಾವರಣ ಕೆಡುತ್ತದೆ. ಈ ಮಾತಿನಿಂದಾಗಿಯೇ ತಮ್ಮ ಕೆಲಸಗಳಿಗೆ ಕುತ್ತು ತರುವ ಸಂದರ್ಭಗಳು ಹೆಚ್ಚಿರುತ್ತದೆ. ಹೀಗಾಗಿ ಮಾತನಾಡುವ ಮುನ್ನ ಎಚ್ಚರವಿರಲಿ.
ಒಂದು ಉದಾಹರಣೆ ಹೇಳುವುದಾದರೆ, ಒಂದು ಕಂಪೆನಿಯ ಕಾರ್ ಡ್ರೈವರ್, ತನ್ನ ಕಂಪೆನಿಯ ಉದ್ಯೋಗಿಗಳನ್ನು ಮನೆಯಿಂದ ಕಚೇರಿಗೆ, ಕಚೇರಿಯಿಂದ ಮನೆಗೆ ಬಿಡುವುದಷ್ಟೆ ಆತನ ಕೆಲಸವಾಗಿರುತ್ತದೆ. ಉದ್ಯೋಗಿಗಳ ಜೊತೆ ಹೆಚ್ಚು ಮಾತನಾಡಬಾರದೆಂಬ ನಿಯಮವೂ ಇರತ್ತದೆ. ಆದರೂ ಕಾರು ಡ್ರೈವರ್ ತನ್ನ ಮಾತಿನಲ್ಲಿ ಹಿಡಿತವಿಲ್ಲದ ವ್ಯಕ್ತಿಯಾಗಿರುತ್ತಾನೆ.
ಒಮ್ಮೆ ಆತನ ಕಾರಿನಲ್ಲಿ ಮೂರು ಮಂದಿ ಮಹಿಳಾ ಉದ್ಯೋಗಿಗಳು ಕುಳಿತುಕೊಂಡು ಮನೆಗೆ ಹೋಗುತ್ತಿರುತ್ತಾರೆ. ಇಬ್ಬರು ಮಹಿಳಾ ಉದ್ಯೋಗಿಳು ಇಳಿದಾದ ಮೇಲೆ ಕಾರ್ ಡ್ರೈವರ್, ಕೊನೆಯಲ್ಲಿ ಉಳಿದಿದ್ದ ಮಹಿಳಾ ಉದ್ಯೋಗಿಯ ಜೊತೆಗೆ, ಈಗಾಗಲೆ ಕಾರಿನಿಂದ ಇಳಿದು ಹೋದ ಉದ್ಯೋಗಿಗಳ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾನೆ.
'ಮೇಡಂ, ಆ ಮಹಿಳಾ ಉದ್ಯೋಗಿಗಳು ಹಾಕಿಕೊಂಡು ಬರುವ ಸೆಂಟ್‌ನ ವಾಸನೆ ಹಿಡಿದು ವಾಂತಿ ಬರುವ ರೀತಿಯಿದೆ. ಯಾಕಾದ್ರು ಅವರು ನಮ್ಮ ಕಾರಿಗೆ ಬರುತ್ತಾರೊ' ಅಂತ ಏನೇನು ಮಾತನಾಡುತ್ತಾನೆ.
ಡ್ರೈವರ್‌ನ ಮಾತನ್ನು ಕೇಳಿಸಿಕೊಳ್ಳುತ್ತಿದ್ದ ಉದ್ಯೋಗಿ, 'ಈ ಡ್ರೈವರ್ ನನ್ನ ಸಹದ್ಯೋಗಿಗಳು ಕಾರಿನಿಂದ ಇಳಿದ ತಕ್ಷಣ ಅವರ ಮೇಲೆ ದೂರು ಹೇಳುತ್ತಾನೆ. ಈಗ ನಾನು ಕಾರಿನಿಂದ ಇಳಿದ ಮೇಲೂ ನನ್ನ ಮೇಲೂ ಇದೇ ರೀತಿಯ ಕೆಟ್ಟ ಆಲೋಚನೆಗಳನ್ನು ವ್ಯಕ್ತಪಡಿಸದೆ ಇರಲಾರ. ಈತನ ವಿರುದ್ಧ ಮೇಲಿನ ಅಧಿಕಾರಿಗಳಿಗೆ ದೂರನ್ನು ನೀಡಬೇಕೆಂದು' ಆಲೋಚಿಸುತ್ತಾಳೆ.
ಅನಗತ್ಯ ಮಾತಿಗೆ ಹಾಕಿ ಕಡಿವಾಣ?
ಕೆಲಸದ ಅವಧಿಯಲ್ಲಿ ನಮ್ಮ ವೈಯಕ್ತಿಕ ಅಭಿಪ್ರಾಯ ನಾವು ಮಾಡುವ ಕೆಲಸಕ್ಕೆ ಅಗತ್ಯವೇ ಬೀಳುವುದಿಲ್ಲ. ಆದರೂ ಮನಸಿಗೆ ಬಂದದ್ದನ್ನು ಮಾತನಾಡಲು ತವಕಿಸುತ್ತೇವೆ. ಇದು ಒಳ್ಳೆಯ ಉದ್ಯೋಗಿಯ ಲಕ್ಷಣವಲ್ಲ ಎಂಬುದನ್ನು ಅರಿತುಕೊಳ್ಳಬೇಕಿದೆ.
ನಮ್ಮ ಆಲೋಚನೆಗಳ ರೀತಿಯಲ್ಲಿ ಎಲ್ಲರ ಆಲೋಚನೆಗಳು ಇರಬೇಕು ಅಂತೇನಿಲ್ಲ. ಆದರೂ ಪದೇ ಪದೇ ಸಮಯ ಸಿಕ್ಕಾಗಲೆಲ್ಲ ಹಾಗೂ ಕೆಲಸದ ಅವಧಿಯಲ್ಲೂ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಹೋದರೆ ನಮ್ಮ ಮೇಲಿನ ಅಧಿಕಾರಿಗಳಿಗೆ ಕಿರಿಕಿರಿ ಆಗಬಹುದು. ಇದರಿಂದ ನಿಮ್ಮನ್ನು ಕೆಲಸದಲ್ಲಿ ಪ್ರೋತ್ಸಾಹಿಸದೇ ಹೋಗಬಹುದು. ಇದು ಹೀಗೆಯೇ ಮುಂದುವರೆದು ಕೆಲಸಕ್ಕೂ ಕುತ್ತು ತರಬಹುದೆಂಬ ಎಚ್ಚರ ಇದ್ದರೆ ಒಳ್ಳೆಯದು.
ಕೆಲಸದ ಕುರಿತ ಚರ್ಚೆಗೆ ಸೀಮಿತವಾಗಲಿ
ಯಾವುದೇ ಕೆಲಸದಲ್ಲಿ ಎಷ್ಟೇ ವರ್ಷದ ಅನುಭವ ಇದ್ದರೂ ಎಲ್ಲವನ್ನು ಕಲಿತಿರುವುದಿಲ್ಲ. ಕಲಿತಷ್ಟು ಕಲಿಯುವಂತಹದ್ದ ಸಾಗರದಷ್ಟು ಗೋಚರಿಸುತ್ತಿರುತ್ತದೆ. ಹೀಗಾಗಿ ಕಲಿಯಬೇಕೆಂಬ ಹಂಬಲ ಇರುವವನಿಗೆ ಕೆಲಸದ ಅವಧಿಯಲ್ಲಿ ತಮ್ಮ ವೈಯಕ್ತಿಕ ಊಟ, ಬಟ್ಟೆಗೆ ಬಗೆಗೂ ಗಮನ ಇರುವುದಿಲ್ಲ. ಅಷ್ಟರ ಮಟ್ಟಿಗೆ ಕೆಲಸದಲ್ಲಿ ನಿರತನಾಗಿರುತ್ತಾನೆ. ಇಂತಹ ಮನಃಸ್ಥಿತಿ ಇದ್ದವರು ಮಾತ್ರ ತಮ್ಮ ಸಹದ್ಯೋಗಿಗಳ ನಡುವೆ ಭಿನ್ನಾಭಿಪ್ರಾಯಗಳಿಗೆ ಆಸ್ಪದ ಕೊಡುವುದಿಲ್ಲ. ಅಂತಹ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವತ್ತಾ ನಾವು ಮುಂದಾಗಬೇಕು.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications