ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Times Now-VMR Opinion Poll: ದಕ್ಷಿಣದಲ್ಲಿ ಎನ್ ಡಿಎ 23, ಯುಪಿಎ 48

|
Google Oneindia Kannada News

ಟೈಮ್ಸ್ ನೌ ಮತ್ತು ವಿಎಂಆರ್ ನ ಮತ್ತೊಂದು ಸಮೀಕ್ಷೆ ಬಂದಿದೆ. ಕಳೆದ ಬಾರಿ ಸಮೀಕ್ಷೆ ಮಾಡಿದಾಗ 2019ರ ಲೋಕಸಭಾ ಚುನಾವಣೆಯಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ (ಎನ್ ಡಿಎ)ಗೆ ಬಹುಮತಕ್ಕೆ 21 ಸ್ಥಾನಗಳ ಕೊರತೆ ಬರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಒಂದು ವೇಳೆ ಜನವರಿಯಲ್ಲಿ ಚುನಾವಣೆ ನಡೆದರೆ ಏನು ಫಲಿತಾಂಶ ಬರಬಹುದು ಎಂಬ ಪ್ರಶ್ನೆಗೆ ಉತ್ತರವಾಗಿತ್ತು ಆ ಸಮೀಕ್ಷೆ.

ಆದರೆ, ಆ ನಂತರ ಹಲವಾರು ಘಟನೆಗಳು, ಬೆಳವಣಿಗೆಗಳು ನಡೆದಿವೆ. ಅದರಲ್ಲಿ ಎರಡು ಮುಖ್ಯವಾದ ಘಟನೆ ಅಂದರೆ ಮಧ್ಯಂತರ ಕೇಂದ್ರ ಬಜೆಟ್. ಅದು ಅತ್ಯಂತ ಜನಪ್ರಿಯ ಬಜೆಟ್ ಎಂಬ ಮನ್ನಣೆ ಪಡೆದಿದೆ. ಇನ್ನು ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಗೆ ಪ್ರತಿಯಾಗಿ ಫೆಬ್ರವರಿ 26ರಂದು ಬಾಲಕೋಟ್ ನಲ್ಲಿ ಭಾರತ ನಡೆಸಿದ ಭಯೋತ್ಪಾದನಾ ವಿರೋಧಿ ದಾಳಿ.

NDA and UPA

ಮಾರ್ಚ್ ನಲ್ಲಿ ನಡೆದ ಈ ಸಮೀಕ್ಷೆಯಲ್ಲಿ ಒಟ್ಟು 16,931 ಮಂದಿ ಪಾಲ್ಗೊಂಡಿದ್ದರು ಎಂದು ತಿಳಿಸಲಾಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಯುಪಿಎಗೆ ಹಾಗೂ ಎನ್ ಡಿಎಗೆ ಎಷ್ಟು ಸ್ಥಾನ ದೊರೆಯಬಹುದು ಎಂಬ ಸಮೀಕ್ಷೆ ವಿವರ ಇಲ್ಲಿದೆ.

ಟೈಮ್ಸ್‌ ನೌ ಸಮೀಕ್ಷೆ : ಕರ್ನಾಟಕದಲ್ಲಿ ಎನ್‌ಡಿಎ, ಯುಪಿಎಗೆ ಎಷ್ಟು ಸೀಟು?ಟೈಮ್ಸ್‌ ನೌ ಸಮೀಕ್ಷೆ : ಕರ್ನಾಟಕದಲ್ಲಿ ಎನ್‌ಡಿಎ, ಯುಪಿಎಗೆ ಎಷ್ಟು ಸೀಟು?

ತಮಿಳುನಾಡು

ಲೋಕಸಭಾ ಸ್ಥಾನಗಳು: 39

ಯುಪಿಎ ಮತ ಪ್ರಮಾಣ 52.20% ಹಾಗೂ 34 ಸ್ಥಾನಗಳು

ಎನ್ ಡಿಎ ಮತ ಪ್ರಮಾಣ 37.20% ಹಾಗೂ 5 ಸ್ಥಾನಗಳು

ಕೇರಳ

ಲೋಕಸಭಾ ಸ್ಥಾನಗಳು: 20

ಮತ ಪ್ರಮಾಣ: ಯುಡಿಎಫ್- 45%, ಎನ್ ಡಿಎ- 21.70%, ಎಲ್ ಡಿಎಫ್ 29.20%, ಇತರರು 4.10%

ಸ್ಥಾನಗಳು: ಯುಡಿಎಫ್ 16, ಎನ್ ಡಿಎ- 1, ಎಲ್ ಡಿಎಫ್- 3, ಇತರರು- 0

ಆಂಧ್ರಪ್ರದೇಶ

ಲೋಕಸಭಾ ಸ್ಥಾನಗಳು: 25

ಮತ ಪ್ರಮಾಣ: ಯುಪಿಎ- 2.2%, ಎನ್ ಡಿಎ- 5.8%, ಟಿಡಿಪಿ- 38.4%, ವೈಎಸ್ ಆರ್ ಪಿ 48.8%, ಇತರರು-4.9%

ಸ್ಥಾನಗಳು: ಯುಪಿಎ- 0, ಎನ್ ಡಿಎ- 0, ಟಿಡಿಪಿ- 3, ವೈಎಸ್ ಆರ್ ಪಿ- 22, ಇತರರು- 0

ತೆಲಂಗಾಣ

ಲೋಕಸಭಾ ಸ್ಥಾನಗಳು: 17

ಮತ ಪ್ರಮಾಣ: ಯುಪಿಎ- 30.3%, ಎನ್ ಡಿಎ- 17.6%, ಟಿಆರ್ ಎಸ್- 41.2%, ಇತರರು- 10.90%

ಸ್ಥಾನಗಳು: ಯುಪಿಎ- 1, ಎನ್ ಡಿಎ- 2, ಟಿಆರ್ ಎಸ್- 13, ಇತರರು- 1

ಕರ್ನಾಟಕ

ಲೋಕಸಭಾ ಸ್ಥಾನಗಳು 28

ಮತ ಪ್ರಮಾಣ: ಯುಪಿಎ- 43.50%, ಎನ್ ಡಿಎ- 44.30%, ಬಿಎಸ್ ಪಿ- 0.90%, ಇತರರು- 11.20%

ಸ್ಥಾನ ಹಂಚಿಕೆ: ಯುಪಿಎ- 13, ಎನ್ ಡಿಎ- 15, ಬಿಎಸ್ ಪಿ- 0, ಇತರರು- 0

English summary
According to Times Now-VMR Opinion Poll in South states UPA may get 48 seats and NDA 23 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X