ಟೈಮ್ಸ್ ನೌ ಸಮೀಕ್ಷೆ: ಪಿಣರಾಯಿ ಸರ್ಕಾರದ ಪರ, ಮೋದಿ ವಿರುದ್ಧ ಮತ
ಕೇರಳದಲ್ಲಿ ಎಲ್‌ಡಿಎಫ್ ಅಧಿಕಾರಕ್ಕೇರಲಿದ್ದು, ಯುಡಿಎಫ್ ಮತ್ತೊಮ್ಮೆ ಮುಖಭಂಗ ಅನುಭವಿಸಲಿದೆ ಎಂದು ಇಂದು ಪ್ರಕಟವಾದ ಟೈಮ್ಸ್ ನೌ ಸಮೀಕ್ಷೆ ಹೇಳಿದೆ. ಕೇಂದ್ರದ ಬಿಜೆಪಿ ಸರ್ಕಾರದ ಕಾರ್ಯ ವೈಖರಿ ಸೂಕ್ತವಾಗಿಲ್ಲ, ಪಿಣರಾಯಿ ಸರ್ಕಾರ ಉತ್ತಮವಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ನೀಡಿದ್ದಾರೆ.
ಕೇರಳದ 140 ಸ್ಥಾನಗಳಿಗೆ ಮಲಪ್ಪುರಂ ಉಪ ಚುನಾವಣೆ ಏಪ್ರಿಲ್ 6 ರಂದು ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.
ಎಬಿಪಿಯ ಎರಡು ಸಮೀಕ್ಷೆ, ಟೈಮ್ಸ್ ನೌ- ಸಿ -ವೋಟರ್ ಸಂಸ್ಥೆ ನಡೆಸಿದ ಸಮೀಕ್ಷೆ ಹಾಗೂ ಮನೋರಮಾ ವಿಎಂಆರ್ ಸಮೀಕ್ಷೆಗಳಲ್ಲೂ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಅಧಿಕಾರಕ್ಕೇರಲಿದೆ ಎಂಬ ವರದಿ ಬಂದಿದೆ.
ಟೈಮ್ಸ್ ಸಿ-ವೋಟರ್ ಸಮೀಕ್ಷೆ 2021 ಆಡಳಿತಾರೂಢ ಲೆಫ್ಟ್ ಡೆಮೊಕ್ರಾಟಿಕ್ ಫ್ರಂಟ್ (LDF) ಮತ್ತೊಮ್ಮೆ ಅಧಿಕಾರಕ್ಕೇರಲಿದೆ. ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ ಸರಳ ಬಹುಮತ ಗಳಿಸಲಿದ್ದು 77 ಸ್ಥಾನ ಗಳಿಸಲಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ 62 ಸ್ಥಾನ ಗಳಿಸಬಹುದು ಹಾಗೂ ಬಿಜೆಪಿ 2 ಸ್ಥಾನ ಗೆಲ್ಲಬಹುದು ಎಂದು ಟೈಮ್ಸ್ ನೌ ಸಮೀಕ್ಷೆ ಹೇಳಿದೆ. ಯಾವುದೇ ಪಕ್ಷವು ಅಧಿಕಾರ ಸ್ಥಾಪಿಸಲು ಮ್ಯಾಜಿಕ್ ನಂಬರ್ 71 ದಾಟಬೇಕಾಗುತ್ತದೆ.

ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಮತ
ಕೇಂದ್ರದ ಬಿಜೆಪಿ ಸರ್ಕಾರದ ಕಾರ್ಯ ವೈಖರಿ ಹೇಗಿದೆ ಎಂದು ಕೇಳಲಾದ ಪ್ರಶ್ನೆಗೆ ಅತ್ಯುತ್ತಮವಾಗಿದೆ ಎಂದು ಶೇ 23.88ರಷ್ಟು ಮಂದಿ ಮತ ಹಾಕಿದ್ದರೆ, ಪರ್ವಾಗಿಲ್ಲ ಎಂದು ಶೇ 32.58ರಷ್ಟು ಮಂದಿ ಹೇಳಿದ್ದಾರೆ. ಅಸಮಾಧಾನಕರ ಶೇ 42.54ರಷ್ಟು ಮಂದಿ ಮತ ಹಾಕಿದ್ದಾರೆ. ಶೇ 1ರಷ್ಟು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಾಜ್ಯ ಸರ್ಕಾರದ ಪರ ಜನಾಭಿಪ್ರಾಯ
ಕೇಂದ್ರದ ಬಿಜೆಪಿ ಸರ್ಕಾರದ ಕಾರ್ಯ ವೈಖರಿ ಹೇಗಿದೆ ಎಂದು ಕೇಳಲಾದ ಪ್ರಶ್ನೆಗೆ ಅತ್ಯುತ್ತಮವಾಗಿದೆ ಎಂದು ಶೇ 41.64ರಷ್ಟು ಮಂದಿ ಮತ ಹಾಕಿದ್ದರೆ, ಪರ್ವಾಗಿಲ್ಲ ಎಂದು ಶೇ 35.55ರಷ್ಟು ಮಂದಿ ಹೇಳಿದ್ದಾರೆ. ಅಸಮಾಧಾನಕರ ಶೇ 20.82ರಷ್ಟು ಮಂದಿ ಮತ ಹಾಕಿದ್ದಾರೆ. ಶೇ 2ರಷ್ಟು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಾಹುಲ್ ಗಾಂಧಿ ಬಗ್ಗೆ ಸಮೀಕ್ಷೆ
ಟೈಮ್ಸ್ ನೌ -ಸಿವೋಟರ್ ಸಮೀಕ್ಷೆಯಂತೆ ಕಾಂಗ್ರೆಸ್ ಮುಖಂಡ, ವಯನಾಡು ಸಂಸದ ರಾಹುಲ್ ಗಾಂಧಿ ಕಾರ್ಯ ವೈಖರಿ ಅತ್ಯುತ್ತಮವಾಗಿದೆ ಎಂದು ಶೇ 31.32ರಷ್ಟು ಮತ ಬಂದಿದೆ. ಪರ್ವಾಗಿಲ್ಲ ಎಂದು ಶೇ 29.94ರಷ್ಟು ಮಂದಿ ಹೇಳಿದ್ದಾರೆ. ಅಸಮಾಧಾನಕರ ಶೇ 33.32ರಷ್ಟು ಮಂದಿ ಮತ ಹಾಕಿದ್ದಾರೆ. ಶೇ 5.42ರಷ್ಟು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವಿಧಾನಸಭೆಯ ಬಲಾಬಲ
140 ಸ್ಥಾನಗಳ ವಿಧಾನಸಭೆಯ ಬಲಾಬಲ: ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ 93 ಸ್ಥಾನ, ಕಾಂಗ್ರೆಸ್ ನೇತೃತ್ವ ಯುಡಿಎಫ್ 42 ಹಾಗೂ ಬಿಜೆಪಿ ನೇತೃತ್ವದ ಎನ್ಡಿಎ 1 ಸ್ಥಾನ ಹೊಂದಿದೆ. ಯಾವುದೇ ಪಕ್ಷವು ಅಧಿಕಾರ ಸ್ಥಾಪಿಸಲು ಮ್ಯಾಜಿಕ್ ನಂಬರ್ 71 ದಾಟಬೇಕಾಗುತ್ತದೆ. 2016ರ ಚುನಾವಣೆಯಲ್ಲಿ ಎಲ್ ಡಿ ಎಫ್ 91, ಯುಡಿಎಫ್ 47, ಕಾಂಗ್ರೆಸ್ 1, ಇತರೆ 1 ಎಂದು ಫಲಿತಾಂಶ ಬಂದಿತ್ತು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications