• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವರ್ಷ 2020; ಟ್ವಿಟರ್‌ನಲ್ಲಿ ಹೆಚ್ಚು ಬಳಸಿದ ಹ್ಯಾಶ್‌ ಟ್ಯಾಗ್‌ಗಳು

|
Google Oneindia Kannada News

ಇದು ಸಾಮಾಜಿಕ ಜಾಲತಾಣಗಳ ಯುಗ. ಜನರು ನ್ಯೂಸ್ ಚಾನೆಲ್ ನೋಡುವ ಮೊದಲು ಕೈಯಲ್ಲಿರುವ ಮೊಬೈಲ್‌ ಮೂಲಕ ಟ್ವಿಟರ್ ನೋಡುತ್ತಾರೆ. ದೇಶ ಮತ್ತು ವಿಶ್ವಮಟ್ಟದಲ್ಲಿ ಯಾವ ವಿಚಾರ ಹೆಚ್ಚು ಚರ್ಚೆಯಾಗುತ್ತಿದೆ ಎಂಬುದನ್ನು ಹ್ಯಾಶ್ ಟ್ಯಾಗ್ ಮೂಲಕ ತಿಳಿಯಬಹುದು.

ಟ್ವಿಟರ್ ಹ್ಯಾಶ್ ಟ್ಯಾಗ್‌ಗಳನ್ನು ಅಭಿಯಾನದ ಉದ್ದೇಶಕ್ಕಾಗಿಯೂ ಬಳಕೆ ಮಾಡಲಾಗುತ್ತದೆ. ಹಲವು ಹ್ಯಾಶ್ ಟ್ಯಾಗ್‌ಗಳು ಸರ್ಕಾರದ ಗಮನವನ್ನು ಸೆಳೆದ ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಹಾಗೆಯೇ ಹಲವು ಸುಳ್ಳು ಸುದ್ದಿಗಳು ಟ್ವೀಟ್ ಮೂಲಕವೇ ಮೊದಲು ಜನರಿಗೆ ತಿಳಿದಿದೆ.

News makers; ಕ್ಯಾಮರಾದಲ್ಲಿ ಕರಿಚಿರತೆ ಸೆರೆ ಹಿಡಿದ ಶಾಜ್ ಜುಂಗ್! News makers; ಕ್ಯಾಮರಾದಲ್ಲಿ ಕರಿಚಿರತೆ ಸೆರೆ ಹಿಡಿದ ಶಾಜ್ ಜುಂಗ್!

ಜನರು ಟ್ವಿಟರ್‌ಗೆ ಹೋದರೆ What's happening, Trending ಮೂಲಕ ಭಾರತ ಮತ್ತು ಜಗತ್ತಿನಲ್ಲಿ ಏನು ನಡೆಯುತ್ತಿದೆ? ಎಂಬ ಸಂಕ್ಷಿಪ್ತ ಮಾಹಿತಿ ಸಿಗುತ್ತದೆ. ಈಗ ಎಲ್ಲಾ ಚಾನೆಲ್, ವೆಬ್‌ಸೈಟ್‌ಗಳು ಟ್ವೀಟ್ ಖಾತೆ ಹೊಂದಿದ್ದು, ಅವುಗಳ ಲಿಂಕ್‌ಗಳನ್ನು ಪೋಸ್ಟ್ ಮಾಡಿರುತ್ತವೆ.

Newsmakers; ಪ್ರಧಾನಿ ಗಮನ ಸೆಳೆದ ಮಂಡ್ಯದ ಕಾಮೇಗೌಡರು! Newsmakers; ಪ್ರಧಾನಿ ಗಮನ ಸೆಳೆದ ಮಂಡ್ಯದ ಕಾಮೇಗೌಡರು!

2020ರಲ್ಲಿ ಮೂರು Hashtagಗಳನ್ನು ಬಳಸಿ ಜನರು ಅತಿ ಹೆಚ್ಚು ಟ್ವೀಟ್‌ಗಳನ್ನು ಮಾಡಿದ್ದಾರೆ. ಈ ವರ್ಷದ ಮಾರ್ಚ್‌ ಬಳಿಕ ವಿಶ್ವದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡು ಜನರು ಲಾಕ್ ಡೌನ್‌ನಲ್ಲಿ ಸಿಲುಕಿದರು. ಈ ರೋಗದ ಬಗ್ಗೆಯೂ ಅತಿ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಗಿದೆ.

Unforgettable 2020: ZERO ಕೊವಿಡ್ 19 ಕೇಸ್ ದಾಖಲಿಸಿದ ದೇಶಗಳುUnforgettable 2020: ZERO ಕೊವಿಡ್ 19 ಕೇಸ್ ದಾಖಲಿಸಿದ ದೇಶಗಳು

ಈ ವರ್ಷ ಸಿನಿಮಾ, ಕ್ರೀಡೆಗಳ ವಿಚಾರಗಳು ಟ್ವಿಟರ್‌ನಲ್ಲಿ ಸದ್ದು ಮಾಡಿದವು. ಸಾಮಾನ್ಯ ಸುದ್ದಿಗಳ ವಿಚಾರಕ್ಕೆ ಬಂದರೆ ಮೂರು ಹ್ಯಾಶ್ ಟ್ಯಾಗ್ ಅತಿ ಹೆಚ್ಚು ಬಳಕೆಯಾಗಿದೆ. ಅವುಗಳಲ್ಲಿ ಮೊದಲ ಸ್ಥಾನದಲ್ಲಿ #Covid19 ಇದೆ.

2020ರಲ್ಲಿ #Covid19 ಹ್ಯಾಶ್ ಟ್ಯಾಗ್ ಬಳಸಿ ಅತಿ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಗಿದೆ. ಇದು ನಿರೀಕ್ಷಿತವೂ ಆಗಿತ್ತು. ಏಕೆಂದರೆ ಇಡೀ ವಿಶ್ವವೇ ಕೋವಿಡ್ ಕುರಿತ ಮಾಹಿತಿಗಳನ್ನು ಹಂಚಿಕೊಳ್ಳುತ್ತಿತ್ತು.

ಎಲ್ಲಿ ಎಷ್ಟು ಪ್ರಕರಣ?, ಹೊಸ ಪ್ರಕರಣ ಎಷ್ಟು?, ಮೃತಪಟ್ಟವರು ಎಷ್ಟು?, ಕೋವಿಡ್ ಮಾರ್ಗಸೂಚಿ, ಕೋವಿಡ್ ಚಿಕಿತ್ಸೆ, ಕೋವಿಡ್ ಲಸಿಕೆ ಹೀಗೆ ವಿವಿಧ ವಿಚಾರಗಳನ್ನು ಜನರು #Covid19 ಹ್ಯಾಶ್‌ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.

ಟ್ವಿಟರ್ ಸಹ ಕೋವಿಡ್ ಕುರಿತ ವರದಿಗಳನ್ನು ಹುಡುಕಲು ಕೋವಿಡ್ 19 ಸರ್ಚ್‌ ವ್ಯವಸ್ಥೆಯನ್ನು ಮಾಡಿದೆ. ಕೋವಿಡ್ ಕುರಿತು ಮಾಹಿತಿಗಳನ್ನು ಹುಡುಕುವ ಜೊತೆಗೆ ಜನರು @MoHFW_INDIA, @WHO ಅನ್ನು ಹುಡುಕಿದ್ದಾರೆ. #WearAMask, #StayHomeStaySafe ಮತ್ತು #SocialDistancing ಪ್ರಸಿದ್ಧ ಹ್ಯಾಶ್‌ ಟ್ಯಾಗ್ ಆಗಿವೆ.

ಸುಶಾಂತ್ ಸಿಂಗ್ ರಜಪೂತ್; ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ 14 ಜೂನ್ 2020ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅಪಾರ ಅಭಿಮಾನಿಗಳನ್ನು ಅವರು ಹೊಂದಿದ್ದರು. ಈ ವರ್ಷ ಟ್ವಿಟರ್‌ನಲ್ಲಿ #SushantSinghRajput ಹ್ಯಾಶ್ ಟ್ಯಾಗ್ 2ನೇ ಸ್ಥಾನದಲ್ಲಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿದ ಬಳಿಕವೂ ಜನರು ಟ್ವೀಟ್‌ಗಳಲ್ಲಿ
ಅವರ @itsSSR ಬಳಕೆ ಮಾಡುತ್ತಿದ್ದರು. ಈ ಸಾವಿನ ಬಗ್ಗೆ ಅನುಮಾನ ವ್ಯಕ್ತವಾ ಹಿನ್ನಲೆಯಲ್ಲಿ ದೇಶಾದ್ಯಂತ ಚರ್ಚೆ ಆರಂಭವಾಯಿತು. ಆದ್ದರಿಂದ, ಟ್ವಿಟರ್‌ನಲ್ಲಿ ಅವರು ವರ್ಷಪೂರ್ತಿ ಚರ್ಚೆಯಲ್ಲಿ ಉಳಿದರು.

ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಯಿತು. ಸುಶಾಂತ್ ನಟಿಸಿದ್ದ ಕೊನೆಯ ಸಿನಿಮಾ #DilBechara ಹ್ಯಾಶ್ ಟ್ಯಾಗ್ ಬಳಕೆ ಸಹ ಹೆಚ್ಚಿತ್ತು. ಸಿನಿಮಾ ವಿಭಾಗದಲ್ಲಿ ಹೆಚ್ಚು ಟ್ವೀಟ್‌ ಆದ ವಿಷಯದಲ್ಲಿ ದಿಲ್ ಬಚೇರಾವೂ ಸೇರಿದೆ.

ಸುದ್ದಿಯಲ್ಲಿದ್ದ ಉತ್ತರ ಪ್ರದೇಶ; ಈ ವರ್ಷ ಟ್ವಿಟರ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾದ ಮತ್ತೊಂದು ವಿಚಾರ ಹತ್ರಾಸ್ ಅತ್ಯಾಚಾರ ಪ್ರಕರಣ. #Hathras ಹ್ಯಾಶ್ ಟ್ಯಾಗ್ ಈ ವರ್ಷ ಟ್ರೆಂಡಿಂಗ್‌ನಲ್ಲಿತ್ತು. ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿಯನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು.

ಪ್ರಕರಣ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಯಿತು. ಈ ಘಟನೆ ರಾಜಕೀಯ ಆರೋಪಗಳಿಗೂ ಕಾರಣವಾಯಿತು. ಕಾಂಗ್ರೆಸ್ ನಾಯಕರು ಯುವತಿ ಮನೆಗೆ ಭೇಟಿ ನೀಡಲು ಪ್ರಯತ್ನ ಪಟ್ಟರು. ಇದರ ಚಿತ್ರಗಳು ಸಹ ಟ್ವಿಟರ್‌ನಲ್ಲಿ ಸದ್ದು ಮಾಡಿದವು.

English summary
Here's a look at the top hashtags on Twitter in the year 2020. COVID 19 hashtag in top trend in twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X