Bike Wheeling: ಬೈಕ್ ವೀಲಿಂಗ್ ಎನ್ನುವ ಕೆಟ್ಟ ವ್ಯಸನಕ್ಕೆ ಮುಕ್ತಿ ಹೇಗೆ?

'ಪೊಲೀಸರ ಕೈಯಲ್ಲಿ ಲಾಠಿ ಏಟು ತಿನ್ನುವಾಗ ಸಾಕಪ್ಪ ಸಾಕು ಬೈಕ್ ವೀಲಿಂಗ್ ಸಹವಾಸ ಎಂದೆನಿಸುತ್ತದೆ. ಆದರೆ, ಏಟಿನ ರುಚಿ ಮಾಯವಾಗುತ್ತಿದ್ದಂತೆ ಬೈಕ್ ಮೇಲೆ ಕೂತ ತಕ್ಷಣ ಮುಂದಿನ ಚಕ್ರವನ್ನು ಗಾಳಿಯಲ್ಲಿ ಹಾರಿಸೋಣವೆಂದು ಮನಸು ಹಾತೊರೆಯುತ್ತಿರುತ್ತದೆ ಸರ್...!'

ಇದು ಬೈಕ್ ವೀಲಿಂಗ್ ಮಾಡುತ್ತಿದ್ದ ಪುಂಡನೊಬ್ಬನ ಅನುಭವ. ಈಗ ಕಾರು ಡ್ರೈವಿಂಗ್ ಮಾಡುತ್ತಿರುವ ಆತ, ಬಾಲ್ಯದಲ್ಲೇ ಗ್ಯಾರೆಜ್ ಸೇರಿಕೊಂಡು ಬೈಕ್ ರಿಪೇರಿ ಮಾಡುವುದರಲ್ಲಿ ಪಳಗಿದವ. ಗ್ಯಾರೆಜ್ ಕೆಲಸದಲ್ಲೆ ಮುಂದುವರೆಯದೆ ಡ್ರೈವಿಂಗ್ ವೃತ್ತಿಗೆ ಇಳಿದಿದ್ದಾನೆ.

 Tips for Quitting Bike Wheeling: Ensuring Safe and Responsible Riding Practices

ಯಾಕೆಂದು ಕೇಳಿದರೆ, 'ಬೈಕ್ ವೀಲಿಂಗ್ ಮಾಡುವ ಸ್ನೇಹಿತರು ಸಿಗುತ್ತಾರೆ. ಬಲವಂತವಾಗಿ ಕರೆದುಕೊಂಡು ಹೋಗುತ್ತಾರೆ. ಅವರಿಂದ ಬಿಡಿಸಿಕೊಂಡು ಬರಲು ಸಾಧ್ಯವಾಗುವುದಿಲ್ಲ. ಆ ಕೆಲಸಕ್ಕಿಂತ ಈಗ ಕಾರು ಓಡಿಸುತ್ತಿರುವುದೇ ಚೆನ್ನಾಗಿದೆ. ಕಂಪೆನಿಗೆ ಕಾರು ಓಡಿಸುತ್ತೇನೆ. ಈ ಕಂಪೆನಿಯಲ್ಲಿ ಕಠಿಣ ನಿಯಮಗಳಿವೆ. ಹೀಗಾಗಿ ಸಿಗರೇಟು ಸೇದುವುದನ್ನು ಕಡಿಮೆ ಮಾಡಿದ್ದೇನೆ' ಎನ್ನುತ್ತಾನೆ.

ಬೈಕ್ ವೀಲಿಂಗ್ ಕಲಿಕೆ ಹೇಗೆ?

ಗ್ಯಾರೆಜ್‌ನಲ್ಲಿ ಕೆಲಸ ಮಾಡುವವರು, ಅವರ ಸ್ನೇಹಿತರು ಹಾಗೂ ಇತ್ತೀಚಿಗೆ ಕಾಲೇಜು ಹುಡುಗರು ಇದರ ಸಹವಾಸಕ್ಕೆ ಬಿದ್ದಿದ್ದಾರೆ ಎನ್ನುವ ಆತ, 20-22ನೇ ವಯಸ್ಸಿನ ಮೇಲೆ ಯಾರು ಬೈಕ್ ವೀಲಿಂಗ್ ಕಲಿಯುವುದಿಲ್ಲ. ಏನಿದ್ದರೂ 16ನೇ ವಯಸ್ಸಿನಲ್ಲೇ ಬೈಕ್ ವೀಲಿಂಗ್ ಕಲಿಯಲು ಪ್ರಾರಂಭಿಸುತ್ತಾರೆ. ಈ ವಯಸ್ಸಿನ ಹುಡುಗರು ಮುಖ್ಯವಾಗಿ ಗ್ಯಾರೆಜ್‌ಗಳಲ್ಲಿ ಬೈಕ್‌ಗಳನ್ನು ತಮಗೆ ಹೇಗೆ ಬೇಕೊ ಹಾಗೆ ವಿನ್ಯಾಸ ಮಾಡಿಕೊಂಡು ರೋಡಿಗೆ ಇಳಿಯುತ್ತಾರೆ.

ಕಲಿಯುವಾಗ ಹೆಲ್ಮೆಟ್ ಹಾಕಿಕೊಳ್ಳುತ್ತಾರೆ. ವೀಲಿಂಗ್ ಮಾಡುವಾಗ ಪ್ರಾರಂಭದಲ್ಲಿ ಬಿದ್ದು ಕೈ-ಕಲಿಗೆ ಗಾಯ ಆಗುವುದು, ಮೂಳೆ ಮುರಿಯುವುದು ಸಾಮಾನ್ಯವಾಗಿರುತ್ತದೆ. ತಲೆಗೆ ಹೆಲ್ಮೆಟ್ ಹಾಕುವುದರಿಂದ ಪ್ರಾಣಕ್ಕೆ ಆಪಾಯ ಇರುವುದಿಲ್ಲ. ಆದರೆ, ಒಮ್ಮೆ ಬೈಕ್ ವೀಲಿಂಗ್‌ನಲ್ಲಿ ಹಿಡಿತ ಸಿಕ್ಕ ತಕ್ಷಣ ಹೆಲ್ಮೆಟ್‌ನ್ನು ಬಿಸಾಕಿ ವೀಲಿಂಗ್ ಮಾಡಲು ಪ್ರಾರಂಭಿಸುತ್ತಾರೆ' ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾನೆ.

ಅತಿಯಾದ ಆತ್ಮವಿಶ್ವಾಸ

ಬೈಕ್ ವೀಲಿಂಗ್ ಕಲಿಯಲು ಎಷ್ಟೆಲ್ಲ ಕಷ್ಟ ಪಟ್ಟಿದ್ದೇನೆ, ಏಟು ಮಾಡಿಕೊಂಡಿದ್ದೇನೆ. ಈಗ ನಾನು ಕಲಿತದ್ದನ್ನು ಎಲ್ಲರಿಗೂ ತೋರಿಸಬೇಕು. ಎಲ್ಲರ ಮುಂದೆ ಗ್ರೇಟ್ ಅನ್ನಿಸಿಕೊಳ್ಳಬೇಕೆಂಬ ಮನೋಭಾವ ಹೊಂದಿರುತ್ತಾರೆ.

ಬೈಕ್ ವೀಲಿಂಗ್ ಕಲಿತವರು ತಮ್ಮ ಬೈಕ್ ವೀಲಿಂಗ್ ಬಗ್ಗೆ ಎಷ್ಟು ಆತ್ಮವಿಶ್ವಾಸ ಇಟ್ಟಿರುತ್ತಾರೆಯೆಂದರೆ ಬೈಕ್ ವೀಲಿಂಗ್ ಮಾಡುವ ಸಂದರ್ಭದಲ್ಲಿ ತಲೆಗೆ ಹೆಲ್ಮೆಟ್ ಹಾಕುವುದು ಅವಮಾನವೆಂದು ಭಾವಿಸುತ್ತಾರೆ. ಅಂತವರು ಒಂದು ಬೈಕ್ ವೀಲಿಂಗ್‌ನಲ್ಲಿ ಯಶಸ್ವಿಯಾಗುತ್ತಾರೆ. ಇಲ್ಲವೆ ಸ್ಥಳದಲ್ಲೇ ಮೃತಪಡುತ್ತಾರೆ. ಇಂತಹ ಮನಸ್ಥಿತಿಯಿಂದಾಗಿಯೇ ನನ್ನ ಸ್ನೇಹಿತರೇ ಹಲವು ಮಂದಿ ಸಾವನ್ನಪ್ಪಿದ್ದಾರೆ ಎನ್ನುತ್ತಾರೆ.

ಮನೆಯವರ ಬಗ್ಗೆ ಇರಲಿ ಕಾಳಜಿ

ಪರಿಸ್ಥಿತಿ ಬದಲಾದರೆ ಮನಃಸ್ಥಿತಿಯೂ ಬದಲಾಗುತ್ತದೆ ಎನ್ನುವ ಆತ, 'ನನ್ನ ಅದೃಷ್ಟವೊ, ದೇವರ ಇಚ್ಚೆಯೋ ಸೂಕ್ತ ಸಮಯಕ್ಕೆ ನನ್ನ ದುಶ್ಚಟಗಳನ್ನು ಕಂಡು ನನ್ನ ಭಾವ ಆ ಕುರಿತು ನನಗೆ ತಿಳುವಳಿಕೆ ನೀಡಿದರು. ಹಾಗೂ ನನಗೆ ಕಾರೊಂದನ್ನು ಕೊಡಿಸುವ ಮೂಲಕ ಗ್ಯಾರೆಜ್ ಲೈಫ್‌ಗೆ ಮುಕ್ತಿ ನೀಡಿದರು. ಅದರಿಂದಾಗಿ ನಾನು ಡ್ರೈವಿಂಗ್ ವೃತ್ತಿಯಲ್ಲಿ ನಿರತನಾದೆ' ಎನ್ನುತ್ತಾರೆ.

ನನ್ನ ಹಿಂದಿನ ಕೆಲಸ ಹಾಗೂ ಇಂದಿನ ಕೆಲಸದ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಯಿದೆ. ಹಂತ ಹಂತವಾಗಿ ಎಲ್ಲ ದುಶ್ಚಟಗಳನ್ನು ಕಡಿಮೆ ಮಾಡಿಕೊಳ್ಳುತ್ತಾ ಬರುತ್ತಿದ್ದೇನೆ. ಒಂದೆರಡು ವರ್ಷ ಹೊರದೇಶಕ್ಕೆ ಹೋಗಿ ಒಂದಷ್ಟು ಹಣ ಸಂಪಾದನೆ ಮಾಡಿಕೊಂಡು ಬಂದು, ಸ್ವಂತವಾಗಿ ಡ್ರೈವಿಂಗ್ ಉದ್ಯಮವನ್ನು ನಡೆಸಬೇಕೆಂದು ಕೊಂಡಿದ್ದೇನೆ ಎಂದು ಬದುಕಿನ ಬಗ್ಗೆ ಹೊಂದಿರುವ ಕನಸುಗಳನ್ನು ಹೇಳಿಕೊಂಡಿದ್ದಾರೆ.

ಆದರೆ, ನನ್ನ ರೀತಿಯಲ್ಲಿ ಎಷ್ಟು ಮಂದಿಗೆ ಈ ರೀತಿಯಲ್ಲಿ ಸಹಾಯ ಮಾಡುವ ಸಂಬಂಧಿಕರು ಇರುತ್ತಾರೆ ಎನ್ನುವುದು ಪ್ರಶ್ನೆ. ಚಿಕ್ಕ ವಯಸ್ಸಿಗೆ ಗ್ಯಾರೆಜ್‌ಗೆ ಬರುವ ಹುಡುಗರು, ಆ ಲೈಫ್ ಹೊರತುಪಡಿಸಿ ಬೇರೆ ಲೈಫ್ ಇದೆ ಎನ್ನುವುದನ್ನೆ ಕಲ್ಪಿಸಿಕೊಳ್ಳುವುದಿಲ್ಲ. ಹೀಗಾಗಿ ತಿಳಿದವರು, ಸಂಘಟನೆಗಳು ಗ್ಯಾರೆಜ್ ಹುಡುಗರಿಗೆ ಬದುಕಿನ ಕುರಿತು ತಿಳುವಳಿಕೆ ನೀಡಬೇಕು. ಅವರಿಗೆ ಬೇರೆ ಬೇರೆ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡುತ್ತಾರೆ.

ಪೊಲೀಸರಿಗೆ ಇಂತಹ ಹುಡುಗರ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಅವರು ಸಹಾಯಹಸ್ತ ಚಾಚಿದರೆ ಸಾಕಷ್ಟು ಹುಡುಗರು ಒಳ್ಳೆಯ ದಾರಿಗೆ ಬಂದೇ ಬರುತ್ತಾರೆ ಎಂದು ತಮ್ಮ ಮನದ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರತಿಯೊಂದು ತಪ್ಪಿಗೂ ಒಂದು ಹಿನ್ನೆಲೆ ಇರುತ್ತಾರೆ. ಅದನ್ನು ಸರಿ ಪಡಿಸಿದರೆ ತಪ್ಪುಗಳು ಮರುಕಳಿಸದಂತೆ ತಡೆಯಬಹುದಾಗಿದೆ.

ಯಾರಾದರೂ ಹೇಳಬೇಕು ಎನ್ನುವವರೆಗೂ ಕಾಯದೇ, ನೀವೂ ಜವಾಬ್ದಾರಿ ಅರಿಯಬೇಕು. ನಿಮ್ಮ ಬೈಕ್ ವೀಲಿಂಗ್ ಚಟದಿಂದ ಆಗುವ ಅಪಘಾತಗಳ ಬಗ್ಗೆ ಅರಿವು ಇರಬೇಕು. ಅಪಘಾತವಾಗಿ ನೀವು ಕೈಕಾಲು ಮುರಿದುಕೊಂಡರೆ ಮನೆಯವರ ಪರಿಸ್ಥಿತಿ ಏನು ಎಂದು ಯೋಚನೆ ಮಾಡಿದರೆ, ಇಂತಹ ದುಸ್ಸಾಹಸಕ್ಕೆ ಕೈಹಾಕುವ ಅಭ್ಯಾಸವನ್ನು ಬಿಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+